ಮೈಸೂರು ‘ಭೂ ಹಗರಣ’ದ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

ಮೈಸೂರು: ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ಮಧ್ಯೆ ನಡೆದ ಜಟಾಪಟಿಯ ಮೂಲ ಎಂದು ಹೇಳಲಾದ ಮೈಸೂರಿನಲ್ಲಿ ನಡೆದ ಭೂ ಹಗರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಬಿಜೆಪಿ ಶಾಸಕರು, ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಸಚಿವ ಮತ್ತು ಜೆಡಿಎಸ್ ಶಾಸಕ ಸಾ. … Continued

ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ 2,000 ರೂ. ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ 2,000 ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಕೋವಿಡ್ -19 ಎರಡನೇ ಅಲೆಯಿಂದ ಜೀವನೋಪಾಯಕ್ಕೆ ತೊಂದರೆಯಾದವರಿಗೆ ರಾಜ್ಯ ಸರ್ಕಾರವು ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದೆ. ಇದರ ಅಡಿಯಲ್ಲಿ ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ 2,000 ರೂ ಬಿಡುಗಡೆ ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಪಡೆಯುವ ಯಾವುದೇ … Continued

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ

ಹಾವೇರಿ: ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, … Continued

ಕರ್ನಾಟಕದಲ್ಲಿ ಜೂನ್ 14 ರಿಂದ ಲಾಕ್‌ಡೌನ್‌ ತೆರವು:ಒಂದೆರಡು ದಿನಗಳಲ್ಲಿ ಸಿಎಂ ಬಿಎಸ್‌ವೈ ಘೋಷಣೆ..?

ಬೆಂಗಳೂರು; ರಾಜ್ಯದಲ್ಲಿ ಕೋವಿಡ್‌-19 ಸಂಬಂಧಿತ ಕಾರ್ಯಗಳ ನಿರ್ವಹಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಪ್ರಮುಖ ಸಭೆ ನಡೆಸಲು ಸಜ್ಜಾಗಿದ್ದಾರೆ. ಜೂನ್ 14 ರಂದು ಲಾಕ್‌ಡೌನ್ ಮುಗಿದ ನಂತರ ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಬಿಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯವನ್ನು ಅನ್ಲಾಕ್ ಮಾಡಲು ಯೋಜಿಸುತ್ತಿದೆ ಎಂದು ವರದಿಗಳು ಬಂದ ನಂತರವೇ ಈ ಸಭೆ … Continued

ಕರ್ನಾಟಕದಲ್ಲಿ 10 ಸಾವಿರಕ್ಕಿಂತ ಕಡಿಮೆ ಬಂದ ಕೊರೊನಾ ದೈನಂದಿನ ಸೋಂಕು, ಸಾವಿನಲ್ಲೂ ಇಳಿಕೆ..!

ಬೆಂಗಳೂರು :ಕರ್ನಾಟಕದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ (ಮಂಗಳವಾರ) 9808 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,17,289 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಕೊರೊನಾ ಸೋಂಕಿಗೆ ಕಳೆದ 24 ಗಂಟೆಯಲ್ಲಿ 179 ಸೋಂಕಿತರು ಮೃತಪಟ್ಟಿದ್ದಾರೆ, ಇದುವರೆಗೆ 32,099 ಸೋಂಕಿತರು … Continued

ಕೋವಿಡ್‌ನಿಂದ ಸಂಕಷ್ಟ: ಹವ್ಯಕ ಮಂಡಳದಿಂದ 1.51 ಲಕ್ಷ ರೂ. ದೇಣಿಗೆ

ಬೆಳಗಾವಿ; ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್, ಸೇವಾಭಾರತಿ ಹಾಗೂ ಬಜರಂಗ ದಳ ಸಂಯುಕ್ತವಾಗಿ ನಡೆಸುತ್ತಿರುವ ಸೇವಾ ಕೇಂದ್ರಕ್ಕೆ ಇಲ್ಲಿನ ಹವ್ಯಕ ಮಂಡಳದ ಪ್ರಮುಖರು 1.51 ಲಕ್ಷ ದೇಣಿಗೆ ನೀಡಿದರು. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಸಮಾಜದವರು 3 ಲಕ್ಷ ರೂ.ಗಳ ವಂತಿಗೆಯನ್ನು ಸೇವಾಭಾರತಿ ಸಂಸ್ಥೆ ಮೂಲಕ ನೀಡಿದ್ದರು. ಈ ಬಾರಿ … Continued

ಸದ್ಯಕ್ಕೆ ಬಸ್‌ ದರ ಹೆಚ್ಚಳ ಮಾಡುವುದಿಲ್ಲ :ಡಿಸಿಎಂ ಸವದಿ

ಬೆಂಗಳೂರು:ಅಧಿಕಾರಿಗಳು ಬಸ್‌ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷಣ ಸವದಿ ಹೇಳಿದ್ದಾರೆ. ಬಿಎಂಟಿಸಿ ಸೇರಿ ನಾಲ್ಕು ಸಾರಿಗೆ ನಿಗಮಗಳಿವೆ. ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ. ಬಡವರು ಬಸ್ಸಿನಲ್ಲಿ ಓಡಾಡುತ್ತಿದ್ದಾರೆ. ಮೊದಲೇ ಕೋವಿಡ್‌ ಸಂಕಷ್ಟ. ಹೀಗಾಗಿ ಅವರಿಗೆ ಮತ್ತೆ ಕಷ್ಟ … Continued

ವಸತಿ ಪ್ರದೇಶಗಳಿಗೆ ಪ್ರವೇಶಿಸುವ ಕೋತಿಗಳಿಗೆ ಹಾನಿಯಾಗಬಾರದು, ನೈಸರ್ಗಿಕ ಆವಾಸ ಸ್ಥಾನಕ್ಕೆ ಸ್ಥಳಾಂತರಿಸಿ: ಹೈಕೋರ್ಟ್

ಬೆಂಗಳೂರು; ವಸತಿ ಪ್ರದೇಶಕ್ಕೆ ಪ್ರವೇಶಿಸುವ ಕೋತಿಗಳಿಗೆ ಯಾವುದೇ ತೊಂದರೆಯಾಗಬಾರದು ಮತ್ತು ಅವುಗಳನ್ನು ತಮ್ಮ ನೈಸರ್ಗಿಕ ಆವಾಸಸ್ಥಾನಕ್ಕೆ ಸ್ಥಳಾಂತರಿಸುವಂತೆ ರಾಜ್ಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಆಹಾರ ಕೋರಿ ಕೋತಿಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವುರಿಂದಾಗಿ ನಾಗರಿಕರಿಗೆ ಅಪಾಯವಿದೆ ಎಂಬ ಭೀತಿಯನ್ನು ಎತ್ತಿ ತೋರಿಸುವ ಮನವಿಯನ್ನು ನ್ಯಾಯಾಲಯವು ಆಲಿಸುತ್ತಿತ್ತು, “ಕೋತಿಗಳು ಯಾವುದೇ ರೀತಿಯಲ್ಲಿ … Continued

ಮಾಜಿ ಸಚಿವ, ಹಾನಗಲ್ ಶಾಸಕ ಸಿ.ಎಂ.ಉದಾಸಿ ನಿಧನ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದಂತ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿಎಂ ಉದಾಸಿ ಚಿಕಿತ್ಸೆ ಫಲಕಾರಿಯಾಗದೇ ನಿಧರಾಗಿದ್ದಾರೆ. ಸಿಎಂ ಉದಾಸಿ ಮಧ್ಯಾಹ್ನ 2.54ಕ್ಕೆ ಕೊನೆಯುಸಿರೆಳೆದಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಉದಾಸಿ ಪುತ್ರ ಹಾಗೂ ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಹೇಳಿಕೆ ನೀಡಿದ್ದಾರೆ. ಕಳೆದ ಕೆಲ … Continued

ಮಹತ್ವದ ನಿರ್ಧಾರ.. ಆಗಸ್ಟ್‌ 28, 29ರಂದು ಸಿಇಟಿ ಪರೀಕ್ಷೆ, ವೃತ್ತಿ ಕೋರ್ಸುಗಳಿಗೆ ಸಿಇಟಿ ಅಂಕ ಮಾತ್ರ ಪರಿಗಣನೆ

ಬೆಂಗಳೂರು : ವೃತ್ತಿಪರ ಕೋರ್ಸುಗಳ ಆಯ್ಕೆಗಾಗಿ ನಡೆಯುವಂತ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಆಗಸ್ಟ್ 28, 29 ರಂದು ನಡೆಯಲಿದೆ ಹಾಗೂ ವೃತ್ತಿ ಕೋರ್ಸುಗಳಿಗೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎಸ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಸಿಇಟಿ ಪರೀಕ್ಷೆ ಈ ಮೊದಲಿನಂತೆಯೇ … Continued