ಭಾರತದ ಮೊದಲ ಕ್ರಿಪ್ಟೋಗಾಮಿಕ್ ಗಾರ್ಡನ್ ಡೆಹ್ರಾಡೂನ್‌ನಲ್ಲಿ ಉದ್ಘಾಟನೆ

ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿ ಭಾರತದ ಮೊದಲ ಕ್ರಿಪ್ಟೋಗಾಮಿಕ್ ಗಾರ್ಡನ್ ಅನ್ನು ಭಾನುವಾರ ಉದ್ಘಾಟಿಸಲಾಯಿತು.ಜಿಲ್ಲೆಯ ಚಕ್ರತಾ ಪಟ್ಟಣದಲ್ಲಿರುವ ಈ ಉದ್ಯಾನವನ್ನು ಸಾಮಾಜಿಕ ಕಾರ್ಯಕರ್ತ ಅನೂಪ್ ನೌತಿಯಾಲ್ ಉದ್ಘಾಟಿಸಿದರು. ಇದರಲ್ಲಿ ಸುಮಾರು 50 ಜಾತಿಯ ಕಲ್ಲುಹೂವುಗಳು, ಜರೀಗಿಡಗಳು ಮತ್ತು ಶಿಲೀಂಧ್ರಗಳು ಇವೆ. ಚಕ್ರದ ದಿಯೋಬನ್‌ನಲ್ಲಿರುವ ತೋಟದಲ್ಲಿ ಸುಮಾರು 50 ಜಾತಿಗಳನ್ನು 9,000 ಅಡಿ ಎತ್ತರದಲ್ಲಿ ಬೆಳೆಸಲಾಗಿದೆ ಎಂದು … Continued

ಕೇರಳದಲ್ಲಿ 22 ತಿಂಗಳ ಮಗು ಸೇರಿದಂತೆ ಮತ್ತೆ ಮೂವರಿಗೆ ಝಿಕಾ ವೈರಸ್ ಸೋಂಕು, ಒಟ್ಟು ಸಂಖ್ಯೆ 18ಕ್ಕೆ ಏರಿಕೆ

ತಿರುವನಂತಪುರಂ: ಕೇರಳದಲ್ಲಿ ಝಿಕಾ ವೈರಸ್ ಹರಡುವಿಕೆ ಮುಂದುವರೆದಿದ್ದು, ಇಂದು (ಭಾನುವಾರ) ಮತ್ತೆ ಮೂವರಲ್ಲಿ ವೈರಸ್ ಸೋಂಕು ದೃಢಪಟ್ಟಿದೆ. 22 ತಿಂಗಳ ಮಗು ಸೇರಿದಂತೆ ಮತ್ತೆ ಮೂವರು ಝಿಕಾ ವೈರಸ್ ಸೋಂಕಿಗೆ ಒಳಗಾಗಿದ್ದು, 22 ತಿಂಗಳ ಮಗು, 46 ವರ್ಷದ ವ್ಯಕ್ತಿ ಮತ್ತು 29 ವರ್ಷದ ಆರೋಗ್ಯ ಕಾರ್ಯಕರ್ತರಲ್ಲಿ ಭಾನುವಾರ ಸೋಂಕು ಕಾಣಿಸಿಕೊಂಡಿದ್ದು, ಝಿಕಾ ವೈರಸ್ ಸೋಂಕು … Continued

ಪುದುಚೇರಿಯಲ್ಲಿ ಜುಲೈ 16ರಿಂದ ಶಾಲಾ-ಕಾಲೇಜ್ ಪುನಾರಂಭ: ಸಿಎಂ ರಂಗಸ್ವಾಮಿ

ಪುದುಚೇರಿ: ಕೋವಿಡ್-19 ಉಲ್ಬಣದಿಂದ ಪುದುಚೇರಿಯಲ್ಲಿ ಬಂದ್ ಆಗಿದ್ದ ಶಾಲಾ-ಕಾಲೇಜ್ ಗಳು ಜುಲೈ 16 ರಂದು ಪುನಾರಂಭಗೊಳ್ಳಲಿವೆ. ಜುಲೈ 16 ರಂದು ಕಾಲೇಜ್ ಗಳು ಪುನರಾರಂಭಗೊಳ್ಳಲಿದ್ದು, ಶಾಲೆಗಳು ಭಾಗಶಃ ಪುನಃ ತೆರೆಯಲ್ಪಡುತ್ತವೆ ಎಂದು ಮುಖ್ಯಮಂತ್ರಿ ಎನ್. ರಂಗಸ್ವಾಮಿ ಭಾನುವಾರ ತಿಳಿಸಿದ್ದಾರೆ. ಒಂಭತ್ತರಿಂದ 12 ನೇ ತರಗತಿಗಳಿಗೆ ಮಾತ್ರ ತರಗತಿಗಳು ಆ ದಿನ ಪುನರಾರಂಭಗೊಳ್ಳುತ್ತವೆ ಎಂದು ಅವರು ತಿಳಿಸಿದರು. … Continued

ಪದ್ಮ ಪ್ರಶಸ್ತಿಗಳಿಗೆ ಉತ್ತಮ ವ್ಯಕ್ತಿಗಳ ನಾಮನಿರ್ದೇಶನ ಮಾಡಲು ಜನರಿಗೆ ಪ್ರಧಾನಿ ಮೋದಿ ಕರೆ

ನವದೆಹಲಿ: ದೇಶದ ಪ್ರತಿಷ್ಠಿತ ಪದ್ಮ ಸರಣಿಯ ಪ್ರಶಸ್ತಿಗಳಿಗೆ ಇದೇ ಮೊದಲ ಬಾರಿಗೆ ಜನಾಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಬೆಳಿಗ್ಗೆ ಟ್ವೀಟ್ ಮಾಡಿದ್ದು, ಭಾರತದಲ್ಲಿ ಬಹಳಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಕೆಳ ಹಂತದಲ್ಲಿ ಅವರು ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರ ಸೇವೆ ಬಹುಶಃ ನಮಗೆ ಗೊತ್ತಿರುವುದಿಲ್ಲ ಅಥವಾ ಕೇಳಿರುವುದಿಲ್ಲ. … Continued

ಉತ್ತರ ಪ್ರದೇಶ ಬ್ಲಾಕ್ ಚುನಾವಣೆ ವೇಳೆ ಸಾರ್ವಜನಿಕವಾಗಿ ಪತ್ರಕರ್ತನ ಥಳಿಸಿದ ಸಿಡಿಒ ..ವಿಡಿಯೋ ವೈರಲ್‌

ಲಕ್ನೋ: ಉತ್ತರಪ್ರದೇಶದಲ್ಲಿ ಶನಿವಾರ ನಡೆದ ಸ್ಥಳೀಯ ಚುನಾವಣೆ ಸಂದರ್ಭದಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯೊಬ್ಬರು ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದು, ಟಿವಿ ವರದಿಗಾರನನ್ನು ಸಾರ್ವಜನಿಕವಾಗಿ ಬೆನ್ನಟ್ಟಿ ಅವರನ್ನು ಕೆಟ್ಟದಾಗಿ ಥಳಿಸಿರುವ ವಿಡಿಯೋ ಈಗ ವೈರಲ್‌ ಆಗಿದೆ. ಉನ್ನಾವೊದ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ದಿವ್ಯಾಂಶು ಪಟೇಲ್ ಅವರು ಟಿವಿ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ, … Continued

ಲಕ್ನೊ ಹೊರಗಿನ ಕಾಕೋರಿಯಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರ ಬಂಧಿಸಿದ ಎಟಿಎಸ್‌

ಲಕ್ನೋ: ಒಂದು ಪ್ರಮುಖ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಭಾನುವಾರ ಕಾಕೋರಿ ಪಟ್ಟಣದಿಂದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಇಬ್ಬರು ಭಯೋತ್ಪಾದಕರು ಅಲ್ ಖೈದಾ ಜೊತೆ ಸಂಬಂಧ ಹೊಂದಿದ್ದು, ರಾಜಧಾನಿ ಲಕ್ನೋ ಹೊರಗಡೆ ಇರುವ ಕಾಕೋರಿಯಲ್ಲಿರುವ ಮನೆಯೊಳಗೆ ತಲೆಮರೆಸಿಕೊಂಡಿದ್ದರು. ಎಟಿಎಸ್ ತಂಡ ಇಬ್ಬರ ಜಾಡು ಹಿಡಿದು ಒಂದು ವಾರದಿಂದ … Continued

ತಾಲಿಬಾನ್ ಉಪಸ್ಥಿತಿ ಹೆಚ್ಚಳದ ಮಧ್ಯೆ,ಅಫ್ಘಾನಿಸ್ತಾನದ ಕಂದಹಾರಿನಿಂದ ಭಾರತದ 50 ಅಧಿಕಾರಿಗಳ ಸ್ಥಳಾಂತರ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವೇಗವಾಗಿ ಬೆಳೆಯುತ್ತಿರುವುದರಿಂದ, ಭಾರತವು ಕಂದಹಾರ್‌ನಲ್ಲಿರುವ ತನ್ನ ದೂತಾವಾಸದಿಂದ ಸುಮಾರು 50 ರಾಜತಾಂತ್ರಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡಿದೆ ಎಂದು ವರದಿಯಾಗಿದೆ. ನ್ಯಾಟೋ ಮತ್ತು ಅಮೆರಿಕ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮಧ್ಯೆ ದಕ್ಷಿಣ ಅಫ್ಘಾನಿಸ್ತಾನದ ಹೊಸ ಪ್ರದೇಶಗಳನ್ನು ತಾಲಿಬಾನ್ ಸ್ಥಿರವಾಗಿ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಭಾರತವು ಕಂದಹಾರ್‌ನಲ್ಲಿನ ತನ್ನ … Continued

ಹೊಸ ಜನಸಂಖ್ಯಾ ನೀತಿ ಅನಾವರಣಗೊಳಿಸಿದ ಸಿಎಂ ಯೋಗಿ ಅದಿತ್ಯನಾಥ, ಜನಸಂಖ್ಯೆ ಬೆಳವಣಿಗೆ 2.1% ಕ್ಕೆ ತರುವ ಗುರಿ

ಲಕ್ನೋ: ವಿಶ್ವ ಜನಸಂಖ್ಯಾ ದಿನಾಚರಣೆಯಂದು ಭಾನುವಾರ ಉತ್ತರ ಪ್ರದೇಶ ಸರ್ಕಾರ 2021-2030ರ ಹೊಸ ಜನಸಂಖ್ಯಾ ನೀತಿಯನ್ನು ಬಿಡುಗಡೆ ಮಾಡಿದೆ. ಹೊಸ ಜನಸಂಖ್ಯಾ ನೀತಿಯಲ್ಲಿ, ಜನನ ಪ್ರಮಾಣವನ್ನು 2026 ರ ವೇಳೆಗೆ ಪ್ರತಿ ಸಾವಿರ ಜನಸಂಖ್ಯೆಗೆ 2.1 ಕ್ಕೆ ಮತ್ತು 2030 ರ ವೇಳೆಗೆ 1.9 ಕ್ಕೆ ತಲುಪಿಸುವ ಗುರಿ ನಿಗದಿಪಡಿಸಲಾಗಿದೆ ರಾಜ್ಯದ ಒಟ್ಟು ಜನನ ಪ್ರಮಾಣ … Continued

ನಿವಾಸಿ ಕುಂದುಕೊರತೆ ಅಧಿಕಾರಿ ನೇಮಕ, ಭಾರತ ಪಾರದರ್ಶಕತೆ ವರದಿ‌ ಬಿಡುಗಡೆ ಮಾಡಿದ ಟ್ವಿಟ್ಟರ್‌

ಟ್ವಿಟ್ಟರ್‌ ವಿನಯ್ ಪ್ರಕಾಶ್ ಅವರನ್ನು ತನ್ನ ನಿವಾಸಿ ಕುಂದುಕೊರತೆ ಅಧಿಕಾರಿಯಾಗಿ ನೇಮಕ ಮಾಡಿದೆ ಮತ್ತು ಮೇ 26, 2021ರಿಂದ ಜೂನ್ 25, 2021 ರ ವರೆಗಿನ ಭಾರತ ಪಾರದರ್ಶಕತೆ ವರದಿ ಬಿಡುಗಡೆ ಮಾಡಿದೆ ಎಂದು ಟ್ವಿಟರ್ ಭಾನುವಾರ ತಿಳಿಸಿದೆ. ಭಾರತದ ಹೊಸ ಐಟಿ ನಿಯಮಗಳ ಅಡಿಯಲ್ಲಿ ಪಾರದರ್ಶಕತೆ ವರದಿ ಪ್ರಕಟಿಸುವುದು ಮತ್ತು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸುವುದು … Continued

ಭಾರತದಲ್ಲಿ ಒಂದೇ ದಿನ 895 ಕೋವಿಡ್‌-19 ಸಾವುಗಳು..

ನವದೆಹಲಿ: ಭಾರತವು ಒಂದು ದಿನದಲ್ಲಿ 41,506 ಹೊಸ ಕೊರೊನಾ ಸೋಂಕು ದಾಖಲಿಸಿದೆ. ಇದು ಭಾರತದ ಒಟ್ಟು ಕೋವಿಡ್‌-19 ಪ್ರಕರಣಗಳು 3,08,37,222 ಕ್ಕೆ ಏರಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳು 4,54,118 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ನವೀಕರಿಸಿದೆ. 895 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,08,040 ಕ್ಕೆ ಏರಿದೆ. … Continued