ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಬೂಸ್ಟರ್ ಡೋಸ್ ಬೆಲೆ 600 ರೂ.: ಮೂಲಗಳು

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಮೂಲಗಳ ಪ್ರಕಾರ, ಕೋವಿಶೀಲ್ಡ್‌ನ ಬೂಸ್ಟರ್ ಡೋಸ್‌ನ ಬೆಲೆಯನ್ನು 600 ರೂ.ಗಳು ಮತ್ತು ತೆರಿಗೆ ಸೇರುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಏಪ್ರಿಲ್ 10ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ಬೂಸ್ಟರ್ ಡೋಸ್ ಲಭ್ಯವಿರುತ್ತದೆ ಎಂದು ಕೇಂದ್ರವು ಶುಕ್ರವಾರ ಪ್ರಕಟಿಸಿದೆ. 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು … Continued

166 ಜನರ ಸಾವಿಗೆ ಕಾರಣವಾದ 26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್‌ಗೆ ಪಾಕ್ ಕೋರ್ಟಿನಿಂದ 31 ವರ್ಷ ಜೈಲು ಶಿಕ್ಷೆ: ವರದಿ

ನವದೆಹಲಿ: ವಿವಿಧ ಭಯೋತ್ಪಾದನೆ ಪ್ರಕರಣಗಳಲ್ಲಿ, ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್‌ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಶುಕ್ರವಾರ 31 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಎರಡು ಪ್ರಕರಣಗಳಲ್ಲಿ … Continued

ಬಂಧನದ ನಂತರ ಒಡಿಶಾ ಪತ್ರಕರ್ತನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಸರಪಳಿಯಿಂದ ಬಂಧಿಸಿದ ಪೊಲೀಸರು: ತನಿಖೆಗೆ ಆದೇಶ

ಬಾಲಸೋರ್: ಒಡಿಶಾದ ಟೆಲಿವಿಷನ್ ಪತ್ರಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಮತ್ತು ನಂತರ ಒಡಿಶಾದ ಬಾಲಸೋರ್‌ನ ಆಸ್ಪತ್ರೆಯೊಂದರಲ್ಲಿ ಬೆಡ್‌ಗೆ ಸರಪಳಿಯಿಂದ ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಪತ್ರಕರ್ತನನ್ನು ಪೊಲೀಸ್ ಠಾಣೆಯೊಳಗೆ ಅಮಾನುಷವಾಗಿ ಥಳಿಸಲಾಯಿತು ಮತ್ತು ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ ಅವರ ಆಸ್ಪತ್ರೆಯ ಹಾಸಿಗೆಗೆ ಕಾಲಲನ್ನು ಸೇರಿಸಿ ಸರಪಳಿಯಲ್ಲಿ ಬಿಗಿಲಾಯಿತು. ಆಸ್ಪತ್ರೆಯಿಂದ ಪತ್ರಕರ್ತನನ್ನು ಸರಪಳಿಯಲ್ಲಿ ಬಿಗಿದಿದ್ದ … Continued

ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್‌ ಮಾಡಲು ವೀಡಿಯೋ ಮಾಡುತ್ತಿದ್ದ ವೇಳೆ ರೈಲು ಹರಿದು ಮೂವರು ಬಾಲಕರು ಸಾವು

ಚೆನ್ನೈ: ರೈಲ್ವೆ ಹಳಿಯ ಮೇಲೆ ವೀಡಿಯೋ ಶೂಟ್ ಮಾಡುತ್ತಿದ್ದ ಮೂವರಿಗೆ ರೈಲು ಡಿಕ್ಕಿ ಹೊಡೆದು ಮೂವರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಮೃತರನ್ನು ಕೆ.ಮೋಹನ್(17), ಪ್ರಕಾಶ್ (17) ಹಾಗೂ ಎಸ್.ಅಶೋಕ್(24) ಎಂದು ಗುರುತಿಸಲಾಗಿದೆ. ಚೆಂಗಲಪಟ್ಟು ಸಮೀಪದ ರೈಲ್ವೆ ಹಳಿ ಬಳಿ ಇನ್ಸ್ಟಾಗ್ರಾಂಗೆಂದು ವೀಡಿಯೋ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ಸ್ಥಳೀಯ … Continued

ದೇಶ ತೊರೆಯದಂತೆ ಆಕಾರ್‌ ಪಟೇಲ್‌ಗೆ ನಿರ್ದೇಶಿಸಿದ ಸಿಬಿಐ ನ್ಯಾಯಾಲಯ; ಸಿಬಿಐ ನಿರ್ದೇಶಕರ ಕ್ಷಮಾಪಣೆಗೂ ತಡೆ

ನವದೆಹಲಿ: ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯ ಭಾರತ ಘಟಕದ ಮಾಜಿ ಅಧ್ಯಕ್ಷ ಆಕಾರ್‌ ಪಟೇಲ್‌ ಅವರಿಗೆ ತನ್ನ ಅನುಮತಿಯಿಲ್ಲದೆ ದೇಶವನ್ನು ತೊರೆಯದಂತೆ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. ಅಲ್ಲದೆ, ಸಿಬಿಐ ನಿರ್ದೇಶಕರು ಆಕಾರ್‌ ಪಟೇಲ್‌ ಅವರಿಗೆ ಕ್ಷಮಾಪಣೆ ಪತ್ರ ಬರೆಯಬೇಕು ಎಂದು ಸೂಚಿಸಿದ್ದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪವನ್‌ ಕುಮಾರ್‌ ಅವರ ಆದೇಶಕ್ಕೆ ಸಿಬಿಐ … Continued

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಏಪ್ರಿಲ್ 10 ರಿಂದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹರಿಗೂ ಕೋವಿಡ್-19 ಬೂಸ್ಟರ್ ಡೋಸ್

ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ತೆಗೆದುಕೊಂಡ ಮಹತ್ವದ ನಿರ್ಧಾರದಲ್ಲಿ ಏಪ್ರಿಲ್ 10 ರಿಂದ ಎಲ್ಲಾ ವಯಸ್ಕರು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ ಎಂದು ಪ್ರಕಟಿಸಿದೆ. ಇಲ್ಲಿಯವರೆಗೆ, 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ಮಾತ್ರ ಕೋವಿಡ್‌-19 ಲಸಿಕೆಯ ಮೂರನೇ ಡೋಸ್ ಸ್ವೀಕರಿಸಲು ಅರ್ಹರಾಗಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ಏಪ್ರಿಲ್ 10 ರಿಂದ … Continued

ಮದುವೆ ನೆಪದಲ್ಲಿ ಆನ್ಲೈನ್‌ ಸೈಟ್‌ ಮೂಲಕ 200ಕ್ಕೂ ಹೆಚ್ಚು ಹುಡುಗಿಯರನ್ನು ವಂಚಿಸಿದ ಭೂಪ..!

ಬಸ್ತಿ (ಉತ್ತರ ಪ್ರದೇಶ): ಆನ್‌ಲೈನ್ ಸೈಟ್‌ ಮೂಲಕ ಹಲವು ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಬಸ್ತಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಆರೋಪಿಯನ್ನು ಗಾಜಿಯಾಬಾದ್‌ನ ನಿವಾಸಿ ತರುಣಕುಮಾರ್ ಎಂದು ಗುರುತಿಸಲಾಗಿದೆ. ಕೊರೊನಾದಿಂದ ಉಂಟಾದ ಲಾಕ್‌ಡೌನ್ ಎಲ್ಲರನ್ನೂ ಹೆದರಿಸಿತು ಆದರೆ ಅದು … Continued

UPI ಮೂಲಕ ಎಲ್ಲ ಬ್ಯಾಂಕ್ ಎಂಟಿಎಂಗಳಲ್ಲಿ ಕಾರ್ಡ್ ಇಲ್ಲದೆ ನಗದು ಹಿಂಪಡೆಯುವಿಕೆ ಸೌಲಭ್ಯ ಶೀಘ್ರವೇ ಲಭ್ಯ : ಆರ್‌ಬಿಐ ಗವರ್ನರ್

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ, ಏಪ್ರಿಲ್ 8 ರಂದು ಭಾರತದ ಎಲ್ಲಾ ಬ್ಯಾಂಕುಗಳ ಎಲ್ಲಾ ಎಟಿಎಂ (ATM)ಗಳಲ್ಲಿ ಕಾರ್ಡ್ ರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡುವುದನ್ನು ಆರ್‌ಬಿಐ ಪ್ರಸ್ತಾಪಿಸಿದೆ ಎಂದು ಪ್ರಕಟಿಸಿದ್ದಾರೆ. ಮೂರು ದಿನಗಳ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಆರ್‌ಬಿಐ ಗವರ್ನರ್ ಪ್ರಕಟಿಸಿದರು. … Continued

ಗೋರಖನಾಥ ದೇವಾಲಯದ ದಾಳಿಕೋರ ಇಸ್ಲಾಮಿಕ್ ಸ್ಟೇಟ್‌ ಗುಂಪಿನಿಂದ ಹನಿ ಟ್ರ್ಯಾಪ್ : ಉತ್ತರ ಪ್ರದೇಶ ಪೊಲೀಸರು

ಲಕ್ನೋ: ಉತ್ತರ ಪ್ರದೇಶ ಗೋರಖನಾಥ ದೇವಾಲಯದ ದಾಳಿ ಪ್ರಕರಣ ಹೊಸ ಟ್ವಿಸ್ಟ್ ಪಡೆದಿದೆ. ಉತ್ತರ ಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ದಳವು ಗೋರಖನಾಥ ದೇವಾಲಯದ ದಾಳಿ ಪ್ರಕರಣದಲ್ಲಿ ಹನಿ ಟ್ರ್ಯಾಪ್ ಕೋನವನ್ನು ಬಹಿರಂಗಪಡಿಸಿದೆ ಎಂದು ಇಂಡಿಯಾ ಟುಡೆ.ಕಾಮ್‌ ವರದಿ ಮಾಡಿದೆ ವರದಿ ಪ್ರಕಾರ, ಗೋರಖನಾಥ ದೇವಾಲಯದ ದಾಳಿಕೋರ ಅಹ್ಮದ್ ಮುರ್ತಾಜಾ ಅಬ್ಬಾಸಿ ಇಸ್ಲಾಮಿಕ್ ಸ್ಟೇಟ್‌ ಭಯೋತ್ಪಾದಕ … Continued

TataNeu ಸೂಪರ್ ಅಪ್ಲಿಕೇಶನ್: 12 ಕೋಟಿ ಗ್ರಾಹಕರು, 2,500 ಆಫ್‌ಲೈನ್ ಸ್ಟೋರ್‌ಗಳು, 8 ಕೋಟಿ ಡೌನ್‌ಲೋಡ್‌ಗಳು…!

ಮುಂಬೈ: ಟಾಟಾ ಸಮೂಹದ ಅತ್ಯಂತ ಕಿರಿಯ ಸದಸ್ಯ, ಬಹುನಿರೀಕ್ಷಿತ ಟಾಟಾ ನ್ಯೂ ಸೂಪರ್ ಅಪ್ಲಿಕೇಶನ್, ಅಂತಿಮವಾಗಿ ದೇಶಾದ್ಯಂತ ಜನರಿಗಾಗಿ ಬಿಡುಗಡೆಯಾಗಿದೆ. ಈ ‘ಸೂಪರ್ ಅಪ್ಲಿಕೇಶನ್’ ಹಣಕಾಸು ಸೇವೆಗಳಿಂದ ಹಿಡಿದು ತಂತ್ರಜ್ಞಾನ, ಪ್ರಯಾಣ ಮತ್ತು ದಿನಸಿ ವಸ್ತುಗಳವರೆಗೆ ಹಲವಾರು ಸೇವೆಗಳನ್ನು ನೀಡುತ್ತದೆ. 2,500 ಆಫ್‌ಲೈನ್ ಸ್ಟೋರ್‌ಗಳೊಂದಿಗೆ 12 ಕೋಟಿ ಗ್ರಾಹಕರ ನೆಲೆಯೊಂದಿಗೆ ಅಪ್ಲಿಕೇಶನ್ ಹೊರಡುತ್ತದೆ. ಟಾಟಾ ಸಮೂಹದ … Continued