ಝೀ ನ್ಯೂಸ್‌ ಒಪಿನಿಯನ್ ಪೋಲ್‌: ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ ಚುನಾವಣೆಯಲ್ಲಿ ಗೆಲ್ಲುವವರು ಯಾರು..?

ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ಐದು ರಾಜ್ಯಗಳು ವಿಧಾನಸಭಾ ಚುನಾವಣಾ ಕದನಕ್ಕೆ ಸಾಕ್ಷಿಯಾಗಲಿವೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾಗಲಿದ್ದು, ಝೀ ನ್ಯೂಸ್ ಡಿಸೈನ್‌ಬಾಕ್ಸಡ್‌ ನೊಂದಿಗೆ ಸೇರಿಕೊಂಡು ದೇಶದ ಅತಿದೊಡ್ಡ ಚುನಾವಣಾ ಪೂರ್ವ ಅಭಿಪ್ರಾಯ ಸಂಗ್ರಹ ‘ಜನತಾ ಕಾ ಮೂಡ್’ ಸಮೀಕ್ಷೆ ನಡೆಸಿದೆ. ಝೀ ನ್ಯೂಸ್ -ಡಿಸೈನ್‌ಬಾಕ್ಸಡ್‌ ಸಮೀಕ್ಷೆಯು … Continued

ತನ್ನ ಪ್ರಾಣ ಪಣಕ್ಕಿಟ್ಟು ಉಕ್ಕಿ ಹರಿಯುತ್ತಿರುವ ಹೊಳೆಯಲ್ಲಿ ಸಿಲುಕಿದ್ದ ನಾಯಿ ರಕ್ಷಿಸಿದ ಹೋಮ್ ಗಾರ್ಡ್..ದೃಶ್ಯ ವಿಡಿಯೊದಲ್ಲಿ ಸೆರೆ

ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಯಡಿ ಉದ್ಯೋಗಿಯಾಗಿರುವ ಹೋಂ ಗಾರ್ಡ್‌ನ ಮೈನವಿರೇಳಿಸುವ ವಿಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕ್ಲಿಪ್, ಉಕ್ಕಿ ಹರಿಯುವ ಹೊಳೆಯಲ್ಲಿ ಸಿಕ್ಕಿಬಿದ್ದ ನಾಯಿಯನ್ನು ರಕ್ಷಿಸಲು ಸಿಬ್ಬಂದಿ ತನ್ನ ಪ್ರಾಣ ಪಣಕ್ಕಿಟ್ಟು ಸಾಹಸ ಮಾಡಿದ್ದನ್ನು ತೋರಿಸುತ್ತದೆ. ಮುಜೀಬ್ ಎಂದು ಗುರುತಿಸಲಾದ ಹೋಮ್ ಗಾರ್ಡ್ ನಾಯಿ ರಕ್ಷಣೆಗೆ ಧಾವಿಸಿದ್ದಾರೆ … Continued

ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಪತಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ…!

ಆನಂದ್: ಆಘಾತಕಾರಿ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತ್ರಿವಳಿ ತಲಾಖ್ ನೀಡಿದ ಘಟನೆ ಗುಜರಾತಿನ ಆನಂದ್ ಜಿಲ್ಲೆಯಲ್ಲಿ ನಡೆದಿದೆ. ಈಗ ಪೊಲೀಸರು 28 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಉಮ್ರೆತ್ ತಾಲೂಕಿನ ನಿವಾಸಿಯಾದ 27 ವರ್ಷದ ಮಹಿಳೆ ತನ್ನ ಪೋಷಕರೊಂದಿಗೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದಳು. ಮಹಿಳೆ 2019 ರ ನವೆಂಬರ್‌ನಲ್ಲಿ ಮಹಿಸಾಗರ್ … Continued

ವಿದೇಶಾಂಗ ಸಚಿವ ಜೈಶಂಕರಗೆ ಕೊರೊನಾ ಸೋಂಕು

ನವದೆಹಲಿ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಅವರಿಗೆ ಗುರುವಾರ ಕೋವಿಡ್-19 ಸೋಂಕು ದೃಢಪಟ್ಟಿದೆ. ಟ್ವಿಟ್ಟರಿನಲ್ಲಿ ಮಾಹಿತಿ ನೀಡಿರುವ ಅವರು, ಇತ್ತೀಚೆಗೆ ತಮ್ಮ ಸಂಪರ್ಕಕ್ಕೆ ಬಂದವರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ನನಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳಬೇಕು ಎಂದು ವಿನಂತಿಸುತ್ತೇನೆ ಎಂದು ಜೈಶಂಕರ್ … Continued

ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಸುಧಾರಣೆ: ವೆಂಟಿಲೇಟರ್ ತೆಗೆದ ವೈದ್ಯರು

ಮುಂಬೈ: ಪ್ರಸ್ತುತ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರು ಈಗ ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದ್ದು, ಅವರಿಗೆ ವೆಂಟಿಲೇಟರ್‌ ತೆಗೆಯಲಾಗಿದೆ. ಲತಾ ಮಂಗೇಶ್ಕರ್‌ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಮುಂದುವರಿದಿದೆ ಎಂದು ಕುಟುಂಬದ ಹೇಳಿಕೆ ತಿಳಿಸಿದೆ. ಪ್ರಸ್ತುತ, ಅವರು ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. … Continued

ಕೋವಿಶೀಲ್ಡ್, ಕೊವಾಕ್ಸಿನ್ ‌ಲಸಿಕೆಗೆ ಮಾರುಕಟ್ಟೆ ಅನುಮೋದನೆ ನೀಡಿದ ಡಿಸಿಜಿಐ, ಆದರೆ ಷರತ್ತುಗಳು ಅನ್ವಯ:ವರದಿ

ನವದೆಹಲಿ: ಕೊರೊನಾ ಸೋಂಕು ತಡೆಗೆ ನೀಡಲಾಗುವ ಕೋವಿಶೀಲ್ಡ್ ಮತ್ರು ಕೊವಾಕ್ಸಿನ್ ಲಸಿಕೆಗೆ ಭಾರತೀಯ ಔಷಧ ಮಹಾನಿಯಂತ್ರಣ ನಿರ್ದೇಶನಾಲಯ ಇಂದು, ಗುರುವಾರ ಮಾರುಕಟ್ಟೆ ಅನುಮೋದನೆ ನೀಡಿದೆ. ಹೊಸ ಔಷಧಗಳು ಮತ್ತು‌‌ ಕ್ಲಿನಿಕಲ್ ಪ್ರಯೋಗಗಳ ನಿಯಮ-2019ರ ನಿಯಮ ಅಡಿಯಲ್ಲಿ ಎರಡೂ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಮಾರುಕಟ್ಟೆ ಅನುಮೋದನೆ ದೊರೆತ ಮಾತ್ರಕ್ಕೆ ಈ ಎರಡೂ ಲಸಿಕೆಗಳು ಜನರಿಗೆ ನೇರವಾಗಿ ಕೈಗೆ … Continued

ಏರ್ ಇಂಡಿಯಾ ಅಧಿಕೃತವಾಗಿ ಮತ್ತೆ ಟಾಟಾ ಅಧೀನಕ್ಕೆ

ನವದೆಹಲಿ: ಏರ್ ಇಂಡಿಯಾ ಗುರುವಾರ ಮತ್ತೆ ಅಧಿಕೃತವಾಗಿ ಟಾಟಾಗಳ ತೆಕ್ಕೆಗೆ ಬಂದಿದೆ. ಗುರುವಾರ ಸಂಜೆ ಸರ್ಕಾರವು ಅಧಿಕೃತವಾಗಿ ಪ್ರಕಟಿಸಿದ ನಂತರ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಏರ್ ಇಂಡಿಯಾವನ್ನು ಟಾಟಾ ಗುಂಪಿನ ಮಡಿಲಿಗೆ ಮರಳಿ ಪಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ … Continued

9 ದಿನಗಳ ನಂತರ ಅರುಣಾಚಲದ ಬಾಲಕನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದ ಚೀನಾದ ಸೇನೆ

ನವದೆಹಲಿ: ಚೀನಾದ ಸೇನೆಯು ಅರುಣಾಚಲ ಪ್ರದೇಶದ 17 ವರ್ಷದ ಬಾಲಕ ಮಿರಾಮ್ ಟ್ಯಾರೋನ್‌ ಎಂಬಾತನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. “ಅವರ ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ” ಎಂದು ಕೇಂದ್ರ ಕಾನೂನು ಮತ್ತು ನ್ಯಾಯಮೂರ್ತಿ ಕಿರಣ್ ರಿಜಿಜು ಗುರುವಾರ, (ಜನವರಿ 28) ಹೇಳಿದ್ದಾರೆ. ಅರುಣಾಚಲ ಪ್ರದೇಶದ ಸಿಯುಂಗ್ಲಾ ವ್ಯಾಪ್ತಿಯ ಲುಂಗ್ಟಾ ಜೋರ್ ಪ್ರದೇಶದ 17 … Continued

ರಾಷ್ಟ್ರ ರಾಜಧಾನಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ…! ವಿಡಿಯೊ ವೈರಲ್‌ ನಂತರ ನಾಲ್ವರ ಬಂಧನ

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಕೂದಲು ಕತ್ತರಿಸಿ ಮುಖಕ್ಕೆ ಮಸಿ ಬಳಿದ ಆಕೆಯ ನೆರೆಹೊರೆಯವರು ಅವಳನ್ನು ಪರೇಡ್‌ ಮಾಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ..! ಅವಳನ್ನು ಪರೇಡ್‌ ಮಾಡಿದ್ದಲ್ಲದೆ ಹರ್ಷೋದ್ಗಾರದ ನಡುವೆ ಥಳಿಸಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗ ಇಂದು, ಗುರುವಾರ ತಿಳಿಸಿದೆ. ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ. ಮಹಿಳೆಯನ್ನು … Continued

ಜಗತ್ತಿನ 2ನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದ ಟಿಸಿಎಸ್

ನವದೆಹಲಿ: ಭಾರತೀಯ ಹೆಮ್ಮೆಯ ಸಂಸ್ಥೆ, ಟಿಸಿಎಸ್ ಜಗತ್ತಿನ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ. ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ 2022ರ ಪ್ರಮುಖ 500 ಐಟಿ ಸೇವಾ ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಇನ್ ಫೋಸಿಸ್ ಕಂಪನಿ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಜಗತ್ತಿನ ಐದು ಪ್ರಮುಖ ಕಂಪನಿಗಳಲ್ಲಿ ಎರಡು ಭಾರತೀಯ ಕಂಪನಿಗಳು ಸ್ಥಾನ … Continued