ಮದುವೆಗೆ ಹುಡುಗಿ ಸಿಕ್ಕಿಲ್ಲವೆಂದು ಬೇಸತ್ತು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ..!

ಬೆಂಗಳೂರು: ಮದುವೆಯಾಗಲು ಹುಡುಗಿ ಸಿಗದಿರುವುದಕ್ಕೆ ಬೇಸತ್ತು ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ಅಂಧ್ರದ ಮಡಕಶಿರಾ ಮೂಲದ ನವೀನ್ (31) ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಎಡಗೈ ಸ್ವಾಧೀನ ಇಲ್ಲಿದಿರುವ ಸಮಸ್ಯೆಯಿಂದಲೂ ಯುವಕ ಬಳಲುತ್ತಿದ್ದ ಎಂದು ಎನ್ನಲಾಗಿದೆ. ಗಾರ್ಮೆಂಟ್ಸ್​ … Continued

ಸಂಜೆ 7 ರಿಂದ ಬೆಳಿಗ್ಗೆ 6ರ ವರೆಗೆ ಮಹಿಳಾ ಉದ್ಯೋಗಿಗಳಿಗೆ ಕೆಲಸ ಮಾಡಿಸುವಂತಿಲ್ಲ : ಯೋಗಿ ಸರ್ಕಾರದ ಆದೇಶ

ಲಕ್ನೋ: ಉತ್ತರ ಪ್ರದೇಶ ಸರ್ಕಾರವು ಮಹಿಳಾ ಉದ್ಯೋಗಿಗಳ ಲಿಖಿತ ಒಪ್ಪಿಗೆ ಇಲ್ಲದೆ ಸಂಜೆ 7 ಗಂಟೆಯಿಂದ ಮತ್ತು ಬೆಳಿಗ್ಗೆ 6 ಗಂಟೆಯ ಮೊದಲು ಕೆಲಸ ಮಾಡುವಂತೆ ಒತ್ತಾಯಿಸಬಾರದು ಎಂದು ರಾಜ್ಯದ ಉದ್ಯೋಗದಾತರಿಗೆ ಆದೇಶಿಸಿದೆ. ಅಲ್ಲದೆ, ಸರ್ಕಾರವು ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವಂತೆ ಉದ್ಯೋಗದಾತರನ್ನು ಕೇಳಿದೆ ಈ ಕುರಿತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಆದೇಶ … Continued

ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ: ಸ್ನೇಹಿತನ ಬಂಧನ

ಉಡುಪಿ: ಕುಂದಾಪುರದ ಖಾಸಗಿ ಆಸ್ಪತ್ರೆ ಮಾಲಕ ಹಾಗೂ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಲೆಕ್ಕಪರಿಶೋಧಕ ಮೊಳಹಳ್ಳಿ ಗಣೇಶ ಶೆಟ್ಟಿ ಅವರನ್ನು ಬಂಧಿಸಲಾಗಿದೆ.ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರದಲ್ಲಿ ನಡೆದ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಗೆಳೆಯನಿಂದ ಮೋಸಕ್ಕೊಳಗಾದ ಉದ್ಯಮಿ ಕಟ್ಟೆ ಭೋಜಣ್ಣ, ಗೆಳೆಯನ ಮನೆಯ ಮುಂದೆ ಹೋಗಿ ಗುಂಡಿಕ್ಕಿಕೊಂಡು … Continued

ಎಸ್‌ಡಿಪಿಐ, ಪಿಎಫ್‌‌ಐ ಸಂಘಟನೆ ಕಾಂಗ್ರೆಸ್ ಬೆಳೆಸಿದ ಕೂಸು: ಪ್ರಹ್ಲಾದ ಜೋಶಿ ವಾಗ್ದಾಳಿ

ಹುಬ್ಬಳ್ಳಿ: ಎಸ್‌ಡಿಪಿಐ ಸಂಘಟನೆಯ ಹಿಂದೆ ಕಾಂಗ್ರೆಸ್ ನಾಯಕರ ಬೆಂಬಲವಿದ್ದು, ಈ ಸಂಘಟನೆ ಕಾಂಗ್ರೆಸ್ ಬೆಳೆಸಿದ ಕೂಸು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್‌ಡಿಪಿಐ, ಪಿಎಫ್‌‌ಐ ಸಂಘಟನೆಗಳನ್ನು ಕಾಂಗ್ರೆಸ್, ಎಡಪಕ್ಷದವರು ಬೆಳೆಸಿದ್ದಾರೆ. ಈ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಸಂಘಟನೆಗಳ ಮೇಲಿನ … Continued

ವಕೀಲೆ ಮೇಲೆ ಹಲ್ಲೆ ಪ್ರಕರಣ: ಹಲ್ಲೆಗೂ ಮೊದಲು ಮಹಾಂತೇಶಗೆ ಚಪ್ಪಲಿ ಏಟು; ವಿವರಣೆ ನೀಡುವಂತೆ ಸಂಗೀತಾಗೆ ಕೆಎಸ್‌ಬಿಸಿ ನೋಟಿಸ್‌

ಬಾಗಲಕೋಟೆಯಲ್ಲಿ ಮಹಾಂತೇಶ್‌ ಚೊಳಚಗುಡ್ಡ ಮತ್ತಿತರರು ಸಾರ್ವಜನಿಕವಾಗಿ ನಿಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದಕ್ಕೂ ಮುನ್ನ ನೀವು ಮಹಾಂತೇಶ ಅವರಿಗೆ ಚಪ್ಪಲಿಯಿಂದ ಹೊಡೆಯುವುದರ ಜೊತೆಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿರುವುದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಮಹಿಳಾ ವಕೀಲೆ ಸಂಗೀತಾ ಶಿಕ್ಕೇರಿ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ. ಮಹಾಂತೇಶ್‌ ಅವರಿಗೆ ನೀವು … Continued

ಮಂಗಳೂರು ವಿವಿ ಕಾಲೇಜ್: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ

ಮಂಗಳೂರು: ನಗರದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂದು, ಶನಿವಾರ ಸಹ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬಂದಿದ್ದು, ಅವರನ್ನು ಪ್ರಾಂಶುಪಾಲರು ವಾಪಸ್‌ ಕಳುಹಿಸಿದ್ದಾರೆ. ಈಗಾಗಲೇ ಹೈಕೋರ್ಟ್ ಆದೇಶದ ಅನ್ವಯ ಶಾಲಾ ಕಾಲೇಜುಗಳಲ್ಲಿ ತರಗತಿಯಲ್ಲಿ ಹಿಜಾಬ್ ನಿಷೇಧಿಸಲಾಗಿದೆ. ಆದರೂ ನಗರದ ಕಳೆದ ಮಂಗಳೂರು ವಿವಿ ಕಾಲೇಜಿನಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಹಿಜಾಬ್ ಗಲಾಟೆ ಮತ್ತೆ ಮುಂದುವರೆದಿದ್ದು, ಆದರೂ ಕಾಲೇಜಿಗೆ … Continued

ಆರ್‌ಎಸ್‌ಎಸ್‌ ಸಂಘಟನೆ ಇಟಲಿ ಮೂಲದ್ದಲ್ಲ: ಸಿದ್ದರಾಮಯ್ಯ ಹೇಳಿಕೆಗೆ ಸಚಿವ ನಾಗೇಶ ತಿರುಗೇಟು

ಕೊಪ್ಪಳ: ದೇಶಭಕ್ತ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌)ದ ಮೂಲದ ಇಟಲಿಯಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 70 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಸಿದ್ದರಾಮಯ್ಯ 5 ವರ್ಷ ರಾಜ್ಯದ ಆಡಳಿತ ಮಾಡಿದ್ದಾರೆ. … Continued

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಿಜೆಪಿಯ ಈರೇಶ ಅಂಚಟಗೇರಿ ನೂತನ ಮೇಯರ್‌, ಉಮಾ ಮುಕುಂದ ಉಪಮೇಯರ್‌

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಪಟ್ಟ ಬಿಜೆಪಿಗೆ ಒಲಿದಿದೆ.ಬಿಜೆಪಿಯ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಮೇಯರ್​ ಆಗಿ ಆಯ್ಕೆಯಾದರೆ ಉಪ‌ ಮೇಯರ್ ಆಗಿ ಉಮಾ ಮುಕುಂದ ಆಯ್ಕೆಯಾಗಿದ್ದಾರೆ. ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಕ್ರಮವಾಗಿ ಈರೇಶ ಅಂಚಟಗೇರಿ ಹಾಗೂ ಉಮಾ ಮುಕುಂದ ನಾಮಪತ್ರ ಸಲ್ಲಿಸಿದರೆ ಕಾಂಗ್ರೆಸ್‌ನಿಂದ ಕ್ರಮವಾಗಿ ಮಯೂರ ಮೋರೆ ಹಾಗೂ ದೀಪಾ … Continued

ಬೆಂಗಳೂರು: ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ

ಬೆಂಗಳೂರು: ಆದಾಯ ತೆರಿಗೆ ವಂಚನೆ ಆರೋಪದಡಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಕೆಜಿಎಫ್ ಬಾಬು ನಿವಾಸ ಸೇರಿ 7 ಕಡೆಗಳಲ್ಲಿ ಶನಿವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು, ಶನಿವಾರ ಬೆಳಗ್ಗೆ 7:30ರ ಸುಮಾರಿಗೆ 4 ಇನೋವಾ ಕಾರಿನಲ್ಲಿ ವಸಂತ ನಗರಕ್ಕೆ ಆಗಮಿಸಿದ ಐಟಿ ಅಧಿಕಾರಿಗಳು ಅಲ್ಲಿಯ ಕೆಜಿಎಫ್ ಬಾಬು ಒಡೆತನದ ರುಕ್ಸಾನ ಪ್ಯಾಲೇಸ್ ಹಾಗೂ … Continued

ಬಾಲಕರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‍ಶಿಪ್: ಧಾರವಾಡದ ಖ್ವಾಜಾಮೈನುದ್ದೀನ್‍ಗೆ ಕಂಚಿನ ಪದಕ

ಧಾರವಾಡ: ರೆಸ್ಲ್ಟಿಂಗ್‌ ಫೆಡರೇಷನ್ ಆಫ್ ಇಂಡಿಯಾ ಮತ್ತು ಜಾರ್ಖಂಡ್ ರಾಜ್ಯ ಕುಸ್ತಿ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಂಚಿಯಲ್ಲಿ ನಡೆದ 15 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‍ಶಿಪ್‍ನಲ್ಲಿ ಧಾರವಾಡದ ಬಾಲ ಕುಸ್ತಿಪಟು ಖ್ವಾಜಾ ಮೈನುದ್ದೀನ್ ಮಾಳಗಿ ಕಂಚಿನ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಫ್ರೀಸ್ಟೈಲ್ ಕುಸ್ತಿಯ 52 ಕೆ.ಜಿ. ವಿಭಾಗದಲ್ಲಿ ಮಾಳಗಿ ತೃತೀಯ ಸ್ಥಾನ ಪಡೆದಿದ್ದಾರೆ. … Continued