ಮುಕೇಶ ಅಂಬಾನಿ ಮನೆ ಸಮೀಪ ನಿಂತಿದ್ದ ಜೆಲೆಟಿನ್‌ ಇಟ್ಟಿದ್ದ ಸ್ಕಾರ್ಪಿಯೋ ಕದ್ದು ತಂದಿದ್ದು..!

ಮುಂಬೈ: ವಾಹನದ ಮಾಲೀಕ (ಸ್ಕಾರ್ಪಿಯೋ) ಹಿರೆನ್ ಮನ್ಸುಖ್, ಶುಕ್ರವಾರ ಮಧ್ಯಾಹ್ನ ದಕ್ಷಿಣ ಮುಂಬೈನ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದು, ಅಂಬಾನಿಯ ಮನೆಯ ಬಳಿ ಪತ್ತೆಯಾದ ಎಸ್‌ಯುವಿಯ ದೃಶ್ಯಗಳನ್ನು ನೋಡಿದ ನಂತರ, ಇದು ತಮ್ಮ ವಾಹನಕ್ಕೆ ಹೋಲುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಥಾಣೆ ನಿವಾಸಿ ಮನ್ಸುಖ್ ಸುದ್ದಿಗಾರರೊಂದಿಗೆ ಮಾತನಾಡಿ, ಫೆಬ್ರವರಿ 17 ರಂದು ಎಸ್‌ಯುವಿಯನ್ನು … Continued

ಗ್ರಾಮ ಪಂಚಾಯತಿ ಅಸ್ತಿತ್ವದ ಹಿನ್ನೆಲೆ:  ಸಾಕಾರದ ವಾರೆನೋಟ

  ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥ ಪಾಲಕರು ವಿಶ್ವದಲ್ಲಿರುವ ರಾಷ್ಟ್ರಗಳು ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ  ಸಹಾಯಕಾರಿ ತಂತ್ರಗಳೆಂದು ಪರಿಗಣಸಿವೆ. ಪ್ರಾಚೀನ ಕಾಲದಲ್ಲಿ ಇಡೀ ವಿಶ್ವದಾದ್ಯಂತ ನಗರಗಳು ಬೆರಳೆಣಿಕೆಯಷ್ಟಿದ್ದವು.  ಸುಮಾರು ಕ್ರಿ.ಶ. ೧೮೦೦ ರಿಂದ ವಿಶ್ವದಾದ್ಯಂತ ನಗರಗಳು ಬೆಳೆಯುತ್ತಿವೆ ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ.  ಆದರೂ ಕೂಡ ಇಂದಿಗೂ ಕೂಡ … Continued

ಪೆನ್ – ಎಮರ್ಜನ್ಸಿ ಲೈಟಲ್ಲಿ ಚಿನ್ನ ಸಾಗಾಟ ಮಾಡಿದ್ರೂ ಸಿಕ್ಕಿಬಿದ್ದರು

ಮಂಗಳೂರು: ಪೆನ್ ಹಾಗೂ ಎಮರ್ಜನ್ಸಿ ಲೈಟಿನ ಬ್ಯಾಟರಿಯಲ್ಲಿ ಚಿನ್ನ ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡಿನ ಅಬ್ದುಲ್ ರಶೀದ್ ಹಾಗೂ ಅಬ್ದುಲ್ ನಿಸಾದ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ದುಬೈನಿಂದ ಮಂಗಳೂರಿಗೆ ಬಂದಿದ್ದರು. ಆರೋಪಿ ಅಬ್ದುಲ್ ರಶೀದ್ ಪೌಡರ್ ರೂಪದ … Continued

ಶೇರು ಮಾರುಕಟ್ಟೆ ೧೯೩೯ ಅಂಕ ಕುಸಿತಅಮರಿಕ-ಇರಾನ್‌ ಬಿಕ್ಕಟ್ಟು ಕಾರಣ?

ಅಮೆರಿಕ ಹಾಗೂ ಇರಾನ್‌ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನತೆ ಪರಿಣಾಮವಾಗಿ ದೇಶಿಯ ಶೇರು ಮಾರುಕಟ್ಟೆ ಕುಸಿದಿದ್ದು, ಶುಕ್ರವಾರ ಸೆನ್ಸೆಕ್ಸ್‌ ೧೯೩೯ ಅಂಕ ಕುಸಿದರೆ ನಿಫ್ಟಿ ಸೂಚ್ಯಾಂಕ ೫೬೮ ಅಂಕ ಕುಸಿದು ೧೫, ೫೨೯ಕ್ಕೆ ತಲುಪಿದೆ. ಯುಎಸ್ 10 ವರ್ಷಗಳ ಇಳುವರಿ ಶೇಕಡಾ 1.614 ಕ್ಕೆ ಏರಿತು, ಇದು ಒಂದು ವರ್ಷದ ಗರಿಷ್ಠ. ಯುಎಸ್‌ನಲ್ಲಿ ಹಣದುಬ್ಬರದ ಬಗೆಗಿನ ಕಳವಳಗಳು … Continued

 ನಾಲ್ಕು ವಾರದಲ್ಲಿ  ಸ್ಫೋಟಕ ವಸ್ತು ಹಿಂತಿರುಗಿಸದಿದ್ದರೆ ಲೈಸೆನ್ಸ್ ರದ್ದು 

ರಾಯಚೂರು, ( ಹಟ್ಟಿ ಚಿನ್ನದ ಗಣಿ): ಕಲ್ಲುಕ್ವಾರಿ ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ಯಾರಾದರೂ ಕಾನೂನು ಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರೆ, ನಾಲ್ಕು ವಾರದೊಳಗೆ ಹಿಂತಿರಿಗಿಸಬೇಕು.ಇಲ್ಲದಿದ್ದರೆ ಅಂತಹವರ ಲೈಸೆನ್ಸ್ ( ಪರವನಾಗಿ)ಯನ್ನು ರದ್ದುಪಡಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ಎಚ್ಚರಿಕೆ ನೀಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶಕ್ಕೆ ಇಂದು … Continued

 ಕೊವಿಡ್ ಸಮಯದ ೩ನೇ ತ್ರೈಮಾಸಿಕ: ಮೊದಲ ಸಲ ಶೇ. ೦.೪ ಬೆಳವಣಿಗೆ ಕಂಡ ಜಿಡಿಪಿ 

ಮೊದಲ ಸಲ ಸಕಾರಾತ್ಮ ಬೆಳವಣಿಗೆ ಕಂಡ ಆರ್ಥಿಕ ದರ ಶುಕ್ರವಾರ ಬಿಡುಗಡೆಯಾದ ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಸತತ ಎರಡು ತ್ರೈಮಾಸಿಕಗಳ ನಂತರ ಡಿಸೆಂಬರ್ ಅಂತ್ಯದ ಮೂರು ತಿಂಗಳಲ್ಲಿ ಭಾರತದ ಒಟ್ಟು ಜಿಡಿಪಿ 0.4% ರಷ್ಟು  ಬೆಳವಣಿಗೆ ( ಗ್ರೋಥ್‌) ಕಂಡಿದೆ. ಕೊರೊನಾ ವೈರಸ್ ಸೋಂಕುಗಳ ಉಲ್ಬಣದಿಂದ ಉಂಟಾದ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಏಷ್ಯಾದ ಮೂರನೇ … Continued

ಟಿಎಂಸಿಯದು ಇಬ್ಬಗೆಯ ನಿಲುವು: ಅಸಾದುದ್ದಿನ್‌ ಓವೈಸಿ ಆರೋಪ

ಹೈದರಾಬಾದ್:‌ ಚುನಾವಣಾ ರ್ಯಾಲಿ ಆಯೋಜಿಸಲು ಅನುಮತಿ ನೀಡದ ಪಶ್ಚಿಮ ಬಂಗಾಳದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಎಐಐಎಂ ಮುಖ್ಯಸ್ಥ ಅಸಾದುದ್ದಿನ್‌ ಓವೈಸಿ, ತೃಣಮೂಲ ಕಾಂಗ್ರೆಸ್‌ನದು ಇಬ್ಬಗೆಯ ನಿಲುವು ಎಂದು ಜರಿದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದ ಟಿಎಂಸಿ ಮುಖಂಡರು ಈಗ ನಮ್ಮ ಪಕ್ಷಕ್ಕೆ ರ್ಯಾಲಿ ನಡೆಸಲು ಅನುಮತಿ ನೀಡದೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರೋಧ ಮಾಡುತ್ತಿದ್ದಾರೆ. ಇದು ಅವರ … Continued

ಹೆಚ್ಚುವರಿ ಕಾವೇರಿ ನೀರಿನ ಬಳಕೆ ತಮಿಳುನಾಡು ಯೋಜನೆ ಖಂಡಿಸಿ ಕೇಂದ್ರಕ್ಕೆ ಪತ್ರ ಬರೆದ ಬಿಎಸ್‌ವೈ

ಬೆಂಗಳೂರು: ಕಾವೇರಿಯಿಂದ ವಾಯ್‌ಗೈ ಮತ್ತು ಗುಂಡಾರ್‌ಗೆ ಕಾಲುವೆ ನಿರ್ಮಾಣದೊಂದಿಗೆ ನದಿ ಸಂಪರ್ಕಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಹೆಚ್ಚುವರಿ ಕಾವೇರಿ ನೀರನ್ನು ಬಳಸಲು ತಮಿಳುನಾಡಿಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮತ್ತು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ … Continued

ಕಿರಣ್‌ ಬೇಡಿ ಪ್ರಮಾದ ಮರೆಮಾಚಲು ಪ್ರಧಾನಿ ಯತ್ನ: ನಾರಾಯಣಸಾಮಿ ಆರೋಪ

ಪುದುಚೇರಿ: ಪ್ರಧಾನಿ ನರೇಂದ್ರ ಮೋದಿ ಹಿಂದಿನ ರಾಜ್ಯಪಾಲರಾಗಿದ್ದ ಕಿರಣ್‌ ಬೇಡಿ ಅವರ ಪ್ರಮಾದಗಳನ್ನು ನಮ್ಮದೆಂದು ಬಿಂಬಿಸುತ್ತಿದ್ದಾರೆ ಎಂದು ಪುದುಚೆರಿ ಮಾಜಿ ಮುಖ್ಯಮಂತ್ರಿ ನಾರಾಯಣಸಾಮಿ ಆರೋಪಿಸಿದ್ದಾರೆ.. ರಾಜ್ಯಪಾಲರಾಗಿದ್ದ ಕಿರಣ್‌ ಬೇಡಿ ಅವರ ಪ್ರಮಾದಗಳನ್ನು ಮುಚ್ಚಿಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಆರೋಪ ಮಾಡಿದರು. ತಮ್ಮ ಸರ್ಕಾರ ಕೈಗೊಂಡ 52 ಯೋಜನೆಗಳನ್ನು ನಿಲ್ಲಿಸಿದ್ದು ಕಿರಣ್ ಬೇಡಿ, ಆದರೆ … Continued

ಚಳಿಗಾಲದ ಅಂತ್ಯಕ್ಕೆ ಇಂಧನ ಬೆಲೆ ಕುಸಿತ: ಪೆಟ್ರೋಲಿಯಂ ಸಚಿವ ಪ್ರಧಾನ್‌ ವಿಶ್ವಾಸ

ಇಂಧನ ಬೆಲೆ ಚಳಿಗಾಲದ ಅಂತ್ಯಕ್ಕೆ ಕಡಿಮೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಬೆಲೆಯಲ್ಲಿನ ಹೆಚ್ಚಳ ಗ್ರಾಹಕರ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಚಳಿಗಾಲವು ಮುಗಿಯುತ್ತಿದ್ದಂತೆ ಬೆಲೆಗಳು ಸ್ವಲ್ಪ ಕಡಿಮೆಯಾಗುತ್ತವೆ. ಇಂಧನ ಬೆಲೆ ಹೆಚ್ಚಳವು ಅಂತರರಾಷ್ಟ್ರೀಯ ವಿಷಯವಾಗಿದೆ. ಬೇಡಿಕೆಯ ಹೆಚ್ಚಳದಿಂದಾಗಿ ಬೆಲೆ ಹೆಚ್ಚಾಗಿದೆ. ಚಳಿಗಾಲದಲ್ಲಿ ಇದು ಸಂಭವಿಸುತ್ತದೆ ಎಂದು … Continued