ಶಿರಸಿ ಹೂಡ್ಲಮನೆ ಅನಂತ್‌ ಹೆಗಡೆ ಕರ್ನಾಟಕ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ

ಬೆಂಗಳೂರು: ಮೂವರು ವಕೀಲರನ್ನು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಕೇಂದ್ರ ಸರ್ಕಾರವು ಬುಧವಾರ ಅಧಿಸೂಚನೆ ಹೊರಡಿಸಿದೆ. ವಕೀಲರಾದ ಅನಂತ್‌ ರಾಮನಾಥ್‌ ಹೆಗಡೆ, ಸಿದ್ದಯ್ಯ ರಾಚಯ್ಯ ಮತ್ತು ಕಣ್ಣನ್‌ಕುಳೈಲ್ ಶ್ರೀಧರನ್‌ ಹೇಮಲೇಖಾ ಅವರನ್ನು ಎರಡು ವರ್ಷಗಳವರೆಗೆ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅಕ್ಟೋಬರ್‌ 6ರಂದು ಮೂವರು ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತೆ ಕೇಂದ್ರ … Continued

ದೀಪಾವಳಿ ಮುಗಿದ ತಕ್ಷಣ ಭತ್ತ ಖರೀದಿ ಪ್ರಕ್ರಿಯೆ ಆರಂಭಕ್ಕೆ ತೀರ್ಮಾನ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ/ಬೆಂಗಳೂರು: ಭತ್ತ ಖರೀದಿ ಕೇಂದ್ರ ಆರಂಭಿಸಿ ಎಂಬ ಬೇಡಿಕೆ ಇತ್ತು. ಅದರಲ್ಲೂ ಭತ್ತ ಹೆಚ್ಚಾಗಿ ಬೆಳೆಯುವ ರಾಯಚೂರು, ಕೊಪ್ಪಳ ಭಾಗ ಸೇರಿದಂತೆ ರಾಜ್ಯದ ರೈತರು ಈ ಬಗ್ಗೆ ಪದೇ ಪದೇ ಮನವಿ ಮಾಡಿದ್ದರು. ಹೀಗಾಗಿಎಂಎಸ್.ಪಿ ದರಲ್ಲಿ ಭಕ್ತ ಖರೀದಿಸಲು ಸರ್ಕಾರದ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಐಇ ಹೇಳಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳಿಗೆ … Continued

ನ.8ರಿಂದ ರಾಜ್ಯಾದ್ಯಂತ’ಅಂಗನವಾಡಿ ಕೇಂದ್ರ’ ಆರಂಭಕ್ಕೆ ಹಸಿರು ನಿಶಾನೆ, ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಕೊರೊನಾ ಭೀತಿಯ ನಡುವೆಯೂ ರಾಜ್ಯಾದ್ಯಂತ 1 ರಿಂದ 12ನೇ ತರಗತಿಗಳನ್ನು ಆರಂಭಿಸಲಾಗಿದೆ. ಈಗ ನವೆಂಬರ್ ೮ರಿಂದ ಅಂಗನವಾಡಿ ಕೇಂದ್ರಗಳನ್ನು ಪುನರ್ ಪ್ರಾರಂಭಿಸಲು ರಾಜ್ಯ ಸರ್ಕಾರದ ಹಸಿರು ನಿಶಾನೆ ದೊರೆತಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಶೇ.೨ಕ್ಕಿಂತ ಕಡಿಮೆ ಟಿಪಿಆರ್ ಇರುವ ತಾಲ್ಲೂಕುಗಳಲ್ಲಿ ಕೋವಿಡ್-೧೯ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ … Continued

2022ರ ಹಜ್ ಯಾತ್ರೆಗೆ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದ ಸ್ಥಗಿತಗೊಂಡಿದ್ದ ಮುಸ್ಲಿಮರ ಪವಿತ್ರ ಹಜ್ ಯಾತ್ರೆಗೆ ಈ ವರ್ಷದಿಂದ ಚಾಲನೆ ನೀಡಲಾಗಿದೆ. ಈಗ ಕೋವಿಡ್ ಸಾಂಕ್ರಾಮಿಕ ಪ್ರಸರಣ ತಗ್ಗಿರುವುದರಿಂದ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ಹಜ್ ಯಾತ್ರೆಗೆ ಆನ್‍ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂದು ಅವರು ವಕ್ಫ್ ಮತ್ತು ಹಜ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 2022ರ ಹಜ್ ಯಾತ್ರೆ ಪ್ರಕ್ರಿಯೆ … Continued

ಕುಮಟಾ: ಅಕ್ರಮವಾಗಿ ಸಾಗಿಸುತ್ತಿದ್ದ 22 ಎಮ್ಮೆ-ಕೋಣಗಳ ರಕ್ಷಣೆ; ನಾಲ್ವರು ವಶಕ್ಕೆ

ಕುಮಟಾ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಳೆಗದ್ದೆ ಬಳಿ ನಡೆದ ಬಗ್ಗೆ ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಹೊಳೆಗದ್ದೆ ಟೋಲ್‌ಗೇಟ್ ಬಳಿ ಪೊಲೀಸರ ತಪಾಸಣೆ ಮಾಡಿದ್ದಾರೆ. ಅದನ್ನು ಹಿಂಸಾತ್ಮಕವಾಗಿ ಕೊಂಡೊಯ್ಯುತ್ತಿರುವುದಕ್ಕೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವುದು ಬೆಳಕಿಗೆ ಬಂದಿದೆ. ೊಟ್ಟು … Continued

ಚಪ್ಪಲಿ ತೆಗೆದಿಟ್ಟು ಪುನೀತ್‌ಗೆ ಅಂತಿಮ ನಮನ ಸಲ್ಲಿಸಿದ ಅಭಿಮಾನಿಗಳು…!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ 5ದಿನ ಕಳೆದಿದೆ. ಆದರೆ ಈ ವೇಳೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಪುನೀತ್‌ ಅವರ ಪಾರ್ಥಿವ ಶರೀರವನ್ನು ನೋಡಲು ಅಭಿಮಾನಿಗಳ ಜನಸಾಗರವೇ ಹರಿದು ಬಂದಿತ್ತು. ಅಪ್ಪು ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಅವಕಾಶ ಕಲ್ಪಸಿಕೊಡಲಾಗಿತ್ತು. ಈ ವೇಳೆ ಚಪ್ಪಲಿ … Continued

ವರ್ಕ್ ಫ್ರಮ್ ಹೋಮ್ ಪದ್ಧತಿಗೆ ಮಾನ್ಯತೆ ನೀಡುವಂತೆ ಕೇಂದ್ರ ಸಚಿವರಲ್ಲಿ ಮನವಿ: ಸಚಿವ ಅಶ್ವತ್ಥ ನಾರಾಯಣ ಮಾಹಿತಿ

ನವದೆಹಲಿ: ಪ್ರಸ್ತುತ ವರ್ಕ್ ಫ್ರಮ್ ಹೋಮ್ ಪದ್ಧತಿ ಹೆಚ್ಚಾಗಿದೆ. ಹೀಗಾಗಿ ವರ್ಕ್ ಫ್ರಮ್​ ಹೋಮ್​ಗೆ ಮಾನ್ಯತೆ ನೀಡುವಂತೆ ಕೇಂದ್ರ ಸಚಿವರ ಭೇಟಿ ವೇಳೆ ಮನವಿ ಮಾಡಿದ್ದೇನೆ ಎಂದು ದೆಹಲಿಯಲ್ಲಿ ಐಟಿ-ಬಿಟಿ ಸಚಿವ ಅಶ್ವತ್ಥ್ ನಾರಾಯಣ ಇಂದು (ಮಂಗಳವಾರ) ಹೇಳಿದ್ದಾರೆ. ಕೇಂದ್ರದ ಐಟಿ ಸಚಿವರು 24ನೇ ಟೆಕ್ ಸಮ್ಮಿಟ್​ನಲ್ಲಿದ್ದಾರೆ. ಐಟಿ ಇಲಾಖೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಮಾತುಕತೆ … Continued

ನಾಳೆಯಿಂದ ಸಾರ್ವಜನಿಕರಿಗೆ ನಟ ಪುನೀತ್‌‘ಸಮಾಧಿ ದರ್ಶನ’ಕ್ಕೆ ಅವಕಾಶ

ಬೆಂಗಳೂರು: ನಾಳೆ (ಬುಧವಾರ) ಬೆಳಗ್ಗೆ 9 ಗಂಟೆಯಿಂದ ಸಂಜೆ ಏಳು ಗಂಟೆ ವರೆಗೆ ಪ್ರತಿನಿತ್ಯ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ. ದಿವಂಗತ ನಟ ಪುನೀತ್ ಕುಟುಂಬಸ್ಥರು ಐದನೇ ದಿನವಾದ ಇಂದು (ಮಂಗಳವಾರ) ಶಾಸ್ತ್ರ ಹಾಲುತುಪ್ಪದ ಪೂಜೆ ಬಳಿಕ ಅಪ್ಪು ಸಮಾಧಿ ದರ್ಶನಕ್ಕೆ ಕೆಲವು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಅಭಿಮಾನಿಗಳಿಗೆ ಇಂದು … Continued

ಪುನೀತ್‌ ರಾಜಕುಮಾರಗೆ ಪದ್ಮಶ್ರೀ : ಸಿಎಂ ಸಮ್ಮತಿ

ಮೈಸೂರು: ನಟ ಪುನೀತ್ ರಾಜ್‌ಕುಮಾರ್ ಪದ್ಮಶ್ರೀ ಸೇರಿದಂತೆ ಎಲ್ಲ ಗೌರವಕ್ಕೆ ಅರ್ಹರು. ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಸರ್ವ ಸಮ್ಮತ ಒಪ್ಪಿಗೆ ಇದೆ. ನಿಯಮಗಳನ್ನು ಪರಿಶೀಲನೆ ಮಾಡಿದ ನಂತರ ಕೇಂದ್ರ ಸರ್ಕಾರದ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಎಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯಕ್ಕೆ ಅವರು … Continued

ಕೆಎಸ್‌ಇಟಿ ಪರೀಕ್ಷೆ ಫಲಿತಾಂಶ ಪ್ರಕಟ : ಸಹಾಯಕ ಪ್ರಾಧ್ಯಾಪಕರಾಗಲು ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಮೈಸೂರು: ಮೈಸೂರು ವಿದ್ಯಾಲಯದ 2021ರ ಜುಲೈ ತಿಂಗಳಲ್ಲಿ ನಡೆಸಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ 4779 (ಶೇ.6.84) ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರಾಗಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, ‘ಯುಜಿಸಿ ಪರಿಶೀಲನಾ ಸಮಿತಿ ಸದಸ್ಯರು ಪರಿಶೀಲಿಸಿ ಫಲಿತಾಂಶ ಬಿಡುಗಡೆಗೆ ಅನುಮತಿ ನೀಡಿದ್ದು, ನ.2ರಂದು … Continued