ಎಂಥಾ ಲೋಕವಯ್ಯ…! ಪತಿಯನ್ನು ಕೊಂದವರಿಗೆ ₹ 50 ಸಾವಿರ ಬಹುಮಾನ ನೀಡುವೆ : ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡ ಮಹಿಳೆ…!

ಲಕ್ನೋ: ಪತಿಯನ್ನು ಕೊಲೆ ಮಾಡಿದವರಿಗೆ ₹50 ಸಾವಿರ ನಗದು ಬಹುಮಾನ ನೀಡಲಾಗುವುದು’ ಎಂದು ಮಹಿಳೆಯೊ‌ಬ್ಬರು ತಮ್ಮ ವಾಟ್ಸ್‌ಆಪ್‌ ಖಾತೆಯಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ. ಉತ್ತರ ಪ್ರದೇಶದ ಆಗ್ರಾದ ಬಹ್ ಜಿಲ್ಲೆಯ ದಂಪತಿ ನಡುವಿನ ಭಿನ್ನಾಭಿಪ್ರಾಯ ಎಷ್ಟು ತೀವ್ರವಾಗಿದೆಯೆಂದರೆ, ಪತಿ ಹತ್ಯೆಗೆ ಪತ್ನಿ ₹ 50,000 ಬಹುಮಾನ ಘೋಷಿಸಿದ್ದಾರೆ. ಆಕೆ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಈ ಆಫರ್ ನೀಡಿದ್ದಾಳೆ…!! … Continued

ಆದಾಯ ತೆರಿಗೆ ಪ್ರಕರಣ: ಚುನಾವಣೆ ಮುಗಿಯುವವರೆಗೂ ಕಾಂಗ್ರೆಸ್ ವಿರುದ್ಧ ಕ್ರಮ ಇಲ್ಲ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರದ ಸ್ಪಷ್ಟನೆ

ನವದೆಹಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದಿಂದ ಸುಮಾರು 3,500 ಕೋಟಿ ರೂ.ಗಳ ಆದಾಯ ತೆರಿಗೆ ಬಾಕಿ ವಸೂಲಿ ಕುರಿತಂತೆ ಮುಂಬರುವ ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠದ ಎದುರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ … Continued

ಅಯ್ಯೋ ದೇವ್ರೆ ..| ಪ್ರಯಾಣಿಕನಿಗೆ ದುಃಸ್ವಪ್ನವಾದ ಉಬರ್ ಆಟೋ ಪ್ರಯಾಣ : ಆಟೋದಲ್ಲಿ ಪ್ರಯಾಣಿಸಿದ್ದಕ್ಕೆ ಬಂತು 7.66 ಕೋಟಿ ರೂ. ಬಿಲ್..!

ನವದೆಹಲಿ : ನೋಯ್ಡಾದ ಉಬರ್ ಆಟೋಕ್ಕೆ ಬುಕ್‌ ಮಾಡಿ ಅದರಲ್ಲಿ ಪ್ರಯಾಣಿಸಿದ ಗ್ರಾಹಕರೊಬ್ಬರು ಕೋಟಿಗಟ್ಟಲೆ ಬಿಲ್ ಬಂದ ನಂತರ ಹೌಹಾರಿದ್ದಾರೆ..! ಶುಕ್ರವಾರದ ಮುಂಜಾನೆ, ದೀಪಕ ತೆಂಗುರಿಯಾ ಎಂಬವರು ಕೇವಲ ₹ 62 ದರ ಆಗಬಹುದು ಎಂದು ನಿರೀಕ್ಷಿಸಿ ಉಬರ್ ಆಟೋ ಬುಕ್ ಮಾಡಿದ್ದಾರೆ. ಆದರೆ ದೀಪಕ ಅವರು ತಮ್ಮ ನಿಗದಿತ ಸ್ಥಳವನ್ನು ತಲುಪಿದ ನಂತರ ಅವರ … Continued

ದೆಹಲಿ ಸಿಎಂ ಕೇಜ್ರಿವಾಲಗೆ ಏಪ್ರಿಲ್ 15ರ ವರೆಗೆ ನ್ಯಾಯಾಂಗ ಬಂಧನ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಏಪ್ರಿಲ್ 15ರ ವರೆಗೆ ದೆಹಲಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಈ … Continued

ಭಾರತದ ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ಹೊಸದಾಗಿ 30 ಹೆಸರುಗಳನ್ನು ನಾಮಕರಣ ಮಾಡಿದ ಚೀನಾ

ಬೀಜಿಂಗ್: ಭಾರತದ ಅರುಣಾಚಲ ಪ್ರದೇಶದ ಕುರಿತು ಚೀನಾ ಮತ್ತೆ ಕ್ಯಾತೆ ಮಾಡುತ್ತಿದ್ದು, ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ತಾನು ಹೆಸರಿಟ್ಟ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಸ್ಥಳಗಳನ್ನು ಮರುನಾಮಕರಣ ಮಾಡುವುದನ್ನು ಭಾರತ ತಿರಸ್ಕರಿಸಿದೆ. ಅರುಣಾಚಲಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಹೊಸ ಹೆಸರುಗಳನ್ನು ಇಡುವುದರಿಂದ ಅದು ವಾಸ್ತವತೆಯನ್ನು ಬದಲಾಯಿಸುವುದಿಲ್ಲ … Continued

ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ಶವಗಳ ಜೊತೆ 3 ದಿನ ಕಳೆದ ವ್ಯಕ್ತಿ…!

ಲಕ್ನೋ : ಉತ್ತರ ಪ್ರದೇಶದ ಲಕ್ನೋದಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಂದು, ಅವರ ಶವಗಳ ಜೊತೆಯೇ ಮೂರು ರಾತ್ರಿಗಳನ್ನು ಕಳೆದ ಆಘಾತಕಾರಿ ಘಟನೆ ನಡೆದಿರುವುದು ವರದಿಯಾಗಿದೆ. ಮೃತದೇಹಗಳು ಕೊಳೆತು ವಾಸನೆ ಬರುವವರೆಗೂ ಆತ ಅವುಗಳ ಜೊತೆಯೇ ಕಳೆದಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪತ್ನಿ ಜ್ಯೋತಿ (30) ಅನೈತಿಕ … Continued

ವೀಡಿಯೊ..| ಬಿರುಗಾಳಿ ಮಳೆ : ಪಶ್ಚಿಮ ಬಂಗಾಳದಲ್ಲಿ ಐದು ಜನರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

ಜಲಪೈಗುರಿ: ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾನುವಾರ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗಿದ್ದು, ಮಳೆ ಸಂಬಂಧಿತ ಅವಘಡದಲ್ಲಿ ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಜಲಪೈಗುರಿ ಜಿಲ್ಲೆಯ ರಾಜರ್‌ಹಾಟ್, ಬರ್ನಿಷ್‌, ಬಾಕಲಿ, ಜೋರ್‌ಪಕಡಿ, … Continued

ವಾಣಿಜ್ಯ ಸಿಲಿಂಡರ್‌, ಎಫ್‌ಟಿಎಲ್ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆ.ಜಿ ವಾಣಿಜ್ಯ ಸಿಲಿಂಡರ್‌ ಮತ್ತು 5 ಕೆ.ಜಿ ಎಫ್‌ಟಿಎಲ್ (Free Trade LPG) ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿವೆ. 19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗೆ ₹ 30.50 ಇಳಿಕೆಯಾಗಿದ್ದರೆ 5 ಕೆ.ಜಿ ಎಫ್‌ಟಿಎಲ್ ಸಿಲಿಂಡರ್ ಬೆಲೆಯಲ್ಲಿ ₹7.50 ಇಳಿಕೆಯಾಗಿದೆ. ಪರಿಷ್ಕೃತ ದರಗಳು ಏಪ್ರಿಲ್ 1ರಿಂದ ಅನ್ವಯವಾಗಲಿದೆ. ದೆಹಲಿಯಲ್ಲಿ 19 … Continued

ವೀಡಿಯೊ..| ಹೋಳಿ ಸಂಭ್ರದಲ್ಲಿ ಕುಣಿಯುತ್ತಿದ್ದ ಲಕ್ಷಾಂತರ ಜನರ ಮಧ್ಯೆ ಬಂದ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ರೀತಿಗೆ ಬೆರಗಾಗಲೇ ಬೇಕು | ವೀಕ್ಷಿಸಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ರಂಗಪಂಚಮಿ ಸಂದರ್ಭದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಎಲ್ಲರೂ ಹಾಡಿನ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಿದ್ದರು. ಜನಜಂಗುಳಿ ಎಷ್ಟಿತ್ತೆಂದರೆ ರಸ್ತೆಯಲ್ಲಿ ತಲೆ ಮಾತ್ರ ಕಾಣುತ್ತಿತ್ತು. ಆದರೆ, ಅಷ್ಟರಲ್ಲಿ ಒಬ್ಬ ರೋಗಿಯನ್ನು ಹೊತ್ತುಕೊಂಡು ಆಂಬುಲೆನ್ಸ್‌ ಅದೇ ಮಾರ್ಗದಲ್ಲಿ ಬಂದಿದ್ದು ಇದನ್ನು ನೋಡಿ   ಹೋಳಿ (Holi) ಆಚರಣೆಯಲ್ಲಿ ತೊಡಗಿದ್ದ ಸಾವಿರಾರು ಮಂದಿ ಆಂಬುಲೆನ್ಸ್‌ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ … Continued

ವೀಡಿಯೊ..| ಭಾರೀ ಮಳೆಯಿಂದಾಗಿ ಕುಸಿದುಬಿದ್ದ ಗುವಾಹತಿ ವಿಮಾನ ನಿಲ್ದಾಣದ ಮೇಲ್ಛಾವಣಿಯ ಭಾಗ : ಮಾರ್ಗ ಬದಲಿಸಿ ಬೇರೆಡೆ ತೆರಳಿದ ವಿಮಾನಗಳು

ಗುವಾಹತಿ : ಭಾರೀ ಮಳೆಯೊಂದಿಗೆ ಹಠಾತ್ ಬಿರುಗಾಳಿಯ ನಂತರ ಭಾನುವಾರ ಅಸ್ಸಾಂನ ಗುವಾಹತಿಯ ಲೋಕಪ್ರಿಯಾ ಗೋಪಿನಾಥ ಬೊರ್ಡೊಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಿನ ಚಾವಣಿಯ ಒಂದು ಭಾಗವು ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲವಾದರೂ, ಸೀಲಿಂಗ್‌ನ ಒಂದು ಭಾಗದ ಕುಸಿತವು ಅದಾನಿ ಗ್ರೂಪ್-ನಿಯಂತ್ರಿತ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನಗಳ ಕಾರ್ಯಾಚರಣೆಯನ್ನು ಕೆಲಕಾಲ ಸ್ಥಗಿತಗೊಳಿಸಲು … Continued