ಎನ್‌ಡಿಎ ಮೀನುಗಾರಿಕೆ ಸಚಿವಾಲಯ ಆರಂಭವಾದಾಗ ರಾಹುಲ್‌ ರಜೆ ಮೇಲಿದ್ರು: ಶಾ ಟೀಕೆ

ಎನ್‌ಡಿಎ ಸರಕಾರ ೨೦೧೯ರಲ್ಲಿ ಮೀನುಗಾರಿಕೆ ಸಚಿವಾಲಯ ಆರಂಭಿಸಿದಾಗ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ರಜೆಯಲ್ಲಿದ್ದರು ಎಂದು ಗೃಹ ಸಚಿವ ಅಮಿತ್‌ ಶಾ ಟೀಕಿಸಿದರು. ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಅವರು ಮೀನುಗಾರಿಕೆ ಇಲಾಖೆ ಏಕೆ ಇಲ್ಲ ಎಂದು ಕೇಳಿದ್ದರು. ಮೀನುಗಾರಿಕಾ ಇಲಾಖೆ 2 ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂಬ ವಿಷಯ ತಿಳಿಯದ ನಾಯಕನನ್ನು ಜನರು ಹೇಗೆ … Continued

ಬ್ರಿಟೀಷರನ್ನೇ ಓಡಿಸಿದ್ದೇವೆ ಮೋದಿ ಯಾವ ಲೆಕ್ಕ: ರಾಹುಲ್‌ ಗಾಂಧಿ

ಬ್ರಿಟೀಷರನ್ನೇ ಸೋಲಿಸಿದ್ದೇವೆ ಇನ್ನು ನರೇಂದ್ರ ಮೋದಿ ಯಾವ ಲೆಕ್ಕ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಿರುನಲ್ವೇಲಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಣದ ಪ್ರಭಾವ ಬಳಸಿ ದೇಶವನ್ನು ನಿಯಂತ್ರಿಸಲು ಹಾಗೂ ವಿರೋಧಿಗಳನ್ನು ಹಣಿಯಲು ಪ್ರಯತ್ನಿಸುತ್ತಿರುವವರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಾವು … Continued

ಅಮೆಜೊನಿಯಾ-೧ ಯಶಸ್ವಿ ಉಡಾವಣೆ: ಬ್ರೆಜಿಲ್‌ ಅಧ್ಯಕ್ಷರ ಅಭಿನಂದಿಸಿದ ಮೋದಿ

ಬ್ರೆಜಿಲ್‌ನ ಅಮೆಜೊನಿಯಾ-೧ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್‌ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ. ಪಿಎಸ್ಎಲ್ವಿ-ಸಿ 51 ಬ್ರೆಜಿಲ್‌ನ ಅಮೆಜೋನಿಯಾ -1 ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದ್ದಕ್ಕಾಗಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಅಭಿನಂದನೆಗಳು. ಇದು ನಮ್ಮ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ ಬ್ರೆಜಿಲ್‌ ವಿಜ್ಞಾನಿಗಳು ಸನ್ಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಪಿಎಂ ಮೋದಿ … Continued

ವಿಚಾರಣೆಯ ವಿಡಿಯೋ ಕಾನ್ಫರೆನ್ಸ್‌ ಹಂಚಿಕೊಳ್ಳಲು ವ್ಯಾಟ್ಸಾಪ್‌ ಗುಂಪು ಬಳಸುವಂತಿಲ್ಲ: ಸುಪ್ರಿಂ ಕೋರ್ಟ್‌

ನ್ಯಾಯಾಲಯದ ವಿಚಾರಣೆಯ ವಿಡಿಯೋ ಕಾನ್ಫರೆನ್ಸ್ ಲಿಂಕ್‌ಗಳನ್ನು ಹಂಚಿಕೊಳ್ಳಲು ಇನ್ನು ಮುಂದೆ ವಾಟ್ಸಾಪ್ ಗುಂಪುಗಳನ್ನು ಬಳಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ. ವಾಟ್ಸಾಪ್ ಬದಲಿಗೆ, ನೋಂದಾಯಿತ ಇಮೇಲ್ ಐಡಿಗಳಲ್ಲಿ ಮತ್ತು ಸಂಬಂಧಪಟ್ಟ ವಕೀಲರ ನೋಂದಾಯಿತ ಮೊಬೈಲ್ ಸಂಖ್ಯೆಗಳು, ರೆಕಾರ್ಡ್ ಮತ್ತು ಪಾರ್ಟಿ-ಇನ್-ಪರ್ಶನ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಡಿಯೋಕಾನ್ಫೆರೆನ್ಸ್‌ ಲಿಂಕ್‌ಗಳನ್ನು ಹಂಚಿಕೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹೊಸ ಅಧಿಸೂಚನೆಯನ್ವಯ … Continued

ಉಪಚುನಾವಣೆ-೪ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು: ಸಿಎಂ ಬಿಎಸ್‌ವೈ

ಮುಂಬರುವ ಉಪಚುನಾವಣೆಯಲ್ಲಿ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ಖಚಿತ ಎಂದು ಸಿಎಂ ಯಡಿಯೂರಪ್ಪ ವಿಶ್ವಾಸವ್ಯಕ್ತಪಡಿಸಿದರು. ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಯಾವುದೇ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲ್ಲ. ಈಗಾಗಲೇ ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಉಪಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನಾವೇ ಗೆಲ್ಲುತ್ತೇವೆ ಎಂದು ಹೇಳಿದರು. ಬೆಳಗಾವಿ ಲೋಕಸಭಾ ಕ್ಷೇತ್ರ ಅಲ್ಲದೇ 3 … Continued

ಶಿವಸೇನೆ ಸಚಿವ ಸಂಜಯ ರಾಥೋಡ್‌ ರಾಜೀನಾಮೆ

ಮುಂಬೈ: 23 ವರ್ಷದ ಪುಣೆ ಮಹಿಳೆಯ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಶಿವಸೇನೆ ಸಚಿವ ಸಂಜಯ್ ರಾಥೋಡ್ ಅವರು ಭಾನುವಾರ ಮಧ್ಯಾಹ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕರಿಸಲಾಗಿದೆ. ಬೆಳವಣಿಗೆಗಳ ಬಗ್ಗೆ ತಿಳಿದಿರುವ ನಾಯಕರು, ಅರಣ್ಯ ವಿಪತ್ತು ನಿರ್ವಹಣಾ ಸಚಿವರು, ಠಾಕ್ರೆ ಅವರ ರಾಜೀನಾಮೆಯನ್ನು ವಿಚಾರಣೆ ಮುಗಿಯುವವರೆಗೂ ಸ್ವೀಕರಿಸದಂತೆ ವಿನಂತಿಸಿದ್ದಾರೆ. … Continued

ಕಾಂಗ್ರೆಸ್‌ನಲ್ಲಿ ಮೂವರು ಸಿಎಂ ರೇಸ್‌ನಲ್ಲಿದ್ದಾರೆ: ರಾಮಲಿಂಗಾರೆಡ್ಡಿ

ಬಾಗಲಕೋಟೆ: ಮೂವರು ಕಾಂಗ್ರೆಸ್‌ ಮುಖಂಡರು ಸಿಎಂ ಹುದ್ದೆಯ ರೇಸ್‌ನಲ್ಲಿದ್ದು, ಪಕ್ಷ ಅಧಿಕಾರಕ್ಕೆ ಬಂದ ನಂತರ ಎಲ್ಲ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಕ್ಕೆ ಬಂದ ಮೇಲೆ ನಾವೆಲ್ಲಾ ತೀರ್ಮಾನಿಸುತ್ತೇವೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ … Continued

ತನ್ವೀರ್‌ ಸೇಠ್‌ಗೆ ಜೆಡಿಎಸ್‌ಗೆ‌ ಆಹ್ವಾನ ನೀಡಿದ ಸಾ.ರಾ.ಮಹೇಶ

ಮೈಸೂರು: ಶಾಸಕ ತನ್ವೀರ್ ಸೇಠ್ ಅವರನ್ನು ಕಾಂಗ್ರೆಸ್ ವಜಾ ಮಾಡಿದರೆ ಅವರನ್ನು ಜೆಡಿಎಸ್‍ಗೆ ಸ್ವಾಗತಿಸುತ್ತೇವೆ ಎಂದು ಜೆಡಿಎಸ್‌ ಮುಖಂಡ ಹಾಗೂ ಶಾಸಕ ಸಾ.ರಾ. ಮಹೇಶ ಹೇಳಿದರು. ತನ್ವೀರ್ ಸೇಠ್ ಒಬ್ಬ ಅಲ್ಪಸಂಖ್ಯಾತ ಮುಖಂಡ, ನಮಗೆ ಅವರ ಬಗ್ಗೆ ಗೌರವವಿದೆ. ನಾವು ಯಾರ ಪಕ್ಷದಲ್ಲೂ ಬೆಂಕಿ ಹಚ್ಚಿಲ್ಲ. ಎಲ್ಲವು ಆ ಕ್ಷಣದಲ್ಲಿ ಆದ ನಿರ್ಧಾರ. ಇದರಿಂದ ತನ್ವೀರ್ … Continued

ಕೆಂಪು ಕೋಟೆ ಹಿಂಸಾಚಾರ ಬಿಜೆಪಿ ಪೂರ್ವ ನಿಯೋಜಿತ ಕೃತ್ಯ: ಕೇಜ್ರಿವಾಲ್‌

ಗಣರಾಜ್ಯೋತ್ಸವದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಬಿಜೆಪಿಯ ಪೂರ್ವ ನಿಯೋಜಿತ ಕೃತ್ಯ ಎಂದು ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಮಾತನಾಡಿ, ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರವನ್ನು ಕೇಸರಿ ಪಕ್ಷ ಮೊದಲೇ ಯೋಜಿಸಿತ್ತು. ಕೇಂದ್ರದ ಮೂರು ಕೃಷಿ ಕಾನೂನುಗಳು ರೈತರಿಗೆ ಡೆತ್ ವಾರಂಟ್ ಇದ್ದಂತೆ ಎಂದರು. ಇಡೀ ಕೆಂಪು … Continued

ದೆಹಲಿಗೂ ತಲುಪಲಿದೆಯೇ ಕಾಂಗ್ರೆಸ್‌ ಬಣ ರಾಜಕೀಯದ ಜಗಳ..?

ಬೆಂಗಳೂರು:  ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಕೊನೆಕ್ಷಣದಲ್ಲಿ ಮಾಡಿಕೊಂಡ ಮೈತ್ರಿ ಕಾಂಗ್ರೆಸ್‌ನಲ್ಲಿ ಆಂತರಿಕ ಜಗಳಕ್ಕೆ ಕಾರಣವಾಗಿದೆ. ಶುಕ್ರವಾರ ಶಾಸಕ ತನ್ವೀರ್‌ ಸೇಠ್‌ ಸಿದ್ದರಾಮಯ್ಯ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದ ಬೆನ್ನಲ್ಲೇ ಏಕಪಕ್ಷೀಯವಾಗಿ ಮೈತ್ರಿ ನಿರ್ಧಾರ ತೆಗೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೈಕಮಾಂಡ್‌ಗೆ ದೂರು … Continued