ಮಧ್ಯಪ್ರದೇಶದ ಮೊರೆನಾದಲ್ಲಿ ಹೊತ್ತಿ ಉರಿದ ಉಧಮ್‌ಪುರ-ದುರ್ಗ ಎಕ್ಸ್‌ಪ್ರೆಸ್‌; 2 ಬೋಗಿಗಳು ಸುಟ್ಟು ಕರಕಲು

ನವದೆಹಲಿ: ಮಧ್ಯಪ್ರದೇಶದ ಮೊರೆನಾ ಮತ್ತು ಧೋಲ್‌ಪುರ ನಡುವಿನ ನಿಲ್ದಾಣದ ಬಳಿ ಶುಕ್ರವಾರ ಮಧ್ಯಾಹ್ನ ಉಧಮ್‌ಪುರ ಎಕ್ಸ್‌ಪ್ರೆಸ್ ರೈಲಿನ ಎರಡು ಹವಾನಿಯಂತ್ರಿತ ಕೋಚ್‌ಗಳಿಗೆ ಬೆಂಕಿ ಕಾಣಿಸಿಕೊಂಡಿದೆ. ಸಮಯಕ್ಕೆ ಸರಿಯಾಗಿ ಬೆಂಕಿಯನ್ನು ಹತೋಟಿಗೆ ತಂದಿದ್ದರಿಂದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಮಧ್ಯಪ್ರದೇಶದ ಹೇತಾಂಪುರ ರೈಲು ನಿಲ್ದಾಣದಿಂದ ರೈಲು ಹೊರಟ ಬಳಿಕ ಈ ಘಟನೆ ನಡೆದಿದೆ. ರೈಲು ಉಧಂಪುರದಿಂದ ದುರ್ಗ್‌ಗೆ ತೆರಳುತ್ತಿತ್ತು. … Continued

21ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗೆ ಡಿಸೆಂಬರ್ 6ರಂದು ದೆಹಲಿಗೆ ಭೇಟಿ ನೀಡಲಿರುವ ರಷ್ಯಾ ಅಧ್ಯಕ್ಷ ಪುಟಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 21ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಡಿಸೆಂಬರ್ 6 ರಂದು ನವದೆಹಲಿಗೆ ಭೇಟಿ ನೀಡಲಿದ್ದಾರೆ. ನವೆಂಬರ್, 2019 ರಲ್ಲಿ ಬ್ರೆಸಿಲಿಯಾದಲ್ಲಿ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಅವರ ಭೇಟಿಯ ನಂತರ ಉಭಯ ನಾಯಕರ ನಡುವಿನ ಮೊದಲ ಮುಖಾಮುಖಿ ಸಭೆ ಇದಾಗಿದೆ. ಕೊನೆಯ ಭಾರತ-ರಷ್ಯಾ ವಾರ್ಷಿಕ … Continued

ಕುಟುಂಬ ರಾಜಕಾರಣ ದೇಶಕ್ಕೆ ಮಾರಕ: ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ

ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ಕುಟುಂಬ ರಾಜಕಾರಣದ ಬಗ್ಗೆ ತೀವ್ರ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನದ ಬಗ್ಗೆ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಸಂವಿಧಾನದ ದಿನದ ಪ್ರಯುಕ್ತ ಸಂಸತ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, … Continued

ಷೇರು ಮಾರುಕಟ್ಟೆ ಬೆಚ್ಚಿಬೀಳಿಸಿದ ಹೊಸ ಕೋವಿಡ್ ರೂಪಾಂತರ; ಸೆನ್ಸೆಕ್ಸ್ 7 ತಿಂಗಳಲ್ಲಿ ಒಂದೇ ದಿನದಲ್ಲಿ ಅತಿ ದೊಡ್ಡ ಕುಸಿತ..!!

ಮುಂಬೈ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟು ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ಡೆಲ್ಟಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ತಳಿ ಬೋಟ್ಸ್ ವಾನಾದಲ್ಲಿ ಪತ್ತೆಯಾದ ನಂತರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಬಿಎಸ್‌ಇ ಸೆನ್ಸೆಕ್ಸ್ 1,400 ಅಂಕಗಳಿಗಿಂತಲೂ ಅಧಿಕ ಕುಸಿತ ಕಂಡಿದ್ದರೆ, ಎನ್ ಎಸ್ ಇ … Continued

ಸ್ನೇಹಿತನ ಪೆನ್ಸಿಲ್‌ ಕದ್ದನೆಂದು ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಪುಟ್ಟ ವಿದ್ಯಾರ್ಥಿಗಳು..!: ವಿಡಿಯೊ ವೀಕ್ಷಿಸಿದ್ರೆ ನಕ್ಕೇ ನಗ್ತೀರಾ

ಶಾಲೆಯಲ್ಲಿ ಗಲಾಟೆಯನ್ನು ಮಕ್ಕಳು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದನ್ನು ನೋಡಿದ್ದೀರಾ ಅಥವಾ ಕೇಳಿದ್ದೀರಾ..? ಈಗ ಇಂತಹದ್ದೊಂದು ಘಟನೆ ನಡೆದ ಬಗ್ಗೆ ವರದಿಯಾಗಿದೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರಲ್ಲೂ ನಗುವಿಗೆ ಕಾರಣವಾಗಿದೆ. ಈ ಘಟನೆ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಪುಟ್ಟ ಬಾಲಕರೆಲ್ಲ ಪೊಲೀಸ್ ಠಾಣೆಗೆ ಬಂದು ದೂರು ಹೇಳುತ್ತಿರುವುದನ್ನು ಕಂಡು ಪೊಲೀಸರೇ … Continued

ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ: ಕೋಲ್ಕತ್ತಾದಲ್ಲೂ ಕಂಪನದ ಅನುಭವ

ನವದೆಹಲಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಶುಕ್ರವಾರ ಬೆಳಿಗ್ಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಎಂದು ತಿಳಿಸಿದೆ. ಭಾರತದ ಈಶಾನ್ಯ ಭಾಗಗಳಾದ ತ್ರಿಪುರಾ, ಮಣಿಪುರ, ಮಿಜೊರಾಂ, ಅಸ್ಸಾಂಮ್ ಅಲ್ಲದೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ವರೆಗೂ ಭೂಕಂಪನದ ಅನುಭವವಾಗಿದೆ. ಯುರೋಪಿಯನ್ – ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‍ನ ವೆಬ್ಸೈಟ್(ಇಎಮ್‍ಎಸ್‍ಸಿ)ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದೆ. … Continued

ಭಾರತದಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು..!

ನವದೆಹಲಿ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಐದನೇ ಆವೃತ್ತಿಯು ಭಾರತದಲ್ಲಿ ಜನಸಂಖ್ಯಾ ಬದಲಾವಣೆಯ ಲಕ್ಷಣಗಳನ್ನು ದೃಢಪಡಿಸಿದೆ. 1992 ರಲ್ಲಿ ಎನ್‌ಎಫ್‌ ಎಚ್‌ಎಸ್‌ (NFHS) ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ, : ದೇಶದಲ್ಲಿ ಬಾರಿಗೆ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ ಎಂದು ಸರಕಾರಿ ಅಂಕಿಅಂಶಗಳು ಮಾಹಿತಿ ನೀಡಿವೆ…! ಈಗ ಪ್ರತಿ 1,000 ಪುರುಷರಿಗೆ 1,020 … Continued

ಲಸಿಕೆಯನ್ನೂ ಸೋಲಿಸಬಲ್ಲ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಹೊಸ ಕೋವಿಡ್ -19 ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿದ ಕೇಂದ್ರ…!

ನವದೆಹಲಿ: ಕೋವಿಡ್‌-19 ಮತ್ತೊಂದು ರೂಪಾಂತರ ಬಿ.1.1.529ರ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಎಚ್ಚರಿಕೆ ನೀಡಿದೆ. ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಈ ರೂಪಾಂತರವನ್ನು ಇತ್ತೀಚೆಗೆ ಪತ್ತೆಹಚ್ಚಿದ್ದಾರೆ, ರೂಪಾಂತರವು ರೂಪಾಂತರಗಳ ಅತ್ಯಂತ ಅಸಾಮಾನ್ಯ ಪುಂಜದಿಂದ ನಿರೂಪಿಸಲ್ಪಟ್ಟಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ, “ಈ ರೂಪಾಂತರವು ಗಣನೀಯವಾಗಿ ಹೆಚ್ಚಿನ … Continued

ಇಂಟರ್ಪೋಲ್ ಸಮಿತಿಗೆ ಭಾರತದ ಸಿಬಿಐ ವಿಶೇಷ ನಿರ್ದೇಶಕ ಪ್ರವೀಣ್ ಸಿನ್ಹಾ ಆಯ್ಕೆ

ನವದೆಹಲಿ: ಇಂಟರ್‌ಪೋಲ್ ಗುರುವಾರ ತನ್ನ ಕಾರ್ಯಕಾರಿ ಸಮಿತಿಯಲ್ಲಿ ಏಷ್ಯಾದ ಪ್ರತಿನಿಧಿಯಾಗಿ ಭಾರತದ ಪ್ರವೀಣ್ ಸಿನ್ಹಾ ಅವರನ್ನು ಆಯ್ಕೆ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇಂದ್ರೀಯ ತನಿಖಾ ದಳದ ವಿಶೇಷ ನಿರ್ದೇಶಕ ಪ್ರವೀಣ್ ಸಿನ್ಹಾ ಅವರು ಚೀನಾ, ಸಿಂಗಾಪುರ್, ರಿಪಬ್ಲಿಕ್ ಆಫ್ ಕೊರಿಯಾ ಮತ್ತು ಜೋರ್ಡಾನ್‌ನಿಂದ ಎರಡು ಹುದ್ದೆಗಳಿಗೆ ಸ್ಪರ್ಧಿಸುವ ಇತರ ನಾಲ್ಕು ಸ್ಪರ್ಧಿಗಳ ವಿರುದ್ಧ … Continued

ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣಕ್ಕೆ ಮೋದಿ ಶಂಕು ಸ್ಥಾಪನೆ.. ಇದಕ್ಕಿದೆ ಹಲವು ವಿಶೇಷತೆ

ಲಕ್ನೋ: ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಜೇವರ್‌ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎನ್‌ಐಎ) ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. 5,730 ಕೋಟಿ ರೂ. ವೆಚ್ಚದ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಏಷ್ಯಾದಲ್ಲಿಯೇ ಅತಿ ದೊಡ್ಡ ಮತ್ತು ಭಾರತದ ಮೊದಲ ನಿವ್ವಳ ಶೂನ್ಯ ಹೊರಸೂಸುವಿಕೆ ವಿಮಾನ ನಿಲ್ದಾಣವಾಗಿದೆ. ಶಂಕು ಸ್ಥಾಪನೆ ಬಳಿಕ … Continued