ತಿಂಗಳಿಗೊಮ್ಮೆ ರಾಜ್ಯದಲ್ಲಿ ಸ್ಫೋಟಕಗಳ ಆಡಿಟ್:ಬೊಮ್ಮಾಯಿ

ದಾವಣಗೆರೆ:ರಾಜ್ಯದಲ್ಲಿನ ಸ್ಫೋಟಕಗಳನ್ನು ಪತ್ತೆ ಹಚ್ಚಲು ಎಲ್ಲ ಗಣಿಗಾರಿಕೆ ಕೇಂದ್ರಗಳ ಮೇಲೆ ವಿಶೇಷ ಕಾರ್ಯಾಚರಣೆ ಮಾಡಿ ಒಟ್ಟಾರೆ ಸ್ಪೋಟಕಗಳ ಆಡಿಟ್ ಮಾಡಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗುರುವಾರ ದಾವಣಗೆರೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗಣಿ ಮತ್ತು ಗೃಹ ಇಲಾಖೆ ಅಧಿಕಾರಿಗಳ ತಂಡಗಳು ಜಂಟಿಯಾಗಿ ಈ … Continued

ಬಿಎಂಟಿಸಿ ಪ್ರಯಾಣ ದರ ಹೆಚ್ಚಳ ಈಗ ನಿಚ್ಚಳ

ಬೆಂಗಳೂರು: ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಬಿಸಿ ಸದ್ಯದಲ್ಲೇ ತಟ್ಟುವ ಸಾಧ್ಯತೆ ನಿಚ್ಚಳವಾಗಿದೆ. ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಎಂಟಿಸಿ ದರ ಏರಿಕೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳಾಗುತ್ತದೆ ಎಂದು ಹೇಳಿದ್ದಾರೆ. ಬಿಎಂಟಿಸಿ ಬಸ್‌ ಹೊರತುಪಡಿಸಿ ಉಳಿದ ರಸ್ತೆ ಸಾರಿಗೆ … Continued

ಕಾಂಗ್ರೆಸ್‌ಗೆ ಬಾಹ್ಯ ಬೆಂಬಲದ ಪತ್ರ ನೀಡಿದ ಶರತ್‌ ಬಚ್ಚೇ ಗೌಡ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶಾಸಕ ಶರತ್ ಬಚ್ಚೇಗೌಡ ಗುರುವಾರ (ಫೆ.೨೫) ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‍ಗೆ ಬಾಹ್ಯ ಬೆಂಬಲ ನೀಡುವ ಅಧಿಕೃತ ಪತ್ರ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದ ಆವರಣದಲ್ಲಿ ನಡೆದ ಕಾರ್ಕ್ರಮದಲ್ಲಿ ಶರತ್ ಬಚ್ಚೇಗೌಡ ನೀಡಿದ ಬಾಹ್ಯ ಬೆಂಬಲವನ್ನು ಕಾಂಗ್ರೆಸ್ ಶಾಸಕಾಂಗ … Continued

ಡಿಪ್ಲೊಮಾ ಪಠ್ಯ ಕ್ರಮದಲ್ಲಿ ಆಮೂಲಾಗ್ರ ಪರಿಷ್ಕರಣೆ

ಮಂಗಳೂರು: ಶಿಕ್ಷಣ ಕ್ಷೇತ್ರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಅನೇಕ ಕ್ರಾಂತಿಕಾರಕ ಸುಧಾರಣೆಗಳನ್ನು ರಾಜ್ಯ ಸರಕಾರ ಕೈಗೊಂಡಿದ್ದು, ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಮಂಗಳೂರಿನಲ್ಲಿಂದು ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ʼಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌, ರೀಸರ್ಚ್‌ ಡಿಸೈನ್‌ ಲ್ಯಾಬ್‌ ಮತ್ತು ಇಂಡಸ್ಟ್ರೀ … Continued

ತಹಶೀಲ್ದಾರನ ಕೊಲೆಗೆ ಯತ್ನ: ತಂದೆ-ಮಗನ ಬಂಧನ

ಬಾಗಲಕೋಟೆ: ಸಹೋದರರ ನಡುವಿನ ಆಸ್ತಿ ವಿವಾದದಲ್ಲಿ ಆಸ್ತಿ ಪತ್ರದಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಘಟನೆ ಜಮಖಂಡಿಯಲ್ಲಿ ನಡೆದಿದೆ. ರೈತ ಲಕ್ಷ್ಮಣ ಕಿತ್ತೂರು (70) ಹಾಗೂ ಮಗ ಬಸವರಾಜ್‌ ಕಿತ್ತೂರು (48) ಎಂಬುವರಿಂದ ಕೃತ್ಯ ನಡೆದಿದೆ. ಘಟನೆ ಖಂಡಿಸಿ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಪ್ರತಿಭಟನೆ … Continued

ಬಿಜೆಪಿ ರಾಜ್ಯ ಘಟಕದ ವಕ್ತಾರರ ನೇಮಕ

ಬೆಂಗಳೂರು: ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ವಕ್ತಾರರ ನೇಮಕ ಮಾಡಲಾಗಿದೆ. ಮುಖ್ಯ ವಕ್ತಾರರಾಗಿ ಕ್ಯಾ.ಗಣೇಶ ಕಾರ್ಣಿಕ, ವಕ್ತಾರರಾಗಿ ಜಗ್ಗೇಶ, ರಾಜೂಗೌಡ, ರಾಜಕುಮಾರ ಪಾಟೀಲ ತೇಲ್ಕೂರ, ಚಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಗಿರಿಧರ ಉಪಾಧ್ಯಾಯ, ಪಿ.ರಾಜೀವ, 0ಎಂ.ಬಿ.ಜಿರಲಿ, ಮಹೇಶ್‌ ನೇಮಕಗೊಂಡಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ತಿಳಿಸಿದ್ದಾರೆ.

ವಯಸ್ಸಿನ ಕಾರಣ: ಖ್ಯಾತ ವಕೀಲ ನಾರಿಮನ್ ಸೇವೆಯಿಂದ ನಿವೃತ್ತಿ..?

ಬೆಂಗಳೂರು: ದಶಕಗಳ ಕಾಲ ನ್ಯಾಯಾಲಯಗಳಲ್ಲಿ ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ಜಲ ವಿವಾದಗಳ ಬಗ್ಗೆ ಸಮರ್ಪಕವಾಗಿ ವಾದ ಮಂಡಿಸಿದ್ದ ಖ್ಯಾತ ವಕೀಲ ಪಾಲಿ ನಾರಿಮನ್ ಸೇವೆಯಿಂದ ನಿವೃತ್ತರಾಗಲಿದ್ದಾರೆ. ತಮಗೆ ವಯಸ್ಸಾದ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ತಾವು ಕರ್ನಾಟಕದ ಪರ ವಾದ ಮಂಡಿಸಲು ಸಾಧ್ಯವಾಗದ ಕಾರಣ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಬೇರೆ ವಕೀಲರನ್ನು ನೇಮಿಸಿಕೊಳ್ಳಿ ಎಂದು ನಾರಿಮನ್ ರಾಜ್ಯ … Continued

ಪಂಚಮಸಾಲಿ ಸಮಾಜ ೨ಎಗೆ ಸೇರ್ಪಡೆ: ಇಂದು ಸಂಜೆ ಮಹತ್ವದ ಸಭೆ

ಬೆಂಗಳೂರು: ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲೇಬೇಕೆಂಬ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಇಂದು (ಫೆ.೨೫ರಂದು) ಸಂಜೆ ಮಹತ್ವದ ಸಭೆ ಇಲ್ಲಿ ನಡೆಯಲಿದೆ. ಈ ಸಭೆಗೆ ಸಚಿವರು, ಶಾಸಕರು, ಸಮಾಜದ ಮುಖಂಡರು ಸೇರಿದಂತೆ ಅನೇಕರನ್ನು ಕೂಡಲಸಂಗಮ ಮಠದ ಜಯ ಮೃತ್ಯುಂಜಯ ಸ್ವಾಮೀಜಿಗಳು ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ … Continued

ಚಿಕ್ಕಬಳ್ಳಾಪುರ ಜಿಲೆಟಿನ್‌ ಸ್ಫೋಟ: ಬಿಜೆಪಿ ಮುಖಂಡನ ಬಂಧನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ಸಂಭವಿಸಿದ ಜಿಲೆಟಿನ್ ಸ್ಫೋಟ ದುರಂತಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಿಜೆಪಿ ಮುಖಂಡ ಗುಡಿಬಂಡೆ ನಾಗರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕ್ವಾರಿಯ ಮಾಲೀಕರಲ್ಲೊಬ್ಬನಾದ ಗುಡಿಬಂಡೆ ನಾಗರಾಜ್‌ನನ್ನು ಪೊಲೀಸರು ಬಂಧಿಸಿದ್ದು, ನಾಗರಾಜ್ ಜೊತೆ ಬಾಂಬ್ ಸ್ಫೋಟಕಕಾರ ತಮಿಳುನಾಡು ಮೂಲದ ಗಣೇಶ್ ಎಂಬಾತನನ್ನೂ ಬಂಧಿಸಲಾಗಿದೆ. ಒಟ್ಟು ಈವರೆಗೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು … Continued

ಸಂಸದರು, ಸಚಿವರು, ಶಾಸಕರಿಗೆ ಹೊಸ ಕಾರು ಖರೀದಿಗೆ ಸರ್ಕಾರದ ಸಮ್ಮತಿ..!

ಬೆಂಗಳೂರು: ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆಪವೊಡ್ಡುವ ರಾಜ್ಯ ಸರ್ಕಾರ ಇಂತಹ ಸಂದರ್ಭದಲ್ಲೂ ಸಚಿವರು ಮತ್ತು ಶಾಸಕರಿಗಾಗಿ ಹೊಸ ಕಾರುಗಳ ಖರೀದಿಗೆ ಅನುಮತಿ ನೀಡಿದೆ. 32 ಸಚಿವರು ಹಾಗೂ 28 ಸಂಸದರಿಗೆ ತಲಾ 23 ಲಕ್ಷ ರೂ.ಗಳಂತೆ ಹೊಸ ಕಾರುಗಳನ್ನು ಖರೀದಿಸಲು ಸಮ್ಮತಿಸಿದೆ. ವಿಶೇಷವೆಂದರೆ ಈ ಹಿಂದೆ ಇದೇ ಕಾರುಗಳನ್ನು ಖರೀದಿಸಲು 21 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿತ್ತು. … Continued