ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ ಬಿದರಿ ಇಮೇಲ್‌ ಐಡಿ ಹ್ಯಾಕ್‌ !

ಬೆಂಗಳೂರು: ನಿವೃತ್ತ ರಾಜ್ಯ ಪೊಲೀಸ್​ ಮಹಾ ನಿರ್ದೇಶಕ ಶಂಕರ್ ಬಿದರಿ ಅವರ ಇ-ಮೇಲ್​​ ಐಡಿಯನ್ನು ದುಷ್ಕರ್ಮಿಗಳು ಹ್ಯಾಕ್​ ಮಾಡಿದ್ದಾರೆ. ಇ-ಮೇಲ್‌ ಐಡಿಯನ್ನು ಅಪರಿಚಿತರು ಹ್ಯಾಕ್‌ ಮಾಡಿ ಇ-ಮೇಲ್‌ ಅಡ್ರೆಸ್‌ನಲ್ಲಿದ್ದ ಸ್ನೇಹಿತರಿಗೆ ಪಂಜಾಬ್‌ ನ್ಯಾಷನಲ್‌ ಖಾತೆ ಹಾಗೂ ಐಎಫ್‌ಎಸ್‌ಸಿ ಕೋಡ್‌ ಕಳಿಸಿದ್ದಾರೆ. ನಂತರ ಖಾತೆಗೆ ಹಣ ಜಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ನಾನೇ ಇ-ಮೇಲ್‌ ಕಳಿಸಿರಬಹುದು ಎಂದು … Continued

ಪುದುಚೇರಿ: ಕಾಂಗ್ರೆಸ್‌ಗೆ‌ ಮೊದಲ ಶಾಂಕಿಂಗ್‌ ನ್ಯೂಸ್‌…!

ಪುದುಚೇರಿ: ತನ್ನ ಆಂತರಿಕ ಭಿನ್ನಮತದಿಂದಾಗಿ ಇತ್ತೀಚೆಗೆ ಸರ್ಕಾರ ಕಳೆದುಕೊಂಡ ಕಾಂಗ್ರೆಸ್ ಏ.೬ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೇಳಿದೆ. ಚುನಾವಣಾಪೂರ್ವ ಸಮೀಕ್ಷೆ ನಡೆಸಿರುವ ಎಬಿಪಿ-ವೋಟರ್ಸ್ ಸಮೀಕ್ಷೆ ಪಾಂಡಿಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ. ಒಟ್ಟು ೩೦ ವಿಧಾಸಭಾ ಕ್ಷೇತ್ರವಿರುವ ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿರುವ ಏಪ್ರಿಲ್ … Continued

ಅಹ್ಮದಾಬಾದ ಕ್ರೀಡಾಂಗಣಕ್ಕಿಟ್ಟ ಮೋದಿ ಹೆಸರು ತೆಗೆಯಲು ‌ಸ್ವಾಮಿ ಆಗ್ರಹ

ಅಹ್ಮದಾಬಾದ್‌ ಕ್ರೀಡಾಂಗಣಕ್ಕಿಡಲಾದ ತಮ್ಮ ಹೆಸರನ್ನು ತೆಗೆದುಹಾಕಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ. ಕ್ರೀಡಾಂಗಣಕ್ಕೆ ತಮ್ಮ ಹೆಸರಿಡುವಂತೆ ಹೇಳುವ ರಾಷ್ಟ್ರದ ನಾಯಕರು ಯಾರಾದರೂ ಇದ್ದಾರೆಯೇ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ನನ್ನ ಪ್ರಕಾರ ತಮ್ಮ ಹೆಸರಿಡುವಂತೆ ಸೂಚಿಸುವವರು ಸದ್ದಾಂ ಹುಸೇನ್ ಮತ್ತು ಗಡಾಫಿ ಇಬ್ಬರು ಮಾತ್ರ ಎಂದು ಅಭಿಪ್ರಾಯಪಟ್ಟರು. ನೆಹರೂ, ಮಾವೋ ಅಥವಾ … Continued

ಮಾರ್ಚ್‌ನಲ್ಲಿ ಪಂಚರಾಜ್ಯಗಳ ಪ್ರವಾಸ ಕೈಗೊಳ್ಳಲಿರುವ ರಾಕೇಶ್‌ ಟಿಕಾಯತ್‌

ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಇನ್ನಷ್ಟು ಬೆಂಬಲ ಪಡೆಯಲು ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್‌ ಮಾರ್ಚ್‌ನಲ್ಲಿ ಐದು ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಟಿಕಾಯತ್ ಮಾರ್ಚ್ 1 ರಿಂದ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ರೈತರ ಸಭೆಗಳು ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ನಡೆಯಲಿದ್ದು, ಮಾರ್ಚ್‌ನಲ್ಲಿ ಉತ್ತರಪ್ರದೇಶದಲ್ಲಿ … Continued

ಪಿಎಸ್‌ಎಲ್‌ವಿಸಿ-೫೧ ಉಪಗ್ರಹ ಯಶಸ್ವಿ ಉಡಾವಣೆ: ಇಸ್ರೊ ಮತ್ತೊಂದು ಸಾಧನೆ

ಅಮೆಜೋನಿಯಾ-1 ಮತ್ತು ಇತರ 18 ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ-ಸಿ51 ಉಡಾವಣಾ ವಾಹಕವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೊ ಸಂಸ್ಥೆ ಭಾನುವಾರ ಯಶಸ್ವಿಯಾಗಿ ಉಡಾಯಿಸಿದೆ. ಬ್ರೆಜಿಲ್ ವಿನ್ಯಾಸಗೊಳಿಸಿ ಸಂಯೋಜಿಸಿರುವ ಮೊಟ್ಟಮೊದಲ ಉಪಗ್ರಹ ಇದಾಗಿದೆ. ಇದನ್ನು ಯಶಸ್ವಿಯಾಗಿ ಉಡಾಯಿಸಿರುವುದು ತೀವ್ರ ಸಂತಸ ಉಂಟುಮಾಡುತ್ತಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದ್ದು ಇದಕ್ಕಾಗಿ ನಾನು … Continued

ನಟ ಅಮಿತಾಭ ಬಚ್ಚನ್‌ಗೆ ಶಸ್ತ್ರಚಿಕಿತ್ಸೆ

ಮುಂಬೈ: ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕುರಿತು ಸ್ವತಃ ಅಮಿತಾಬ್ ಬಚ್ಚನ್ ಅವರು ಟ್ವೀಟ್ ಮಾಡಿದ್ದು, ‘ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಯವಾಗಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದೆ. ಟ್ವೀಟ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ. 78 ವರ್ಷದ ಅಮಿತಾಬ್ ಬಚ್ಚನ್ ಇತ್ತೀಚೆಗೆ ಕೋವಿಡ್‌ಗಾಗಿ ಹಲವು ದಿನಗಳವರೆಗೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು … Continued

ಮೈಸೂರು ಮೇಯರ್‌ ಆಯ್ಕೆ ಗೊಂದಲಕ್ಕೆ ಸಿದ್ದರಾಮಯ್ಯನವರೇ ಕಾರಣ: ಸಾ.ರಾ.ಮಹೇಶ ತೀವ್ರ ವಾಗ್ದಾಳಿ

ಮೈಸೂರು: ಮೈಸೂರು ಮೇಯರ್‌ ಆಯ್ಕೆ ಗೊಂದಲಕ್ಕೆ ಸಿದ್ಧರಾಮಯ್ಯ ಅವರೇ ನೇರ ಕಾರಣ ಎಂದು ಜೆಡಿಎಸ್‌ ಮುಖಂಡ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು. ಸಿದ್ದರಾಮಯ್ಯ ಜೆಡಿಎಸ್‍ ಟೀಕಿಸಿದ್ದರಿಂದ ಇಂದು ನಮಗೆ ಮೇಯರ್ ಸ್ಥಾನ ಲಭಿಸಿದೆ. ನಾವಾಗಿ ಮೇಯರ್ ಸ್ಥಾನ ಬಯಸಿರಲಿಲ್ಲ. ಜೆಡಿಎಸ್‍ಅನ್ನು ಹಗುರವಾಗಿ ಕಂಡಿದ್ದರಿಂದ ನಾವು … Continued

ಪರಿಸರ ಸ್ನೇಹಿ ಸೌರ ಟೆಂಟ್‌, ಲಡಾಕ್‌ನಲ್ಲಿ ಸೈನಿಕರಿಗೆ ಹೆಚ್ಚು ಉಪಯುಕ್ತ

ಬಾಲಿವುಡ್‌ ಸುಪರ್‌ಹಿಟ್‌ ಸಿನೆಮಾ  3 ಈಡಿಯಟ್ಸ್‌  ಫುನ್ಸುಖ್ ವಾಂಗ್ಡು, ನಿಜ ಜೀವನದ ಅನ್ವೇಷಕ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಪರಿಸರ ಸ್ನೇಹಿ ಸೌರ ಬಿಸಿ ಟೆಂಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಲಡಾಖ್ ಪ್ರದೇಶದ ಸಿಯಾಚಿನ್ ಮತ್ತು ಗಾಲ್ವಾನ್ ಕಣಿವೆಯಂತಹ ಅತ್ಯಂತ ಶೀತ ಸ್ಥಳಗಳಲ್ಲಿ ಸೇನಾ ಸಿಬ್ಬಂದಿ ಬಳಸಬಹುದಾಗಿದೆ. ತನ್ನ ಹೆಸರಿಗೆ ಪರಿಸರ ಸ್ನೇಹಿ … Continued

ತಮಿಳುನಾಡು ವಿಧಾನಸಭೆ ಚುನಾವಣೆ: ಎಐಎಡಿಎಂಕೆ-ಪಿಎಂಕೆ ಮಧ್ಯೆ ಸೀಟುಗಳ ಹೊಂದಾಣಿಕೆ

ತಮಿಳುನಾಡಿನ ಮುಂಬರುವ ವಿಧಾನಸಭಾ ಚುನಾವಣೆಗೆ ಪಟ್ಟಾಲಿ ಮಕ್ಕಲ್ ಕಚ್ಚಿ (ಪಿಎಂಕೆ)ಯು ಎಐಎಡಿಎಂಕೆ ವಿಧಾಸಬೆ ಸೀಟು ಹಂಚಿಕೆ ನಿಗದಿ ಮಾಡಿಕೊಂಡಿದೆ. ಪಿಎಂಕೆಗೆ ಒಟ್ಟಾರೆಯಾಗಿ 23 ಸ್ಥಾನಗಳನ್ನು ನೀಡಲಾಗಿದೆ. ಜಂಟಿ ಸಂಯೋಜಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಸಮ್ಮುಖದಲ್ಲಿ ಎಐಎಡಿಎಂಕೆ ಸಂಯೋಜಕ ಒ ಪನ್ನೀರಸೆಲ್ವಂ ಈ ಘೋಷಣೆ ಮಾಡಿದ್ದಾರೆ. ಪ್ರಕಟಣೆ ಮಾಡಿದಾಗ ಪಿಎಂಕೆ ಅಅನ್ಬುಮಣಿ ರಾಮದಾಸ್ ಸಹ ಹಾಜರಿದ್ದರು. … Continued

ಸಂಭಾವ್ಯ ಕೊರೊನಾ ಹರಡುವಿಕೆ ತಡೆಗೆ ಪರಿಣಾಮಕಾರಿ ಕ್ರಮಕ್ಕೆ ಕೊರೊನಾ ಹೆಚ್ಚುತ್ತಿರುವ ರಾಜ್ಯಗಳಿಗೆ ಸೂಚನೆ

ಕೊವಿಡ್‌-೧೯ ಸಂಭಾವ್ಯ ಸೂಪರ್ ಹರಡುವಿಕೆಯ ಘಟನೆಗಳ ಸಂದರ್ಭದಲ್ಲಿ ಪರಿಣಾಮಕಾರಿ ಕಣ್ಗಾವಲು ಖಾತ್ರಿಪಡಿಸಿಕೊಳ್ಳಲು ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಿಗೆ ಕೇಂದ್ರ ಸರ್ಕಾರ ಶನಿವಾರ ಸೂಚನೆ ನೀಡಿದೆ. ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮಹಾರಾಷ್ಟ್ರ, ಪಂಜಾಬ್, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಡ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿಗಳು ಮತ್ತು … Continued