ನನಗೆ ವಯಸ್ಸಾಗಿದೆ ಕೊರೊನಾ ಲಸಿಕೆ ಬೇಡ: ಖರ್ಗೆ

ನನಗೆ ವಯಸ್ಸಾಗಿದೆ. ನನ್ನ ಬದಲಿಗೆ ಯುವಕರಿಗೆ ಕೊರೊನಾ ಲಸಿಕೆ ನೀಡಿ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ನನಗೆ ೭೦ ವರ್ಷ ದಾಟಿದೆ. ನನಗಿಂತ ಹೆಚ್ಚು ಆಯುಷ್ಯ ಹೊಂದಿರುವ ಯುವಕರಿಗೆ ಲಸಿಕೆ ನೀಡುವುದು ಒಳಿತು. ನಾನು ಹೆಚ್ಚೆಂದರೆ ಇನ್ನು ೧೦-೧೫ ವರ್ಷ ಮಾತ್ರ ಬದುಕಬಹುದು ಎಂದರು. ಸೋಮವಾರ ಪ್ರಧಾನಿ ನರೇಂದ್ರ ಮೋದಿ, … Continued

ಜೆಡಿಎಸ್‌ಗೆ ಥೂ….ಎಂದು ಉಗಿದು ಕಾಂಗ್ರೆಸ್‌ ಸೇರಿದ ದೇವೆಗೌಡರ ಸಂಬಂಧಿ..!

ಪಿರಿಯಾಪಟ್ಟಣ: ಜೆಡಿಎಸ್‌ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತವಿಲ್ಲ, ಕೇವಲ ಸ್ವಾರ್ಥ ಹಾಗೂ ಅವಕಾಶವಾದಿ ರಾಜಕಾರಣ ಮಾತ್ರ ಗೊತ್ತಿದೆ ಎಂದು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಮಾಜಿ ಶಾಸಕ ಕೆ. ವೆಂಕಟೇಶ ಆರೋಪ ಮಾಡಿದರು. ತಾಲೂಕಿನ ಭುವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ವೆಂಕಟೇಶ ಮಾತನಾಡಿ, ೨೫ ವರ್ಷಗಳಿಂದ ಜೆಡಿಎಸ್‌ನಲ್ಲಿದ್ದೆ. ಎಚ್‌.ಡಿ. ದೇವೆಗೌಡರು ನಮ್ಮ … Continued

ಹೈದರಾಬಾದ್‌ನಲ್ಲಿ ಕೊವಿಡ್‌ ಲಸಿಕೆ ಡೋಸ್‌ ಪಡೆದ ಶತಾಯುಷಿ..!

ಹೈದರಾಬಾದ್: ತೆಲಂಗಾಣದ ಶತಮಾನ ಕಂಡ ವಯೋವೃದ್ಧರೊಬ್ಬರು ಎಲ್ಲಾ ಆತಂಕಗಳನ್ನು ಬದಿಗೊತ್ತಿ ಹೈದರಾಬಾದ್‌ನಲ್ಲಿ ಶಾಟ್ ಕೊವಿಡ್‌ -೧೯ ಚುಚ್ಚುಮದ್ದು ತೆಗೆದುಕೊಂಡರು. ಹೈದರಾಬಾದ್ ನಿವಾಸಿ ಮತ್ತು ಮಾಜಿ ಉದ್ಯಮಿ ಜೈದೇವ್ ಚೌಧರಿ (100) ಸೋಮವಾರ ಮೆಡಿಕೋವರ್ ಆಸ್ಪತ್ರೆಗಳಲ್ಲಿ ಮೊದಲ ಶಾಟ್ ತೆಗೆದುಕೊಂಡರು. ಅಧಿಕಾರಿಗಳ ಪ್ರಕಾರ, ಅವರು ಸಂತಸದಿಂದ ಇದ್ದಾರೆ. ಮತ್ತು ಹೆಚ್ಚು ಸಾಮಾಜಿಕವಾಗಿ ಸಕ್ರಿಯ ಜೀವನವನ್ನು ಆನಂದಿಸಲು ಲಸಿಕೆ … Continued

ಗೃಹಸಾಲದ ಬಡ್ಡಿ ರಿಯಾಯಿತಿ ನೀಡಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೋಮವಾರ ಗೃಹ ಸಾಲಗಳ ಬಡ್ಡಿ ರಿಯಾಯತಿಯನ್ನು ಪ್ರಕಟಿಸಿದ್ದು, ಇದು ಸೀಮಿತ ಕೊಡುಗೆಯ ಭಾಗವಾಗಿ ಮಾರ್ಚ್ ಅಂತ್ಯದವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದೆ. ಬ್ಯಾಂಕ್ ಈಗ 70 ಬೇಸಿಸ್ ಪಾಯಿಂಟ್‌ಗಳ (ಬಿಪಿಎಸ್) ಬಡ್ಡಿ ರಿಯಾಯತಿಯನ್ನು ನೀಡಲಿದ್ದು, ಬಡ್ಡಿದರಗಳು ಶೇಕಡಾ 6.70 ರಿಂದ ಪ್ರಾರಂಭವಾಗುತ್ತವೆ. ಇದು ಸೀಮಿತ … Continued

ಸೆಲ್ಫಿ ಹುಚ್ಚಿಗೆ ಆನೆಗೆ ಬಲಿಯಾದ

ರಾಯಘರ್:ಛತ್ತೀಸ್ಗಢ ದ ರಾಯಘರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಆನೆಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದ 21 ವರ್ಷದ ಯುವಕನನ್ನು ಆನೆ ತುಳಿದು ಕೊಂದು ಹಾಕಿದೆ. ಮನೋಹರ್ ಪಾಟೀಲ್ ಎಂಬುವವನೇ ಮೃತಪಟ್ಟವ. ಹಳ್ಳಿಯಿಂದ ಆನೆಯನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದಾಗ ಇಡೀ ಹಳ್ಳಿಯ ಜನರು ಆನೆಯನ್ನು ನೋಡಲು ಕಿಕ್ಕಿರಿದು ತುಂಬಿದ್ದರು. ಅದರಲ್ಲಿ ಮನೋಹರ್ ಪಾಟೀಲ್ ಮತ್ತು ಅವನ ಮೂವರು … Continued

೩೦ ತಾಲಿಬಾನ್‌ ಉಗ್ರರ ಕೊಂದ ಅಫ್ಘಾನಿಸ್ತಾನ್‌ ರಕ್ಷಣಾ ಪಡೆಗಳು

ಕಾಬೂಲ್: ಆಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯವಾದ ಕಪಿಸಾದಲ್ಲಿ ಆಫ್ಘಾನಿಸ್ತಾನ ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ಅಲ್-ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ 16 ಜನ ಸೇರಿದಂತೆ ಸೇರಿದಂತೆ 30 ತಾಲಿಬಾನ್ ಉಗ್ರರನ್ನು ಕೊಂದಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕಪಿಸಾದ ನಿಜ್ರಾಬ್ ಜಿಲ್ಲೆಯಲ್ಲಿ ಆಫ್ಘಾನಿಸ್ತಾನ ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ಆಫ್ಘನ್ ರಾಷ್ಟ್ರೀಯ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ … Continued

ಅತ್ಯಾಚಾರದ ಆರೋಪಿಗೆ ಬಾಧಿತ ಹುಡುಗಿ ಮದುವೆಯಾಗುತ್ತೀಯಾ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಯುವತಿಯನ್ನು ಹಲವು ಬಾರಿ ಬಲಾತ್ಕಾರ ಮಾಡಿದ ಆರೋಪ ಎದುರಿಸುತ್ತಿರುವ ಸರಕಾರಿ ಉದ್ಯೋಗಿಯಾಗಿರುವ ಆರೋಪಿಗೆ ಸರ್ವೋಚ್ಚ ನ್ಯಾಯಾಲಯವು ಬಾಧಿತ ಹುಡುಗಿಯನ್ನು ಮದುವೆಯಾಗುತ್ತೀಯಾ? ಎಂದು ಪ್ರಶ್ನಿಸಿದೆ. ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ಆರೋಪಿಗೆ “ನೀನು ಸರಕಾರಿ ಉದ್ಯೋಗಿಯಾಗಿ ಯುವತಿಯನ್ನು ಬಲತ್ಕಾರ ಮಾಡುವ ಮುಂಚೆ ವಿಚಾರ ಮಾಡಬೇಕಿತ್ತು. ಅವಳನ್ನು ಮದುವೆಯಾಗುವಂತೆ ನಾವು ನಿನಗೆ ಒತ್ತಾಯ ಮಾಡುವುದಿಲ್ಲ. ನಿನಗೆ ಅವಳನ್ನು … Continued

ಕಿಲಿಮಾಂಜಿರೋ ಪರ್ವತವೇರಿದ ಆಂಧ್ರದ ೯ ವರ್ಷದ ಬಾಲಕಿ

ಆಂಧ್ರ ಪ್ರದೇಶದ ಗ್ರಾಮೀಣ ಭಾಗದ ಬಾಲಕಿಯೋರ್ವಳು ಕಿಲಿಮಾಂಜಿರೋ ಪರ್ವತವನ್ನು ಯಶಸ್ವಿಯಾಗಿ ಆರೋಹಣ ಮಾಡಿದ್ದಾಳೆ. ಅನಂತಪುರದ ರಿತ್ವಿಕಾಶ್ರೀ ಪರ್ವತವನ್ನೇರಿದ ವಿಶ್ವದ ೨ನೇ ಕಿರಿಯ ವಯಸ್ಸಿನ ಹುಡುಗಿಯಾಗಿದ್ದಾಳೆ. ಏಷ್ಯಾದ ಮೊದಲ ಕಿರಿಯ ಹುಡುಗಿ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದಾಳೆ. ತಾಂಜಾನಿಯಾದಲ್ಲಿರುವ ಪರ್ವತ ಆಫ್ರಿಕಾ ಖಂಡದ ಅತೀ ದೊಡ್ಡ ಪರ್ವತ ಶ್ರೇಣಿಯಾಗಿದೆ. ರಿತ್ವಿಕಾಶ್ರೀ ತನ್ನ ತಂದೆಯೊಂದಿಗೆ ಪರ್ವತ ಏರಿದ್ದಾಳೆ. ಸಮುದ್ರ ಮಟ್ಟದಿಂದ … Continued

ಎಂಜಿನಿಯರಿಂಗ್​ ವಿದ್ಯಾರ್ಥಿ ಆತ್ಮಹತ್ಯೆ:ಪಾಲಕರಿಗೆ ಸಲಹೆ ನೀಡಿದ ನಟ ಜಗ್ಗೇಶ

ಬೆಂಗಳೂರು: ಬೆಂಗಳೂರಿನಲ್ಲಿ ಎಂಜಿನಿಯರಿಂಗ್​ ವಿದ್ಯಾರ್ಥಿ ಆತ್ಮಹತ್ಯೆ (ಮಾರ್ಚ್ 1) ಪ್ರಕರಣಕ್ಕೆ ಸಂತಾಪ ಸೂಚಿಸಿರುವ ನಟ ನಾಯಕ ಜಗ್ಗೇಶ್ ಮಕ್ಕಳ ದುರ್ಬಲ ಮನಸ್ಸಿನ ಬಗ್ಗೆ ಮರುಕಪಟ್ಟಿದ್ದಾರೆ. ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿಇ ಮೂರನೇ ಸೆಮಿಸ್ಟರ್​ ಓದುತ್ತಿದ್ದ ಜಯಂತ್ ರೆಡ್ಡಿ, ಸೋಮವಾರ ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು … Continued

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ೨.೮೦ ಕೋಟಿ ರೂ.ಮೌಲ್ಯದ ಐ ಫೋನ್‌ಗಳು ವಶಕ್ಕೆ

ಬೆಂಗಳೂರು: ಭಾರತಕ್ಕೆ ಐಫೋನ್‍ಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ದಂಪತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಅವರಿಂದ 2.8 ಕೋಟಿ ರೂ. ಮೌಲ್ಯದ 206 ಮೊಬೈಲ್‍ಗಳನ್ನು ವಶಪಡಿಸಿಳ್ಳಲಾಗಿದೆ. 49 ವರ್ಷದ ಪತಿ, 38 ವರ್ಷದ ಪತ್ನಿ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿದಾಗ ಲಗೇಜ್‍ನಲ್ಲಿ ದುಬಾರಿ ಮೌಲ್ಯದ ಫೋನ್‍ಗಳನ್ನು ಅಕ್ರಮವಾಗಿ ತಂದಿದ್ದು ಪತ್ತೆಯಾಗಿದೆ. … Continued