ಹಿಜಾಬ್ ವಿವಾದ: ಮುಸ್ಕಾನ್ ಖಾನ್ ಬೆಂಬಲಿಸಿದ ಆರ್‌ಎಸ್‌ಎಸ್ ಮುಸ್ಲಿಂ ಘಟಕ, ಜೈ ಶ್ರೀ ರಾಮ್” ಘೋಷಣೆ ಕೂಗಿ ಭೀತಿಗೊಳಿಸುವ ಹುಡುಗರ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಹೇಳಿಕೆ

ಅಯೋಧ್ಯಾ: ಕರ್ನಾಟಕ ಹಿಜಾಬ್​ ವಿವಾದದಲ್ಲಿ ಮಂಡ್ಯದ ಪಿಇಎಸ್​ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್​ ಖಾನ್ ಅವರಿಗೆ ಆರ್​ಎಸ್​ಎಸ್​ನ ಮುಸ್ಲಿಂ ಘಟಕ, ಮುಸ್ಲಿಂ ರಾಷ್ಟ್ರೀಯ ಮಂಚ್​ ಬೆಂಬಲ ವ್ಯಕ್ತಪಡಿಸಿದೆ. ಬೀಬಿ ಮುಸ್ಕಾನ್ ಅವರ ಹಿಜಾಬ್‌ನ ಕರೆಗೆ ಬೆಂಬಲವಾಗಿ ನಿಂತ ಮುಸ್ಲಿಂ ರಾಷ್ಟ್ರೀಯ ಮಂಚ್ ಅವಳನ್ನು ಸುತ್ತುವರೆದಿರುವ ಕೇಸರಿ ಉನ್ಮಾದವನ್ನು ಖಂಡಿಸಿದೆ. ಅಲ್ಲದೆ, ಹಿಜಾಬ್ ಅಥವಾ ‘ಪರ್ದಾ’ ಭಾರತೀಯ ಸಂಸ್ಕೃತಿಯ … Continued

ಖ್ಯಾತ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊಗೆ ಇನ್‌ಸ್ಟಾಗ್ರಾಮ್‌ನಲ್ಲಿ 40 ಕೋಟಿ ಫಾಲೋವರ್ಸ್..! ಈ ಸಾಧನೆ ಮಾಡಿದ ವಿಶ್ವದ ಏಕೈಕ ವ್ಯಕ್ತಿ ..ಟಾಪ್‌ ಟೆನ್‌ ಪಟ್ಟಿ ಇಲ್ಲಿದೆ

ಕ್ರಿಸ್ಟಿಯಾನೋ ರೊನಾಲ್ಡೊ ಇನ್‌ಸ್ಟಾಗ್ರಾಮ್‌ನಲ್ಲಿ 400 ಮಿಲಿಯನ್ ((40 ಕೋಟಿ) ಫಾಲೋವರ್ಸ್ ತಲುಪುವ ಮೂಲಕ ಇತಿಹಾಸವನ್ನು ಸೃಷ್ಟಸಿದ್ದಾರೆ. ಇನ್‌ಸ್ಟಾಗ್ರಾಮ್‌ (Instagram)ನಲ್ಲಿ 40 ಕೋಟಿ ಅನುಯಾಯಿಗಳನ್ನು ತಲುಪಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೈಲಿ ಜೆನ್ನರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 309 ಮಿಲಿಯನ್ (30.9 ಕೋಟಿ) ಅನುಯಾಯಿಗಳೊಂದಿಗೆ ಪಟ್ಟಿಯಲ್ಲಿ ಮುಂದಿನ ಸೆಲೆಬ್ರಿಟಿಯಾಗಿದ್ದಾರೆ ಲಿಯೋನೆಲ್ ಮೆಸ್ಸಿ ಒಟ್ಟಾರೆ ಪಟ್ಟಿಯಲ್ಲಿ ಮೂರನೇ … Continued

ಸತತ ಹತ್ತನೇ ಬಾರಿ ರೆಪೋ ದರ, ರಿವರ್ಸ್ ರೆಪೋ ದರ ಯಥಾಸ್ಥಿತಿಯಲ್ಲಿಟ್ಟ ಆರ್ ಬಿಐ

ಮುಂಬೈ: ಆರ್‌ಬಿಐ ಬೆಂಚ್‌ಮಾರ್ಕ್ ಸಾಲದ ದರವನ್ನು ಸತತವಾಗಿ 10 ನೇ ಬಾರಿಗೆ 4 ಪ್ರತಿಶತದಲ್ಲಿ ಬದಲಾಯಿಸದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ ಮತ್ತು ಹಣದುಬ್ಬರದ ಎತ್ತರದ ಹಿನ್ನೆಲೆಯಲ್ಲಿ ಅದರ ಹೊಂದಾಣಿಕೆಯ ನಿಲುವನ್ನು ಮುಂದುವರಿಸಲು ನಿರ್ಧರಿಸಿದೆ. ರಿವರ್ಸ್ ರೆಪೊ ದರವನ್ನು ಸಹ 3.35 ಪ್ರತಿಶತಕ್ಕೆ ಬದಲಾಯಿಸದೆ ಯಥಾಸ್ಥಿತಿ ಇರಿಸಲಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ … Continued

ಹಿಜಾಬ್ ಪ್ರಕರಣ ಸುಪ್ರೀಕೋರ್ಟ್‌ ಮುಂದೆ ಸಿಬಲ್ ಪ್ರಸ್ತಾಪ: ಕರ್ನಾಟಕ ಹೈಕೋರ್ಟ್ ಮೊದಲು ವಿಚಾರಣೆ ನಡೆಸಲಿ ಎಂದ ಸಿಜೆಐ

ನವದೆಹಲಿ: ಸುಪ್ರೀಂ ಕೋರ್ಟ್ ಹಿಜಾಬ್ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮೊದಲು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ. ಧಾರ್ಮಿಕ ವಿಷಯವಾಗಿರುವುದರಿಂದ ಪ್ರಕರಣವನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಮನವಿ ಮಾಡಿದಾಗ ಸಿಜೆಐ ರಮಣ ಈ ಹೇಳಿಕೆ ನೀಡಿದ್ದಾರೆ. ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ. ಕಲ್ಲೆಸೆಯಲಾಗುತ್ತಿದೆ. ಈ … Continued

ಚೆನ್ನೈ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಚೆನ್ನೈ: ಭಾರತೀಯ ಜನತಾ ಪಕ್ಷದ (ಬಿಜೆಪಿ) ತಮಿಳುನಾಡು ಕಚೇರಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಿಜೆಪಿ ಪದಾಧಿಕಾರಿಯೊಬ್ಬರು ಬಾಂಬ್ ಎಸೆದ ಘಟನೆಗೆ ಆಡಳಿತಾರೂಢ ಡಿಎಂಕೆಯನ್ನು ದೂಷಿಸಿದ್ದಾರೆ ಮತ್ತು ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿದೆ ಎಂದು ಹೇಳಿದ್ದಾರೆ. ದಾಳಿಯ ಬಗ್ಗೆ … Continued

ಭಾರತದಲ್ಲಿ ಹೊಸದಾಗಿ 67,084 ಕೋವಿಡ್‌ ಪ್ರಕರಣಗಳು ದಾಖಲು.. ಇದು ನಿನ್ನೆಗಿಂತ 6% ಇಳಿಕೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶವು 67,084 ಸೋಂಕುಗಳನ್ನು ದಾಖಲಿಸುವುದರೊಂದಿಗೆ ಕೋವಿಡ್ -19 ಪ್ರಕರಣಗಳು ಭಾರತದಲ್ಲಿ ಶೇಕಡಾ 6 ರಷ್ಟು ಇಳಿಕೆ ಕಂಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಒಟ್ಟಾರೆ ಪ್ರಕರಣ 4,24,78,060 ಕ್ಕೆ ಏರಿದೆ. ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ 1,241 ಜನರು ಕೋವಿಡ್ -19 ಸೋಂಕಿಗೆ ಮೃತಪಟ್ಟಿದ್ದು, … Continued

ದೇಶಮುಖ್ ನನ್ನ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು, ಪರಮ್ ಬೀರ್ ಸಿಂಗ್ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ್ದಾರೆ: ಸಚಿನ್‌ ವಾಜೆ

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ತಮ್ಮ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಫಿಡವಿಟ್‌ನಲ್ಲಿ, ದೇಶಮುಖ್ ಅವರು ತಮ್ಮ ಮತ್ತು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ವಿರುದ್ಧ ಸುಲಿಗೆಯ ನಕಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ … Continued

ದೆಹಲಿಯಲ್ಲಿ ಕೋವಿಡ್ ಸಾವುಗಳು : ಹೆಚ್ಚಿನವರು ಹೃದಯ, ಮೂತ್ರಪಿಂಡದ ಕಾಯಿಲೆ ರೋಗಿಗಳು

ನವದೆಹಲಿ: ಜನವರಿ 12-ಫೆಬ್ರವರಿ 7 ರ ಅವಧಿಯಲ್ಲಿ ದೆಹಲಿಯಲ್ಲಿನ ಒಟ್ಟು ಕೋವಿಡ್ ಸಾವುಗಳ ಪೈಕಿ, ಹೆಚ್ಚಿನವರು ಹೃದ್ರೋಗಗಳು ಅಥವಾ ಮೂತ್ರಪಿಂಡದ ಕಾಯಿಲೆಗಳಂತಹ ಸಹ-ಅಸ್ವಸ್ಥತೆ ಹೊಂದಿದ್ದರು ಎಂದು ವರದಿಯೊಂದು ತಿಳಿಸಿದೆ. ಅಧಿಕೃತ ಮೂಲಗಳು ಹಂಚಿಕೊಂಡಿರುವ ಕೋವಿಡ್‌-19 ಸಾವುಗಳ ವಿಶ್ಲೇಷಣೆಯ ವರದಿಯ ಪ್ರಕಾರ, ಈ ಅವಧಿಯಲ್ಲಿ ಲೆಕ್ಕಪರಿಶೋಧನೆ ಮಾಡಲಾದ 853 ಸಾವುಗಳಲ್ಲಿ, 779 ಅಥವಾ 91% ರಷ್ಟು ಸಾವಿಗೀಡಾದರಲ್ಲಿ … Continued

ಸಂಸತ್ತಿನಲ್ಲಿ ಕುಳಿತು ಕೇಳದ ವ್ಯಕ್ತಿಗೆ ನಾನು ಹೇಗೆ ಉತ್ತರಿಸಲಿ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ

ನವದೆಹಲಿ: ಸಂಸತ್ತಿನಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯಾರ ಮಾತನ್ನೂ ಕೇಳದ ಮತ್ತು ಸದನದಲ್ಲಿ ಕುಳಿತುಕೊಳ್ಳದ” ವ್ಯಕ್ತಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತಿನಲ್ಲಿ ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ವಿವಿಧ … Continued

ಸಿಬಿಎಸ್‌ಇ 10, 12 ತರಗತಿಗಳಿಗೆ ಟರ್ಮ್ 2 ಬೋರ್ಡ್ ಪರೀಕ್ಷೆಗಳು ಏಪ್ರಿಲ್ 26 ರಿಂದ ಆರಂಭ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ತರಗತಿ 10, 12ರ ಟರ್ಮ್ 2 ಪರೀಕ್ಷೆ -2022ರ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಅಧಿಕೃತ ಅಧಿಸೂಚನೆಯಲ್ಲಿ, ಸಿಬಿಎಸ್‌ಇ ಟರ್ಮ್ 2 ಪರೀಕ್ಷೆಗಳು ಏಪ್ರಿಲ್ 26 ರಿಂದ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದೆ. ಪರೀಕ್ಷೆಯನ್ನು ಟರ್ಮ್ 2 ಅಥವಾ ಸಬ್ಜೆಕ್ಟಿವ್ ಮೋಡ್‌ನ ಮಾದರಿ ಪೇಪರ್‌ಗಳ ಪ್ರಕಾರ ಮಾದರಿಯಲ್ಲಿ ನಡೆಸಲಾಗುತ್ತದೆ. … Continued