ಅಯ್ಯೊ ದೇವ್ರೆ…| ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್ ಹೆಸರು- ಫೋಟೋ ಪ್ರಕಟ…!

ಉತ್ತರ ಪ್ರದೇಶ ಪೊಲೀಸರಿಗೆ ಮುಜುಗರ ಉಂಟುಮಾಡುವ ವಿದ್ಯಮಾನವೊಂದರಲ್ಲಿ, ಉತ್ತರ ಪ್ರದೇಶ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಆಕೆಯ ಹೆಸರು ಮಾತ್ರವಲ್ಲದೆ ಆಕೆಯ ಫೋಟೋಗಳೂ ಕೂಡ ಪ್ರಕಟವಾಗಿದೆ…! ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಯ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್ ಹೆಸರು ಮತ್ತು ಭಾವಚಿತ್ರ ಪ್ರಕಟವಾಗಿರುವುದು ಶನಿವಾರ ವೈರಲ್ ಆಗಿದೆ. ಈ ವಿಷಯ ತನಿಖೆಯಲ್ಲಿದೆ ಎಂದು … Continued

ಭಾರತವು ರಷ್ಯಾದಿಂದ ಭಾರತವು ಇಂಧನ ಖರೀದಿಸುತ್ತಿರುವ ಬಗ್ಗೆ ಜೈಶಂಕರ ನೀಡಿದ “ಸ್ಮಾರ್ಟ್” ಪ್ರತ್ಯುತ್ತರಕ್ಕೆ ಮುಗುಳ್ನಕ್ಕ ಅಮೆರಿಕ ವಿದೇಶಾಂಗ ಸಚಿವ | ವೀಕ್ಷಿಸಿ

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರ ಸಮ್ಮುಖದಲ್ಲಿ ಶನಿವಾರ ನಡೆದ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಆತಿಥೇಯರೊಂದಿಗಿನ ನಡೆದ ಸಂವಾದದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಅವರು ನೀಡಿದ ಉತ್ತರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜರ್ಮನಿಯ ನಗರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಮ್ಯೂನಿಕ್ ಭದ್ರತಾ ಸಮ್ಮೇಳನದ ಹಿನ್ನೆಲೆಯಲ್ಲಿ ಉಭಯ ನಾಯಕರು ಶುಕ್ರವಾರ ಭೇಟಿಯಾದರು. ಅಮೆರಿಕ … Continued

ಯೋಗಿ ಆದಿತ್ಯನಾಥ ಭಾರತದ ಎರಡನೇ ಅತ್ಯಂತ ಜನಪ್ರಿಯ ಸಿಎಂ : ಭಾರತದ ನಂಬರ್‌ 1 ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಇವರು

ನವದೆಹಲಿ: ಭಾರತದ ಮುಖ್ಯಮಂತ್ರಿಗಳ ಜನಪ್ರಿಯತೆ ಮತ್ತು ಜನರು ಅವರನ್ನು ಹೇಗೆ ಸ್ವೀಕರಿಸಿದ್ದಾರೆ ಎಂದು ನಿರ್ಧರಿಸುವ ಬಗ್ಗೆ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಅತ್ಯಂತ ಹೆಚ್ಚು ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ನವೀನ್‌ ಪಟ್ನಾಯಕ್‌ ಅವರು ಎರಡು ದಶಕಗಳಿಂದಲೂ ಒಡಿಶಾದ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ … Continued

ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ ನಿಧನ

ನವದೆಹಲಿ: ಜೈನ ಸಮುದಾಯದ ದಾರ್ಶನಿಕ ಮುನಿ, ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ ಅವರು ಛತ್ತೀಸಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಜಿನೈಕ್ಯರಾಗಿದ್ದಾರೆ. ವಿದ್ಯಾಸಾಗರ ಮಹಾರಾಜರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಹಾಗೂ ಮೂರು ದಿನಗಳ ಹಿಂದೆ ಸಮಾಧಿ ಪ್ರಕ್ರಿಯೆ ಅಂದರೆ ‘ಸಲ್ಲೇಖನ’ ವ್ರತ ಪ್ರಾರಂಭಿಸಿ ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಇದಾದ ಬಳಿಕ ಶನಿವಾರ ರಾತ್ರಿ … Continued

ಕಾಂಗ್ರೆಸ್‌ ನಾಯಕ ಕಮಲನಾಥ ಬಿಜೆಪಿ ಸೇರ್ತಾರಾ..? ಸಾಮಾಜಿಕ ಮಾಧ್ಯಮ ಬಯೋದಿಂದ ಕಾಂಗ್ರೆಸ್‌ ಅನ್ನು ಕೈಬಿಟ್ಟ ಮಗ ನಕುಲ್‌..!

ನವದೆಹಲಿ : ಪಕ್ಷದ ನಾಯಕತ್ವದ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿ.ಡಿ. ಶರ್ಮಾ ಅವರು ಹೇಳಿಕೊಂಡ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ನಕುಲ ಕಮಲನಾಥ ಅವರು ತಮ್ಮ ಸಾಮಾಜಿಕ ಮಾಧ್ಯಮ ಬಯೋದಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ತೆಗೆದುಹಾಕಿದ್ದು, ಸಂಭವನೀಯ ರಾಜಕೀಯ ಬದಲಾವಣೆಯ ಪ್ರಮುಖ ಸುಳಿವನ್ನು ನೀಡಿದ್ದಾರೆ … Continued

ಕೇವಲ 19ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ʼದಂಗಲ್ʼ ನಟಿ ಸುಹಾಸಿನಿ ಭಟ್ನಾಗರ್

ಬಾಲಿವುಡ್ ನಟ ಅಮಿರ್ ಖಾನ್ ನಟನೆಯ ದಂಗಲ್ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಸುಹಾಸಿನಿ ಭಟ್ನಾಗರ್(19) ಇಂದು ನಿಧನರಾಗಿದ್ದಾರೆ. ದಂಗಲ್ ಸಿನಿಮಾದಲ್ಲಿ ಅಮಿರ್ ಖಾನ್ ಅವರ ಪುತ್ರಿ ಬಬಿತಾ ಪೋಗಟ್ ಪಾತ್ರ ನಿರ್ವಹಿಸಿದ್ದ ಸುಹಾಸಿನಿ ಭಟ್ನಾಗರ್ ಅವರು ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದರು. ಆದರೆ ಸುಹಾಸಿನಿ ಅವರು … Continued

ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ, ಖ್ಯಾತ ಉರ್ದು ಕವಿ ಗುಲ್ಜಾರಗೆ ʼಜ್ಞಾನಪೀಠʼ ಪ್ರಶಸ್ತಿ ಘೋಷಣೆ

ನವದೆಹಲಿ: ಖ್ಯಾತ ಉರ್ದು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ ಶನಿವಾರ ಪ್ರಕಟಿಸಿದೆ. ಗುಲ್ಜಾರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಂಪೂರಣ ಸಿಂಗ್ ಕಲ್ರಾ ಅವರು ಈ ಯುಗದ ಅತ್ಯುತ್ತಮ ಉರ್ದು ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರ ತಮ್ಮ … Continued

500ನೇ ಟೆಸ್ಟ್ ವಿಕೆಟ್ ಪಡೆದ ಕೆಲ ಗಂಟೆಗಳ ನಂತರ ಭಾರತ ತಂಡದಿಂದ ಹಿಂದೆ ಸರಿದ ಅಶ್ವಿನ್ : ಕಾರಣ ವೈದ್ಯಕೀಯ ತುರ್ತು

ರಾಜಕೋಟ್‌: ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಭಾರತ ತಂಡದ 3 ನೇ ಟೆಸ್ಟ್‌ನಿಂದ ರವಿಚಂದ್ರನ್ ಅಶ್ವಿನ್ ಹಿಂದೆ ಸರಿದಿದ್ದು, ತಕ್ಷಣದಿಂದಲೇ ತಂಡದಿಂದ ಹೊರಗುಳಿಯಲಿದ್ದಾರೆ. ಕುಟುಂಬದಲ್ಲಿನ ವೈದ್ಯಕೀಯ ತುರ್ತುಸ್ಥಿತಿ ಕಾರಣದಿಂದಾಗಿ ಅವರು ತಂಡದಿಂದ ಹಿಂದೆ ಸರಿದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ರಾತ್ರಿ ಈ ಸುದ್ದಿಯನ್ನು ಹಂಚಿಕೊಂಡಿದೆ. ಗಮನಾರ್ಹವಾಗಿ, ಅಶ್ವಿನ್ ಅವರು ರಾಜ್‌ಕೋಟ್‌ನಲ್ಲಿ ತಮ್ಮ … Continued

ವೀಡಿಯೊ..| ಆಘಾತಕಾರಿ..: ಪತ್ನಿಯ ಶಿರಚ್ಛೇದ ಮಾಡಿ ತಲೆ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಗಂಡನ ಬಂಧನ

ಲಕ್ನೋ: ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಗುರುವಾರ ತನ್ನ ಪತ್ನಿಯ ಕತ್ತರಿಸಿದ ತಲೆಯೊಂದಿಗೆ ಸಾರ್ವಜನಿಕವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ. ದಾರಿಹೋಕರು ಚಿತ್ರೀಕರಿಸಿದ ದೃಶ್ಯಗಳು ಬಾರಾಬಂಕಿಯ ಮೇಸ್ತ್ರಿ ಅನಿಲ ಎಂಬಾತ ಒಂದು ಕೈಯಲ್ಲಿ ತಲೆ ಮತ್ತು ಇನ್ನೊಂದು ಕೈಯಲ್ಲಿ ಕುಡಗೋಲು ಹಿಡಿದುಕೊಂಡು ಹೋಗುತ್ತಿರುವುದನ್ನು ತೋರಿಸಿದೆ.ಆತನನ್ನು ಬಂಧಿಸುವವರೆಗೂ ನೂರಾರು ಪ್ರಯಾಣಿಕರು ಈ ಭಯಾನಕ ದೃಶ್ಯವನ್ನು ವೀಕ್ಷಿಸಿದ್ದಾರೆ. ಉತ್ತರ ಪ್ರದೇಶದ ಬಾರಾಬಂಕಿಯ ಬಸರಾ … Continued

ಪ್ರಧಾನಿ ಮೋದಿ ಪದವಿ ವಿವಾದ: ಮಾನನಷ್ಟ ಮೊಕದ್ದಮೆಯಲ್ಲಿ ಸಮನ್ಸ್‌ ಪ್ರಶ್ನಿಸಿ ಕೇಜ್ರಿವಾಲ್, ಸಂಜಯ ಸಿಂಗ್‌ ಸಲ್ಲಿಸಿದ್ದ ಅರ್ಜಿ ತಿರಸ್ಕಾರ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಯ ಬಗ್ಗೆ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಗುಜರಾತ್ ವಿಶ್ವವಿದ್ಯಾಲಯ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ ಸಿಂಗ್ ಅವರ ವಿರುದ್ಧ ಹೊರಡಿಸಲಾದ ಸಮನ್ಸ್ ರದ್ದುಗೊಳಿಸಲು ಗುಜರಾತ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ … Continued