ಮುಂಬೈನಲ್ಲಿ ಹಣ ಉಳಿಯಲ್ಲ ಎಂಬ ಹೇಳಿಕೆಗೆ ಕ್ಷಮೆಯಾಚಿಸಿದ ಮಹಾರಾಷ್ಟ್ರ ರಾಜ್ಯಪಾಲರು

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಈ ವಾರದ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಗೆ ಸೋಮವಾರ ಕ್ಷಮೆಯಾಚಿಸಿದ್ದಾರೆ. ಅವರ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ಜುಲೈ 29 ರಂದು ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಂಬೈನ ಅಭಿವೃದ್ಧಿಗೆ ಕೆಲವು ಸಮುದಾಯಗಳ ಕೊಡುಗೆಯನ್ನು ಶ್ಲಾಘಿಸುವ ಭರದಲ್ಲಿ ನಾನು ತಪ್ಪು ಮಾತಾಡಿದೆ. ಮಹಾರಾಷ್ಟ್ರ ಮಾತ್ರವಲ್ಲ, … Continued

₹ 88,078 ಕೋಟಿಯೊಂದಿಗೆ 5G ಸ್ಪೆಕ್ಟ್ರಮ್ ಬಿಡ್‌ಗಳಲ್ಲಿ ಅಗ್ರಸ್ಥಾನ ಪಡೆದ ರಿಲಯನ್ಸ್ ಜಿಯೋ, ಅದಾನಿ ಖರೀದಿಸಿದ್ದು…

ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಸೋಮವಾರ 5G ಸ್ಪೆಕ್ಟ್ರಮ್‌ಗಾಗಿ ಅತಿ ದೊಡ್ಡ ಬಿಡ್ಡರ್ ಆಗಿ ಹೊರಹೊಮ್ಮಿದೆ. ಇತ್ತೀಚಿನ ಹರಾಜಿನಲ್ಲಿ ₹ 88,078 ಕೋಟಿಗೆ ಮಾರಾಟವಾದ ಎಲ್ಲ ಏರ್‌ವೇವ್‌ಗಳ ಅರ್ಧದಷ್ಟು ಭಾಗವನ್ನು ಪಡೆದುಕೊಂಡಿದೆ. ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಅದಾನಿ ಸಮೂಹವು ₹ 212 ಕೋಟಿಗೆ 400 MHz ಅಥವಾ ಮಾರಾಟವಾದ … Continued

ಜಬಲ್‌ಪುರ ಆಸ್ಪತ್ರೆಯಲ್ಲಿ ಬೆಂಕಿ ಅನಾಹತ; 10 ಮಂದಿ ಸಾವು

ಜಬಲ್ಪುರ: ಮಧ್ಯಪ್ರದೇಶದ ಜಬಲ್‌ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ನಾಲ್ವರು ರೋಗಿಗಳು ಸೇರಿದಂತೆ ಕನಿಷ್ಠ ಹತ್ತು ಜನರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಐವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಗೋಹಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದಲ್ ಭಾಟಾದಲ್ಲಿರುವ ನ್ಯೂ ಲೈಫ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಗ್ನಿ ಅವಘಡದಲ್ಲಿ ಹತ್ತು … Continued

ಆಂಧ್ರಪ್ರದೇಶದ ಮಾಜಿ ಸಿಎಂ ಎನ್‌ಟಿಆರ್‌ ಪುತ್ರಿ ಆತ್ಮಹತ್ಯೆ

ಹೈದರಾಬಾದ್:‌ ದಿವಂಗತ ನಟ-ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್‌.ಟಿ. ರಾಮರಾವ್ ಅವರ ಪುತ್ರಿ ಕೆ. ಉಮಾ ಮಹೇಶ್ವರಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಮಾ ಮಹೇಶ್ವರಿ ಅವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ … Continued

ಸ್ಮೃತಿ ಇರಾನಿ, ಅವರ ಮಗಳು ಗೋವಾ ರೆಸ್ಟೋರೆಂಟ್ ಮಾಲೀಕರಲ್ಲ, ಪರವಾನಗಿಗಾಗಿ ಅರ್ಜಿಯನ್ನೂ ಸಲ್ಲಿಸಿಲ್ಲ: ದೆಹಲಿ ಹೈಕೋರ್ಟ್

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿ  ಗೋವಾ ರೆಸ್ಟೋರೆಂಟ್‌ನ ಮಾಲೀಕರಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ. ಅವರ ಪರವಾಗಿ ಯಾವುದೇ ಪರವಾನಗಿ ನೀಡಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ ಹಾಗೂ ಅವರ ವಿರುದ್ಧದ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದೆ. ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಮತ್ತು ಇತರರು … Continued

ಎರಡು ದಿನ ಶ್ರಮಪಟ್ಟು 36 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿದ್ದ 63 ನಾಣ್ಯಗಳನ್ನು ಹೊರತೆಗೆದ ವೈದ್ಯರು…!

ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರದಲ್ಲಿ 36 ವರ್ಷದ ವ್ಯಕ್ತಿಯೊಬ್ಬರು 1 ರೂಪಾಯಿಯ 63 ನಾಣ್ಯಗಳನ್ನು ಸೇವಿಸಿ ಅಸ್ವಸ್ಥಗೆ ಒಳಗಾದ ವಿಲಕ್ಷಣ ಘಟನೆ ನಡೆದಿದೆ. ನಂತರ ಜುಲೈ 27 ರಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದಾಗ, ವೈದ್ಯರು ಅವರ ಹೊಟ್ಟೆಯಲ್ಲಿ ಲೋಹದ ಗಡ್ಡೆಯನ್ನು ಕಂಡುಕೊಂಡರು. ಆದರೆ, ಆ ವ್ಯಕ್ತಿ 63 ರೂ.ಗಳ … Continued

ಭಾರತದಲ್ಲಿ ಮಂಕಿಪಾಕ್ಸ್‌ನಿಂದ ಮೊದಲ ಸಾವು: ಯುಎಇಯಿಂದ ವಾಪಸಾದ ಕೇರಳದ ವ್ಯಕ್ತಿಯ ಮಾದರಿಯ ಪರೀಕ್ಷೆಯಲ್ಲಿ ದೃಢ

ತ್ರಿಶೂರ್ : ಜುಲೈ 30 ರಂದು ಕೇರಳದಲ್ಲಿ ಮೃತಪಟ್ಟ 22 ವರ್ಷದ ವ್ಯಕ್ತಿಯ ಮಾದರಿಯ ಫಲಿತಾಂಶ ಸೋಮವಾರ ಬಂದಿದ್ದು, ಆ ವ್ಯಕ್ತಿ ಮಂಕಿಪಾಕ್ಸ್‌ನಿಂದ ಮೃತಪಟ್ಟಿರುವುದನ್ನು ದೃಢಪಡಿಸಿವೆ. ಇದು ಭಾರತದ ಮೊದಲ ಮಂಕಿಪಾಕ್ಸ್ ಸಂಬಂಧಿತ ಸಾವಾಗಿದೆ. ಪುಣೆ ಎನ್‌ಐವಿಗೆ ಪರೀಕ್ಷೆಗೆಂದು ಕಳುಹಿಸಲಾದ ಅವರ ಮಾದರಿಗಳ ಫಲಿತಾಂಶಗಳು ಪಾಸಿಟಿವ್‌ ಬಂದಿದೆ. ಕೇಂದ್ರ ಸರ್ಕಾರವು ಈಗ ಭಾರತದಲ್ಲಿ ಮಂಕಿಪಾಕ್ಸ್‌ನ ಕಾರ್ಯಪಡೆ … Continued

ಶಿವಸೇನೆ ನಾಯಕ ಸಂಜಯ್ ರಾವತ್ 4 ದಿನ ಇ.ಡಿ ಕಸ್ಟಡಿಗೆ

ಮುಂಬೈ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಿವಸೇನೆ ಸಂಸದ ಸಂಜಯ್‌ ರಾವತ್‌ ಅವರನ್ನು ಇಂದು, ಸೋಮವಾರ ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯ(ಇ.ಡಿ)ದ ಕಸ್ಟಡಿಗೆ ನೀಡಲಾಗಿದೆ. ತನಿಖಾ ಸಂಸ್ಥೆ ಎಂಟು ದಿನಗಳ ಕಸ್ಟಡಿಗೆ ಕೇಳಿತ್ತು ಆದರೆ ನ್ಯಾಯಾಲಯ ಒಪ್ಪಲಿಲ್ಲ ಮತ್ತು ನಾಲ್ಕು ದಿನಗಳ ಅವಧಿಗೆ ಕಸ್ಟಡಿಗೆ ನೀಡಿತು. ಇದುವರೆಗಿನ ತನಿಖೆ ಮತ್ತು ಅದರಲ್ಲಿ ಕಂಡುಬಂದಿರುವ ಅಂಶಗಳ … Continued

ಜ್ಞಾನವಪಿ ಮಸೀದಿ ಸಮಿತಿ ಪ್ರತಿನಿಧಿಸುತ್ತಿದ್ದ ವಕೀಲ ಹೃದಯಾಘಾತದಿಂದ ನಿಧನ

ವಾರಾಣಸಿ: ಜ್ಞಾನವಪಿ-ಶೃಂಗಾರ ಗೌರಿ ಸಂಕೀರ್ಣ ಪ್ರಕರಣದಲ್ಲಿ ಜ್ಞಾನವಪಿ ಮಸೀದಿ ಪ್ರಕರಣದಲ್ಲಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಕೀಲರ ತಂಡದ ನೇತೃತ್ವ ವಹಿಸಿದ್ದ ಹಿರಿಯ ವಕೀಲ ಅಭಯನಾಥ್ ಯಾದವ್ (60) ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ವಾರಾಣಸಿಯ ಪಾಂಡೆಪುರ ನಿವಾಸಿಯಾದ ಯಾದವ್ ಅವರು 35 ವರ್ಷಗಳಿಂದ ಪ್ರಾಕ್ಟೀಸ್‌ ಮಾಡುತ್ತಿದ್ದು, ಅವರು ಪತ್ನಿ, ಮಗ ಮತ್ತು ಇಬ್ಬರು ಪುತ್ರಿಯರನ್ನು … Continued

ಭಾರತದ ವಧುವಿಗೆ ಅಮೆರಿಕದ ವರನ ಜೊತೆ ವರ್ಚವಲ್‌ ಮೋಡ್‌ನಲ್ಲಿ ಮದುವೆ : ಒಪ್ಪಿಗೆ ನೀಡಿದ ಮದ್ರಾಸ್ ಹೈಕೋರ್ಟ್‌

ಮದುರೈ: ಮಹತ್ವದ ಆದೇಶದಲ್ಲಿ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಭಾರತದಲ್ಲಿರುವ ವಧುವನ್ನು, ಭಾರತೀಯ ಮೂಲದ ಅಮೆರಿಕದ ನಾಗರಿಕ ವರನೊಂದಿಗೆ ಮೂರು ಸಾಕ್ಷಿಗಳ ಸಮ್ಮುಖದಲ್ಲಿ ವರ್ಚುವಲ್ ಮೋಡ್ ಮೂಲಕ ವಿವಾಹ ನಡೆಸಲು ಒಪ್ಪಿಗೆ ನೀಡಿದೆ ಹಾಗೂ ಮದುವೆಯನ್ನು ಸುಗಮಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ. ಕನ್ಯಾಕುಮಾರಿ ಜಿಲ್ಲೆಯ ವಾಸ್ಮಿ … Continued