
ಇಸ್ಲಾಮಾಬಾದ್: ಬಹಾವಲ್ಪುರ ಶಿಬಿರದ ಜೊತೆ ಜೆಇಎಂ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನ ಪಾಕಿಸ್ತಾನದ ಸಂಪರ್ಕದ ಬಗ್ಗೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಬಹಿರಂಗಪಡಿಸಿದ ಕೆಲವೇ ದಿನಗಳ ನಂತರ ಮತ್ತೊಂದು ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಮತ್ತೊಂದು ಬಾಂಬ್ ಸಿಡಿಸಿದ್ದಾನೆ. ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾದಲ್ಲಿರುವ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಪ್ರಧಾನ ಕಚೇರಿಯನ್ನು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಅಡಿಯಲ್ಲಿ ನಾಶಪಡಿಸಿವೆ ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ವೀಡಿಯೊದಲ್ಲಿ, ಮೇ 7 ರ ಆಪರೇಶನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಾಶವಾದ ಮುರಿಡ್ಕೆ ಭಯೋತ್ಪಾದಕ ಶಿಬಿರವನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶೇಖುಪುರ ಜಿಲ್ಲೆಯ ಮುರಿಡ್ಕೆ ನಗರ. ‘ಹಿಂದಿಗಿಂತ ದೊಡ್ಡದಾಗಿ’ ಪುನರ್ನಿರ್ಮಿಸಲಾಗುತ್ತಿದೆ ಎಂದು ಎಲ್‌ಇಟಿ ಕಮಾಂಡರ್ ಖಾಸಿಮ್ ಒಪ್ಪಿಕೊಂಡಿದ್ದಾನೆ.

“(ಭಾರತದ) ದಾಳಿಯಲ್ಲಿ ನಾಶವಾದ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾದ ಅವಶೇಷಗಳ ಮೇಲೆ ನಾನು ನಿಂತಿದ್ದೇನೆ. ಅದನ್ನು ಪುನರ್ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ದೇವರ ದಯೆಯಿಂದ, ಮೊದಲಿಗಿಂತ ದೊಡ್ಡದಾಗಿ ನಿರ್ಮಿಸಲಾಗುವುದು” ಎಂದು ನಿರ್ಮಾಣ ಹಂತದಲ್ಲಿರುವ ಸ್ಥಳದ ಮುಂದೆ ನಿಂತಿದ್ದ ಖಾಸಿಮ್ ವೀಡಿಯೊದಲ್ಲಿ ಹೇಳಿದ್ದಾರೆ.
ಧ್ವಂಸಗೊಂಡ ಮರ್ಕಜ್ ತೈಬಾ ಮಸೀದಿಯಲ್ಲಿ ಅನೇಕ ಭಯೋತ್ಪಾದಕರು [ಮುಜಾಹಿದ್ದೀನ್‌ಗಳು ಮತ್ತು ತಲಾಬಾ (ವಿದ್ಯಾರ್ಥಿಗಳು)] ತರಬೇತಿ ಪಡೆದು “ವಿಜಯ (ಫೈಜ್)” ಗಳಿಸಿದ್ದಾರೆ ಎಂದು ಖಾಸಿಮ್ ಒಪ್ಪಿಕೊಂಡಿದ್ದಾನೆ. ಆದರೆ ನಾಶವಾದ ಕಟ್ಟಡವನ್ನು ಭಯೋತ್ಪಾದಕ ಗುಂಪು ಬಳಸುತ್ತಿಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಮತ್ತೊಂದು ವೀಡಿಯೊದಲ್ಲಿ, ಎಲ್‌ಇಟಿ ಕಮಾಂಡರ್ ಪಾಕಿಸ್ತಾನಿ ಯುವಕರು ಮುರಿಯ್ಕೆಯ ಮರ್ಕಜ್ ತೈಬಾದಲ್ಲಿರುವ ದೌರಾ-ಎ-ಸುಫಾಗೆ ಸೇರಿ ಎಂದು ಒತ್ತಾಯಿಸಿದ್ದಾನೆ. ದೌರಾ-ಎ-ಸುಫಾ ಒಂದು ಭಯೋತ್ಪಾದಕ ತರಬೇತಿ ಕಾರ್ಯಕ್ರಮವಾಗಿದ್ದು, ಇದು “ಜಿಹಾದಿ ತರಬೇತಿ ಕಾರ್ಯಕ್ರಮದ” ಭಾಗವಾಗಿ ಧಾರ್ಮಿಕ ಬೋಧನೆ ಜೊತೆ ತರಬೇತಿ ನೀಡಲಾಗುತ್ತದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ನಾಗರಿಕರನ್ನು ಕೊಂದ ಕೆಲವು ದಿನಗಳ ನಂತರ, ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿದ್ದ ಒಂಬತ್ತು ಭಯೋತ್ಪಾದಕ ಸ್ಥಳಗಳ ಮೇಲೆ ಭಾರತೀಯ ಪಡೆಗಳು ಸಂಘಟಿತ ರಾತ್ರಿಯ ದಾಳಿಯಲ್ಲಿ ನಾಶಪಡಿಸಿದ್ದರಲ್ಲಿ ಲಷ್ಕರೆ ಮುರಿಡ್ಕೆ ಶಿಬಿರವೂ ಒಂದು. ಆಪರೇಷನ್ ಸಿಂಧೂರ್ ಅಡಿಯಲ್ಲಿ ಸೇನೆಯು ಬಹಾವಲ್ಪುರದ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ನೆಲೆಗಳು ಮತ್ತು ಸಿಯಾಲ್‌ಕೋಟ್‌ನ ಹಿಜ್ಬುಲ್ ಮುಜಾಹಿದ್ದೀನ್‌ನ ಪ್ರಮುಖ ನೆಲೆಗಳನ್ನು ಮತ್ತು ಬರ್ನಾಲಾ ಮತ್ತು ಮುಜಫರಾಬಾದ್‌ನಲ್ಲಿರುವ ಹೆಚ್ಚುವರಿ ಎಲ್‌ಇಟಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.
ಈ ಹಿಂದೆ, ಜೈಶ್ ಕಮಾಂಡರ್ ಮಸೂದ್ ಇಲಿಯಾಸ್ ಕಾಶ್ಮೀರಿ, ಬಹಾವಲ್ಪುರದ ಮೇಲಿನ ದಾಳಿಯಲ್ಲಿ ಭಯೋತ್ಪಾದಕ ಗುಂಪಿನ ಉನ್ನತ ಕಮಾಂಡರ್ ಮಸೂದ್ ಅಜರ್ ಕುಟುಂಬವನ್ನು “ಛಿದ್ರಗೊಳಿಸಲಾಗಿದೆ” ಎಂದು ಒಪ್ಪಿಕೊಂಡಿದ್ದಾನೆ. ವೈರಲ್ ಆದ ವೀಡಿಯೊದಲ್ಲಿ, ಪಾಕಿಸ್ತಾನ ಸೇನೆ ಮತ್ತು ಅದರ ಮುಖ್ಯಸ್ಥ ಅಸಿಮ್ ಮುನೀರ್, ಆಪರೇಷನ್ ಸಿಂಧೂರ್‌ನಲ್ಲಿ ಕೊಲ್ಲಲ್ಪಟ್ಟವರ “ಅಂತ್ಯಕ್ರಿಯೆಗೆ ಜನರಲ್‌ಗಳನ್ನು ಕಳುಹಿಸಿದ್ದಾರೆ” ಎಂದು ಆತ ಹೇಳಿಕೊಂಡಿದ್ದ.


ನಿಮ್ಮ ಕಾಮೆಂಟ್ ಬರೆಯಿರಿ