ʼಯುವಿʼ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ದಲಿತರ ವಿರುದ್ಧ ಜಾತಿ ನಿಂದನೆ ಮಾಡಿದ ಕ್ರಿಕೆಟಿಗ ಯುವರಾಜ್‌ ಸಿಂಗ್‌ ವಿರುದ್ಧ ಹರಿಯಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಹನ್ಸಿ ಮೂಲದ ನ್ಯಾಯವಾದಿ ರಜತ್‌ ಕಲ್ಸನ್‌ ಹಿಸ್ಸಾರ್‌ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಾಮಾಜಿಕ ಜಾಲತಾಣ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಇನ್ನೊಬ್ಬ ಆಟಗಾರನನ್ನು ಉಲ್ಲೇಖಿಸುವಾಗ ಈ ಹೇಳಿಕೆ ನೀಡಿದ್ದರು ಎಂದು ಕಲ್ಸನ್‌ ಆರೋಪಿಸಿದ್ದರು. … Continued

ನೇಪಾಳದಲ್ಲಿ ನೂತನ ವಿದೇಶ ಪ್ರವಾಸ ನೀತಿ ಖಂಡಿಸಿ ಬೀದಿಗಿಳಿದ ಮಹಿಳೆಯರು

ನೇಪಾಳದಲ್ಲಿ ಮಹಿಳೆಯರ ವಿದೇಶಿ ಪ್ರವಾಸ ನೀತಿಗೆ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ನೇಪಾಳದಲ್ಲಿ ೪೦ ವರ್ಷದೊಳಗಿನ ಮಹಿಳೆಯರು ವಿದೇಶಕ್ಕೆ ತೆರಳುವಾಗ ಪಾಲಕರಿಂದ (ಕಡ್ಡಾಯವಾಗಿ ಪುರುಷರು) ಪ್ರವಾಸದ ಉದ್ದೇಶ ತಿಳಿಸುವ ಅನುಮತಿ ಪತ್ರ ತರಬೇಕೆಂದು ಪ್ರವಾಸ ನೀತಿಯಲ್ಲಿ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ದೇಶಾದ್ಯಂತ ವಿವಿಧೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ … Continued

ಯಡಿಯೂರಪ್ಪ ಕುಟುಂಬದ ಮಾರಿಷಿಸ್‌ ಪ್ರವಾಸದ ಗುಟ್ಟು ರಟ್ಟಾಗಬೇಕು: ಯತ್ನಾಳ

ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಇತ್ತೀಚಿಗೆ ಮಾರಿಷಿಸ್‌ಗೆ ವಿಮಾನದಲ್ಲಿ ಯಾಕೆ ಹೋಗಿತ್ತು? ಅಲ್ಲಿ ಏನು ಹಣದ ವ್ಯವಹಾರ ನಡೆದಿದೆ ಎಂಬುದು ರಾಜ್ಯದ ಜನರಿಗೆ ತಿಳಿಯಬೇಕು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಸತ್ಯ ಸಂಗತಿ ಜನರ ಎದುರು ಬರಬೇಕು ಎಂದು ಆಗ್ರಹಿಸಿದರು. ಯಡಿಯೂರಪ್ಪ ಅವರ ಕುಟುಂಬದ ಸದಸ್ಯರೇ ಅವರಿಗೆ … Continued

ನೆರೆ ದೇಶಗಳಲ್ಲೂ ಬಿಜೆಪಿ ಸರಕಾರ: ತ್ರಿಪುರ ಸಿಎಂ ವಿವಾದಾತ್ಮಕ ಹೇಳಿಕೆ

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್‌ ಶಾ ನೆರೆ ದೇಶಗಳಾದ ನೇಪಾಳ ಹಾಗೂ ಶ್ರೀಲಂಕಾದಲ್ಲಿ ಬಿಜೆಪಿ ಸರಕಾರ ರಚನೆಯ ಉದ್ದೇಶ ಹೊಂದಿದ್ದಾರೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮಾತ್ರವಲ್ಲದೇ ನೇಪಾಳ ಹಾಗೂ ಶ್ರೀಲಂಕಾದಲ್ಲಿ ಬಿಜೆಪಿಯನ್ನು ಸಂಘಟಿಸಿ ಅಲ್ಲಿ ಬಿಜೆಪಿ ಸರಕಾರ ರಚನೆ ಮಾಡುವ ಉದ್ದೇಶ … Continued

ಎಸ್‌ಟಿ ಮೀಸಲಿಗೆ ಆಗ್ರಹಿಸಿ ಫೆ.೧೯ರಂದು ಕುರುಬರ ಪ್ರತಿಭಟನೆ

ಪರಿಶಿಷ್ಟ ಪಂಗಡ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ ಕುರುಬರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ಹಾಗೂ ಸಮಾವೇಶ ನಡೆಸಿದ ಕುರುಬರು ಫೆ.೧೯ರಂದು ಬೆಂಗಳೂರಿನ ಮೌರ್ಯ ಹೊಟೇಲ್‌ ವೃತ್ತದ ಮಹಾತ್ಮ ಗಾಂಧಿ ಮೂರ್ತಿ ಎದುರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಕುಲಶಾಸ್ತ್ರ ಅಧ್ಯಯನದ ವರದಿಯನ್ನು ಪರಾಮರ್ಷಿಸಿ ಕೂಡಲೇ ಕೂಡಲೇ ಕೇಂದ್ರ ಸರಕಾರಕ್ಕೆ ಶಿಫಾರಸು ಕಳಿಸಬೇಕು … Continued

ಬಿಪಿಎಲ್‌ ನಿಯಮಾವಳಿಯಲ್ಲಿ ಬದಲಾವಣೆ ಮಾಡಿಲ್ಲ: ಸಚಿವ ಉಮೇಶ ಕತ್ತಿ

ಬೆಂಗಳೂರು: ಸರಕಾರ ಬಿಪಿಎಲ್‌ ಕಾರ್ಡ್‌ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ. ಟಿವಿ, ಬೈಕ್‌, ಫ್ರಿಡ್ಜ್‌ ಇರುವವರ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲಾಗುವುದು ಎಂಬ ಸಚಿವರ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದಾರೆ. ಹಿಂದಿನ ಸರಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು … Continued

ಸಾಲ ಮರುಪಾವತಿ ವಿಫಲ: ಬಿ.ಆರ್‌.ಶೆಟ್ಟಿ ಆಸ್ತಿ ಮುಟ್ಟುಗೋಲಿಗೆ ಲಂಡನ್‌ ನ್ಯಾಯಾಲಯ ಆದೇಶ

ದುಬೈ: ದುಬೈನ ಬ್ಯಾಂಕ್‌ಗಳಿಂದ ಪಡೆದ ಸಾಲ ಮಾರುಪಾವತಿ ಮಾಡಲು ವಿಫಲವಾಗಿರುವ, ಕರ್ನಾಟಕ ಮೂಲಕ ದುಬೈ ಉದ್ಯಮಿ ಬಿ.ಆರ್ ಶೆಟ್ಟಿಯವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಎಂದು ಲಂಡನ್‌ ನ್ಯಾಯಾಲಯ ಆದೇಶಿಸಿದೆ. ದುಬೈನ ದೊಡ್ಡ ಆರೋಗ್ಯ ಸೇವಾ ಕಂಪನಿಯಾಗಿರುವ ಎನ್‌ಎಂಸಿ ಹೆಲ್ತ್‌ ಕೇರ್‌ನ ಮಾಲೀಕರಾಗಿದ್ದ ಬಿ.ಆರ್‌ ಶೆಟ್ಟಿ, ಸಂಸ್ಥಾಪಕ ಖಲೀಫಾ ಅಲ್‌ ಮುಹೈರಿ ಹಾಗೂ ಸಯೀದ್ ಅಲ್‌ ಖುಬೈಸಿ, … Continued

ಪ್ಲಾಸ್ಟಿಕ್‌, ಗಾಜಿನ ಮೇಲೆ ಹೆಚ್ಚು ಕಾಲ ಬದುಕುವ ಕೊರೊನಾ ಸೋಂಕು: ಐಐಟಿ ಸಂಶೋಧನೆ

ಕೊರೊನಾ ಸೋಂಕು ಕಾಗದ ಹಾಗೂ ಬಟ್ಟೆಗೆ ಹೋಲಿಕೆ ಮಾಡಿದರೆ ಪ್ಲಾಸ್ಟಿಕ್‌ ಹಾಗೂ ಗಾಜಿನ ಮೇಲ್ಮೈ ಮೇಲೆ ಹೆಚ್ಚು ಕಾಲ ಬದುಕುಳಿಯುತ್ತದೆ ಎಂದು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಬಾಂಬೆ ಸಂಶೋಧಕರು ತಿಳಿಸಿದ್ದಾರೆ. ಭೌತಶಾಸ್ತ್ರದ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟಗೊಂಡ ಪ್ರಬಂಧದಲ್ಲಿ ಈ ಮಹತ್ವದ ವಿಷಯವನ್ನು ತಿಳಿಸಲಾಗಿದೆ. ಗಾಜು ಹಾಗೂ ಪ್ಲಾಸ್ಟಿಕ್‌ ಮೇಲೆ ಕೊವಿಡ್‌-೧೯ ಸೋಂಕು ಹೆಚ್ಚು … Continued

ಸಿದ್ದರಾಮಯ್ಯ ದೆಹಲಿ ದೌಡ್:‌ ನಾಳೆ ರಾಹುಲ್‌ ಗಾಂಧಿ ಭೇಟಿ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ದಿಢೀರ್‌ ಆಗಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತಿರುವುದು ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಂಗಳವಾರ ಬೆಳಗ್ಗೆ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ರಾಹುಲ್ ಗಾಂಧಿ … Continued

ಉತ್ತರಾಖಂಡ ಪ್ರವಾಹ: ಮೃತ ಸಂಖ್ಯೆ ೫೩ಕ್ಕೆ ಏರಿಕೆ

ಉತ್ತರಾಖಂಡದಲ್ಲಿ ಹಿಮ ಬಂಡೆ ಕುಸಿದು ಉಂಟಾದ ಪ್ರವಾಹ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ೫೩ಕ್ಕೆ ಏರಿಕೆಯಾಗಿದೆ. ಸೋಮವಾರ ಅವಶೇಷಗಳ ಅಡಿಯಿಂದ ಮೂರು ಶವಗಳನ್ನುಹೊರ ತೆಗೆಯಲಾಗಿದೆ. ಚಮೋಲಿ ಜಿಲ್ಲೆಯ ಆದಿತಿ ಸುರಂಗ ಹಾಗೂ ತಪೋವನ-ವಿಷ್ಣುಗಡ ಪ್ರದೇಶದಿಂದ ಶವಗಳನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವಾತಿ ಬದೋರಿಯಾ ತಿಳಿಸಿದ್ದಾರೆ. ಫೆ.೭ರಂದು ಹಿಮ ಬಂಡೆ ಕುಸಿದು ಪ್ರವಾಹ ಉಂಟಾಗಿದ್ದು ಇದರಿಂದ ೧೫೧ ಜನರು … Continued