ಕರ್ನಾಟಕ ಹಿಜಾಬ್‌ ವಿವಾದ: ವಿಸ್ತೃತ ಪೀಠಕ್ಕೆ ಉಲ್ಲೇಖಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಹಿಜಾಬ್ ವಿವಾದದ ವಿಚಾರಣೆಯನ್ನು ಮುಂದುವರಿಸಿದ ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ನ್ಯಾಯಮೂರ್ತಿ ದೀಕ್ಷಿತ್ ಅವರ ಏಕಸದಸ್ಯ ಪೀಠವು ಮಧ್ಯಂತರ ಪರಿಹಾರದ ಪ್ರಶ್ನೆಯನ್ನು ಸಹ ವಿಸ್ತೃತ ಪೀಠವು ಪರಿಗಣಿಸುತ್ತದೆ ಎಂದು ಹೇಳಿದೆ. ಈ ಬಗ್ಗೆ ಹೈಕೋರ್ಟ್ ಸಿಜೆ ವಿವೇಚನಾಧಿಕಾರ ಹೊಂದಿದ್ದಾರೆ. ತಕ್ಷಣವೇ ಸಂಪೂರ್ಣ ಕಡತ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ಹೈಕೋರ್ಟ್ … Continued

ಬನಹಟ್ಟಿ: ಶಿಕ್ಷಕರ ಮೇಲೆ ಹಲ್ಲೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಬಂದ್

ಬಾಗಲಕೋಟೆ : ಹಿಜಾಬ್-ಕೇಸರಿ ವಿವಾದ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಹಿಜಾಬ್ ವಿವಾದದ ಹಿನ್ನೆಲೆ ಬಾಗಲಕೋಟೆಯ ಬನಹಟ್ಟಿ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ. ಹಿಂದೂಪರ ಸಂಘಟನೆಗಳು ಬನಹಟ್ಟಿ ಬಂದ್‌ಗೆ ಕರೆ ನೀಡಿವೆ. ಬಂದ್‌ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನೂರಾರು ಜನರು ಆಗಮಿಸಿದ್ದಾರೆ. ಪ್ರತಿಭಟನೆ ವೇಳೆ ಮಂಗಳವಾರ ಶಿಕ್ಷಕರೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಈ ಹಿನ್ನೆಲೆ ದುಷ್ಕರ್ಮಿಗಳ … Continued

ಕೇಸರಿ ಶಾಲು ಧರಿಸಿ ಘೋಷಣೆ ಕೂಗುತ್ತಿದ್ದ ಹುಡುಗರನ್ನು ಎದುರಿಸಿದ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಜಮಾತ್ ಉಲಾಮಾದಿಂದ 5 ಲಕ್ಷ ರೂ.ಬಹುಮಾನ

ಬೆಂಗಳೂರು: ಇದೀಗ, ದೇಶದ ಪ್ರಮುಖ ಇಸ್ಲಾಮಿಕ್ ಸಂಘಟನೆಗಳಲ್ಲಿ ಒಂದಾದ ಜಮಿಯತ್ ಉಲಾಮಾ-ಇ-ಹಿಂದ್, ಕರ್ನಾಟಕದ ಮಂಡ್ಯ ಕಾಲೇಜಿನಲ್ಲಿ ಹಿಜಾಬ್ ಧರಿಸಿ ‘ಅಲ್ಲಾ-ಉ-ಅಕ್ಬರ್’ ಎಂದು ಪಠಿಸಿದ ವಿದ್ಯಾರ್ಥಿನಿಯರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ತನ್ನ ಸಾಂವಿಧಾನಿಕ ಮತ್ತು ಧಾರ್ಮಿಕ ಹಕ್ಕುಗಳಿಗಾಗಿ ತೀವ್ರ ಪ್ರತಿಭಟನೆಗಳ ನಡುವೆ ಬೀಬಿ ಮುಸ್ಕಾನ್ ಖಾನ್ ಎದ್ದು ನಿಂತಿದ್ದಾರೆ ಎಂದು ಜಮಾತ್‌ ಟ್ವೀಟ್‌ನಲ್ಲಿ ತಿಳಿಸಿದೆ. … Continued

ಮಹಿಳೆಯಿಂದ ಒಂದೇ ಕುಟುಂಬದ ಐವರ ಕೊಲೆ..! ಎರಡೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರು

ಮಂಡ್ಯ: ಬೆಚ್ಚಿಬೀಳಿಸಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ಬಜಾರ್ ಲೈನ್ ಬಡಾವಣೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಭೇದಿಸಿರುವ ಪೊಲೀಸರು ಈ ಸಂಬಂಧ ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ..! ಫೆಬ್ರವರಿ 6ರಂದು ಮಂಡ್ಯದ ಕೆಆರ್ ಎಸ್‍ನ ಬಜಾರ್ ಲೈನ್ ಬಡಾವಣೆಯಲ್ಲಿ ಗಂಗಾರಾಮ್ ಅವರ ಪತ್ನಿ ಲಕ್ಷ್ಮೀ (32), ಹಾಗೂ ರಾಜ್ (13), … Continued

ಕರ್ನಾಟಕದಲ್ಲಿ ಮಂಗಳವಾರ ದೈನಂದಿನ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿವೆ. ಇಂದು, ಮಂಗಳವಾರ ಹೊಸದಾಗಿ 4,452 ಕೊರೊನಾ ಸೋಂಕು ದಾಖಲಾಗಿದೆ. ಇದೇ ಸಮಯದಲ್ಲಿ ಸೋಖಿನಿಂದ. 51 ಜನರು ಮೃತಪಟ್ಟಿದ್ದಾರೆ. ಇಂದು ಸೋಂಕಿನಿಂದ 19,067 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 72,414 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದಾಗಿ ಇದುವರೆಗೆ 39,447 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 2,139 ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ಸಕಾರಾತ್ಮಕತೆ … Continued

ಹಿಜಾಬ್ ವಿವಾದ : ಶಿಕ್ಷಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ

ಬಾಗಲಕೋಟೆ: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಖಾಸಗಿ ಕಾಲೇಜಿನ ಶಿಕ್ಷಕರೊಬ್ಬರಿಗೆ ಕಿಡಿಗೇಡಿಗಳು ಇಂದು ಸಂಜೆ (ಮಂಗಳವಾರ) ರಾಡ್‍ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬನಹಟ್ಟಿಯ ಖಾಸಗಿ ಕಾಲೇಜಿನ ಶಿಕ್ಷಕ ಮಂಜುನಾಥ ನಾಯಕ್ ಅವರ ಮೇಲೆ ಕಿಡಿಗೇಡಿಗಳು ಸಂಜೆ ಹೊತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು … Continued

ತಮಿಳುನಾಡು ನದಿ ಜೋಡಣೆ ಯೋಜನೆಗಳಿಗೆ ಆಕ್ಷೇಪ ಸಲ್ಲಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ನವದೆಹಲಿ: ತಮಿಳುನಾಡು ಸರ್ಕಾರ ಕೈಗೊಂಡಿರುವ ಹೊಗೆನಕಲ್ ಜಲವಿದ್ಯುತ್ ಯೋಜನೆ ಮತ್ತು ಕಾವೇರಿ, ಗುಂಡಾರ್ ಹಾಗೂ ವೈಗೈ ನದಿಜೋಡಣೆ ಯೋಜನೆಗಳನ್ನು ನ್ಯಾಯಾಲಯದ ಮೂಲಕ ವಿರೋಧಿಸುವ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು, ಮಂಗಳವಾರ ಅಂತಾರಾಜ್ಯ ಜಲವಿವಾದಗಳ ಬಗ್ಗೆ ಅವರು ಸಚಿವರು, ಹಿರಿಯ ನ್ಯಾಯವಾದಿಗಳು, ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ … Continued

ಹಿಜಾಬ್‌ ವಿವಾದ ತೀವ್ರ: ರಾಜ್ಯಾದ್ಯಂತ ನಾಳೆಯಿಂದ ಹೈಸ್ಕೂಲ್‌ -ಕಾಲೇಜುಗಳಿಗೆ 3 ದಿನ ರಜೆ ಘೋಷಣೆ

ಬೆಂಗಳೂರು: ನಾಳೆಯಿಂದ ಮೂರು ದಿನ ಹೈಸ್ಕೂಲ್‌, ಪದವಿ ಪೂರ್ವ, ಪದವಿ, ಎಂಜಿನಿಯರ್‌ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಫೆಬ್ರವರಿ 9, 10 ಮತ್ತು 11ರ ವರೆಗೆ ಮೂರು ದಿನ 9, 10ನೇ ತರಗತಿಯ ಪ್ರೌಢ ಶಾಲೆಗಳು ( High School ) ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ( PU College ) ನಾಳೆಯಿಂದ 3 ದಿನ … Continued

ವಿದ್ಯಾರ್ಥಿಗಳ ಗಮನಕ್ಕೆ …ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟಿಸಿದ್ದು, ಏಪ್ರಿಲ್‌ 16ರಿಂದ ಮೇ 6ರ ವರೆಗೆ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಯಾವ ದಿನ ಯಾವ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಿಸಲಾಗಿದೆ.   * 16-04-2022ರ ಶನಿವಾರ –ಮೂಲ ಗಣಿತ, ಶಿಕ್ಷಣ … Continued

ಬನಹಟ್ಟಿ :ಹಿಜಾಬ್ ವಿವಾದ, ಕಲ್ಲುತೂರಾಟ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಕುರಿತು ಎರಡು ವಿದ್ಯಾರ್ಥಿಗಳ ಗುಂಪಿನ ನಡುವೆ ವಿವಾದ ಉಂಟಾಗಿದ್ದು, ಇದು ವಿಕೋಪಕ್ಕೆ ಹೋಗಿ ಕಾಲೇಜು ಎದುರಿಗೆ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ. ಹೀಗಾಗಿ ಕಾಲೇಜಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳನ್ನು ಮನೆಗೆ ಕಳಿಸಲು ಪ್ರಾಧ್ಯಾಪಕರು ಹರಸಾಹಸ ಪಡುತ್ತಿದ್ದು, ಶಾಲೆ ಹತ್ತಿರ ಜಮಾವಣೆಗೊಂಡ … Continued