ಭಾರತ-ಚೀನಾ ಮಧ್ಯೆ ಹೊಸ ಹಾಟ್‌ಲೈನ್‌

ಭಾರತ ಮತ್ತು ಚೀನಾ ವಿದೇಶಾಂಗ ಮಟ್ಟದಲ್ಲಿ ಸಮಯೋಚಿತ ಅಭಿಪ್ರಾಯ ವಿನಿಮಯಕ್ಕಾಗಿ ಹೊಸ ಹಾಟ್‌ಲೈನ್‌ ಆರಂಭಿಸಲು ಒಪ್ಪಿಕೊಂಡಿವೆ ಆದರೆ ಗಡಿ ಪರಿಸ್ಥಿತಿ ಕುರಿತಾದ ದ್ವಿಪಕ್ಷೀಯ ಸಂಬಂಧ ಕುರಿತ ಉಭಯ ದೇಶಗಳ ಭಿನ್ನಾಭಿಪ್ರಾಯ ಮುಂದುವರೆದಿದೆ. ಗಡಿ ವಿವಾದಗಳು ವಸ್ತುನಿಷ್ಠ ವಾಸ್ತವವಾಗಿದ್ದು, ಸಾಕಷ್ಟು ಗಮನ ಹರಿಸಬೇಕು ಮತ್ತು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಆದರೆ, ವಿವಾದಗಳನ್ನು ಬಗೆಹರಿಸುವ ದಿಸೆಯಲ್ಲಿ ಪ್ರಯತ್ನ ಮುಂದುವರೆಯಬೇಕು ಎಂದು … Continued

ಉತ್ತರ ನೈಜೀರಿಯಾದಲ್ಲಿ ೩೧೭ ಬಾಲಕಿಯರ ಸಾಮೂಹಿಕ ಅಪಹರಣ

ಉತ್ತರ ನೈಜಿರಿಯಾದ ಬೋರ್ಡಿಂಗ್‌ ಶಾಲೆಯಿಂದ ಶನಿವಾರ ಒಂದೇ ಬಾರಿಗೆ ೩೧೭ ಬಾಲಕಿಯರ ಸಾಮೂಹಿಕ ಅಪಹರಣ ನಡೆದಿದೆ. ಪಶ್ಚಿಮ ಆಫ್ರಿಕಾದ ಜಂಗೆಬೆ ಟೌನ್‌ ಸರಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಯ ಮೇಲೆ ಬಂದೂಕುದಾರಿಗಳು ದಾಳಿ ನಡೆಸಿ ವಿದ್ಯಾರ್ಥಿನಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಹಾಗೂ ಮಿಲಿಟರಿ ಜಂಟಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿನಿಯರ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಜಾಮ್‌ಪಾರ್‌ ಪೊಲೀಸರ ವಕ್ತಾರ … Continued

ಕಾಂಗ್ರೆಸ್‌ನಲ್ಲಿ ಒಡಕಿದೆ ಎಂಬ ಸಂದೇಶ ರವಾನೆ: ಡಾ. ಯತೀಂದ್ರ

ಮೈಸೂರು: ಮೇಯರ್‌ ಆಯ್ಕೆ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳಿಂದ ಕಾಂಗ್ರೆಸ್‌ನಲ್ಲಿ ಒಡಕಿದೆ ಎಂಬ ಸಂದೇಶ ರವಾನೆಯಾಗಿದೆ ಎಂದು ವರುಣಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಹೇಳಿದರು. ಮೇಯರ್‌ ಚುನಾವಣೆ ಸಂದರ್ಭದಲ್ಲಿ ನಡೆದ ಬೆಳವಣಿಗೆಗೆಳು ದುರದೃಷ್ಟಕರ. ಪಕ್ಷದ ನಾಯಕರೊಬ್ಬರಿಗೆ ಹಿನ್ನಡೆಯಾಗಬೇಕೆಂಬ ಏಕೈಕ ಉದ್ದೇಶದಿಂದ ನಮ್ಮ ಪಕ್ಷದ ಮುಖಂಡರೇ ಮಾಡಿದ ಕೆಲಸ … Continued

ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಕ್ರಮ ಸರ್ವಾಧಿಕಾರಿ ಧೋರಣೆ: ಮಹಾರಾಷ್ಟ್ರ ಸಚಿವ ಸತೇಜ್‌ ಪಾಟೀಲ

ಕೇಂದ್ರ ಸರಕಾರ ಸಾಮಾಜಿಕ ಮಾಧ್ಯಮಗಳು ಹಾಗೂ ಓವರ್‌ ದಿ ಟಾಪ್‌ ವೇದಿಕೆಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರಕಾರ ಜಾರಿಗೊಳಿಸಿದ ನಿಯಮಗಳನ್ನು ಖಂಡಿಸಿದ ಮಹಾರಾಷ್ಟ್ರ ಸಚಿವ ಸತೇಜ್‌ ಪಾಟೀಲ್‌, ಇದು ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿಗಳ ಗೌಪ್ಯತೆ ಮತ್ತು ಸಂವಿಧಾನವು ನೀಡಿದ ವಾಕ್ಚಾತುರ್ಯವನ್ನು ಉಲ್ಲಂಘಿಸುವ ಕಾರಣ ಈ ನಿಯಮಗಳನ್ನು ಬಲವಾಗಿ ವಿರೋಧಿಸುವ … Continued

ಮೀಸಲಾತಿ ಹಕ್ಕೊತ್ತಾಯಕ್ಕೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಭೆ

ಬೆಂಗಳೂರು: ಒಕ್ಕಲಿಗ ಮೀಸಲಾತಿ ಹೋರಾಟವನ್ನು ತೀವ್ರಗೊಳಿಸುವ ಕುರಿತು ಮಹತ್ವದ ಸಭೆ ನಗರದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆಯಿತು.ಒಕ್ಕಲಿಗ ಸಮುದಾಯದ ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಮುಖಂಡರು, ಸಮುದಾಯದ ಹಿರಿಯರು ಮೀಸಲಾತಿ ವಿಚಾರ ಪ್ರಸ್ತಾಪಿಸಿದರು. ಹಿಂದೆ ನಮಗೆ 14 ಪರ್ಸೆಂಟ್೧೪% ಮೀಸಲಾತಿ ನೀಡಲಾಗಿತ್ತು. ಆದರೆ ಅದನ್ನು ಈಗ ೪% ಇಳಿಸಲಾಗಿದೆ. ರಾಜ್ಯದಲ್ಲಿರುವ ಒಕ್ಕಲಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ … Continued

ಒಂದು ವಾರದಲ್ಲಿ ರಾಜ್ಯ ನಾಲ್ಕು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಸಾಧ್ಯತೆ

ಬೆಂಗಳೂರು: ರಾಜ್ಯದ ಒಂದು ಲೋಕಸಭೆ ಮತ್ತು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಸಂಬಂಧ ಮುಂದಿನ ವಾರ ವೇಳಾ ಪಟ್ಟಿ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗದ ರಾಜ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಆಯಾ ರಾಜ್ಯಗಳಲ್ಲಿ ತೆರವಾಗಿರುವ ಲೋಕಸಭಾ … Continued

ಕಾಂಗ್ರೆಸ್‌ನಿಂದ ಅಮಾನತು ಮಾಡಿದರೂ ಡೋಂಟ್‌ ಕೇರ್:‌ ಶಾಸಕ ತನ್ವೀರ್‌ ಸೇಠ್‌

ಮೈಸೂರು: ಕಾಂಗ್ರೆಸ್‌ ಪಕ್ಷದಿಂದ ನನ್ನನ್ನು ಅಮಾನತು ಮಾಡಿದರೂ ನಾನು ಹೆದರುವುದಿಲ್ಲ, ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ ಎಂದು ಕಾಂಗ್ರೆಸ್‌ ಶಾಸಕ ತನ್ವೀರ ಸೇಠ್‌ ಪಕ್ಷದ ಮುಖಂಡರ ವಿರುದ್ಧ ಆಕ್ರೋಷ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅವರ ಬೆಂಬಲಿಗರು  ತನ್ವೀರ್‌ ಸೇಠ್‌ ವಿರುದ್ಧ ಹರಿಹಾಯ್ದ ಮರುದಿನ ಸೇಠ್‌ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ನಾನು ಕೂಡ 5 ಬಾರಿ ಗೆದ್ದಿದ್ದೇನೆ . ಒಬ್ಬರ … Continued

ಸಂಶೋಧನೆಗಳಿಗೆ ಹೊಸ ಸ್ವರೂಪ ನೀಡುತ್ತಿರುವ ಡಾ. ಜೆ.ಎಂ. ನಾಗಯ್ಯ

(ದಿನಾಂಕ  ೨೮ ರಂದು (ರವಿವಾರ ೨೮-೦೨-೨೦೨೧) ಮುಂಜಾನೆ  ೧೦:೩೦ಕ್ಕೆ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಡಾ. ಜೆ.ಎಂ. ನಾಗಯ್ಯ ದತ್ತಿ ಮತ್ತು ಟ್ರಸ್ಟ ಉದ್ಘಾಟನೆಯಾಗಲಿದ್ದು, ಈ ನಿಮಿತ್ತ ಲೇಖನ) ೬೪ ವಯಸ್ಸಿನ ಸಂಭ್ರಮದಲ್ಲಿರುವ (ಜನನ: ೧.೦೭.೧೯೫೭) ನಾಗಯ್ಯ ಅವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದವರು.  ೧೯೭೮ ರಲ್ಲಿ ಬಿ.ಎ. ಪದವಿಯನ್ನು … Continued

ಪರಿಸರ ಸ್ನೇಹಿ ಆಟಿಕೆಗಳ ತಯಾರಿಕೆ ಹೆಚ್ಚಾಗಲಿ: ಮೋದಿ

ಆಟಿಕೆ ತಯಾರಕರು ಕಡಿಮೆ ಪ್ಲಾಸ್ಟಿಕ್‌ ಮತ್ತು ಪರಿಸರ ಸ್ನೇಹಿ ಸಾಮಗ್ರಿಗಳನ್ನು ಹೆಚ್ಚಾಗಿ ಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೊದಲ ಭಾರತ ಟಾಯ್ ಫೇರ್ 2021 ಅನ್ನು ಉದ್ಘಾಟಿಸಿದ ಅವರು, ನಾವು ಆಟಿಕೆ ಕ್ಷೇತ್ರದಲ್ಲಿ ಆತ್ಮನಿರ್ಭರ್ ಆಗಬೇಕು ಮತ್ತು ಜಾಗತಿಕ ಮಾರುಕಟ್ಟೆಗೂ ಸಹ ಪೂರೈಸಬೇಕು. 100 ಬಿಲಿಯನ್ ಯುಎಸ್‌ ಡಾಲರ್‌ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ … Continued

ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ  ಸಿಎಎ ಪ್ರಮುಖ ವಿಷಯ

ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರ ಮೂರು ಹಂತಗಳಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇ ೨ರಂದು  ಫಲಿತಾಂಶಗಳನ್ನು ಮೇ 2 ರಂದು ಪ್ರಕಟಿಸಲಾಗುತ್ತದೆ. ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್‌ ಹಾಗೂ ಅದರ ಹೊಸ ಮೈತ್ರಿಕೂಟದ ನಡುವೆ ನೇರಸ್ಪರ್ಧೆ ನಡೆಯಲಿದೆ. ಪ್ರಾದೇಶಿಕ ಪಕ್ಷಗಳು ಕೆಲವು ಕಡೆಗಳಲ್ಲಿ ಪ್ರಬಲವಾಗಿದ್ದು ಅಲ್ಲಿ ತ್ರಿಕೋನ … Continued