ರೈತರ ಪ್ರತಿಭಟನೆ ವೇಳೆ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮೇಲೆ ದೇಶದ್ರೋಹದ ಆರೋಪ: ಯುಎನ್‌ಹೆಚ್‌ಸಿಎಚ್ಆರ್ ಖಂಡನೆ

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪತ್ರಕರ್ತರು ಮತ್ತು ಸಾಮಾಜಿ ಕಾರ್ಯಕರ್ತರ ಮೇಲೆ ದೇಶದ್ರೋಹದ ಆರೋಪ ಮತ್ತು ಭಾರತದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಡೆಯುವ ಪ್ರಯತ್ನಗಳು “ಅಗತ್ಯ ಮಾನವ ಹಕ್ಕುಗಳ ತತ್ವಗಳ ಭಂಗ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಹೇಳಿದ್ದಾರೆ. 50ಕ್ಕೂ ಹೆಚ್ಚು ದೇಶಗಳಲ್ಲಿನ ಹಕ್ಕುಗಳ ವಿಷಯದಲ್ಲಿ ಮಾನವ ಹಕ್ಕುಗಳ ಮಂಡಳಿಯ (ಎಚ್‌ಆರ್‌ಸಿ) 46 ನೇ … Continued

ಅಯೋಧ್ಯ ರಾಮ ದೇಗುಲದ ದೇಣಿಗೆ ಅಭಿಯಾನ: ಸಂಗ್ರಹ 2500 ಕೋಟಿ ರೂ.ದಾಟುವ ಸಾಧ್ಯತೆ

ಲಕ್ನೋ: ಜನವರಿ 15 ರಂದು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಪ್ರಾರಂಭವಾದ ವಿಶ್ವದ ಅತಿದೊಡ್ಡ ನಿಧಿ ಸಂಗ್ರಹ ಡ್ರೈವ್ ಎಂದು ಹೆಸರಿಸಲ್ಪಟ್ಟ 44 ದಿನಗಳ ಸಮರ್ಪಣ ನಿಧಿ ಅಭಿಯಾನದಲ್ಲಿ ಇದುವರೆಗೆ 1900 ಕೋಟಿ ರೂ. ಗಳನ್ನು ಶ್ರೀರಾಮ್ ಲಲ್ಲಾ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗಿದೆ ಎಂದು ಶ್ರೀ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ … Continued

ಅಸ್ಸಾಂ:ಬೋಡೋ ಲ್ಯಾಂಡ್ ಪೀಪಲ್ಸ್ ಫ್ರಂಟ್ ಕಾಂಗ್ರೆಸ್‌ ತೆಕ್ಕೆಗೆ..!

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮೈತ್ರಿಕೂಟವಾಗಿದ್ದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಕೇಸರಿ ಪಕ್ಷದೊಂದಿಗಿನ ಸಂಬಂಧವನ್ನು ಮುರಿದಿದೆ. ಪಕ್ಷವು ಈಗ ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಸೇರಲಿದೆ ಎಂದು ಬಿಪಿಎಫ್ ಅಧ್ಯಕ್ಷ ಹಗ್ರಾಮ ಮೊಹಿಲರಿ ಶನಿವಾರ ಪ್ರಕಟಿಸಿದ್ದಾರೆ. ಶಾಂತಿ, ಏಕತೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬೊಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) … Continued

ಅಕ್ರಮ ಜಿಲೆಟಿನ್‌: ಬೆಳಗಾವಿ ಜಿಲ್ಲೆಯಲ್ಲಿ ಐವರ ಬಂಧನ

ಬೆಳಗಾವಿ: ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಜಿಲ್ಲೆ ಗೋಕಾಕ್ ತಾಲೂಕಿನ ಹೊನಕಟ್ಟಿ ಗ್ರಾಮದಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಗೋಪಾಲ್ ಸೊರಗಾಂವಿ, ಗಿರಿಮಲ್ಲಪ್ಪ ಸಿದ್ಧಾಪುರ, ಭೀಮಪ್ಪ ಎಂದು ಗುರುತಿಸಲಾಗಿದ್ದು, ಇವರಿಂದ 156 ಜಿಲೆಟಿನ್ ಕಡ್ದಿ ಸೇರಿದಂತೆ ಹಲವು ಸ್ಫೋಟಕಗಳನ್ನು ವಶ ಪಡಿಸಿಕೊಳ್ಳಲಾಗಿದೆ.ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಹೊರವಲಯದಲ್ಲಿ ಸ್ಫೋಟಗೊಳಿಸಲು … Continued

ಮಾ.೨೦ರಂದು ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್‌

ನವ ದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ಇದೀಗ ದಕ್ಷಿಣ ಭಾರತದ ಕಡೆ ವಿಸ್ತರಿಸಲು ರೈತರು ಮುಂದಾಗಿದ್ದಾರೆ. ಮಾರ್ಚ್ 20 ರಂದು ಮೊದಲ ಮಹಾ ಪಂಚಾಯತ್ ಶಿವಮೊಗ್ಗದಲ್ಲಿ ನಡೆಯಲಿದೆ. ಶಿವಮೊಗ್ಗದಲ್ಲಿ ನಡೆಯಲಿರುವ ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್‍ಗೆ 20 ಸಾವಿರ ರೈತರು ಸೇರುವ ನಿರೀಕ್ಷೆಯಿದೆ. ಮಹಾಪಂಚಾಯತ್‍ನಲ್ಲಿ ಭಾಗವಹಿಸುವಂತೆ ಕರ್ನಾಟಕದ … Continued

ಕೊವಿಡ್‌ ಲಸಿಕೆ: ಖಾಸಗಿ ಆಸ್ಪತ್ರೆಗಳಲ್ಲಿ ೨೫೦ ರೂ.ದರ ನಿಗದಿ

ನವ ದೆಹಲಿ: ದೇಶದಲ್ಲಿ ಮಾರ್ಚ್ 1 ರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್‌ ಲಸಿಕೆ ಹಾಕುವ ಎರಡನೇ ಹಂತದ ಅಭಿಯಾನ ನಡೆಯಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ ಗೆ 250 ರೂಪಾಯಿ ನಿಗದಿಪಡಿಸಿ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ದೇಶದ 10,000 ಸರ್ಕಾರಿ ಆಸ್ಪತ್ರೆಗಳು ಹಾಗೂ 20,000 … Continued

ಕಾನೂನುಗಳ ನಡುವೆ ಇರುವ ಅಸ್ಪಷ್ಟತೆ ನಿವಾರಣೆಯಾಗಬೇಕು: ಬೊಮ್ಮಾಯಿ

ಬೆಂಗಳೂರು: ನ್ಯಾಯಾಲಯಗಳಲ್ಲಿ ವಿವಿಧ ಇಲಾಖೆಗಳ ನಡುವೆ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಕಾರಣವಾಗಿರುವ ಪರಸ್ಪರ ದ್ವಂದ್ವಕಾರಿ  ಕಾನೂನುಗಳನ್ನು ಸರಿಪಡಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಶನಿವಾರ ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ವಿವಾದ ಪರಿಹಾರ ನೀತಿ ಬಿಡುಗಡೆ ಸಮಾರಂಭದಲ್ಲಿ ಕಾಫಿ ಟೇಬಲ್ … Continued

ಮೂರು ದಿನದೊಳಗೆ ಸ್ಪೋಟಕ ಹಿಂತಿರುಗಿಸಿ; ಸಚಿವ ನಿರಾಣಿ ಸೂಚನೆ 

ಕೊಪ್ಪಳ: ಕಲ್ಲು ಕ್ವಾರಿ ಹಾಗೂ  ಗಣಿಗಾರಿಕೆ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ಸ್ಪೋಟಕ ವಸ್ತುಗಳನ್ನು ಮೂರು ದಿನದೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ  ಹಿಂದಿತಿರುಗಿಸಬೇಕೆಂದು ಎಂದು ರಾಜ್ಯ ಗಣಿ ಸಚಿವ ಮುರುಗೇಶ ನಿರಾಣಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಲ್ಲು ಶನಿವಾರ ಸಭೆ ನಡೆಸಿ ಮಾತನಾಡಿದ ಅವರು, ಯಾರ್ಯಾರು  ತಮ್ಮ ತಮ್ಮ ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ಸ್ಫೋಟಕ್ಕಾಗಿ … Continued

ವಿಜಯಾನಂದ ಕಾಶಪ್ಪನವರಷ್ಟು ದೊಡ್ಡ ನಾಯಕ ನಾನಲ್ಲ:ನಿರಾಣಿ ವ್ಯಂಗ್ಯ

ಕೊಪ್ಪಳ: ಪಂಚಮಸಾಲಿ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ.  ಮಾಜಿ ಶಾಸಕ ವಿಜಯ ಕಾಶಪ್ಪನವರಷ್ಟು ದೊಡ್ಡ  ನಾಯಕ ನಾನಲ್ಲ. ಅವರು ರಾಷ್ಟ್ರೀಯ ಅಧ್ಯಕ್ಷರು. ಅವರೇ ನಾಯಕತ್ವ ತೆಗೆದುಕೊಂಡು ಹೋರಾಟ ಮಾಡಲಿ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು. ಶನಿವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು … Continued

ಪಕೋಡಾ ಮಾರುತ್ತಿರುವ ಚಿನ್ನ ವಿಜೇತ ಬಿಲ್ಲುಗಾರ್ತಿ ಮಮತಾ ಟುಡ್ಡು..!

ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಜಯಿಸಿರುವ ಬಿಲ್ಲುಗಾರ್ತಿ ಮಮತಾ ಟುಡ್ಡು ತೀವ್ರ ಬಡತನದ ಕಾರಣದಿಂದಾಗಿ ಧನಬಾದ್‌ ದಾಮೋದರಪುರ ಗ್ರಾಮದಲ್ಲಿ ಪಕೋಡಾ ಮಾರಾಟ ಮಾಡುತ್ತಿದ್ದಾಳೆ. 2010 ಮತ್ತು 2014 ರಲ್ಲಿ ಜೂನಿಯರ್ ಮತ್ತು ಸಬ್ ಜೂನಿಯರ್ ಮಟ್ಟದಲ್ಲಿ ಚಿನ್ನದ ಪದಕ ಗೆದ್ದ ರಾಷ್ಟ್ರಮಟ್ಟದ ಬಿಲ್ಲುಗಾರ್ತಿ ೨೩ರ ಹರೆಯದ ಮಮತಾ, ಪಕೋಡಾ, ಶೇಂಗಾ ಮಾರಾಟ ಮಾರುತ್ತಿದ್ದಾಳೆ. ನಿವೃತ್ತ ಬಿಸಿಸಿಎಲ್ … Continued