ಲೋಕಸಭೆ ಚುನಾವಣೆ : ಅಮೇಥಿಯಲ್ಲಿ ಸ್ಪರ್ಧೆ ವಿಚಾರ, ರಾಹುಲ್‌ ಗಾಂಧಿ ಹೇಳಿದ್ದೇನು..?

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉತ್ತರ ಪ್ರದೇಶದ ಅಮೇಥಿಯಿಂದಲೂ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಮೆಥಿಯಲ್ಲಿ ಸ್ಪರ್ಧಸಿಉವ ಕುರಿತಾದ ಪ್ರಶ್ನೆಗೆ, “ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಮತ್ತು ಕಾಂಗ್ರೆಸ್ ಅಧ್ಯಕ್ಷರು ನನ್ನನ್ನು ಏನು ಮಾಡಲು ಕೇಳುತ್ತಾರೋ ಅದನ್ನು ನಾನು ಮಾಡುತ್ತೇನೆ… ಅಂತಹ ನಿರ್ಧಾರಗಳನ್ನು … Continued

ಹೇಮಾಮಾಲಿನಿ ಬಗ್ಗೆ ಅಸಭ್ಯ ಹೇಳಿಕೆ: ಕಾಂಗ್ರೆಸ್‌ ನಾಯಕ ರಣದೀಪ ಸುರ್ಜೇವಾಲಾಗೆ ಚುನಾವಣಾ ಪ್ರಚಾರದಿಂದ 48 ಗಂಟೆ ನಿಷೇಧ

ನವದೆಹಲಿ : ಕಾಂಗ್ರೆಸ್ ನಾಯಕ ರಣದೀಪ ಸಿಂಗ್‌ ಸುರ್ಜೇವಾಲಾ ಅವರ ಮೇಲೆ ಚುನಾವಣಾ ಪ್ರಚಾರ ಕೈಗೊಳ್ಳದಂತೆ ಚುನಾವಣಾ ಆಯೋಗವು 48 ಗಂಟೆಗಳ ಕಾಲ ನಿಷೇಧ ಹೇರಿದೆ. ಬಿಜೆಪಿ ಸಂಸದೆ ಹಾಗೂ ಅಭ್ಯರ್ಥಿ ಹೇಮಾ ಮಾಲಿನಿ ಅವರ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೇವಾಲಾ ಅವರು ಅಸಭ್ಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕ್ರಮ … Continued

ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

ನವದೆಹಲಿ : ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಎನ್‌ಕೌಂಟರ್‌ನಲ್ಲಿ ಪ್ರಮುಖ ಮಾವೋವಾದಿ ನಾಯಕ ಶಂಕರ ರಾವ್ ಸೇರಿದಂತೆ 29 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಹಾಗೂ ಎಕೆ-47 ಮತ್ತು ಐಎನ್‌ಎಸ್‌ಎಎಸ್ ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಮೀಸಲು ಪಡೆ ಮತ್ತು ಗಡಿ ಭದ್ರತಾ ಪಡೆಗಳ ಜಂಟಿ ತಂಡ ದಾಳಿ … Continued

ಯು ಪಿ ಎಸ್ ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್, ಟಾಪ್‌-20 ರ‍್ಯಾಂಕ್ ಪಡೆದವರ ಪಟ್ಟಿ

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ಕೇಂದ್ರ ಲೋಕಸೇವಾ ಆಯೋಗ (UPSC ) ನಡೆಸಿದ್ದ 2023ನೇ ಸಾಲಿನ ಅಂತಿಮ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಐಐಟಿ ಕಾನ್ಪುರ ಇಂಜಿನಿಯರ್ ಆದಿತ್ಯ ಶ್ರೀವಾಸ್ತವ ಅವರು ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಅನಿವೇಶ್ ಪ್ರಧಾನ ದ್ವಿತೀಯ ಹಾಗೂ ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನಗಳಿಸಿದ್ದಾರೆ. ಅಂತಿಮ ಫಲಿತಾಂಶವನ್ನು … Continued

ನೀವು ಅಮಾಯಕರಲ್ಲ : ಬಾಬಾ ರಾಮದೇವ, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

ನವದೆಹಲಿ: ಆಧುನಿಕ ವೈದ್ಯ ಪದ್ಧತಿಯನ್ನು ಅವಹೇಳನ ಮಾಡಿ ದಾರಿ ತಪ್ಪಿಸುವಂತಹ ಜಾಹೀರಾತು ಪ್ರಸಾರ ಮಾಡಿದ್ದಕ್ಕಾಗಿ ಪತಂಜಲಿ ಆಯುರ್ವೇದ ಪ್ರವರ್ತಕರಾದ ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರು ಯಾಚಿಸಿರುವ ಕ್ಷಮೆಯ ನೈಜತೆ ಗ್ಗೆ ತಿಳಿಯಲು ಸುಪ್ರೀಂ ಕೋರ್ಟ್‌ ಮಂಗಳವಾರ ಈ ಇಬ್ಬರೊಂದಿಗೆ ವೈಯಕ್ತಿಕ ಸಂವಹನ ನಡೆಸಿತು. ಈ ಹಂತದಲ್ಲಿ ಅವರಿಬ್ಬರೂ ಕ್ಷಮೆ ಯಾಚಿಸಿದರಾದರೂ ನ್ಯಾಯಮೂರ್ತಿಗಳಾದ ಹಿಮಾ … Continued

ಚುನಾವಣಾ ಬಾಂಡ್, ಉತ್ತರ ಭಾರತ-ದಕ್ಷಿಣ ಭಾರತ ಚರ್ಚೆ, ಸಿಬಿಐ – ಇ.ಡಿ. ದುರ್ಬಳಕೆ ಆರೋಪ, ಬಿಜೆಪಿ ಮಾಡೆಲ್-ಕಾಂಗ್ರೆಸ್‌ ಮಾಡೆಲ್‌ ಬಗ್ಗೆ ಮೋದಿ ಹೇಳಿದ್ದೇನು..?

2047ರ ವೇಳೆಗೆ ವಿಕಸಿತ ಭಾರತದ ಬಗೆಗಿನ ತಮ್ಮ ವಿಶಾಲವಾದ ದೃಷ್ಟಿಕೋನದಿಂದ ಹಿಡಿದು ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮರಳಿ ಕರೆತರುವಲ್ಲಿ ತಮ್ಮ ಮಧ್ಯಸ್ಥಿಕೆಯವರೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿ ಸಂಸ್ಥೆ ಎಎನ್‌ಐ (ANI)ಗೆ ನೀಡಿದ ಸಂದರ್ಶನದಲ್ಲಿ ಎಲ್ಲಾ ಪ್ರಮುಖ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಕಳೆದ ದಶಕದಲ್ಲಿ ರಾಷ್ಟ್ರದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣ ನಿಭಾಯಿಸುವಲ್ಲಿ ಜಾರಿ … Continued

ಧರ್ಮದ ಹೆಸರಿನಲ್ಲಿ ಮತ ಯಾಚನೆ: ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ದೇವರು ಮತ್ತು ಪೂಜಾ ಸ್ಥಳದ ಹೆಸರಿನಲ್ಲಿ ಮತ ಯಾಚಿಸುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಏಪ್ರಿಲ್ 9 ರಂದು ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ಭಾರತೀಯ ಜನತಾ ಪಕ್ಷದ … Continued

ಲೋಕಸಭೆ ಚುನಾವಣೆ 2024 : ‘ನ್ಯಾಯ’ ವಿಷಯದ ಹೊಸ ಪ್ರಚಾರ ಗೀತೆ ಬಿಡುಗಡೆ ಮಾಡಿದ ಕಾಂಗ್ರೆಸ್‌ | ವೀಡಿಯೊ ವೀಕ್ಷಿಸಿ

ನವದೆಹಲಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಕಾಂಗ್ರೆಸ್ ಪಕ್ಷವು ತನ್ನ ಪ್ರಚಾರ ಕಾರ್ಯತಂತ್ರವನ್ನು ಅನಾವರಣಗೊಳಿಸಿದ್ದು, “ನ್ಯಾಯ”ದ ವಿಷಯವನ್ನು ಕೇಂದ್ರೀಕರಿಸಿದೆ. ಸೋಮವಾರ, ಪಕ್ಷವು ಹೆಚ್ಚು ಸಮಾನ ಮತ್ತು ನ್ಯಾಯಯುತ ಭಾರತಕ್ಕಾಗಿ ತನ್ನ ದೃಷ್ಟಿಕೋನವುಳ್ಳ ಪ್ರಚಾರ ಹಾಡನ್ನು ಬಿಡುಗಡೆ ಮಾಡಿದೆ. “ಹಮ್ ಸಾಥ್ ಹೈ ತೋ ಹಾಥ್ ಯೇ ಹಾಲತ್ ಬದಲ್ ದೇಗಾ” ಎಂಬ ಗೀತೆಯನ್ನು ಕಾಂಗ್ರೆಸ್ ಪ್ರಧಾನ … Continued

ಅದೃಷ್ಟ ಅಂದ್ರೆ ಇದೇ ಅಲ್ವಾ | ಕೇವಲ 2 ಮೀನುಗಳ ಮಾರಾಟದಿಂದ ಲಕ್ಷಾಧಿಪತಿಯಾದ ಮೀನುಗಾರ..! ಮೀನಿನ ಬೆಲೆ ಕೇಳಿದ್ರೆ ಹೌಹಾರಬೇಕು…!!

ಕೆಲವೊಮ್ಮೆ ಮೀನುಗಾರರು ಬಲೆ ಬೀಸಿದಾಗ ಅಪರೂಪದ ಮೀನುಗಳು ಸಿಗುತ್ತವೆ. ದೊಡ್ಡ ಮೀನುಗಳ ಜೊತೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಮೀನುಗಳು ಸಹ ಬಲೆಗೆ ಬೀಳುತ್ತವೆ. ಕೆಲವು ಅಪರೂಪದ ಜಾತಿಯ ಮೀನುಗಳು ಮೀನುಗಳು ಬಲೆಗೆ ಬಿದ್ದರೆ ಮೀನುಗಾರರ ಸುಗ್ಗಿಯೋ ಸುಗ್ಗಿ. ಯಾಕೆಂದರೆ ಅವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಇಂಥಹದ್ದೇ ಒಂದು ನಿದರ್ಶನದಲ್ಲಿ ಇತ್ತೀಚೆಗೆ ಕೃಷ್ಣಾ ಜಿಲ್ಲೆಯ ಅಂತರವೇದಿಯಲ್ಲಿ ಮೀನುಗಾರರೊಬ್ಬರು ಅಪರೂಪದ … Continued

ಇದು ಸಮಾಧಾನಕರ ಸುದ್ದಿ..: ಈ ಬಾರಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 2024ರಲ್ಲಿ ಮುಂಗಾರು ಸರಾಸರಿ 106 ಪ್ರತಿಶತದಷ್ಟು ( 87 ಸೆಂಟಿಮೀಟರ್‌ ) ಮಳೆ​ ಬರಲಿದೆ ಎಂದು ಹೇಳಿದೆ. ಎಲ್ ನಿನೋ ದುರ್ಬಲಗೊಳ್ಳುತ್ತಿದೆ. ಮಾನ್ಸೂನ್ ಪ್ರಾರಂಭವಾಗುವ ಜೂನ್‌ ವೇಳೆಗೆ ಇದು ತಟಸ್ಥವಾಗಲಿದೆ ಎಂದು ಐಎಂಡಿಯ … Continued