ತಮಿಳುನಾಡು: ಈ ಅಭ್ಯರ್ಥಿ ಆರಿಸಿ ಬಂದ್ರೆ ಪ್ರತಿ ಮನೆಗೆ ಹೆಲಿಕಾಪ್ಟರ್..! ಮನೆಗೆಲಸ ಮಾಡಲು ರೋಬಟ್‌..!! ಚಂದ್ರನ ಮೇಲೆ ೧೦೦ ದಿನ ಪ್ರವಾಸ…!!!

ಚೆನ್ನೈ: ದಕ್ಷಿಣ ಮಧುರೈ ಕ್ಷೇತ್ರದವರಿಗೆ ವರ್ಷದ ಅಂತ್ಯದ ವೇಳೆಗೆ ಅವರ ಕುಟುಂಬ ಮಿನಿ ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸುವ ಅವಕಾಶವಿದೆ..! ಅವರ ಮನೆಯ ಕೊಳದಲ್ಲಿ ಈಜುವಾಗ ಐಫೋನ್‌ನಲ್ಲಿ ಅದೃಷ್ಟವಿಲ್ಲದ ಇತರ ಕ್ಷೇತ್ರಗಳ ಸ್ನೇಹಿತರೊಂದಿಗೆ ಚಾಟ್ ಮಾಡುವ ಸಾಧ್ಯತೆಯೂ ಇದೆ..!! ಆದರೆ ಇದು ಸಾಧ್ಯವಾಗುವುದು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಮಧುರೈ ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ ಸರವಣನ್ ಆಯ್ಕೆಯಾದರೆ ಮಾತ್ರ ಎಂಬುದನ್ನು ಸೇರಿಸಿಕೊಳ್ಳಬೇಕು..!!!
ಸರವಣನ್ ಅವರ ಚುನಾವಣೆ ಭರವಸೆಗಳು ವೈರಲ್ ಆಗಿವೆ. ಇವರ ಚಿಹ್ನೆ ಕಸದ ಡಬ್ಬಿ. ಅವರ ಚುನಾವಣಾ ಪೋಸ್ಟರ್ ಕಸದ ಡಬ್ಬಿ ಪ್ರಾಮಾಣಿಕತೆಯ ಸಂಕೇತ ಎಂದೂ ಹೇಳುತ್ತದೆ.
ಹೆಲಿಕಾಪ್ಟರ್, ಐಫೋನ್ ಮತ್ತು ಈಜುಕೊಳ ಹೊಂದಿರುವ ಮೂರು ಅಂತಸ್ತಿನ ಮನೆ ಮಾತ್ರವಲ್ಲದೆ, ಪ್ರತಿ ಮನೆಗೆ 1 ಕೋಟಿ ರೂ., ಮನೆಕೆಲಸ ಮಾಡಲು ರೋಬಟ್, ಮದುವೆಯಾಗುವಾಗ ಮಹಿಳೆಯರಿಗೆ 100 ಸವರಿನ್‌ ಚಿನ್ನ, 1 ರೂ. ಉದ್ಯಮಗಳನ್ನು ಪ್ರಾರಂಭಿಸಲು ಬಯಸುವ ಯುವಕರಿಗೆ ಕೋಟಿ, ವಿಕಲಚೇತನರಿಗೆ ತಿಂಗಳಿಗೆ 10 ಲಕ್ಷ ರೂ., ಚಂದ್ರನ ಮೇಲೆ 100 ದಿನಗಳ ಪ್ರವಾಸ, ಕ್ಷೇತ್ರವನ್ನು ತಂಪಾಗಿಡಲು 300 ಅಡಿ ಕೃತಕ ಮಂಜುಗಡ್ಡೆ ಮತ್ತು  ರಾಕೆಟ್ ಲಾಂಚ್‌ಪ್ಯಾಡ್.. ಒಂದೇ ಎರಡೇ…
33 ವರ್ಷದ ಸ್ವತಂತ್ರ ಅಭ್ಯರ್ಥಿ ಸರವಣನ್‌ ಅಫಿಡವಿಟ್ ಪ್ರಕಾರ, ಅವರ ಕೈಯಲ್ಲಿ 10,000 ರೂ. ನಗದು ಮತ್ತು ಬ್ಯಾಂಕಿನಲ್ಲಿ 2,000 ರೂ.ಇದೆ. ಆದರೆ, “ತಮಿಳುನಾಡಿನ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ” ಈ ಭರವಸೆಗಳನ್ನು ನೀಡಿದ್ದೇನೆ ಎಂದು ಸರವಣನ್ ಹೇಳಿದ್ದಾರೆ ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.
ಜನರಲ್ಲಿ ಜಾಗೃತಿ ಮೂಡಿಸುವುದು ನನ್ನ ಉದ್ದೇಶ. ಚುನಾವಣಾ ಸಮಯದಲ್ಲಿ, ರಾಜಕೀಯ ಪಕ್ಷಗಳು ಏನೆಲ್ಲ ಭರವಸೆಗಳನ್ನು ನೀಡುತ್ತವೆ ಮತ್ತು ಮತಗಳನ್ನು ಪಡೆಯುತ್ತವೆ, ಮತ್ತು ಅವರು ಆರಿಸಿ ಬಂದ ನಂತರ ಏನನ್ನೂ ಮಾಡುವುದಿಲ್ಲ. ತಮಿಳುನಾಡಿನ ಜನರಲ್ಲಿ, ವಿಶೇಷವಾಗಿ ಯುವಕರಲ್ಲಿ ಜಾಗೃತಿ ಮೂಡಿಸಲು ನಾನು ಈ ಭರವಸೆಗಳನ್ನು ನೀಡಿದ್ದೇನೆ ಎಂದು ಸ್ವತಂತ್ರ ಅಭ್ಯರ್ಥಿ ಸರವಣನ್ ಹೇಳಿದ್ದಾರೆ.
ಪತ್ರಿಕೆಯೊಂದರ ವರದಿಗಾರನಾಗಿ ಕೆಲಸ ಮಾಡುವ ಸರವಣನ್, ಒಂದು ಕಾರಣಕ್ಕಾಗಿ ಡಸ್ಟ್‌ಬಿನ್ ಅನ್ನು ತನ್ನ ಸಂಕೇತವಾಗಿ ಆರಿಸಿಕೊಂಡಿದ್ದೇನೆ ಎಂದು ಹೇಳುತ್ತಾರೆ.ನಾನು ಡಸ್ಟ್‌ಬಿನ್ ಅನ್ನು ಚಿಹ್ನೆಯನ್ನಾಗಿ ಆರಿಸಿದ್ದೇನೆ ಏಕೆಂದರೆ ನಾವು ವ್ಯವಸ್ಥೆಯಲ್ಲಿ ಲಂಚ ಮತ್ತು ಭ್ರಷ್ಟಾಚಾರದ ಕಸವನ್ನು ತೊಡೆದುಹಾಕಬೇಕು” ಎಂದು ಇದು ಸಂಕೇತಿಸುತ್ತದೆ ಎನ್ನುತ್ತಾರೆ.
ಅವರ ಚುನಾವಣಾ ಭರವಸೆಗಳು ಇಂಟರ್ನೆಟ್ ಸಂವೇದನೆಯಾಗಿ ಮಾರ್ಪಟ್ಟಿದ್ದರೂ, ಅದರ ಹಿಂದಿನ ಕಾರಣ ಎಲ್ಲರಿಗೂ ತಿಳಿದಿಲ್ಲ. ಅದು ಮತದಾರರಿಗೆ ರಾಜಕೀಯ ನಾಯರಕರು ಕೊಡುವ ಸುಳ್ಳು ಭರವಸೆಗಳ ಬಗ್ಗೆ ಜಾಗೃತಿ ಮೂಡಿಸಲು..!!

ಪ್ರಮುಖ ಸುದ್ದಿ :-   ನಟಿ ಅಮೃತಾ ಪಾಂಡೆ ಶವವಾಗಿ ಪತ್ತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement