ಡಬ್ಲುಎಚ್‌ಒ SARS-CoV-2 ನ ಭಾರತೀಯ ರೂಪಾಂತರವನ್ನು ಜಾಗತಿಕ ಕಳವಳ ಎಂದು ಕರೆದಿದ್ದು ಯಾಕೆಂದರೆ..

“ಟುಗೆದರ್ ಫಾರ್ ಇಂಡಿಯಾ” ಅಭಿಯಾನವನ್ನು ಪ್ರಾರಂಭಿಸಿದ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೋಮವಾರ ಕೋವಿಡ್ -19ಕ್ಕೆ ಕಾರಣವಾಗುವ ಕೊರೊನಾ ವೈರಸ್‌ SARS-CoV-2ರ ಭಾರತೀಯ ರೂಪಾಂತರದ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದೆ. ಡಬ್ಲ್ಯುಎಚ್‌ಒ ಇಂಡಿಯನ್ ಕೋವಿಡ್ -19 ರೂಪಾಂತರವನ್ನು “ಜಾಗತಿಕ ಕಳವಳ ಅಥವಾ ಕಾಳಜಿಯ ರೂಪಾಂತರ” ಎಂದು ಕರೆದಿದೆ. ಇದೇ ರೂಪಾಂತರವು ಮಹಾರಾಷ್ಟ್ರದಲ್ಲಿ ಡಬಲ್ ರೂಪಾಂತರಗಳೊಂದಿಗೆ ಪತ್ತೆಯಾಗಿದೆ. … Continued

2ರಿಂದ 18 ವಯಸ್ಸಿನವರಲ್ಲಿ ಮುಂದಿನ ಹಂತದ ಪ್ರಯೋಗಗಳಿಗೆ ಕೋವಾಕ್ಸಿನ್ ಶಿಫಾರಸು: ವರದಿ

ನವ ದೆಹಲಿ: ಭಾರತ್ ಬಯೋಟೆಕ್‌ನ ಕೋವಿಡ್‌ -19 ಲಸಿಕೆ ಕೊವಾಕ್ಸಿನ್ ಅನ್ನು 2ರಿಂದ 18 ವರ್ಷದೊಳಗಿನವರ ಮೇಲೆ ಹಂತ -2 ಮತ್ತು ಹಂತ -3 ಕ್ಲಿನಿಕಲ್ ಪ್ರಯೋಗಗಳಿಗೆ ತಜ್ಞರ ಸಮಿತಿ ಮಂಗಳವಾರ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಏಮ್ಸ್-ದೆಹಲಿ, ಏಮ್ಸ್-ಪಾಟ್ನಾ ಮತ್ತು ನಾಗ್ಪುರದ ಮೆಡಿಟ್ರಿನಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ವಿವಿಧ ತಾಣಗಳಲ್ಲಿ 525 … Continued

ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ: ಪೊಲೀಸ್‌ ಹುದ್ದೆಯಿಂದ ಆರೋಪಿ ಸಚಿನ್ ವಾಝೆ ವಜಾ

ಮುಂಬೈ: ಎನ್‌ಕೌಂಟರ್ ಸ್ಪೆಷಲಿಸ್ಟ್’ ಸಚಿನ್ ವಾಝೆ ಅವರನ್ನು ಮುಂಬೈ ಪೊಲೀಸ್‌ ಹುದ್ದೆಯಿಂದ ವಜಾ ಮಾಡಲಾಗಿದೆ. ಆಂಟಿಲಿಯಾ ಬಾಂಬ್ ಬೆದರಿಕೆ ಪ್ರಕರಣ ಮತ್ತು ಮನ್ಸುಖ್ ಹಿರೆನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ವಾಝೆ (ಎಪಿಐ) ಎನ್‌ಐಎ ಬಂಧನದಲ್ಲಿದ್ದಾರೆ. ಸಚಿನ್ ವಾಝೆ ಅವರನ್ನು ಪೊಲೀಸ್ ಪಡೆಯಿಂದ ವಜಾಗೊಳಿಸಲು ಆದೇಶ ಹೊರಡಿಸಲಾಗಿದೆ ಎಂದು ಮುಂಬೈ ಪೊಲೀಸ್ … Continued

ಭಾರತದಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ 4,205 ಸಾವು..ಇದು ಈವರೆಗಿನ ಅತಿ ಹೆಚ್ಚು

ನವ ದೆಹಲಿ: ಹಿಂದಿನ ದಿನಕ್ಕೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ, ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಹೊಸ ಪ್ರಕರಣಗಳನ್ನು ಕಂಡಿದ್ದು, ಒಟ್ಟು ಪ್ರಕರಣ 2,33,40,938 ಕ್ಕೆ ತಲುಪಿಸಿದೆ. ಇದೇ ಸಮಯದಲ್ಲಿ ವೈರಸ್‌ನಿಂದ 4,205 ಸಾವುಗಳನ್ನು ವರದಿ ಮಾಡಿದೆ ಎಂದು … Continued

44 ದೇಶಗಳಲ್ಲಿ ಭಾರತದ ರೂಪಾಂತರಿ ಕೊರೊನಾ ವೈರಸ್ ಪತ್ತೆ

ನವ ದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆಯು ವೇಗವಾಗಿ ಹರಡಲು ಕಾರಣವಾಗಿರುವ B.1.617 ರೂಪಾಂತರಿ ವೈರಸ್‌ ವಿಶ್ವದ 44 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೊರೊನಾ ವೈರಸ್ ಸೋಂಕಿನ B.1.617 ರೂಪಾಂತರ ತಳಿಯ 2020ರ ಅಕ್ಟೋಬರ್ ನಲ್ಲಿ ಭಾರತದಲ್ಲಿ ಪತ್ತೆಯಾಗಿತ್ತು. ಡಬ್ಲುಹೆಚ್‌ಓ ವ್ಯಾಪ್ತಿಯ 44 ರಾಷ್ಟ್ರಗಳಿಂದ 4500 ಮಾದರಿಯನ್ನು ತಪಾಸಣೆಗೆ … Continued

ಭಾರತದಲ್ಲಿ ಕಾಣುತ್ತಿದೆ ಕೊರೊನಾ ಎರಡನೇ ಅಲೆ ಕುಸಿತದ ಆರಂಭಿಕ ಪ್ರವೃತ್ತಿ: ಕೇಂದ್ರ

ನವ ದೆಹಲಿ:ಕೊರೊನಾ ವೈರಸ್ ಕಾಯಿಲೆ (ಕೋವಿಡ್ -19) ಮತ್ತು ಸಂಬಂಧಿತ ಸಾವುನೋವುಗಳ ದೈನಂದಿನ ಹೊಸ ಪ್ರಕರಣಗಳ ಕುಸಿತದ ಆರಂಭಿಕ ಪ್ರವೃತ್ತಿಯನ್ನು ಭಾರತದಲ್ಲಿ ಗುರುತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೋವಿಡ್ -19 ರ ದೈನಂದಿನ ಪ್ರಕರಣಗಳ ಸಂಖ್ಯೆ ಕನಿಷ್ಠ 18 ರಾಜ್ಯಗಳು ಮತ್ತು … Continued

ಕೋವಿಡ್ -19: ಲಸಿಕೆ ವ್ಯರ್ಥ ಪ್ರಮಾಣ, ಹರಿಯಾಣ ಅತಿಹೆಚ್ಚು ನಂತರ ಅಸ್ಸಾಂ, ರಾಜಸ್ಥಾನ..

ನವ ದೆಹಲಿ: ಕೋವಿಡ್‌-19 ಲಸಿಕೆ ವ್ಯರ್ಥದ ಪ್ರಮಾಣದಲ್ಲಿ ಅತಿ ಹೆಚ್ಚಿರುವ ರಾಜ್ಯಗಳಲ್ಲಿ ಕ್ರಮವಾಗಿ ಹರಿಯಾಣ, ಅಸ್ಸಾಂ ಮತ್ತು ರಾಜಸ್ಥಾನವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಸಚಿವಾಲಯದ ಪ್ರಕಾರ, ಹರಿಯಾಣದಲ್ಲಿ ಶೇ. 6.49 ಲಸಿಕೆ ವ್ಯರ್ಥವಾಗಿದ್ದರೆ, ಅಸ್ಸಾಂ 5.92 ಮತ್ತು ರಾಜಸ್ಥಾನದಲ್ಲಿ 5.68 ರಷ್ಟು ಲಸಿಕೆ ವ್ಯರ್ಥವಾಗಿದೆ ಎಂದು ವರದಿ ಮಾಡಿದೆ. ಮೇಘಾಲಯದಲ್ಲಿ ಶೇ … Continued

ಜಿ -23 ನಾಯಕ ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾಗಿ ನೇಮಕ..!

ನವ ದೆಹಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಜಿ -23 ನಾಯಕ ಗುಲಾಮ್ ನಬಿ ಆಜಾದ್ ಅವರನ್ನು ಪಕ್ಷದ ಕೋವಿಡ್ ಕಾರ್ಯಪಡೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಪತ್ರ ವಿವಾದದ ನಂತರ ಇದು ಗುಲಾಮ್ ನಬಿ ಆಜಾದ್ ಅವರ ಮೊದಲ ಪ್ರಮುಖ ಹುದ್ದೆ ಎಂದು ಪರಿಗಣಿಸಲಾಗಿದೆ. ಕಾಂಗ್ರೆಸ್ ನ ಉನ್ನತ ನಾಯಕ ರಾಹುಲ್ ಗಾಂಧಿ ಅವರು … Continued

ಭಾರತದ ರಾಷ್ಟ್ರೀಯ ಕೋವಿಡ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್‌ನಲ್ಲಿ ಸೂಚಿಸಲಾದ ಐವರ್ಮೆಕ್ಟಿನ್ ಬಳಕೆ ವಿರುದ್ಧ ಡಬ್ಲ್ಯುಎಚ್‌ಒ ಎಚ್ಚರಿಕೆ

ನವ ದೆಹಲಿ: ಪರಾವಲಂಬಿ ಸೋಂಕುಗಳಿಗೆ ಚಿಕಿತ್ಸೆ ನೀಡಲು ಮೌಖಿಕವಾಗಿ ನೀಡುವ ಔಷಧವಾದ ಐವರ್ಮೆಕ್ಟಿನ್ ಅನ್ನು ಕೋವಿಡ್ -19 ಚಿಕಿತ್ಸೆಗಾಗಿ ಬಳಸುವುದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಶಿಫಾರಸು ಮಾಡಿದೆ. ಈ ಔಷಧಿಯನ್ನು ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಪರಿಷ್ಕೃತ ರಾಷ್ಟ್ರೀಯ ಕೋವಿಡ್ ಚಿಕಿತ್ಸೆ ಪ್ರೋಟೋಕಾಲಿನಲ್ಲಿ ಸೌಮ್ಯ ಕಾಯಿಲೆ ಇರುವ ಜನರಿಗಾಗಿ ಸೇರಿಸಲಾಗಿತ್ತು, ಆದರೆ ಅದರ … Continued

ಕೋವಿಡ್ -19 ಉಲ್ಬಣ: ಮೇ 12 ರಿಂದ ತೆಲಂಗಾಣದಲ್ಲಿ 10 ದಿನಗಳ ಲಾಕ್‌ಡೌನ್ ಜಾರಿ

ಹೈದರಾಬಾದ್‌: ಎರಡನೇ ಕೋವಿಡ್ ಅಲೆಯಿಂದ ಹಾನಿಗೊಳಗಾಗುತ್ತಿರುವುದರಿಂದ, ತೆಲಂಗಾಣ ಸರ್ಕಾರ ಬುಧವಾರ ಬೆಳಿಗ್ಗೆಯಿಂದ ಲಾಕ್ ಡೌನ್ ಘೋಷಿಸಿದೆ. ಮೇ 12 ರಂದು ಬೆಳಿಗ್ಗೆ 10 ರೊಳಗೆ ಈ ನಿರ್ಬಂಧಗಳು ಜಾರಿಗೆ ಬರಲಿದ್ದು, ರಾಜ್ಯವು 10 ದಿನಗಳ ವರೆಗೆ ಲಾಕ್‌ಡೌನ್ ಆಗಿರುತ್ತದೆ. ಮೇ 12 ರ ಬುಧವಾರ ಬೆಳಿಗ್ಗೆ 10 ರಿಂದ 10 ದಿನಗಳವರೆಗೆ ಲಾಕ್‌ಡೌನ್ ಜಾರಿಗೆ ತರಲು … Continued