ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಕಣ್ಣೂರು ಶ್ರೀ, ಯುವತಿ ಸೇರಿ ಮೂವರ ಬಂಧನ

ರಾಮನಗರ: ಕೆಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಹಾಗೂ ಮಾಗಡಿಯ ಕಣ್ಣೂರು ಮಠದ ಪೀಠಾಧಿಪತಿಗಳಾದ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ವಾಮೀಜಿಯವರ ಜೊತೆಗೆ ಬಂಧನಕ್ಕೀಡಾಗಿರುವ ಆರೋಪಿಗಳನ್ನು ನೀಲಾಂಬಿಕೆ ಅಲಿಯಾಸ್ ಚಂದು (21), ವಕೀಲ ಹಾಗೂ  ನಿವೃತ್ತ ಶಿಕ್ಷಕ ಮಹದೇವಯ್ಯ (61) ಎಂದು ಎಂದು ಹೇಳಲಾಗಿದೆ .ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್‍ನಲ್ಲಿ ಮೂರು ಪುಟಗಳಲ್ಲಿ ಮಾಹಿತಿ ನೀಡಿದ್ದರು. ಈ ವೇಳೆ ಕಣ್ಣೂರು ಶ್ರೀಗಳ ಷಡ್ಯಂತ್ರ್ಯದ ಬಗ್ಗೆಯೂ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಬಸವಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಮಠದ ಸ್ವಾಮೀಜಿ ನಡುವೆ ದ್ವೇಷವಿತ್ತು. ಆ ದ್ವೇಷಕ್ಕೆ ಕಾರಣವಾಗುವ ಅಂಶಗಳನ್ನು ವಿವರವಾಗಿ ಹೇಳಲಾಗುವುದಿಲ್ಲ. ಆದರೆ, ದ್ವೇಷದ ಹಿನ್ನೆಲೆಯಲ್ಲಿ ಬಸವಲಿಂಗ ಸ್ವಾಮೀಜಿಯವರಿಗೆ ಪಾಠ ಕಲಿಸಬೇಕೆಂದು ಷಡ್ಯಂತ್ರ ಹೂಡಲಾಗಿತ್ತೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಯುವತಿ ನೀಲಾಂಬಿಕೆ ಅಲಿಯಸ್ ಚಂದು ಇಂಜಿನಿಯರಿಂಗ್ ವಿದ್ಯಾರ್ಥಿನಿ. ಮೂಲತಃ ದೊಡ್ಡಬಳ್ಳಾಪುರದವಳಾದ ಇವಳ ಅಜ್ಜಿ ಮನೆ ತುಮಕೂರಿನಲ್ಲಿದೆ. ಅಜ್ಜಿಯ ಮನೆಗೆ ಬಂದು ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಗೆ ಕಣ್ಣೂರು ಶ್ರೀಗಳ ಜೊತೆ ಸಂಪರ್ಕಕ್ಕೆ ಬಂದಿದ್ದಳು. ಅದೇ ಯುವತಿಯನ್ನು ಬಳಸಿ ಮೃತ್ಯುಂಜ್ಯಯ ಸ್ವಾಮೀಜಿ, ಬಂಡೆಮಠದ ಶ್ರೀಗಳ ತೇಜೋವಧೆಗೆ ಯತ್ನಿಸಿದ್ದರೆಂಬ ಆರೋಪಗಳು ಕೇಳಿಬಂದಿವೆ ಎಂದು ಹೇಳಲಾಗಿದೆ.
ಬಂಡೆಮಠಕ್ಕೆ ಭೇಟಿ ನೀಡಿದ್ದ ಯುವತಿ, ಬಂಡೆಮಠದ ಪೀಠಾಧ್ಯಕ್ಷರಾಗಿದ್ದ ಬಸವಲಿಂಗ ಶ್ರೀಗಳನ್ನು ಪರಿಚಯ ಮಾಡಿಕೊಂಡಿದ್ದಳು. ಬಂಡೇಮಠದ ಶ್ರೀಗಳ ಜೊತೆ ವೀಡಿಯೋ ಚಾಟಿಂಗ್ ಮಾಡುವ ಮಟ್ಟಕ್ಕೆ ಆಕೆ ಸಲಿಗೆ ಬೆಳೆಸಿಕೊಂಡಿದ್ದಳು.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

ಬಸವಲಿಂಗ ಶ್ರೀಗಳ ಜೊತೆಗೆ ತಾನು ಮಾಡುತ್ತಿದ್ದ ವಿಡಿಯೋ ಚಾಟಿಂಗ್ ಗಳೆಲ್ಲವನ್ನೂ ರೆಕಾರ್ಡ್ ಮಾಡಿ, ಮಹದೇವಯ್ಯನಿಗೆ ವೀಡಿಯೋ ನೀಡುತ್ತಿದ್ದಳೆಂದು ತನಿಖೆ ಸಂದರ್ಭದಲ್ಲಿ ತಿಳಿದುಬಂದಿದೆ.  ಆದರೆ, ತನಿಖೆಯ ನಂತರವಷ್ಟೇ ಈ ಬಗ್ಗೆ ನಿಖರವಾಗಿ ಹೇಳಲು ಸಾಧ್ಯ ಎಂದು ಪೊಲೀಸರು ಹೇಳಿದ್ದಾರೆ.
ಬಂಡೆಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ಕಣ್ಣೂರು ಮೃತ್ಯುಂಜಯ ಶ್ರೀ ಇಬ್ಬರು ರಕ್ತ ಸಂಬಂಧಿಗಳಾಗಿದ್ದು, ಇಬ್ಬರು ಕೂಡ ಸೋದರ ಸಂಬಂಧಿಗಳು ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು ಪ್ರಕರಣದಲ್ಲಿ ಮತ್ತಷ್ಟು ಜನರು ಬಲೆಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement