ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ; ಮೊದಲ ಶ್ರೇಣಿ ಹಂಚಿಕೊಂಡ ಮೂವರು, ಅಭ್ಯರ್ಥಿಗಳ ನೋಂದಾಯಿತ ಇಮೇಲ್‌ಗೆ ಫಲಿತಾಂಶ

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗಿದೆ. ವೈದ್ಯಕೀಯ ಕೋರ್ಸ್​ಗೆ ಪ್ರವೇಶಕ್ಕಾಗಿ ನಡೆಯುವ ನೀಟ್​ ಪರೀಕ್ಷೆಯ ಫಲಿತಾಂಶ ಇಂದು (ನವೆಂಬರ್ 1) ಪ್ರಕಟವಾಗಿದೆ. ನೀಟ್ ಪದವಿ ಕೋರ್ಸ್​ ಫಲಿತಾಂಶ ಘೋಷಣೆಗೆ ಸುಪ್ರೀಂಕೋರ್ಟ್ ಈ ಮೊದಲು ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಗ ಫಲಿತಾಂಶ ಪ್ರಕಟವಾಗಿದೆ. ನೀಟ್‌ (NEET) ಫಲಿತಾಂಶವನ್ನು ಅಭ್ಯರ್ಥಿಗಳಿಗೆ ಅವರ ನೋಂದಾಯಿತ … Continued

ಭಾರತದ ಕೊವ್ಯಾಕ್ಸಿನ್ ಲಸಿಕೆಗೆ ಆಸ್ಟ್ರೇಲಿಯಾ ಮಾನ್ಯತೆ

ನವದೆಹಲಿ: ಆಸ್ಟ್ರೇಲಿಯಾದ ಥೆರಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ (ಟಿಜಿಎ) ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್​ ಕೊವಿಡ್ 19 ವಿರುದ್ಧದ ಲಸಿಕೆಯನ್ನು ಅಂಗೀಕರಿಸಿದೆ. ಈ ಲಸಿಕೆಯು ಆಸ್ಟ್ರೇಲಿಯಾದಲ್ಲಿ ರಿಜಿಸ್ಟರ್ ಆಗಿಲ್ಲ. ಆದರೆ ಗಣನೀಯ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ಈ ಲಸಿಕೆಯನ್ನು ಹಾಕಿಸಿಕೊಂಡಿರುವುದನ್ನು ಗುರುತಿಸಿ ಆಸ್ಟ್ರೇಲಿಯಾ ನಿರ್ಧಾರ ಕೈಗೊಂಡಿದೆ. ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಜೊತೆಗೆ ಚೀನಾದ BBIBP- CorV ಕೂಡ ಆಸ್ಟ್ರೇಲಿಯಾದ … Continued

2013ರ ನರೇಂದ್ರ ಮೋದಿ ಪಾಟ್ನಾ ಸಮಾವೇಶದಲ್ಲಿ ಸರಣಿ ಸ್ಫೋಟ ಪ್ರಕರಣ: ನಾಲ್ವರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ

ಪಾಟ್ನಾ: 2013ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ಸಮಯದಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸರಣಿ ಬಾಂಬ್​​​ ಸ್ಫೋಟ ಪ್ರಕರಣದ ಒಂಬತ್ತು ಅಪರಾಧಿಗಳ ಪೈಕಿ ನಾಲ್ವರಿಗೆ ರಾಷ್ಟ್ರೀಯ ತನಿಖಾ ದಳ(ಎನ್​ಐಎ)ದ ವಿಶೇಷ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವಾರ ನ್ಯಾಯಾಲಯವು 10 ಆರೋಪಿಗಳ ಪೈಕಿ ಒಂಬತ್ತು ಆರೋಪಿಗಳಾದ ಹೈದರ್ ಅಲಿ ಅಲಿಯಾಸ್ ‘ಬ್ಲ್ಯಾಕ್ … Continued

ಪಟಾಕಿಗಳ ಬಳಕೆ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಪಟಾಕಿಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸುವ ಕೋಲ್ಕತ್ತಾ ಹೈಕೋರ್ಟ್‌ನ ಇತ್ತೀಚಿನ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ಅವರಿದ್ದ ವಿಶೇಷ ರಜಾಕಾಲದ ಪೀಠವು ಮಾಲಿನ್ಯಕಾರಕ ವಸ್ತುಗಳನ್ನು ಬಳಸುವ ಪಟಾಕಿಗಳ ಬಳಕೆಯನ್ನು ನಿಯಂತ್ರಿಸುವ ಆದೇಶವನ್ನು ಸುಪ್ರೀಂ ಕೋರ್ಟ್ ಈಗಾಗಲೇ ಜಾರಿಗೊಳಿಸಿದೆ ಮತ್ತು ಪಟಾಕಿಗಳ ಮೇಲೆ ಸಂಪೂರ್ಣ … Continued

ವಿವಾದಿತ 3 ಕೃಷಿ ಕಾನೂನುಗಳನ್ನು ರದ್ದುಪಡಿಸಲು ಕೇಂದ್ರ ಸರ್ಕಾರಕ್ಕೆ ನ.26ರ ವರೆಗೆ ಗಡುವು ನೀಡಿದ ಟಿಕಾಯತ್‌

ಗಾಜಿಯಾಬಾದ್: ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾನೂನುಗಳನ್ನು ನವೆಂಬರ್ 26ರೊಳಗೆ ಕೇಂದ್ರಸರ್ಕಾರ ರದ್ದು ಪಡಿಸಬೇಕು. ಇಲ್ಲವಾದರೆ ದೆಹಲಿಯ ಗಡಿ ಭಾಗದಲ್ಲಿ ರೈತರು ಹೋರಾಟವನ್ನು ತೀವ್ರಗೊಳಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್‍ನ ಮುಖ್ಯಸ್ಥ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ … Continued

ಅಕ್ಟೋಬರ್‌ನಲ್ಲಿ 1.30 ಲಕ್ಷ ಕೋಟಿ ರೂ.ಜಿಎಸ್‌ಟಿ ಸಂಗ್ರಹ: ಜಿಎಸ್ ಟಿ ಜಾರಿಗೆ ಬಂದ ನಂತರ ಇದು ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹ

ನವದೆಹಲಿ: ಕೋವಿಡ್ ನಂತರ ಸತತ ನಾಲ್ಕನೇ ತಿಂಗಳು ಭಾರತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ 1 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಲ್ಲಿ 1.30 ಲಕ್ಷ ಕೋಟಿ ರೂ.ಗಳಷ್ಟು ಜಿಎಸ್‌ಟಿ ಸಂಗ್ರಹವಾಗಿದೆ. ಇದು ಜುಲೈ 2017 ರಲ್ಲಿ ಜಿಎಸ್ ಟಿ ಜಾರಿಗೆ ಬಂದ ನಂತರ ಸಂಗ್ರಹವಾದ ಎರಡನೇ ಅತಿ ಹೆಚ್ಚು ತೆರಿಗೆ … Continued

ಕಾರು ಅಪಘಾತ:ಮಿಸ್ ಕೇರಳ 2019 ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ಸಾವು

ತಿರುವನಂತಪುರಂ: ಕೇರಳದಲ್ಲಿ ನಿನ್ನೆ (ಭಾನುವಾರ) ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಖ್ಯಾತ ರೂಪದರ್ಶಿಯರು ಸಾವಿಗೀಡಾಗಿದ್ದಾರೆ. ಮಿಸ್ ಕೇರಳ 2019 ಪ್ರಶಸ್ತಿ ವಿಜೇತೆ ಆನ್ಸಿ ಕಬೀರ್ ಮತ್ತು ರನ್ನರ್ ಅಪ್ ಅಂಜನಾ ಶಾಜನ್ ಭಾನುವಾರು ಮಧ್ಯರಾತ್ರಿ ವೈಟ್ಟಿಲಾ-ಪಾಲಾರಿವಟ್ಟಂ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಕ್ಕರಪರಂಬುವಿನಲ್ಲಿ ಹಾಲಿಡೇ ಇನ್ ಬಳಿ … Continued

ಅಸ್ಸಾಂ: ಬುರ್ಖಾ ಧರಿಸದೆ ಜೀನ್ಸ್ ಧರಿಸಿ ಅಂಗಡಿಗೆ ಬಂದಿದ್ದಕ್ಕೆ ಮುಸ್ಲಿಂ ಯುವತಿಯನ್ನು ಅವಾಚ್ಯವಾಗಿ ನಿಂದಿಸಿ ಹೊರಹಾಕಿದ ಅಂಗಡಿ ಮಾಲೀಕ…!

ಮುಸ್ಲಿಂ ಯುವತಿಯೊಬ್ಬಳು ತಮ್ಮ ಅಂಗಡಿಗೆ ಬುರ್ಖಾದ ಬದಲು ಜೀನ್ಸ್ ಧರಿಸಿ ಬಂದಿದ್ದಕ್ಕೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ತಂದೆ ಮತ್ತು ಆತನ ಮಗನನ್ನು ಅಸ್ಸಾಂನ ಬಿಶ್ವನಾಥ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ತಂದೆ-ಮಗ ಇಬ್ಬರ ಮಾಲೀಕತ್ವದ ಅಂಗಡಿಯಲ್ಲಿ ಇಯರ್ ಫೋನ್ ಖರೀದಿಸಲು ಈ ಯುವತಿ ತೆರಳಿದ್ದಳು. ಆಕೆ ಬುರ್ಖಾ ಬದಲು ಜೀನ್ಸ್‌ ಧರಿಸಿದ್ದಕ್ಕೆ ಸೇವೆಯನ್ನು ನಿರಾಕರಿಸಿದ್ದಲ್ಲದೆ, ಇಬ್ಬರೂ ನಿಂದನೆ … Continued

ನಾಯಿಗೆ ಹಿಂಸೆ ನೀಡುತ್ತಿದ ವ್ಯಕ್ತಿ ಮೇಲೆ ದಾಳಿ ಮಾಡಿದ ಆಕಳು..ಅದರ ಕೋಪ ಹೇಗಿತ್ತೆಂದರೆ..!: ದೃಶ್ಯ ವಿಡಿಯೊದಲ್ಲಿ ಸೆರೆ

ಪ್ರಾಣಿಗಳು ಹೇಗೆ ಪ್ರೀತಿಗೆ ಸ್ಪಂದಿಸುತ್ತವೆಯೇ ಅದೇ ರೀತಿ ಹಿಂಸೆ ಮಾಡಿದರೆ ಅದನ್ನು ಸಹಿಸಿಕೊಳ್ಳುವುದಿಲ್ಲ, ತಮಗಷ್ಟೇ ಅಲ್ಲ, ಮತ್ತೊಂದು ಪ್ರಾಣಿಗೆ ಹಿಂಸೆ ಮಾಡುವುದನ್ನೂ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ಸಾಬೀತು ಪಡಿಸಿವೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ವ್ಯಕ್ತಿಯೊಬ್ಬ ನಾಯಿಗೆ ಕಿರುಕುಳ ನೀಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಯಿಯ ಕಿವಿಗಳನ್ನು ಹಿಂಡುತ್ತಿದ್ದ ವ್ಯಕ್ತಿಯನ್ನು ನೋಡಿದ ಅಲ್ಲೇ ಸಮೀಪದಲ್ಲಿದ್ದ … Continued

ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್‌ ಆರೋಪದ ನಂತರ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರನ್ನು ಭೇಟಿಯಾದ ಸಮೀರ್ ವಾಂಖೇಡೆ

ನವದೆಹಲಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಯ ಮುಂಬೈ ಘಟಕದ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರು ಸೋಮವಾರ (ನವೆಂಬರ್ 1) ದೆಹಲಿಯಲ್ಲಿ ರಾಷ್ಟ್ರೀಯ ಆಯೋಗದ ಪರಿಶಿಷ್ಟ ಜಾತಿ (National Commission Schedule Caste) ಅಧ್ಯಕ್ಷ ವಿಜಯ್ ಸಂಪ್ಲಾ ಅವರನ್ನು ಭೇಟಿ ಮಾಡಿದ್ದಾರೆ. ಸಮೀರ್ ವಾಂಖೇಡೆ ಅವರು ಮುಂಬೈನಲ್ಲಿ ಎನ್‌ಸಿಎಸ್‌ಸಿ ಉಪಾಧ್ಯಕ್ಷ ಅರುಣ್ ಹಲ್ದರ್‌ ಅವರನ್ನು ಭೇಟಿಯಾಗಿ … Continued