ಪ್ಲುಟೊ ಗೃಹದ ಹಿಮದ ಬಿರುಕುಗಳ ಮೂಲಕ ಮೇಲ್ಮೈಗೆ ಬರುತ್ತಿದೆ ದ್ರವ ನೈಟ್ರೋಜನ್ ! ನಾಸಾ ಅಧ್ಯಯನದಲ್ಲಿ ಪುರಾವೆ

ವಾಷಿಂಗ್ಟನ್ : 2015ರಲ್ಲಿ ಪ್ಲುಟೊ ಗೃಹಕ್ಕೆ ಕಳುಹಿಸಲಾಗಿದ್ದ ನಾಸಾದ ‘ನ್ಯೂ ಹೊರೈಸನ್ಸ್’ ಬಾಹ್ಯಾಕಾಶ ನೌಕೆ ತೆಗೆದ ಚಿತ್ರಗಳ ಹೊಸ ವಿಶ್ಲೇಷಣೆಯಲ್ಲಿ ಮಹತ್ವದ ಸುಳಿವೊಂದು ಪತ್ತೆಯಾಗಿದೆ. ಪ್ಲುಟೊದ ಉತ್ತರ ಭಾಗದಲ್ಲಿರುವ ‘ಸ್ಪುಟ್ನಿಕ್ ಪ್ಲಾನಿಟಿಯಾ’ ಪ್ರದೇಶದ ಹಿಮ ನದಿಯ ಕೆಳಗಿನ ಬಿರುಕುಗಳ ಮೂಲಕ ದ್ರವ ನೈಟ್ರೋನ್‌ ಮೇಲ್ಮೈಗೆ ಬರುತ್ತಿರಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನ್ಯೂ ಹೊರೈಸನ್ಸ್‌ ಮಿಷನ್‌ನ ಪ್ರಧಾನ … Continued

ಚಂದ್ರನಿಗೆ ಅಪ್ಪಳಿಸಿದ 4000 ಕಿಲೋ ತೂಕದ ಫಾಲ್ಕನ್–9 ರಾಕೆಟ್‌ ಭಾಗ ; 100 ಅಡಿ ಅಗಲ-16 ಅಡಿ ಆಳದ ಕುಳಿ ಆಗಿರುವ ಸಾಧ್ಯತೆ

ನ್ಯೂಯಾರ್ಕ್: ಬಿಲಿಯನೇರ್‌ ಎಲಾನ್‌ ಮಸ್ಕ್‌ ಒಡೆತನದ ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ  ಸ್ಪೇಸ್‌ಎಕ್ಸ್ (SpaceX)‌ನ ಸುಮಾರು 4 ಮೆಟ್ರಿಕ್ ಟನ್ (4,000 ಕೆ.ಜಿ.) ತೂಕದ ಫಾಲ್ಕನ್–9 ರಾಕೆಟ್‌ನ ಮೇಲಿನ ಹಂತದ (Upper Stage) ಭಾಗವು ಬುಧವಾರ ಅನಿರೀಕ್ಷಿತವಾಗಿ ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಭೂಮಿಗೆ ಯಾವುದೇ ಅಪಾಯವನ್ನು ಉಂಟುಮಾಡದಿದ್ದರೂ, ಚಂದ್ರನ ಮೇಲ್ಮೈಯಲ್ಲಿ ಹೊಸದೊಂದು … Continued

ವಿಡಿಯೋ | ಚಂದಿರನ ಅಕ್ಕಪಕ್ಕ ಹೋಗಿ ಮರಳಿದ ನಾಲ್ವರು ಗಗನಯಾತ್ರಿಗಳು ; ಆರ್ಟೆಮಿಸ್ II ಪೆಸಿಫಿಕ್ ಸಾಗರದಲ್ಲಿ ಯಶಸ್ವಿ ಲ್ಯಾಂಡಿಗ್‌

ಫ್ಲೋರಿಡಾ: ದಶಕಗಳ ನಂತರ ಚಂದ್ರನ ಸಮೀಪಕ್ಕೆ ಪ್ರಯಾಣ ಬೆಳೆಸಿದ್ದ ನಾಲ್ವರು ಗಗನಯಾತ್ರಿಗಳು ತಮ್ಮ 10 ದಿನಗಳ ಐತಿಹಾಸಿಕ ಬಾಹ್ಯಾಕಾಶ ಯಾನವನ್ನು ಮುಗಿಸಿ ಶುಕ್ರವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಹಮ್ಮಿಕೊಂಡಿದ್ದ ‘ಆರ್ಟೆಮಿಸ್ II’ (Artemis II) ಮಿಷನ್‌ನ ಭಾಗವಾಗಿದ್ದ ಈ ಗಗನಯಾತ್ರಿಗಳು ಕ್ಯಾಲಿಫೋರ್ನಿಯಾ ಕರಾವಳಿಯ ಪೆಸಿಫಿಕ್ ಸಾಗರದಲ್ಲಿ ಯಶಸ್ವಿಯಾಗಿ ಇಳಿದಿದ್ದಾರೆ. … Continued

ವಿಡಿಯೋ | ಚಂದ್ರಯಾನದ ಐತಿಹಾಸಿಕ ಕ್ಷಣ: 50 ವರ್ಷಗಳ ಬಳಿಕ ಚಂದ್ರನತ್ತ ನೆಗೆದ ನಾಸಾದ ನಾಲ್ವರು ಗಗನಯಾತ್ರಿಗಳು

ಫ್ಲೋರಿಡಾ: ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಬುಧವಾರದ ದಿನವು ಹೊಸ ದಾಖಲೆಗೆ ಸಾಕ್ಷಿಯಾಯಿತು. ಸುಮಾರು ಐದು ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಮಾನವನನ್ನು ಮತ್ತೆ ಚಂದ್ರನ ಕಕ್ಷೆಗೆ ಕಳುಹಿಸುವ ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್‌-2’ ಮಿಷನ್‌ಗೆ ಚಾಲನೆ ದೊರೆತಿದೆ. ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸಂಜೆ ಸುಮಾರು 6:35ಕ್ಕೆ ನಾಸಾದ ಬೃಹತ್ ಆರೆಂಜ್ ಮತ್ತು ಬಿಳಿ ಬಣ್ಣದ ಎಸ್‌ಎಲ್‌ಎಸ್ … Continued

ಇಸ್ರೋದಿಂದ ವಿಶ್ವದ ಅತ್ಯಂತ ದುಬಾರಿ ಭೂ ಚಿತ್ರಣ ಉಪಗ್ರಹ ನಿಸಾರ್ ಯಶಸ್ವಿಯಾಗಿ ಉಡಾವಣೆ

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (ನಿಸಾರ್) ಉಪಗ್ರಹವನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತ ತನ್ನ ಬಾಹ್ಯಾಕಾಶ ಮತ್ತು ಹವಾಮಾನ ಮಹತ್ವಾಕಾಂಕ್ಷೆಗಳಲ್ಲಿ ಮಹತ್ವದ ಮೈಲಿಗಲ್ಲನ್ನು ದಾಟಿದೆ. 2393 ಕಿಲೋಗ್ರಾಂಗಳಷ್ಟು ತೂಕದ ಉಪಗ್ರಹವನ್ನು ಭಾರತೀಯ ಕಾಲಮಾನ ಸಂಜೆ 5:40 ಕ್ಕೆ ಇಸ್ರೋದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ) … Continued

ವೀಡಿಯೊ..| ಬಾಹ್ಯಾಕಾಶಕ್ಕೆ ಹಾರಿದ ಶುಭಾಂಶು ಶುಕ್ಲಾ ; 41 ವರ್ಷಗಳ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ

ನವದೆಹಲಿ: ಭಾರತವು ತನ್ನ ಕಾಸ್ಮಿಕ್ ಜಿಗಿತವನ್ನು ಮಾಡಿದೆ. ಭಾರತೀಯ ವಾಯುಪಡೆಯ ಪೈಲಟ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಫಾಲ್ಕನ್ 9 ರಾಕೆಟ್‌ನಲ್ಲಿ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿದ್ದಾರೆ. 1969 ರಲ್ಲಿ ಅಪೊಲೊ 11 ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ … Continued

ಭಾರತೀಯ ಗಗನಯಾತ್ರಿ ಒಳಗೊಂಡ ಆಕ್ಸಿಯಮ್ -4 ಮಿಷನ್ ಉಡಾವಣೆ ಮುಂದೂಡಿಕೆ

ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಆಕ್ಸಿಯಮ್ -4 ಮಿಷನ್ ಉಡಾವಣೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಟ್ವಿಟರ್‌ನಲ್ಲಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಪೋಸ್ಟ್‌ನಲ್ಲಿ ಈ ವಿಷಯ ತಿಳಿಸಿದೆ. “ಹವಾಮಾನ ವೈಪರೀತ್ಯದಿಂದಾಗಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಗಗನಯಾತ್ರಿಯನ್ನು ಕಳುಹಿಸುವ ಆಕ್ಸಿಯಮ್ -4 ಮಿಷನ್‌ನ ಉಡಾವಣೆಯನ್ನು … Continued

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ? “ಹಿಮಾಲಯ, ಮುಂಬೈ…ಮೀನುಗಾರಿಕೆ…: ವಿವರ ಹಂಚಿಕೊಂಡ ಗಗನಯಾತ್ರಿ ಸುನಿತಾ ವಿಲಿಯಮ್ಸ್​

ವಾಷಿಂಗ್ಟನ್ : ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ? ಭಾರತೀಯ ಮೂಲದ ಬಾಹ್ಯಾಕಾಶ ಪರಿಶೋಧಕಿ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ “ನಂಬಲಾಗದಂತಹ” ಅದ್ಭುತ ಹಿಮಾಲಯದ ಮೇಲೆ ಹಾದುಹೋದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳ ವಾಸ್ತವ್ಯದ ನಂತರ ಭಾರತವು ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂಬ ಪ್ರಶ್ನೆಗೆ “ಅದ್ಭುತವಾಗಿದೆ, ಅದ್ಭುತವಾಗಿದೆ” ಎಂದು ಅವರು ಉತ್ತರಿಸಿದರು. “ಭಾರತ … Continued

ವೀಡಿಯೊ…| ಸುನಿತಾ ವಿಲಿಯಮ್ಸ್, ಇತರ ಗಗನಯಾತ್ರಿಗಳನ್ನು ಸ್ವಾಗತಿಸಲು ಬಾಹ್ಯಾಕಾಶ ನೌಕೆ ಸುತ್ತಲೂ ಸೇರಿದ ಡಾಲ್ಫಿನ್‌ ಗಳ ಗುಂಪು…!

ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಒಂಬತ್ತು ತಿಂಗಳ ನಂತರ ಭೂಮಿಗೆ ಮರಳಿದ್ದಾರೆ. ಇಬ್ಬರು ಗಗನಯಾತ್ರಿಗಳಾದ ನಾಸಾದ ನಿಕ್ ಹೇಗ್ ಮತ್ತು ರೋಸ್ಕೊಸ್ಮೊಸ್ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅವರೊಂದಿಗೆ ಭೂಮಿಗೆ ಬಂದಿಳಿದಿದ್ದಾರೆ. ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಗಗನಯಾತ್ರಿಗಳನ್ನು ಮರಳಿ ಕರೆತಂದಿತು ಮತ್ತು ಇದು ಅಮೆರಿಕದ ಫ್ಲೋರಿಡಾ ಕರಾವಳಿಯ … Continued

ವೀಡಿಯೊಗಳು…| ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡು 9 ತಿಂಗಳ ನಂತರ ಭೂಮಿಗೆ ಬಂದಿಳಿದ ಸುನೀತಾ ವಿಲಿಯಮ್ಸ್, ವಿಲ್ಮೋರ್

9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಅಮೆರಿಕದ ಬುಚ್‌ ವಿಲ್ಮೋರ್‌ (Butch Wilmore) ಅವರನ್ನು ಅತ್ಯಂತ ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ. ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್‌ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಯಿಂದ … Continued