ನವದೆಹಲಿ : ಭಾರತದ ಪುರುಷರ ಕ್ರಿಕೆಟ್ ತಂಡವು ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ಆಡಲಿರುವ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇಂದು ಗುರುವಾರ (ಸೆಪ್ಟೆಂಬರ್ 25) ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ ಅಗರ್ಕರ್ ಈ ಟೆಸ್ಟ್ ಸರಣಿಗೆ ಭಾರತ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆಯಾದ ತಂಡದಲ್ಲಿ ಕರುಣ ನಾಯರ್ ಅವರನ್ನು ಕೈಬಿಡಲಾಗಿದೆ.
ಇಂಗ್ಲೆಂಡಿನಲ್ಲಿ ನಾಲ್ಕು ಟೆಸ್ಟ್ಗಳನ್ನು ಆಡಿದರೂ ಕರುಣ ನಾಯರ್ ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಅವರ ಜೊತೆಗೇ ಶಾರ್ದೂಲ್ ಠಾಕೂರ್, ಅಭಿಮನ್ಯು ಈಶ್ವರನ್, ಅರ್ಶದೀಪ್ ಸಿಂಗ್, ಆಕಾಶ ದೀಪ್ ಹಾಗೂ ಅಂಶುಲ್ ಕಂಬೋಜ್ ಅವರನ್ನು ಕೂಡಾ ಕೈಬಿಡಲಾಗಿದೆ. ಪಂತ್ ಇಂಗ್ಲೆಂಡ್ ಸರಣಿಯ ನಾಲ್ಕನೇ ಟೆಸ್ಟ್ನಲ್ಲಿ ಗಾಯಗೊಂಡಿದ್ದು, ತಂಡದ ಆಯ್ಕೆಗೆ ಅಲಭ್ಯ ಎಂದು ಹೇಳಿರುವ ಕಾರಣದಿಂದ ರಿಷಭ್ ಪಂತ್ ತಂಡದಲ್ಲಿ ಸೇರ್ಪಡೆಯಾಗಿಲ್ಲ. ಆಕಾಶ ದೀಪ್ ಇಂಗ್ಲೆಂಡಿನ ವಿರುದ್ಧ ಮೂರು ಟೆಸ್ಟ್ಗಳಲ್ಲಿ ಆಡಿದರೆ, ಶಾರ್ದೂಲ್ ಎರಡು ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು.
20 ತಿಂಗಳ ಬಳಿಕ ಅಕ್ಸರ್ ಪಟೇಲ್ ಮತ್ತೆ ಟೆಸ್ಟ್ ತಂಡಕ್ಕೆ ಮರಳಿ ಬಂದಿದ್ದಾರೆ. ಜೊತೆಗೆ, ಕರ್ನಾಟಕದ ಬಲಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಹಾಗೂ ಐಪಿಎಲ್ನ ಎಸ್ಆರ್ಎಚ್ ತಂಡದ ಆಲ್ರೌಂಡರ್ ನಿತೀಶ್ ಕುಮಾರ ರೆಡ್ಡಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.ದೇವದತ್ ಕಳೆದ ಬಾರಿಗೆ ನವೆಂಬರ್ ೨೦೨೪ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ಥ್ನಲ್ಲಿ ಟೆಸ್ಟ್ ಪಂದ್ಯವಾಡಿದ್ದರು. ನಿತೀಶ್ ರೆಡ್ಡಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ಕೊನೆಯ ಟೆಸ್ಟ್ ಆಡಿದ ನಂತರ ಮೊಣಕಾಲು ಗಾಯದ ಕಾರಣದಿಂದ ಆಂಡರ್ಸನ್-ತೆಂಡುಲ್ಕರ್ ಟ್ರೋಫಿಯ ಕೊನೆಯ ಎರಡು ಟೆಸ್ಟ್ಗಳಿಗೆ ಲಭ್ಯವಿರಲಿಲ್ಲ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್ (ವಿಕೆಟ್ ಕೀಪರ್), ನಾರಾಯಣ ಜಗದೀಶನ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ, ಕುಲದೀಪ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ನಿತೀಶಕುಮಾರ ರೆಡ್ಡಿ, ಅಕ್ಸರ ಪಟೇಲ್, ಬಿ ಸಾಯಿ ಸುದರ್ಶನ್,


ನಿಮ್ಮ ಕಾಮೆಂಟ್ ಬರೆಯಿರಿ