ಸಂಯಮದಿಂದ ಮಾತನಾಡಲು ನಿಮ್ಮ ಕಕ್ಷಿದಾರರಿಗೆ ಹೇಳಿ: ಬಿಜೆಪಿ ಮುಖಂಡ ಈಶ್ವರಪ್ಪಗೆ ಹೈಕೋರ್ಟ್‌ ತರಾಟೆ

ಬೆಂಗಳೂರು : ನಮ್ಮ ಧುರೀಣರು ಮಾತನಾಡುವಾಗ ಒಳ್ಳೆಯ ಭಾಷೆಯನ್ನು ಏಕೆ ಬಳಸುವುದಿಲ್ಲ? ನಾವು ಏನೋ ಒಂದು ಮಾತನಾಡಬಾರದು. ಸಂಯಮದಿಂದ ಭಾಷಾ ಪ್ರಯೋಗ ಮಾಡಬೇಕು. ಪದ ಬಳಕೆಯಲ್ಲಿ ಜವಾಬ್ದಾರಿಯುತವಾಗಿರಬೇಕು ಎಂದು ನಿಮ್ಮ ಕಕ್ಷಿದಾರರಿಗೆ ಹೇಳಿ” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಅವರ ಕುರಿತು ಮೌಖಿಕವಾಗಿ ಹೇಳಿತು. ದೇಶವನ್ನು ಛಿದ್ರ ಮಾಡುತ್ತೇವೆ … Continued

ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಬಳಸಿದ ಭಾಷೆ ಶೋಭೆ ತರುವಂಥದ್ದಲ್ಲ : ಹೈಕೋರ್ಟ್‌ ಅಸಮಾಧಾನ

ಬೆಂಗಳೂರು : “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರು ಬಳಕೆ ಮಾಡಿರುವ ಭಾಷೆ ಶೋಭೆ ತರುವಂಥದ್ದಲ್ಲ. ಭಾಷೆ ಬಳಕೆ ಮೇಲೆ ನಿಯಂತ್ರಣ ಇರಬೇಕು ಎಂಬುದನ್ನು ನಿಮ್ಮ ಕ್ಷಕಿದಾರರಿಗೆ ಹೇಳಿ” ಎಂದು ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಎಚ್ಚರಿಕೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಮಮಂದಿರ ವಿಚಾರದ ಕುರಿತು ಆಕ್ಷೇಪಾರ್ಹ ಹೇಳಿಕೆ … Continued

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 500 ವಿಕೆಟ್ ಪಡೆದ ಭಾರತೀಯ ಬೌಲರ್ ಆದ ಸ್ಪಿನ್ನರ್‌ ಅಶ್ವಿನ್ : ವಿಶ್ವದಲ್ಲಿ 2ನೇ ಸ್ಥಾನ; ವೇಗವಾಗಿ 500 ವಿಕೆಟ್ ಪಡೆದವರ ಪಟ್ಟಿ..

ರಾಜಕೋಟ್: ಭಾರತದ ಸ್ಪಿನ್ನ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರು, ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ ಪಂದ್ಯದ 2ನೇ ದಿನದಾಟದಲ್ಲಿ ಝಾಕ್ ಕ್ರಾವ್ಲೆ ಅವರ ವಿಕೆಟ್ ಪಡೆಯುವ ಮೂಲಕ 500 ವಿಕೆಟ್‌ ಪಡೆದ ಸಾಧಕರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ, ವಿಶ್ವದಲ್ಲೇ ಎರಡನೇ ಅತ್ಯಂತ ವೇಗವಾಗಿ 500 ವಿಕೆಟ್‌ ಪಡೆದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಆಸ್ಟ್ರೇಲಿಯಾದ ಗೆನ್‌ … Continued

ಕರ್ನಾಟಕ ಬಜೆಟ್ 2024 : ಸಿದ್ದರಾಮಯ್ಯ ಕೃಷಿ ವಲಯಕ್ಕೆ ಕೊಟ್ಟಿದ್ದೇನು..?

ಬೆಂಗಳೂರು : ಕರ್ನಾಟಕ ಬಜೆಟ್ 2024ನಲ್ಲಿ ಕೃಷಿ ಕ್ಷೇತ್ರಕ್ಕೆ 6688 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ. ಇದೇ ವೇಳೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ, ಪಶುಸಂಗೋಪನೆ, ತೋಟಗಾರಿಕೆಗೆ ಬೆಂಬಲ ನೀಡಲಾಗುತ್ತದೆ. ಅಲ್ಲದೆ, ಹೈನುಗಾರಿಕೆಗಳನ್ನು ಒಳಗೊಂಡಂತೆ ಸಮಗ್ರ ಕೃಷಿ ಕೈಗೊಳ್ಳುವ ಮೂಲಕ ಆದಾಯದಲ್ಲಿ ಸುಸ್ಥಿರತೆಗೆ ಬೆಂಬಲ ನೀಡುತ್ತದೆ. ಅಲ್ಲದೆ, … Continued

ಸೆಲ್ಫಿ ಹುಚ್ಚಿಗೆ ಮೃಗಾಲಯದ ಸಿಂಹದ ಆವರಣಕ್ಕೆ ನುಗ್ಗಿದ ವ್ಯಕ್ತಿ : ಸಿಂಹದ ದಾಳಿಯಿಂದ ದುರಂತ ಅಂತ್ಯ…

ಹೈದರಾಬಾದ್‌ : ದುರಂತ ಘಟನೆಯೊಂದರಲ್ಲಿ, ಗುರುವಾರ ಮಧ್ಯಾಹ್ನ ಆಂಧ್ರಪ್ರದೇಶದ ತಿರುಪತಿಯ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬ ಮಾಡಿಕೊಂಡ ಯಡವಟ್ಟಿನಿಂದ ಗಂಡು ಸಿಂಹವು ದಾಳಿ ಮಾಡಿ ಆತನನ್ನು ಕೊಂದ ಘಟನೆ ವರದಿಯಾಗಿದೆ. ಅಮಲೇರಿದ ಸ್ಥಿತಿಯಲ್ಲಿದ್ದ ಮೃತ ರಾಜಸ್ಥಾನದ ಪ್ರಹ್ಲಾದ ಗುಲ್ಜಾರ್ ಎಂಬ ವ್ಯಕ್ತಿ ಸಿಂಹಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮೃಗಾಲಯದ ನಿಷೇಧಿತ ಆವರಣವನ್ನು ಪ್ರವೇಶಿಸಿದ್ದಾರೆ. ಈ ಆವರಣಗಳು … Continued

ದೆಹಲಿ ಪೇಂಟ್‌ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ : 11 ಮಂದಿ ಸಾವು, ಮತ್ತಿಬ್ಬರು ಸಿಲುಕಿರುವ ಶಂಕೆ

ನವದೆಹಲಿ : ದೆಹಲಿಯ ಅಲಿಪುರ ಪ್ರದೇಶದ ಪೇಂಟ್‌ ಗುರುವಾರ ಸಂಜೆ ಸಂಭವಿಸಿದ ಅಗ್ನಿ ಅವಘಡದಲ್ಲಿ 11 ಜನ ಮೃತಪಟ್ಟಿದ್ದಾರೆ., ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕಟ್ಟಡದೊಳಗೆ ಇನ್ನೂ ಇಬ್ಬರು ವ್ಯಕ್ತಿಗಳು ಸಿಲುಕಿರುವ ಸಾಧ್ಯತೆಯಿದೆ ಎಂದು ರಕ್ಷಣಾ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಮೃತರ ದೇಹಗಳನ್ನು ಬಾಬು ಜಗಜೀವನ ರಾಮ ಆಸ್ಪತ್ರೆಗೆ ರವಾನಿಸಲಾಗಿದೆ. ದೆಹಲಿ ಅಗ್ನಿಶಾಮಕ ಸೇವಾ ಮುಖ್ಯಸ್ಥ … Continued

ಮಹಾರಾಷ್ಟ್ರ: ಮಾಜಿ ಸಿಎಂ ಅಶೋಕ ಚವಾಣ ಪಕ್ಷ ತೊರೆದ ಬೆನ್ನಲ್ಲೇ ಕಾಂಗ್ರೆಸ್ ಸಭೆಗೆ ಐವರು ಶಾಸಕರು ಗೈರು…!

ಮುಂಬೈ: ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಮಹಾರಾಷ್ಟ್ರದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಶಾಸಕರ ಸಭೆಗೆ ಕನಿಷ್ಠ ಐವರು ಶಾಸಕರು ಹಾಜರಾಗಲಿಲ್ಲ ಎಂದು ವರದಿಯಾಗಿದೆ. ಇದು ಇನ್ನೂ ಅನೇಕ ಶಾಸಕರು ಬಿಜೆಪಿಗೆ ಪಕ್ಷಾಂತರವಾಗಬಹುದು ಎಂಬ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಕಾಂಗ್ರೆಸ್‌ ಶಾಸಕರಾದ ಜೀಶನ್ ಸಿದ್ದಿಕ್ (ಬಾಂದ್ರಾ ಪೂರ್ವ), … Continued

2022ರ ವರೆಗೆ ₹ 16,000 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳು ಮಾರಾಟ : ಬಿಜೆಪಿಗೆ ಸಿಂಹ ಪಾಲು ; ಯಾವ ಪಕ್ಷಗಳು ಪಡೆದದ್ದೆಷ್ಟು ಎಂಬುದು ಇಲ್ಲಿದೆ…

ನವದೆಹಲಿ: ಚುನಾವಣಾ ಬಾಂಡ್‌ಗಳು ಇದುವರೆಗೆ ವಿವಿಧ ರಾಜಕೀಯ ಪಕ್ಷಗಳಿಗೆ ₹ 16,437.63 ಕೋಟಿ ಮೌಲ್ಯದ 28,030 ಎಲೆಕ್ಟೋರಲ್ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ ಸಿಂಹ ಪಾಲು ಬಿಜೆಪಿ ಪಾಲಾಗಿದೆ ಎಂದು ಅಂದಾಜಿಸಲಾಗಿದೆ. ಈಗ ರದ್ದಾದ ಚುನಾವಣಾ ಬಾಂಡ್ ಯೋಜನೆಯನ್ನು 2018ರಲ್ಲಿ ಪರಿಚಯಿಸಿದ ನಂತರ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ₹ 12,000 ಕೋಟಿಗೂ ಹೆಚ್ಚು ಹಣವನ್ನು … Continued

ತೃಣಮೂಲ ಸಂಸದೆ ಮಿಮಿ ಚಕ್ರವರ್ತಿ ರಾಜೀನಾಮೆ ಘೋಷಣೆ : ಮಮತಾ ಬ್ಯಾನರ್ಜಿಗೆ ಸಲ್ಲಿಕೆ

ಕೋಲ್ಕತ್ತಾ: ನಟಿಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಅವರು ತಮ್ಮ ಕ್ಷೇತ್ರದ ಸ್ಥಳೀಯ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಮಿಮಿ ಚಕ್ರವರ್ತಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ, ಆದರೆ ಅದನ್ನು ಇನ್ನೂ ಅಂಗೀಕರಿಸಲಾಗಿಲ್ಲ. ಆದಾಗ್ಯೂ, ಅವರು … Continued

ಮಾಜಿ ಪತ್ನಿ ವಿರುದ್ಧ ಪೊಲೀಸ್ ದೂರು ನೀಡಿದ ‘ಮಹಾಭಾರತ’ ಧಾರಾವಾಹಿಯ ಶ್ರೀಕೃಷ್ಣನ ಪಾತ್ರಧಾರಿ ನಿತೀಶ ಭಾರದ್ವಾಜ

ಭೋಪಾಲ್‌ : ಜನಪ್ರಿಯ ಟಿವಿ ಧಾರಾವಾಹಿ ‘ಮಹಾಭಾರತ’ದಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ ನಟ ನಿತೀಶ ಭಾರದ್ವಾಜ ಅವರು ತಮ್ಮ ಮಾಜಿ ಪತ್ನಿ ಮಧ್ಯಪ್ರದೇಶ ಕೇಡರ್ ಐಎಎಸ್ ಅಧಿಕಾರಿ ಸ್ಮಿತಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಸ್ಮಿತಾ ತಮಗೆ ಬಹಳ ದಿನಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ನಟ ತಿಳಿಸಿದ್ದಾರೆ. ಭೋಪಾಲ್ ಪೊಲೀಸ್ ಆಯುಕ್ತ ಹರಿನಾರಾಯಣಚಾರಿ … Continued