ಐಐಟಿ-ಮದ್ರಾಸ್‌ನಲ್ಲಿ ಮತ್ತೆ 18 ಜನರು ಕೋವಿಡ್-19 ಪಾಸಿಟಿವ್, ಎರಡೇ ದಿನದಲ್ಲಿ 30 ಜನರಿಗೆ ಸೋಂಕು

ಚೆನ್ನೈ: ಶುಕ್ರವಾರ ಐಐಟಿ-ಮದ್ರಾಸ್‌ನಲ್ಲಿ ಇನ್ನೂ ಹದಿನೆಂಟು ಜನರು ಕೋವಿಡ್‌-19 ಸೋಂಕಿಗೆ ಒಳಗಾಗಿದ್ದಾರೆ. ಗುರುವಾರ 12 ಜನರು ಸೋಂಕಿಗೆ ಒಳಗಾಗಿದ್ದರು. ಕ್ಯಾಂಪಸ್‌ನಲ್ಲಿ ಎರಡು ದಿನಗಳಲ್ಲಿ 30 ಜನರಿಗೆ ಸೋಂಕು ಕಂಡುಬಂದಿದೆ. ಎಲ್ಲಾ ಸಕಾರಾತ್ಮಕ ಪ್ರಕರಣಗಳು ಹಾಸ್ಟೆಲ್‌ನಿಂದ ವರದಿಯಾಗಿವೆ. ಐಐಟಿ ಆಡಳಿತ ಮತ್ತು ಆರೋಗ್ಯ ಇಲಾಖೆಯು ಐಐಟಿ ಕ್ಯಾಂಪಸ್‌ನಲ್ಲಿ ನೈರ್ಮಲ್ಯೀಕರಣದ ಪ್ರಯತ್ನಗಳನ್ನು ಹೆಚ್ಚಿಸಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸಲು ಆಡಳಿತವನ್ನು … Continued

ಭಾರತದೊಂದಿಗೆ ಯುಕೆ ಪಾಲುದಾರಿಕೆ ಬಿರುಗಾಳಿಯ ಸಮುದ್ರದಲ್ಲಿ ಒಂದು ಮಾರ್ಗದೀಪ: ಬ್ರಿಟನ್ ಪ್ರಧಾನಿ

ನವದೆಹಲಿ: ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಮತ್ತು ಸಾರ್ವಭೌಮತ್ವವನ್ನು ತುಳಿಯಲು ಪ್ರಯತ್ನಿಸುವ ನಿರಂಕುಶಾಧಿಕಾರದ ದೇಶಗಳಿಂದ ಜಗತ್ತು ಬೆದರಿಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತದೊಂದಿಗೆ ಬ್ರಿಟನ್‌ ಪಾಲುದಾರಿಕೆಯು “ಬಿರುಗಾಳಿಯ ಸಮುದ್ರ”ದಲ್ಲಿ “ಮಾರ್ಗದೀಪವಾಗಿದೆ”. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಶುಕ್ರವಾರ ಹೇಳಿದ್ದಾರೆ. ಎರಡೂ ರಾಷ್ಟ್ರಗಳು ಸಂಕೀರ್ಣವಾದ ಹೊಸ ಬೆದರಿಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಬ್ರಿಟನ್‌ ಪ್ರಧಾನಿ ಜಾನ್ಸನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ … Continued

ಜಮ್ಮುವಿನಲ್ಲಿ ಇಬ್ಬರು ಆತ್ಮಾಹುತಿ ದಾಳಿಕೋರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಜಮ್ಮು: ಶುಕ್ರವಾರ ಮುಂಜಾನೆ ಜಮ್ಮು ಜಿಲ್ಲೆಯ ಜಲಾಲಾಬಾದ್ ಸುಂಜ್ವಾನ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಜವಾನರು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ರಾತ್ರಿ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಸಿಐಎಸ್‌ಎಫ್‌ನ ಸಹಾಯಕ ಸಬ್-ಇನ್‌ಸ್ಪೆಕ್ಟರ್ … Continued

ಜಿಗ್ನೇಶ್ ಮೇವಾನಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್, 3 ದಿನಗಳ ಪೊಲೀಸ್ ಕಸ್ಟಡಿ

ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯವು ಗುರುವಾರ, ಏಪ್ರಿಲ್ 21 ರಂದು ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರ ಜಾಮೀನು ಅರ್ಜಿ ತಿರಸ್ಕರಿಸಿತು ಮತ್ತು ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನಾಥುರಾಮ್ ಗೋಡ್ಸೆ ಅವರ ಕುರಿತಾದ ಎರಡು ಟ್ವೀಟ್‌ಗಳು ವೈರಲ್ ಆಗಿದ್ದು, “ಶಾಂತಿಯನ್ನು ಕದಡುವ ಅಪಾಯವನ್ನುಂಟುಮಾಡುತ್ತವೆ” … Continued

ಮತ್ತೆ ಏರುತ್ತಿರುವ ಕೊರೊನಾ ಸೋಂಕು. ಭಾರತದಲ್ಲಿ 2,451 ಹೊಸದಾಗಿ ಕೋವಿಡ್‌-19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 2,451 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಹಾಗೂ 54 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಕೋವಿಡ್‌ಡ್‌-19 ಪ್ರಕರಣಗಳು ಮೇಲ್ಮುಖವಾದ ಪ್ರವೃತ್ತಿಯನ್ನು ತೋರಿಸುತ್ತಿದ್ದು, ಏಪ್ರಿಲ್ 22 ರಂದು ಶುಕ್ರವಾರ ವರದಿಯಾದ 2,451 ಹೊಸ ಕೊರೊನಾ ವೈರಸ್ ಪ್ರಕರಣಗಳು ನಿನ್ನೆ … Continued

ಅವರು ಯಾರು…ನನಗೆ ಗೊತ್ತಿಲ್ಲ : ಜಿಗ್ನೇಶ್ ಮೇವಾನಿ ಬಂಧನದ ಬಗ್ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಗುವಾಹತಿ/ಕೊಕ್ರಜಾರ್: ಉದ್ದೇಶಪೂರ್ವಕ ಟ್ವೀಟ್‌ನಿಂದ ಬಂಧನಕ್ಕೊಳಗಾದ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಗುಜರಾತ್‌ನಿಂದ ಅಸ್ಸಾಂಗೆ ಕರೆತಂದ ಕೆಲವೇ ಗಂಟೆಗಳ ನಂತರ ನನಗೆ ಮೇವಾನಿ ಯಾರೆಂಬುದು ಗೊತ್ತಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶರ್ಮಾ, ಮೇವಾನಿ ಯಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. … Continued

ನಮಗೆ ಪಾಠ ಮಾಡಬೇಡಿ: ಅಬು ಸಲೇಂ ಪ್ರಕರಣದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ನವದೆಹಲಿ: ತನಗೆ 2017ರಲ್ಲಿ ವಿಧಿಸಿದ್ದ ಜೀವಾವಧಿ ಶಿಕ್ಷೆ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ 1993ರ ಬಾಂಬೆ ಸ್ಫೋಟದ ಅಪರಾಧಿ ಅಬು ಸಲೇಂ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್, ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ. ಅಫಿಡವಿಟ್ ಸಂಪೂರ್ಣ ಅತಿರೇಕದಿಂದ ಕೂಡಿದ್ದು ನ್ಯಾಯಾಂಗಕ್ಕೆ ಪಾಠ ಮಾಡಲು ಹೊರಟಂತಿದೆ ಎಂದು ನ್ಯಾಯಮೂರ್ತಿಗಳಾದ … Continued

ಭಾರತದಲ್ಲಿ 5 ರಿಂದ 11 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ತಜ್ಞರ ಸಮಿತಿ ಶಿಫಾರಸು

ನವದೆಹಲಿ: ಭಾರತದ ಕೆಲ ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ವರದಿಗಳ ಮಧ್ಯೆ ಮಕ್ಕಳಿಗೆ ಹೆಚ್ಚು ಅಪಾಯ ಆಗುವ ಸಾಧ್ಯತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ(DCGI)ದ ವಿಷಯ ತಜ್ಞರ ಸಮಿತಿಯು 5 ರಿಂದ 11 ವರ್ಷದ ಮಕ್ಕಳಿಗೆ ಲಸಿಕೆ ನೀಡುವಂತೆ ಶಿಫಾರಸ್ಸು ಮಾಡಿದೆ. ದೇಶದಲ್ಲಿ 5 ರಿಂದ 11 ವರ್ಷದ ಮಕ್ಕಳಿಗೆ ಬಯೋಲಾಜಿಕಲ್-ಇ … Continued

ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರ ಹಿಂದೂ ಅವಿಭಜಿತ ಕುಟುಂಬದ ಪಿತ್ರಾರ್ಜಿತ ಆಸ್ತಿ ಉಡುಗೊರೆಯಾಗಿ ನೀಡಬಹುದು: ಸುಪ್ರೀಂ ಕೋರ್ಟ್

ನವದೆಹಲಿ: ಪ್ರೀತಿ ವಾತ್ಸಲ್ಯದಿಂದ ನೀಡುವ ಅವಿಭಕ್ತ ಕುಟುಂಬದ ಪಿತ್ರಾರ್ಜಿತ ಆಸ್ತಿ ‘ಭಕ್ತಿಯ ಉದ್ದೇಶʼ ಪದದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠವು ಹಿಂದೂ ತಂದೆ ಅಥವಾ ಹಿಂದೂ ಅವಿಭಜಿತ ಕುಟುಂಬದ ಇತರ ನಿರ್ವಹಣಾ ಸದಸ್ಯರಿಗೆ ಪೂರ್ವಜರ ಆಸ್ತಿಯನ್ನು ಕೇವಲ ‘ಭಕ್ತಿಯ ಉದ್ದೇಶಕ್ಕಾಗಿ’ … Continued

ಕರ್ನಾಟಕದ್ದು 40% ಕಮಿಷನ್ ಸರ್ಕಾರ, ದೆಹಲಿಯದ್ದು 0% ಎಎಪಿ ಸರ್ಕಾರ, ನಿಮಗೆ ಕರ್ನಾಟಕದಲ್ಲಿ 0% ಸರ್ಕಾರ ಬೇಡವೇ ?: ಜನತೆಗೆ ಕೇಜ್ರಿವಾಲ್‌ ಪ್ರಶ್ನೆ, ರಾಜ್ಯದಲ್ಲಿ ಚುನಾವಣಾ ತಯಾರಿಗೆ ಎಎಪಿ ಮುನ್ನುಡಿ

ಬೆಂಗಳೂರು: ಪ್ರತಿಪಕ್ಷಗಳು ಹಾಗೂ ರಾಜ್ಯದ ಗುತ್ತಿಗೆದಾರ ಸಂಘದಿಂದ ‘ಶೇ 40 ಪರ್ಸೆಂಟ್ ಕಮಿಷನ್ ಸರ್ಕಾರ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಆಡಳಿತದ ವಿರುದ್ಧ ಹೊರಿಸಲಾಗಿರುವ ಭ್ರಷ್ಟಾಚಾರದ ಆರೋಪದ ಮೇಲೆ ಎಎಪಿ ಕರ್ನಾಟಕದಲ್ಲಿ ಚುನಾವಣಾ ಕಣದ ಹುಡುಕಾಟದಲ್ಲಿದೆ. ಕರ್ನಾಟಕವು 2023 ರಲ್ಲಿ ಚುನಾವಣೆಗೆ ಹೋಗಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಗುರುವಾರ ನಡೆದ … Continued