ಲೋಕಸಭೆ ಚುನಾವಣೆ : ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ, ಉದ್ಯೋಗ ಸೃಷ್ಟಿ, ಜಾತಿ ಗಣತಿ, ಕನಿಷ್ಠ ಬೆಂಬಲ ಬೆಲೆ ಸೇರಿ ಹಲವು ಭರವಸೆ

ನವದೆಹಲಿ : 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯೋಗ ಸೃಷ್ಟಿ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಜಾತಿ ಗಣತಿ ಪ್ರಣಾಳಿಕೆಯ ಪ್ರಮುಖ ಮುಖ್ಯಾಂಶಗಳಲ್ಲಿ ಒಂದಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇದ್ದರು. … Continued

ನೀನು ಬಂದ್ರೆ ಶಾಲಾ ವಾತಾವರಣ ಹಾಳಾಗಲಿದೆ…: ಅತ್ಯಾಚಾರ ಸಂತ್ರಸ್ತೆಗೆ 12 ತರಗತಿ ಪರೀಕ್ಷೆ ಬರೆಯಲು ಬಿಡದ ಶಾಲೆ…!

ಅಜ್ಮೀರ್: ಕಳೆದ ವರ್ಷ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದರಿಂದ ತನ್ನ ಶಾಲೆಯು ತನಗೆ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಬಿಡಲಿಲ್ಲ ಎಂದು ರಾಜಸ್ಥಾನದಲ್ಲಿ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾಳೆ. ಪರೀಕ್ಷೆಗೆ ಹಾಜರಾದರೆ ಶಾಲೆಯ ವಾತಾವರಣ ಹಾಳಾಗುತ್ತದೆ ಎಂದು ಶಾಲಾ ಅಧಿಕಾರಿಗಳು ಹೇಳಿದ್ದರು ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾಳೆ. ವಿದ್ಯಾರ್ಥಿನಿ 4 ತಿಂಗಳಿನಿಂದ ತರಗತಿಗಳಿಗೆ ಹಾಜರಾಗದ ಕಾರಣ … Continued

ಮಾಜಿ ಸಿಎಂ ಹೇಮಂತ ಸೊರೇನ್‌ ಗೆ ಸೇರಿದ 31 ಕೋಟಿ ರೂ. ಮೌಲ್ಯದ ರಾಂಚಿ ಭೂಮಿ ಜಪ್ತಿ ಮಾಡಿದ ಇ.ಡಿ.

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಅವರ ಸಹಚರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ರಾಂಚಿಯಲ್ಲಿ 8.86 ಎಕರೆ ಭೂಮಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ ಎಂದು ಫೆಡರಲ್ ಏಜೆನ್ಸಿ ಗುರುವಾರ ತಿಳಿಸಿದೆ. ನಗರ ವಸತಿ ಆಸ್ತಿ ದರದ ಪ್ರಕಾರ ಇದರ ಮೌಲ್ಯ 31,07,02,480 ರೂ. ಎಂದು ಹೇಳಲಾಗಿದೆ. 48 … Continued

ದೆಹಲಿ ತಂಡದ ಕ್ರಿಕೆಟ್‌ ಆಟಗಾರ ಪೃಥ್ವಿ ಶಾ ವಿರುದ್ಧದ ಹಳೆಯ ಕಿರುಕುಳದ ಆರೋಪಗಳ ತನಿಖೆಗೆ ಮುಂಬೈ ಕೋರ್ಟ್ ಸೂಚನೆ

ಮುಂಬೈ: 2023ರಲ್ಲಿ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಸಾಮಾಜಿಕ ಜಾಲತಾಣಗಳ ಪ್ರಭಾವಿ ಸಪ್ನಾ ಗಿಲ್ ನೀಡಿದ ಕಿರುಕುಳದ ದೂರಿನ ವಿಚಾರಣೆ ನಡೆಸುವಂತೆ ಇಲ್ಲಿನ ನ್ಯಾಯಾಲಯ ಬುಧವಾರ ಪೊಲೀಸರಿಗೆ ಸೂಚಿಸಿದೆ. ಜೂನ್ 19 ರೊಳಗೆ ವಿಚಾರಣೆಯ ವರದಿಯನ್ನು ಸಲ್ಲಿಸುವಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ಸೂಚಿಸಿದರು. ಆದರೆ ಆಕೆಯ ದೂರಿನ ಮೇಲೆ ಶಾ ಮತ್ತು ಇತರರ ವಿರುದ್ಧ ಪ್ರಥಮ … Continued

ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ ನಾಮಪತ್ರ ಸಲ್ಲಿಕೆ ; ಆಸ್ತಿ ವಿವರ ಘೋಷಣೆ : ಪತ್ನಿಯೇ ಶ್ರೀಮಂತೆ…

ಬೆಂಗಳೂರು: ಡಾ. ಸಿಎನ್ ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ಅವರು ರಾಮನಗರದಲ್ಲಿ ನಾಮಪತ್ರ ಸಲ್ಲಿಸಿದರು. ನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಪತಿಯೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು,. ಅವರ ಜೊತೆ ಪತ್ನಿ ಎಚ್.ಡಿ. ಅನುಸೂಯ ಹಾಗೂ ಬೆಂಬಲಿಗರು ಇದ್ದರು. ನಾಮಪತ್ರ ಸಲ್ಲಿಸುವುದಕ್ಕಿಂತ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ಅನುಸೂಯ ಅವರು, ವೈದ್ಯಕೀಯ … Continued

“ಅಮೇಥಿ ನನ್ನನ್ನು ಬಯಸಿದರೆ…”: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ ಗಾಂಧಿ ಕುಟುಂಬದ ಅಳಿಯ

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರು ತಮ್ಮ ರಾಜಕೀಯ ಪಾದಾರ್ಪಣೆಯ ಸುಳಿವು ನೀಡಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್‌ ಭದ್ರಕೋಟೆಯಾದ ಅಮೇಥಿಯಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಗುರುವಾರ “ನಾನು ಸಂಸದನಾಗಲು ಬಯಸಿದರೆ ನಾನು ಅವರನ್ನು ಪ್ರತಿನಿಧಿಸಬೇಕೆಂದು ಅಮೇಥಿಯ ಜನರು ನಿರೀಕ್ಷಿಸುತ್ತಾರೆ ಎಂದು ಹೇಳಿದ್ದಾರೆ. ರಾಯಬರೇಲಿ, … Continued

ನಟಿ-ಸಂಸದೆ ಹೇಮಮಾಲಿನಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಸುರ್ಜೆವಾಲಾ ವಿರುದ್ಧ ಪ್ರಕರಣ ದಾಖಲಿಸಿದ ರಾಷ್ಟ್ರೀಯ ಮಹಿಳಾ ಆಯೋಗ

ನವದೆಹಲಿ : ಮಥುರಾ ಕ್ಷೇತ್ರದ ಹಾಲಿ ಬಿಜೆಪಿ ಸಂಸದೆ ಹಾಗೂ ನಟಿ ಹೇಮಮಾಲಿನಿ ವಿರುದ್ಧ ಕಾಂಗ್ರೆಸ್ ಸಂಸದ ರಣದೀಪ ಸಿಂಗ್ ಸುರ್ಜೆವಾಲ ಅವರು ಅವಹೇಳನಕಾರಿ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ಇದೇ ವೇಳೆ ಪ್ರಕರಣ ಸಂಬಂಧ ಹರಿಯಾಣದ ರಾಜ್ಯ … Continued

ಒಂದು ವರ್ಷದ ಹಿಂದೆ 17,545 ಕೋಟಿ ರೂ.ಗಳಿಷ್ಟಿದ್ದ ಬೈಜು ರವೀಂದ್ರನ್ ಆಸ್ತಿ ಈಗ ಶೂನ್ಯಕ್ಕೆ…!

ಇತ್ತೀಚೆಗೆ ಬಿಡುಗಡೆಯಾದ ಫೋರ್ಬ್ಸ್ ವರ್ಲ್ಡ್‌ನ ಬಿಲಿಯನೇರ್‌ಗಳ ಪಟ್ಟಿ 2024 ರ ಪ್ರಕಾರ ಒಂದು ವರ್ಷದ ಹಿಂದೆ ಬೈಜು ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ₹ 17,545 ಕೋಟಿ ಇದ್ದ ನಿವ್ವಳ  ಆಸ್ತಿ   ಮೌಲ್ಯವು ಈಗ ಶೂನ್ಯಕ್ಕೆ ಕುಸಿದಿದೆ. ಒಂದು ಕಾಲದಲ್ಲಿ ಅತ್ಯಮೂಲ್ಯವಾದ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿದ್ದ ಬೈಜೂಸ್ ಇತ್ತೀಚಿನ ದಿನಗಳಲ್ಲಿ ಹಲವಾರು ಹಿನ್ನಡೆಗಳನ್ನು ಎದುರಿಸುತ್ತಿದೆ, ಇದರಲ್ಲಿ … Continued

ಮಯಾಂಕ ಯಾದವ್ 2 ವರ್ಷಗಳಿಂದ ಸಸ್ಯಾಹಾರಿಯಾಗಿದ್ದಾನೆ : ಐಪಿಎಲ್ 2024ರಲ್ಲಿ ಗಮನಸೆಳೆದ ಯುವ ವೇಗಿ ತಾಯಿಯ ಹೇಳಿಕೆ

ನವದೆಹಲಿ : ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವೇಗಿ ಮಯಾಂಕ ಯಾದವ್ ತನ್ನ ವೇಗದ ಬೌಲಿಂಗ್‌ನಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ನಲ್ಲಿ ಗಮನ ಸೆಳೆದಿದ್ದಾರೆ. ಅವರ ಗಂಟೆಗೆ 150 ಕಿಮೀಗಿಂತಲೂ ಹೆಚ್ಚಿನ ವೇಗದ ಎಸೆತಗಳು ಎದುರಾಳಿ ಬ್ಯಾಟರ್‌ ಅನ್ನು ಕಂಗೆಡಿಸುತ್ತಿವೆ. ಅವರ ವೇಗದ ಬೌಲಿಂಗ್‌ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ T20 ಐಪಿಎಲ್ … Continued

50 ವರ್ಷಗಳ ಹಿಂದೆ ಸತತವಾಗಿ 120 ಗಂಟೆಗಳ ಕಾಲ ಹಸಿವಿನಿಂದ ಬಳಲಿದ ಘಟನೆ ನೆನಪಿಸಿಕೊಂಡ ಇನ್ಫೋಸಿಸ್ ನಾರಾಯಣಮೂರ್ತಿ

ವಿಶ್ವಸಂಸ್ಥೆ: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು 50 ವರ್ಷಗಳ ಹಿಂದೆ ನಿರಂತರ 120 ಗಂಟೆ ಕಾಲ ಹಸಿವಿನಿಂದ ಬಳಲಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆಗೆ ಭಾರತದ ಪರ್ಮನೆಂಟ್ ಮಿಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುರೋಪ್‌ನಲ್ಲಿ ಹಿಚ್‌ಹೈಕಿಂಗ್ ಮಾಡುವಾಗ 120 ಗಂಟೆಗಳ ಕಾಲ “ಹಸಿವನ್ನು ಅನುಭವಿಸಿದ್ದೆ” ಎಂದು ನಾರಾಯಣ ಮೂರ್ತಿ … Continued