ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಭೀಕರ ದುರಂತ: ಎಂಟು ಕಾರ್ಮಿಕರ ಸಾವು, ಹಲವರಿಗೆ ಗಾಯ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಸೋಮವಾರ ಭೀಕರ ಅವಘಡ ಸಂಭವಿಸಿದೆ. ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಬೃಹತ್ ಪಾತ್ರೆ (ಲಾಡಲ್) ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಮೃತಪಟ್ಟಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಕ್ಕಿನ ಕಾರ್ಖಾನೆಯ ಎಸ್‌ಎಂಎಸ್-೨ (SMS-2) ಮತ್ತು ಎಸ್‌ಟಿಸಿ-೩ (STC-3) ಹೀಟ್ ಫೆಸಿಲಿಟಿ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ. ಅತ್ಯಂತ ಹೆಚ್ಚಿನ ತಾಪಮಾನದಲ್ಲಿದ್ದ ಕರಗಿದ … Continued

ಕ್ರಿಕೆಟ್ ಪಂದ್ಯದಲ್ಲಿ ರನ್ ಔಟ್ ವಿವಾದ: ಚಾಕುವಿನಿಂದ ಇರಿದು ಅಂಪೈರ್ ಹತ್ಯೆ

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ರನ್ ಔಟ್ ತೀರ್ಪಿಗೆ ಸಂಬಂಧಿಸಿದಂತೆ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ, 21 ವರ್ಷದ ಯುವ ಅಂಪೈರ್‌ನನ್ನು ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಭಾನುವಾರ ಸಂಜೆ ಸ್ಥಳೀಯ ಮೈದಾನವೊಂದರಲ್ಲಿ ಮೂರು ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಡೋಲಾ … Continued

ಪತ್ನಿ ತವರಿಗೆ ಹೋದಾಗ ಮನೆಗೆ ಪ್ರೇಯಸಿ ಕರೆಸಿಕೊಂಡು ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ನೌಕಾಪಡೆ ಅಧಿಕಾರಿ…!

ವಿಶಾಖಪಟ್ಟಣಂ: ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಮಾದರಿಯಲ್ಲೇ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಪತ್ನಿ ತವರಿಗೆ ಹೋದ ಸಮಯದಲ್ಲಿ ಪ್ರೇಯಸಿಯನ್ನು ಮನೆಗೆ ಕರೆಸಿಕೊಂಡಿದ್ದ ನೌಕಾಪಡೆ ಅಧಿಕಾರಿಯೊಬ್ಬ ಆಕೆಯನ್ನು ಹತ್ಯೆ ಮಾಡಿ, ಬಳಿಕ ಆಕೆಯ ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಅಡಗಿಸಿಟ್ಟಿರುವ ಘೋರ ಕೃತ್ಯ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು … Continued

ಚಂದನೋತ್ಸವದ ವೇಳೆ ದೇವಸ್ಥಾನದ ಗೋಡೆ ಕುಸಿದು 8 ಮಂದಿ ಸಾವು

ವಿಶಾಖಪಟ್ಟಣ : ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಸಿಂಹಾಚಲಂ ದೇವಾಲಯದಲ್ಲಿ ಹೊಸದಾಗಿ ನಿರ್ಮಿಸಲಾದ ಗೋಡೆ ಕುಸಿದು ಎಂಟು ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಚಂದನೋತ್ಸವಂ ಹಬ್ಬದ ಸಂದರ್ಭದಲ್ಲಿ ಬುಧವಾರ ಮುಂಜಾನೆ ರಸ್ತೆಗುಂಟ ಇದ್ದ 20 ಅಡಿ ಉದ್ದದ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. 300 ರೂ.ಟಿಕೆಟ್‌ ಕೌಂಟರ್‌ನ ಸರತಿ ಸಾಲು ನಿಲ್ಲುವ ಉದ್ದಕ್ಕೂ … Continued

ಇನ್‌ಸ್ಟಂಟ್ ಲೋನ್ ಆ್ಯಪ್‌ನಿಂದ ₹ 2,000 ಸಾಲ ಪಡೆದ ನಂತರ ನಿರಂತರ ಕಿರುಕುಳ ; 47 ದಿನಗಳ ಹಿಂದೆ ವಿವಾಹವಾದ ಯುವಕ ಆತ್ಮಹತ್ಯೆ…!

ಹೈದರಾಬಾದ್ : ಇನ್‌ಸ್ಟಂಟ್ (ತ್ವರಿತ) ಲೋನ್ ಆ್ಯಪ್‌ನಿಂದ ಕೇವಲ ₹ 2,000 ಸಾಲ ತೆಗೆದುಕೊಂಡ ನಂತರ ನಿರಂತರವಾಗಿ ಕಿರುಕುಳ ಎದುರಿಸುತ್ತಿದ್ದ 27 ವರ್ಷದ ಯುವಕ ವಿವಾಹವಾದ 47 ದಿನಗಳ ನಂತರ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೀವನೋಪಾಯಕ್ಕಾಗಿ ಮೀನು ಹಿಡಿಯುತ್ತಿದ್ದ ನರೇಂದ್ರ ಎಂಬವರು ಪ್ರತಿಕೂಲ ಹವಾಮಾನದ ಕಾರಣದಿಂದ ಕೆಲವು ತಿಂಗಳ ಹಿಂದೆ ಮೀನುಗಾರಿಕೆಗೆ … Continued