ತೆಹ್ರಾನ್: ಇರಾನ್ನ ಸರ್ವೋಚ್ಚ ನಾಯಕ (Supreme Leader) ಅಲಿ ಖಮೇನಿ ಅವರ ನಿಧನದ ನಂತರ ಉಂಟಾಗಿರುವ ರಾಜಕೀಯ ಸ್ಥಿತ್ಯಂತರದ ನಡುವೆ, ಪ್ರಭಾವಿ ಧರ್ಮಗುರು ಅಲಿರೆಜಾ ಅರಾಫಿ ಅವರನ್ನು ಅಲಿ ಖಮೇನಿ (Ali Khamenei) ಸ್ಥಾನಕ್ಕೆ ಧರ್ಮಗುರು ಅಯತೊಲ್ಲಾ ಆಯ್ಕೆ ಮಾಡಲಾಗಿದ್ದು, ಮಧ್ಯಂತರ ಪರಮೋಚ್ಛ ನಾಯಕ ಎಂದು ಘೋಷಣೆ ಮಾಡಿದೆ. ಇರಾನ್ನ ಗಾರ್ಡಿಯನ್ ಕೌನ್ಸಿಲ್ ಸದಸ್ಯರಾಗಿರುವ ಅಲಿರೆಜಾ ಅರಾಫಿ, ಆಯತೊಲ್ಲಾ ಅಲಿ ಖಮನೈಗೆ ಆಪ್ತರಾಗಿದ್ದಾರೆ.
ಇರಾನ್ನ ‘ನಾಯಕತ್ವ ಮಂಡಳಿ’ಯ (Leadership Council) ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಇರಾನ್ನ ಎಕ್ಸ್ಪೀಡಿಯನ್ಸಿ ಡಿಸರ್ನ್ಮೆಂಟ್ ಕೌನ್ಸಿಲ್ನ ವಕ್ತಾರರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
ವರದಿಗಳ ಪ್ರಕಾರ, ಅಲಿರೆಜಾ ಅರಾಫಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ನ್ಯಾಯಾಂಗ ಮುಖ್ಯಸ್ಥ ಘೋಲಮ್ ಹೊಸೈನ್ ಮೊಹ್ಸೇನಿ ಎಜೆಇ ಅವರೊಂದಿಗೆ ಈ ಉನ್ನತ ಮಟ್ಟದ ಮಂಡಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಯಾರು ಈ ಅಲಿರೆಜಾ ಅರಾಫಿ?
ಅಲಿರೆಜಾ ಅರಾಫಿ ಇರಾನ್ನ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. 1959 ರಲ್ಲಿ ಇರಾನ್ನ ಯಾಜ್ದ್ ಪ್ರಾಂತ್ಯದ ಮೇಬೋಡ್ನಲ್ಲಿ ಜನಿಸಿದ ಇವರು, ಪ್ರತಿಷ್ಠಿತ ಧರ್ಮಗುರುಗಳ ಕುಟುಂಬದಿಂದ ಬಂದವರು. ಇವರು ದಿವಂಗತ ಅಲಿ ಖಮೇನಿ ಅವರಿಗೆ ಅತ್ಯಂತ ಆಪ್ತರೆಂದು ಪರಿಗಣಿಸಲ್ಪಟ್ಟಿದ್ದಾರೆ ಮತ್ತು ಇರಾನ್ನ ಅಧಿಕಾರ ಕೇಂದ್ರದಲ್ಲಿ ಪ್ರಬಲ ಹಿಡಿತ ಹೊಂದಿದ್ದಾರೆ. ಚುನಾವಣಾ ಅಭ್ಯರ್ಥಿಗಳನ್ನು ಪರಿಶೀಲಿಸುವ ಮತ್ತು ಚುನಾವಣೆಗಳ ಉಸ್ತುವಾರಿ ವಹಿಸುವ ಅತ್ಯಂತ ಶಕ್ತಿಶಾಲಿ ‘ಗಾರ್ಡಿಯನ್ ಕೌನ್ಸಿಲ್’ ನ ಸದಸ್ಯರಾಗಿದ್ದಾರೆ.
ಸರ್ವೋಚ್ಚ ನಾಯಕನನ್ನು ನೇಮಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರ ಹೊಂದಿರುವ ‘ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್’ ನ ಭಾಗವಾಗಿದ್ದಾರೆ.
ಇರಾನ್ನ ಇಸ್ಲಾಮಿಕ್ ಸೆಮಿನರಿಗಳ ಜಾಲವನ್ನು ಮುನ್ನಡೆಸಿದ್ದಾರೆ. ಇವರು ಇರಾನ್ ಇರಾನ್ನಾದ್ಯಂತ ಇರುವ ಎಲ್ಲಾ ಇಸ್ಲಾಮಿಕ್ ಮದರಸಾಗಳ ಮುಖ್ಯಸ್ಥರಾಗಿದ್ದಾರೆ.ಈ ಹಿಂದೆ ಅಂತರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸರಿಗೆ ತರಬೇತಿ ನೀಡುವ ಅಲ್-ಮುಸ್ತಫಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ