ಪಂಜಾಬ್‌ ಸಿಎಂ ರಾಜಕೀಯ ವಿಶ್ಲೇಷಕರಾಗಿ ಪ್ರಶಾಂತ ಕಿಶೋರ್‌ ನೇಮಕ

ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ರಾಜಕೀಯ ವಿಶ್ಲೇಷಕರಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಇದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು “ಪ್ರಶಾಂತ್ ಕಿಶೋರ್ ನನ್ನ ಪ್ರಧಾನ ಸಲಹೆಗಾರರಾಗಿ ನನ್ನೊಂದಿಗೆ ಸೇರಿಕೊಂಡಿದ್ದಾರೆ. ಪಂಜಾಬ್ ಜನರ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತೇನೆ” ಎಂದು ಬರೆದಿದ್ದಾರೆ. ತಂತ್ರಜ್ಞನನ್ನು 2017 … Continued

ಕಾಂಗ್ರೆಸ್‌ ಜೆಡಿಎಸ್‌ ಬಿ ಟೀಮ್‌ ಎಂಬುದು ಮೈಸೂರು ಪಾಲಿಕೆಯಲ್ಲಿ ಸಾಬೀತು

ಹಗರಿಬೊಮ್ಮನಹಳ್ಳಿ: ‘ಕರ್ನಾಕದಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷದ ‘ಬಿ’ ಟೀಮ್ ಎನ್ನುವುದು ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಆಯ್ಕೆ ವಿಚಾರದಲ್ಲಿ ಸಾಬೀತಾಗಿದೆ’ ಎಂದು ರಾಜ್ಯದ ಸಮಾಜ‌ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಹೇಳಿದರು. ನೂತನ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪನಾಯಕನಹಳ್ಳಿ ಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ … Continued

ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತೇನೆಯೇ ? : ವಿಮಾನ ನಿಲ್ದಾಣದಲ್ಲಿ ತನ್ನ ವಶಕ್ಕೆ ಪಡೆದ ಪೊಲೀಸರಿಗೆ ನಾಯ್ಡು ಪ್ರಶ್ನೆ

ನೀವು ನಾಟಕ ಆಡುತ್ತಿದ್ದೀರಾ? ನನ್ನನ್ನು ಯಾಕೆ ಬಂಧಿಸುತ್ತಿದ್ದೀರಿ…? ” ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ರೆನಿಗುಂಟಾದ ತಿರುಪತಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಪೊಲೀಸರು ವಶಕ್ಕೆ ಪಡೆದ ವಿಡಿಯೋ ವೈರಲ್‌ ಆಗಿದ್ದು ಆ ವಿಡಿಯೋದಲ್ಲಿ ಅವರು ಪೊಲೀಸರೊಂದಿಗೆ ಈ ರೀತಿ ವಾದ ಮಾಡಿದ್ದಾರೆ. ಅವರು ಜಗನ್ ಮೋಹನ್ ರೆಡ್ಡಿ … Continued

ಪಶ್ಚಿಮ ಬಂಗಾಳದಲ್ಲಿ ೮ ಹಂತದ ಚುನುವಣೆ: ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ

ನವ ದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗಿದೆ. ವಕೀಲ ಎಂ.ಎಲ್. ಶರ್ಮಾ ಎಂಬವರು ಸಲ್ಲಿಸಿರುವ ಮನವಿಯಲ್ಲಿ, ರಾಜ್ಯದಲ್ಲಿ ಎಂಟು ಹಂತದ ಚುನಾವಣೆಗಳನ್ನು ನಡೆಸದಂತೆ ತಡೆಯಲು ಮತದಾನ ಸಮಿತಿಗೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಕೋರಲಾಗಿದೆ. ಫೆಬ್ರವರಿ 26 ರಂದು ಚುನಾವಣಾ … Continued

ತಮಿಳು ಸಂಸ್ಕೃತಿ ನಾಶಕ್ಕೆ ಪ್ರಧಾನಿ ಮೋದಿ ಹುನ್ನಾರ: ರಾಹುಲ್‌ ಆರೋಪ

ಕನ್ಯಾಕುಮಾರಿ: ತಮಿಳು ಸಂಸ್ಕೃತಿಯನ್ನು ಗೌರವಿಸದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತಮಿಳುನಾಡಿನ ಪ್ರತ್ಯೇಕ ಸಾಂಸ್ಕೃತಿಕ ಗುರುತನ್ನು ನಾಶ ಮಾಡುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. .ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್ ರೋಡ್ ಶೋ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಮಿಳು ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿ ಹೊರಬೇಕಿದ್ದ ಮುಖ್ಯಮಂತ್ರಿ ಇ.ಕೆ. … Continued

ತುಮಕೂರಿನಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಸಹಜ ಬೇಸಾಯ ಆಶ್ರಮ

ಸಹಜ ಕೃಷಿಗಾಗಿ ತುಮಕೂರಿನಲ್ಲಿ ‘ಗಾಂಧಿ ಸಹಜ ಬೇಸಾಯ ಆಶ್ರಮ’ ಎಂಬ ಹೆಸರಲ್ಲಿ ರೈತ ಆಶ್ರಮ ನಿರ್ಮಾಣವಾಗುತ್ತಿದ್ದು, ರೈತರಿಗಾಗಿಯೇ ತೆರೆದಿರುವ ದೇಶದ ಮೊದಲ ಆಶ್ರಮವೆಂಬ ಹೆಗ್ಗಳಿಕೆ ಇದಕ್ಕೆ ಸಿಗಲಿದೆ. ಮಹಾತ್ಮ ಗಾಂಧೀಜಿ ತತ್ವಗಳು, ಕಲ್ಪನೆಗಳಡಿ ತುಮಕೂರಿನ ಹೊನ್ನುಡಿಕೆ ಚೆಕ್‌ ಪೋಸ್ಟ್‌ ಬಳಿ ಈ ಕುಟೀರ ತಲೆ ಎತ್ತುತ್ತಿದೆ. ಈಗಾಗಲೇ ಸಹಜ ಬೇಸಾಯದ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿತೊಡಗಿಸಿಕೊಂಡಿರುವ … Continued

ಸೈನ್ಯದ ಗುಂಡಿನ ದಾಳಿ ನಂತರ ಮ್ಯಾನ್ಮಾರ್‌ನಲ್ಲಿ ಜನರ ಹೋರಾಟ ತೀವ್ರ

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ನಡೆಸಿದ ದಾಳಿಯಲ್ಲಿ ೧೮ ಜನರು ಮೃತಪಟ್ಟ ನಂತರ ಮ್ಯಾನ್ಮಾರ್‌ ಜನರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಆಂಗ್‌ ಸಾನ್‌ ಸೂಕಿ ಅವರ ಸರಕಾರವನ್ನು ಮತ್ತೆ ಸ್ಥಾಪಿಸಬೇಕೆಂದು ಒತ್ತಾಯಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ. ಯಾಂಗೋನ್‌ನಲ್ಲಿ ಜನಸಂದಣಿಯ ಮೇಲೆ ಗುಂಡು ಹಾರಿಸಿದ್ದರಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಸೈನ್ಯವು ಅಧಿಕಾರವನ್ನು ವಶಪಡಿಸಿಕೊಂಡ ನಂತರ … Continued

ಕೊವಿಡ್‌ ೨ನೇ ಲಸಿಕೆ ಪಡೆದರೂ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌ !

ಮಹಾರಾಷ್ಟ್ರದ ಸಿಯಾನ್‌ ಆಸ್ಪತ್ರೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ಕೊರೊನಾ ೨ನೇ ಲಸಿಕೆ ಪಡೆದರೂ ಕೊರೊನಾ ಪಾಸಿಟಿವ್‌ ಆಗಿರುವುದು ಆತಂಕ ಮೂಡಿಸಿದೆ. ೨೧ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಕೋವಿಶೀಲ್ಡ್‌ ೨ ಲಸಿಕೆ ಪಡೆದಿದ್ದರು. ಆದರೂ ಅವರನ್ನು ಪರೀಕ್ಷೆ ಮಾಡಿದಾಗ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಕೆಲವು ದಿನಗಳು ಬೇಕಾಗುತ್ತವೆ. ಆದ್ದರಿಂದ ಆತಂಕ ಪಡುವ … Continued

ಕುರಿಗಾರರ ಹೋರಾಟಕ್ಕೆ ಸಿದ್ದರಾಮಯ್ಯ ಸಾಥ್‌

ಬೆಂಗಳೂರು: ಅನುಗ್ರಹ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ನಡೆದ ಕುರಿಗಾರರ ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಥ್‌ ನೀಡಿದರು. ಕುರಿಗಳು ಸತ್ತರೆ ಪರಿಹಾರ ನೀಡುವ ಅನುಗ್ರಹ ಯೋಜನೆ ಮರು ಜಾರಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾ ಮಂಡಲದಿಂದ … Continued

ರಾಜ್ಯದ ೬೮ ಲಕ್ಷ ರೈತರಿಗೆ ಸ್ವಾಭಿಮಾನಿ ರೈತ ಕಾರ್ಡ್

ಧಾರವಾಡ: ರಾಜ್ಯದ ರೈತರಿಗೆ ಯಾವುದೇ ಬಗೆಯ ಗುರುತಿನ ಚೀಟಿ ಇಲ್ಲ. ಈ ನಿಟ್ಟಿನಲ್ಲಿ ರೈತರಿಗೆ ‘ಸ್ವಾಭಿಮಾನಿ ರೈತ’ ಎಂಬ ಗುರುತಿನ ಚೀಟಿ ವಿತರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ನಲವಗುಂದ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಮಾತನಾಡಿದ ಸಚಿವರು, ‘ರಾಜ್ಯದ ರೈತರಿಗೆ ಯಾವ ಗುರುತಿನ ಚೀಟಿಯೂ … Continued