ಕುಲಷಿತ ನೀರು ಸೇವನೆಯಿಂದ ಇಬ್ಬರು ಸಾವು, ನಾಲ್ವರು ಅಸ್ವಸ್ಥ

ಮುದ್ದೇಬಿಹಾಳ : ಕಲುಷಿತ ನೀರು ಕುಡಿದು ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಯರಗಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಎರಡು ದಿನಗಳಿಂದ ಈ ಸಮಸ್ಯೆ ಉಲ್ಬಣವಾಗಿದ್ದು ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಮಾಡಿರುವ ಗ್ರಾಮದ ನಿವಾಸಿಗಳು ತೀವ್ರ ಅನಾರೋಗ್ಯಕ್ಕಿಡಾಗಿ ಜೀವಣ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಮುದ್ದೇಬಿಹಾಳ ತಾಲೂಕಿನ ಯರಗಲ್ ಗ್ರಾಮದಲ್ಲಿ ಕುಡಿಯು ನೀರಿಗೆ ಚರಂಡಿ … Continued

ರಾಮನಗರ: ರಾತ್ರಿ ಮನೆಯೊಳಗೇ ನುಗ್ಗಿದ ಚಿರತೆ ರೂಮಿನಲ್ಲಿ ಬಂಧಿಯಾಯ್ತು..!.. ದೃಶ್ಯ ವಿಡಿಯೊದಲ್ಲಿ ಸೆರೆ

ರಾಮನಗರ: ಚಿರತೆಯೊಂದು ಮನೆಗೆ ನುಗ್ಗಿದ ಘಟನೆ ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದಲ್ಲಿ ನಡೆದಿದೆ. ಬೇಟೆಗೆಂದು ನಾಯಿಯನ್ನು ಹುಡುಕಿಕೊಂಡು ಬಂದಿದ್ದ ಚಿರತೆಯು ರೇಣುಕಯ್ಯ ಎಂಬುವರ ಮನೆಗೆ ತಡರಾತ್ರಿ ನುಗ್ಗಿತ್ತು. ರಾತ್ರಿ ಸಪ್ಪಳ ಕೇಳಿ ಎಚ್ಚರವಾದ ಮನೆಯವರು ನೋಡಿದಾಗ ಮನೆಯ ಒಳಗೇ ಚಿರತೆ ಬಂದಿತ್ತು. ಸಮಯಪ್ರಜ್ಞೆ ಮೆರೆದ ಮನೆಯವರು ತಾವು ಸುರಕ್ಷಿತವಾಗಿ ಹೊರಬಂದು ಬಾಗಿಲು ಹಾಕಿ ಚಿರತೆಯನ್ನು ರೂಮಿನೊಳಗೇ … Continued

ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ, ಒಂದು ಮಗು ಪಾರು

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಮಹಿಳೆ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯಲ್ಲಿ ಒಂದು ಮಗುವನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ತಾಯಿ ಲಕ್ಷ್ಮೀ ಏಳಕೆ (28), ಮಕ್ಕಳಾದ ಗೌರಮ್ಮ (6), ಸಾವಿತ್ರಿ (1) ಮೃತಪಟ್ಟಿದ್ದಾರೆ. ಬಾವಿಯಲ್ಲಿ ಮುಳುಗುತ್ತಿದ್ದ ಈಶ್ವರಿ (4)ಯನ್ನು ಸ್ಥಳೀಯರು ರಕ್ಷಿಸಿದ್ದಾರೆ‌. ಮೂವರೂ ಹೆಣ್ಣು ಮಕ್ಕಳನ್ನು … Continued

ಕರ್ನಾಟಕದಲ್ಲಿ ನಾಳೆಯಿಂದ 1ರಿಂದ 5ನೇ ತರಗತಿ ವರೆಗೆ ಶಾಲೆ ಆರಂಭ; ಅನುಸರಿಸಬೇಕಾದ ಮಾರ್ಗಸೂಚಿಗಳು ಇಲ್ಲಿವೆ

ಬೆಂಗಳೂರು: ನಾಳೆಯಿಂದ (ಸೋಮವಾರ) ರಾಜ್ಯಾದ್ಯಂತ 1ರಿಂದ 5ನೇ ತರಗತಿ ವರೆಗೆ ಶಾಲೆಗಳು ತೆರೆಯಲಿವೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಶಾಲೆಗಳಿ ಸ್ವಾಗತಕ್ಕೆ ಸಿದ್ಧವಾಗಿವೆ. ಸದ್ಯ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ 1ರಿಂದ 5ನೇ ತರಗತಿ ವರೆಗೆ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊವಿಡ್ ನಿಯಮದಂತೆ ಭೌತಿಕ ತರಗತಿಗಳು ನಡೆಯಲಿವೆ. ಪ್ರಾಥಮಿಕ ಶಾಲೆ … Continued

ಮದ್ವೆ ಮುಗಿಸಿ ಹಿಂದಿರುಗುವಾಗ ಬಸ್​ ಪಲ್ಟಿ: ಇಬ್ಬರ ಸಾವು, 15ಕ್ಕೂ ಹೆಚ್ಚು ಮಂದಿ ತೀವ್ರ ಗಾಯ

ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ತಾಲೂಕು ಘಾಟಿ ಬಳಿ ಶನಿವಾರ ತಡರಾತ್ರಿ ಖಾಸಗಿ ಬಸ್ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡ ಘಟನೆ ವರದಿಯಾಗಿದೆ. ದೊಡ್ಡಬಳ್ಳಾಪುರ ಮತ್ತು ಗೌರಿಬಿದನೂರು ರಸ್ತೆಯ ಮಧ್ಯೆ ಮಾಕಳಿ ಬೆಟ್ಟದ ಬಳಿ ಘಟನೆ ನಡೆದಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಚಾಲಕನ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾಲ್ಕು ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಕರ್ನಾಟಕದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರ ಸಹ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 26ರಂದು ರಾಜ್ಯಕ್ಕೆ … Continued

ಮನೆಯ ಅಟ್ಟದಲ್ಲಿ ಅಡಗಿದ್ದ ಬೃಹತ್‌ ಕಾಳಿಂಗ ಸರ್ಪ ಹಿಡಿದ ಉರಗ ತಜ್ಞ ಪವನ್, ವಿಡಿಯೋದಲ್ಲಿ ಸೆರೆ..

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣದಲ್ಲಿ ಮನೆಯೊಂದರ ಅಟ್ಟದ ಮೇಲೆ ಸೇರಿಕೊಂಡಿದ್ದ ಕಾಳಿಂಗ ಹಾವನ್ನು ಸೆರೆ ಹಿಡಿಯಲಾಗಿದೆ. ಉರಗ ತಜ್ಞ ಪವನ್ ನಾಯ್ಕ ಮನೆಯೊಳಗೆ ಸೇರಿಕೊಂಡಿದ್ದ ಬೃಹತ್‌ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಇದು ಸುಮಾರು 8ರಿಂದ 10 ಅಡಿಗಳಷ್ಟು ಉದ್ದವಿರಬಹುದು. ಮನೆ ಮೂಲೆಯಲ್ಲಿ ಸಾಮಾನು ಸರಂಜಾಮುಗಳ ಮಧ್ಯೆ ಸೇರಿಕೊಂಡಿದ್ದ ಹಾವನ್ನು … Continued

ಆನ್‌ಲೈನ್ ಜೂಜಾಟ ನಿಷೇಧ ಸಿಂಧುತ್ವ ಪ್ರಶ್ನಿಸಿ ಅರ್ಜಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು: ಕರ್ನಾಟಕದಲ್ಲಿ ಎಲ್ಲ ಬಗೆಯ ಆನ್‌ಲೈನ್ ಜೂಜಾಟ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಆಯುಕ್ತರಿಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ನೋಟಿಸ್‌ ಜಾರಿ ಮಾಡಿದೆ. ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಕರ್ನಾಟಕ ಪೊಲಿಸ್ (ತಿದ್ದುಪಡಿ) ಕಾಯಿದೆ-2021ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಲ್ … Continued

ಚರ್ಚ್‌ಗಳ ಸಮೀಕ್ಷೆಗೆ ರಾಜ್ಯ ಸರ್ಕಾರದ ಆದೇಶ: ಸಮೀಕ್ಷೆ ಆಕ್ಷೇಪಿಸಿ ಪಿಐಎಲ್‌ ಸಲ್ಲಿಕೆ, ಸೋಮವಾರ ವಿಚಾರಣೆ

ಬೆಂಗಳೂರು: ಕರ್ನಾಟಕದಲ್ಲಿರುವ ಚರ್ಚ್‌ಗಳ ಕುರಿತು ಮಾಹಿತಿ ಸಂಗ್ರಹಿಸಲು ಜುಲೈ 7ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಕೆಯಾಗಿದ್ದು, ಕರ್ನಾಟಕ ಹೈಕೋರ್ಟ್‌ ಸೋಮವಾರ ವಿಚಾರಣೆ ನಡೆಸಲಿದೆ. ಮನವಿಯ ಜೊತೆ ಸಲ್ಲಿಸಲಾಗಿರುವ ʼಎʼನಿಂದ ʼಸಿʼ ವರೆಗಿನ ಅನುಬಂಧದ ಭಾಷಾಂತರದ ಪ್ರತಿಗಳನ್ನು ಸಲ್ಲಿಸುವಂತೆ ಅರ್ಜಿದಾರ ಸಂಸ್ಥೆ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ಗೆ ಮುಖ್ಯ ನ್ಯಾಯಮೂರ್ತಿ … Continued

ಮುಂಬೈ-ಕರ್ನಾಟಕದ ಬದಲು ಕಿತ್ತೂರು-ಕರ್ನಾಟಕ ನಾಮಕರಣಕ್ಕೆ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು : ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿಸಿದ್ದಾರೆ. ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ … Continued