ನವದೆಹಲಿ-ಹಾಂಗ್ ಕಾಂಗ್ ವಿಮಾನದಲ್ಲಿದ್ದ 49 ಪ್ರಯಾಣಿಕರಿಗೆ ಕೊರೊನಾ ಸೋಂಕು

  ನವ ದೆಹಲಿಯಿಂದ ಹಾಂಗ್ ಕಾಂಗ್‌ಗೆ ಹಾರಾಟ ನಡೆಸುತ್ತಿದ್ದ ಕನಿಷ್ಠ 49 ಪ್ರಯಾಣಿಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಹಾಂಗ್ ಕಾಂಗ್‌ ಭಾರತದಿಂದ ಎಲ್ಲಾ ವಿಮಾನಗಳ ಮೇಲೆ ತುರ್ತು ನಿಷೇಧ ಜಾರಿಗೆ ತಂದಿದೆ. ಕೊರೊನಾ ಸೋಂಕಿಗೆ ಒಳಗಾದ ಪ್ರಯಾಣಿಕರೆಲ್ಲರೂ ಏಪ್ರಿಲ್ 4 ರಂದು ಭಾರತೀಯ ಆಪರೇಟರ್ ವಿಸ್ತಾರಾ ನಡೆಸುತ್ತಿದ್ದ ವಿಮಾನದಲ್ಲಿ ಹಾಂಗ್ ಕಾಂಗ್‌ಗೆ … Continued

ಭಾರತಕ್ಕೆ ಎಲ್ಲ ಪ್ರಯಾಣವನ್ನು ತಪ್ಪಿಸಿ: ತನ್ನ ನಾಗರಿಕೆರಿಗೆ ಅಮೆರಿಕ ಸಲಹೆ

ಯುನೈಟೆಡ್ ಸ್ಟೇಟ್ಸ್ ಆಫ್ ನ್ಯಾಷನಲ್ ಪಬ್ಲಿಕ್ ಹೆಲ್ತ್ ಏಜೆನ್ಸಿಯ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಷನ್ (ಸಿಡಿಸಿ) ಅಮೆರಿಕ ನಾಗರಿಕರಿಗೆ ಭಾರತದಲ್ಲಿ ಎಲ್ಲ ಪ್ರಯಾಣವನ್ನು ಸ್ಥಗಿತಗೊಳಿಸಲು ಸಲಹೆ ನೀಡಿದೆ. ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ಸಹ ಭಾರತದಲ್ಲಿ ಅಪಾಯಕ್ಕೆ ಒಳಗಾಗಬಹುದು ಎಂದು ಸಿಡಿಸಿ ಸೋಮವಾರ ನೀಡಿರುವ ಸಲಹೆಯಲ್ಲಿ ತಿಳಿಸಿದೆ. ಭಾರತದಲ್ಲಿ ಪ್ರಸ್ತುತ ಪರಿಸ್ಥಿತಿಯ ಕಾರಣ … Continued

ನಾಸಾ ಮಿಶನ್‌ ಮಂಗಳ; ಮತ್ತೊಂದು ಗ್ರಹದ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ ನಾಸಾ

ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪರ್ಸೆವರೆನ್ಸ್ ರೋವರ್ (Perseverance Rover) ಮೂಲಕ ಮಂಗಳನ ಅಂಗಳಕ್ಕೆ ತಲುಪಿದ್ದ ಇಂಜೆನ್ಯುಟಿ ಹೆಲಿಕ್ಯಾಪ್ಟರ್ (Ingenuity Helicopter)ಮೊದಲ ಹಾರಾಟ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸತತ ಆರು ವರ್ಷಗಳ ಪರಿಶ್ರಮದ ಬಳಿಕ ನಾಸಾ ಮಂಗಳ ಗ್ರಹದ ಮೇಲೆ ಫ್ಲೈಟ್ ಪರೀಕ್ಷೆ ನಡೆಸುವಲ್ಲಿ ಯಶಸ್ವಿಯಾಗಿದೆ. ನಾಸಾ ಈ ಐತಿಹಾಸಿಕ ಘಟನೆಯ … Continued

ಅಡೋಬ್‌ ಸ್ಥಾಪಕ, ಪಿಡಿಎಫ್‌ ಡೆವಲಪರ್ ಚಾರ್ಲ್ಸ್ ಚಕ್ ಗೆಶ್ಕೆ ನಿಧನ‌

ಅಮೆರಿಕ: ಕಂಪ್ಯೂಟರ್​ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತೀರಾ ಚಿರಪರಿಚಿತವಾಗಿರುವ ಪಿಡಿಎಫ್​, ಫೋಟೋಷಾಪ್​ ಸಾಫ್ಟ್​ವೇರ್​ಗಳನ್ನು ಅಭಿವೃದ್ಧಿಪಡಿಸಿರುವ ಅಡೋಬ್‌ ಕಂಪೆನಿ ಸಹಸಂಸ್ಥಾಪಕ ಚಾರ್ಲ್ಸ್ ಚುಕ್‌ಗೆಶ್ಕೆ (81 ವರ್ಷ )ನಿಧನರಾಗಿದ್ದಾರೆ. ಬರಹ ಅಥವಾ ಚಿತ್ರವನ್ನು ಪೋರ್ಟೆಬಲ್‌ ಡಾಕ್ಯುಮೆಂಟ್‌ ಫಾರ್ಮೆಟ್​ಗೆ (ಪಿಡಿಎಫ್‌)ಪರಿವರ್ತಿಸುವ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದ ಇವರು, ಪಿಡಿಎಫ್‌ನಂಥ ಸಾಫ್ಟ್​ವೇರ್​ನಿಂದಾಗಿ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರು. ಚುಕ್‌ಗೆಶ್ಕೆ 1982ರಲ್ಲಿ ವರ್ನಾಕ್‌ ಅಡೋಬ್‌ ಸಾಫ್ಟ್‌ವೇರ್‌ … Continued

ಪಾಕಿಸ್ತಾನದಲ್ಲಿ ಪೊಲೀಸರನ್ನೇ ಒತ್ತೆಯಾಳಾಗಿಸಿಕೊಂಡ ಇಸ್ಲಾಂ ಮೂಲಭೂತವಾದಿ ಪಕ್ಷದ ಸದಸ್ಯರು..!

ಲಾಹೋರ್: ಪಾಕಿಸ್ತಾನದ ಇಸ್ಲಾಂ ಮೂಲಭೂತವಾದಿಗಳು ಪೊಲೀಸರನ್ನೇ ಒತ್ತೆಯಾಳಾಗಿರಿಸಿಕೊಂಡು ಸರ್ಕಾರಕ್ಕೇ ಸೆಡ್ಡು ಹೊಡೆದಿರುವ ಘಟನೆ ವರದಿಯಾಗಿದೆ. ಪಾಕಿಸ್ತಾನದ ಇಸ್ಲಾಂ ಮೂಲಭೂತವಾದಿಗಳ ಪಕ್ಷ ‘ತೆಹ್ರೀಕ್‌-ಇ-ಲಬಾಯಿಕ್‌’ (ಟಿಎಲ್‌ಪಿ) ಕಾರ್ಯಕರ್ತರು ಮತ್ತು ಬೆಂಬಲಿಗರು ಹಿಂಸಾಚಾರ ನಡೆಸುತ್ತಿದ್ದು, ಈಗ ಅನೇಕ ಪೊಲೀಸರನ್ನೇ ಒತ್ತೆಯಾಳಾಗಿಸಿಕೊಂಡು ತಮ್ಮ ಬೇಡಿಕೆ ಈಡೇರಿಸಲು ಪಟ್ಟು ಹಿಡಿದಿದ್ದಾರೆ. ಎರಡು ಇಂಧನ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದಿರುವ ಟಿಎಲ್‌ಪಿ ಸದಸ್ಯರು ಪೆಟ್ರೋಲ್‌ ಬಾಂಬ್‌ಗಳನ್ನು … Continued

ಟ್ವಿಟರ್ ಡೌನ್ ?:ವಿಶ್ವಾದ್ಯಂತ ಬಳಕೆದಾರರಿಗೆ ಲಾಗ್ ಔಟ್ ಸಮಸ್ಯೆ, ಟ್ವೀಟ್ ಮಾಡಲು ವಿಫಲ

ಜನಪ್ರಿಯ ಮೈಕ್ರೋ-ಬ್ಲಾಗಿಂಗ್ ಅಪ್ಲಿಕೇಶನ್ ಟ್ವಿಟರ್ ವಿಶ್ವಾದ್ಯಂತ ಹೆಚ್ಚಿನ ಬಳಕೆದಾರರಿಗೆ ಲಾಗ್ ಔಟ್ ದೋಷಗಳು ಮತ್ತು ಇತರ ವೈಫಲ್ಯಗಳನ್ನು ವರದಿ ಮಾಡುವ ಮೂಲಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಸರ್ಚ್‌ ಟರ್ಮ್‌ ಮತ್ತು ಟ್ವೀಟ್‌ಗಳು ಲೋಡ್ ಆಗಲು ವಿಫಲವಾಗಿದೆ, ಟ್ವೀಟ್‌ಗಳನ್ನು ಹಿಂಪಡೆಯುವುದು, ವಿಶೇಷವಾಗಿ ತಮ್ಮ ಹೋಮ್ಪೇಜ್‌ ಅನ್ನು ರಿಫ್ರೆಶ್ ಮಾಡುವ ಸಮಯದಲ್ಲಿ ಹಲವಾರು ಸಮಸ್ಯೆಗಳು ಕಂಡುಬಂದಿವೆ ಎಂದು ವಿಶ್ವದಾದ್ಯಂತ ಹಲವಾರು … Continued

ನಮ್ಮಲ್ಲಿ ಸಾಧ್ಯವೇ..?: ಕೋವಿಡ್‌ ನಿಯಮ ಮುರಿದ ನಾರ್ವೆ ಪ್ರಧಾನಿಗೆ ಬಿತ್ತು ಅಪಾರ ದಂಡ..!

ಕೆಲವು ದೇಶಗಳಲ್ಲಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಅವರು ತಮ್ಮ ದೇಶದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ನಾರ್ವೆದೇಶದಲ್ಲಿ ಈ ವಿದ್ಯಮಾನ ನಡೆದಿದೆ. ಅಲ್ಲಿನ ಪ್ರಧಾನಿಗೆ ಪೊಲೀಸರು ದಂಡ ವಿಧಿಸಿರುವುದೇ ಅಲ್ಲಿನ ಜನ ಕಾನೂನುಗಳನ್ನು ಹೇಗೆ ಗೌರವಿಸುತ್ತಾರೆ ಎಂಬುದಕ್ಕೆ ಉತ್ತಮ ನಿದರ್ಶನ..! ನಮ್ಮ ದೇಶಕ್ಕೆ ಹೋಲಿಸಿದರೆ ಇದು ದೊಡ್ಡ ವಿಷಯವೇ ಅಲ್ಲ ಎಂದು … Continued

ಅಮೆರಿಕದಲ್ಲಿ ನಾಲ್ವರು ಸಿಕ್ಖರು ಸೇರಿ ಎಂಟು ಜನರ ಹತ್ಯೆ

ವಾಷಿಂಗ್ಟನ್: ಅಮೆರಿಕಾದಲ್ಲಿ ಭಾರತೀಯ ಮೂಲದವರನ್ನು ಗುರಿಯಾಗಿರಿಸಿಕೊಂಡು ಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂಡಿಯಾನಾ ಮೂಲದ ಯುವಕನೊಬ್ಬ ನಾಲ್ವರು ಸಿಕ್ಖರು ಸೇರಿದಂತೆ ಎಂಟು ಮಂದಿಯನ್ನು ಗುಂಡಿಟ್ಟುಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಇಂಡಿಯಾನಾ ಮೂಲದ 19 ವರ್ಷದ ಯುವಕ ಬ್ರಾಂಡನ್ ಸ್ಕಾಟ್ ಹೋಲ್ ಎಂಬಾತ ಭಾರತೀಯರೇ ಹೆಚ್ಚಾಗಿ ಕೆಲಸದಲ್ಲಿರುವ ಫೆಡ್‍ಎಕ್ಸ್ ಕೊರಿಯರ್ ಸರ್ವಿಸ್ ಸಂಸ್ಥೆಗೆ … Continued

ಭಾರತ, ಅಮೆರಿಕದ ಜೊತೆಗೆ ಆರ್ಥಿಕ ಸ್ಪರ್ಧೆಗೆ ಚೀನಾ ಜನನ ನಿರ್ಬಂಧ ತೆಗೆದುಹಾಕಬೇಕೆಂದ ವರದಿ..!

ವಯಸ್ಸಾದ ಜನಸಂಖ್ಯೆಯ ಸಮಸ್ಯೆಗಳನ್ನು ನಿಭಾಯಿಸಲು ಚೀನಾ ಎಲ್ಲಾ ಜನನ ನಿರ್ಬಂಧಗಳನ್ನು ತೆಗೆದುಹಾಕಬೇಕು ಮತ್ತು ಯುವ ಭಾರತ ಮತ್ತು ವಲಸೆ ಸ್ನೇಹಿ ಅಮೆರಿಕದೊಂದೊಗೆ ಆರ್ಥಿಕವಾಗಿ ಸ್ಪರ್ಧಿಸಲು ಯೋಜಿಸಬೇಕು ಎಂದು ಚೀನಾದ ಕೇಂದ್ರ ಬ್ಯಾಂಕ್ ವರದಿ ಹೇಳಿದೆ. ಚೀನಾ ದೇಶದ ಕೇಂದ್ರ ಬ್ಯಾಂಕ್, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಬಿಡುಗಡೆ ಮಾಡಿದ ಕಾರ್ಯಪತ್ರಿಕೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದು, ಚೀನಾದ … Continued

ಅಮೆರಿಕ: ಮತ್ತಿಬ್ಬರು ಭಾರತೀಯರಿಗೆ ಮಹತ್ವದ ಹುದ್ದೆ ನೀಡಿದ ಜೋ ಬಿಡೆನ್‌

ವಾಷಿಂಗ್ಟನ್: ಅಮೆರಿಕ ಸರ್ಕಾರದಲ್ಲಿ ಮತ್ತೆರಡು ಮಹತ್ವದ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಆಯ್ಕೆ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ. ಅಟಾರ್ನಿ ಜನರಲ್ ಹಾಗೂ ಕಾರ್ಯನಿರ್ವಾಹಕ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೆರಿಕನ್ ಮಹಿಳೆಯರನ್ನು ನಾಮಕರಣಗೊಳಿಸಿದ್ದೇವೆ ಎಂದು ಬೈಡೆನ್ ಹೇಳಿದ್ದಾರೆ. ಮೀರಾ ಜೋಶಿ ಹಾಗೂ ರಾಧಿಕಾ ಫಾಕ್ಸ್ ನಾಮಕರಣಗೊಳಿಸುವ ಮೂಲಕ ಬಡ್ತಿ ನೀಡಲಾಗಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ. ಮೀರಾ … Continued