ಅಂಕೋಲಾ: ಲಾರಿ-ಬೈಕ್‌ ಡಿಕ್ಕಿ : ಇಬ್ಬರು ಬೈಕ್‌ ಸವಾರರು‌ ಸ್ಥಳದಲ್ಲೇ ಸಾವು

ಅಂಕೋಲಾ: ಬೈಕಿಗೆ ಲಾರಿ ಡಿಕ್ಕಿಯಾಗಿ ಬೈಕಿನಲ್ಲಿ ತೆರಳುತ್ತಿದ್ದ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನಬಾಗಿಲ ಬೊಗ್ರಿಬೈಲ್ ಸಮೀಪ ಸಂಭವಿಸಿದ ಬಗ್ಗೆ ವರದಿಯಾಗಿದೆ. ಮೃತರನ್ನು ಅಗಸೂರಿನ ಬೊಮ್ಮಯ್ಯ ನಾಯಕ ಮತ್ತು ನಾರಾಯಣ ನಾಯಕ ಎಂದು ಗುರುತಿಸಲಾಗಿದೆ. ಬೈಕ್‌ ಗೆ ಡಿಕ್ಕಿಯಾದ ಲಾರಿಯು ಬೈಕ್ ಸವಾರರನ್ನು ಸುಮಾರು ಕೆಲವು ಮೀಟರುಗಳಷ್ಟು ಎಳೆದುಕೊಂಡು … Continued

ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಬೆಳಗಾವಿ: ಸುವರ್ಣ ವಿಧಾನಸೌಧದ ಭದ್ರತೆ, ಸ್ವಚ್ಛತೆ ಹಾಗೂ ಅದರ ಘನತೆ ಕಾಪಾಡುವ ನಿಟ್ಟಿನಲ್ಲಿ ಒಟ್ಟಾರೆ ನಿರ್ವಹಣಗೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದ್ದಾರೆ. ನಗರದ ಹೊರಹೊಲಯದಲ್ಲಿರುವ ಸುವರ್ಣ ವಿಧಾನಸೌಧಕ್ಕೆ ಬುಧವಾರ(ಜೂ.1) ಭೇಟಿ ನೀಡಿ ಪರಿಶೀಲಿಸಿದ ಅವರು, ಸುವರ್ಣ ವಿಧಾನಸೌಧದ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ … Continued

ಶಿಕ್ಷಣ ಸಚಿವ ಬಿ.ಸಿ.ನಾಗೇಶ ಮನೆಗೆ ಮುತ್ತಿಗೆ : ಕೆಲ ಎನ್‌ಎಸ್‌ಯುಐ ಕಾರ್ಯಕರ್ತರ ಬಂಧನ

ತುಮಕೂರು: ಶಿಕ್ಷಣ ಸಚಿವ ಬಿ.ಸಿ ನಾಗೇಶ ಮನೆ ಮೇಲೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI)ದವರು ಮುತ್ತಿಗೆ ಹಾಕಿ ಗದ್ದಲ ನಡೆಸಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ ಮನೆಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಿಗೆ ಹಾಕಿದ್ದ ಕೆಲ ಎನ್‌ಎಸ್‌ಯುಐ ಕಾರ್ಯಕರ್ತರನ್ನು ತಿಪಟೂರು ಪೊಲೀಸರು ಬಂಧಿಸಿದ್ದಾರೆ. ಇಂದು, ಬುಧವಾರ ತುಮಕೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ … Continued

ಕೇಸರಿ ಧ್ವಜ ಹೇಳಿಕೆ: ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೇಸರಿ ಧ್ವಜ ಮುಂದೊಂದು ದಿನ ಭಾರತದ ರಾಷ್ಟ್ರಧ್ವಜವಾಗಲಿದೆ ಎಂಬ ಕರ್ನಾಟಕ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಸಂಜಯ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸರಿ ಧ್ವಜವನ್ನು ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದು, ಮುಂದೊಂದು ದಿನ ಅದು ರಾಷ್ಟ್ರಧ್ವಜವಾಗಬಹುದು … Continued

ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತು ಜೂನ್ 2ರಂದು ಶಿಕ್ಷಣ ಸಚಿವರಿಂದ ವರದಿ ಸಲ್ಲಿಕೆ: ಸಿಎಂ ಬೊಮ್ಮಾಯಿ

ಉಡುಪಿ: ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಸಲ್ಲಿಸುವ ವರದಿ ಆಧರಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನಮಾನಸದಲ್ಲಿ ಮೂಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಕೇಳಿದ್ದೇನೆ ಎಂದು ಹೇಳಿದರು. ಈಗಾಗಲೇ ಶಾಲೆಗಳು ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ … Continued

ಹುಬ್ಬಳ್ಳಿ : ಜೂನ್‌ 3ರಂದು ವಿಶ್ವ ಹಿಂದೂ ಪರಿಷದ್‌ನ ಪ್ರೇರಣಾ ಸೇವಾ ಸಂಸ್ಥೆಯ ನೂತನ ಕಟ್ಟಡ ಧರ್ಮಸಿರಿ ಉದ್ಘಾಟನೆ

ಹುಬ್ಬಳ್ಳಿ: ವಿಶ್ವ ಹಿಂದೂ ಪರಿಷದ್‌ನ ಉತ್ತರ ಕರ್ನಾಟಕ ಟ್ರಸ್ಟ್‌ ಪ್ರೇರಣಾ ಸೇವಾ ಸಂಸ್ಥೆಯ ನೂತನ ಕಟ್ಟಡ ಧರ್ಮಸಿರಿಯ ಉದ್ಘಾಟನಾ ಸಮಾರಂಭ ಜೂನ್‌ 3ರಂದು ಬೆಳಿಗ್ಗೆ 10:45ಕ್ಕೆ ನಗರದಲ್ಲಿ ನಡೆಯಲಿದೆ. ಧರ್ಮಸಿರಿ ನೂತನ ಕಟ್ಟಡವು  ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕಿನ ಪುರುಷೋತ್ತಮ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿದೆ. ನಗರದ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ … Continued

ರಾಜ್ಯಸಭಾ ಚುನಾವಣೆಗೆ ಟಿಕೆಟ್​ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ

ಬೆಂಗಳೂರು: ಕಾಂಗ್ರೆಸ್‌ನಲ್ಲಿ ರಾಜ್ಯಸಭಾ ಚುನಾವಣೆಗೆ ಟಿಕೆಟ್​ ಘೋಷಣೆಯಾದ ಬೆನ್ನಲ್ಲೇ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದರು. ಪರಿಷತ್ ಮತ್ತು ರಾಜ್ಯಸಭಾ ಸ್ಥಾನಕ್ಕೆ ಅವರನ್ನು ಪರಿಗಣಿಸದ ಹಿನ್ನೆಲೆಯಲ್ಲಿ 2014ರಿಂದ ಪಕ್ಷಕ್ಕೆ ತಮ್ಮ ಕೊಡುಗೆ ಬಗ್ಗೆ ಸುಧೀರ್ಘ ಪತ್ರ ಬರೆದು ಕಾಂಗ್ರೆಸ್ ರಾಷ್ಟ್ರೀಯ … Continued

ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧೆ: ಕುಪೇಂದ್ರ ರೆಡ್ಡಿ ಶ್ರೀಮಂತ ಅಭ್ಯರ್ಥಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಡಿಮೆ ಆಸ್ತಿ ಇರುವ ಅಭ್ಯರ್ಥಿ

ಬೆಂಗಳೂರು: ಬಿಜೆಪಿಯಿಂದ ಮೂವರು, ಕಾಂಗ್ರೆಸ್‌ನಿಂ ಇಬ್ಬರು, ಜೆಡಿಎಸ್​ನಿಂದ ಒಬ್ಬರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರು ತಮ್ಮ ಆಸ್ತಿ ವಿವರವನ್ನೂ ಘೋಷಿಸಿಕೊಂಡಿದ್ದಾರೆ. ಕರ್ನಾಟಕದ ರಾಜ್ಯಸಭಾ ಅಭ್ಯರ್ಥಿಗಳಲ್ಲಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎರಡನೇ ಶ್ರೀಮಂತ ಅಭ್ಯರ್ಥಿಗ ಕಾಂಗ್ರೆಸ್‌ನ ಮನ್ಸೂರ್‌ ಆಗಿದ್ದಾರೆ. ಉಳಿದಂತೆ ನವರಸ ನಾಯಕ ಜಗ್ಗೇಶ ನಂತರದ ಸ್ಥಾನದಲ್ಲಿದ್ದಾರೆ. ಅತಿ ಕಡಿಮೆ ಆಸ್ತಿ ಹೊಂದಿರುವವರೆಂದರೆ … Continued

ದ್ವಿತೀಯ ಪಿಯು ಉತ್ತರ ಪತ್ರಿಕೆ ಮೌಲ್ಯಮಾಪಕರಿಗೆ ಶೇ.20ರಷ್ಟು ಸಂಭಾವನೆ ಹೆಚ್ಚಳ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯ ಹಾಗೂ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹಾಜರಾಗುವ ಸಿಬ್ಬಂದಿಗೆ ಶೇ.20ರಷ್ಟು ಸಂಭಾವನೆ ಹೆಚ್ಚಳ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಈ ಸಂಭಾವನೆಯು ಮುಂದಿನ ಮೂರು ವರ್ಷಗಳವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿದೆ. ಆದರೆ ಸಂಭಾವನೆ ಪರಿಷ್ಕರಣೆಗೆ ಷರತ್ತುಗಳನ್ನು ಸಹ ವಿಧಿಸಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳನ್ವಯಯುಜಿಸಿ ವೇತನ … Continued

ಪಿಯು ಪ್ರವೇಶ ಮಿತಿ ಹೆಚ್ಚಳ, ಹೆಚ್ಚುವರಿ ವಿಭಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿ ಮಿತಿಯನ್ನು 80 ರಿಂದ 100ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ಹೊಸ ಭಾಷೆ, ಹೊಸ ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳ ಮಂಜೂರಾತಿಗೂ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ.ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ 2022-23ನೇ ಸಾಲಿನ ರಾಜ್ಯದ … Continued