ಮೊದಲ ಡೋಸ್ ಲಸಿಕೆ ನೀಡಿಕೆ: ದೇಶಕ್ಕೆ ಕರ್ನಾಟಕ ಪ್ರಥಮ

ಬೆಂಗಳೂರು: ಕರ್ನಾಟಕ ಲಸಿಕೆ ನೀಡಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ರಾಜ್ಯದಲ್ಲಿ ಈವರೆಗೆ 8 ಕೋಟಿ ಡೋಸ್‌ ಲಸಿಕೆ ನೀಡಿದೆ. ಈ ಬಗ್ಗೆ, ಆರೋಗ್ಯ ಇಲಾಖೆಯ ಸಚಿವ ಡಾ.ಕೆ. ಸುಧಾಕರ್‌ ಟ್ವೀಟ್‌ ಮಾಡಿದ್ದು,ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ದೇಶದಲ್ಲಿ ರಾಜ್ಯವೇ ಪ್ರಥಮ ಸ್ಥಾನದಲ್ಲಿದೆ. ಡೋಸ್ ಲಸಿಕೆ ನೀಡಿಕೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಇದೆ. ಇದಕ್ಕಾಗಿ ಜಿಲ್ಲಾಡಳಿತಗಳು, ಆರೋಗ್ಯ … Continued

15 ಸಾವಿರ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧಾರ; ಶೀಘ್ರದಲ್ಲೇ ಅಧಿಸೂಚನೆ

ಬೆಂಗಳೂರು: ಶಿಕ್ಷಕ ಹುದ್ದೆಗಳ ಆಕಾಂಕ್ಷಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ ಸಿಹಿಸುದ್ದಿ ನೀಡಿದ್ದಾರೆ. 15 ಸಾವಿರ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ ಎಂದು ಸಚಿವ ನಾಗೇಶ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ನಾಗೇಶ ಅವರು, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ … Continued

ಕಾಯಿಲೆ ಗುಣಪಡಿಸುವುದಾಗಿ ಹೇಳಿ ಪೂಜಾರಿ ಕೊಟ್ಟ ಬೆತ್ತದ ಏಟಿಗೆ ಮಹಿಳೆ ಸಾವು..!

ಹಾಸನ: ಕಾಯಿಲೆ ಗುಣಪಡಿಸುವುದಾಗಿ ಹೇಳಿ ಅನಾರೋಗ್ಯ ಪೀಡಿತ ಮಹಿಳೆಗೆ ಪೂಜೆ ವೇಳೆ ಪೂಜಾರಿ ಬೆತ್ತದ ಏಟು ನೀಡಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಪಾರ್ವತಿ (37) ಎಂದು ಗುರುತಿಸಲಾಗಿದೆ. ಕಳೆದ ಕೆಲದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಬೇರೆಬೇರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಹೀಗಾಗಿ ದೇವರ ಮೊರೆ … Continued

ಜನರಲ್‌ ಬಿಪಿನ್ ರಾವತ್ ಬಗ್ಗೆ ಅವಹೇಳನಕಾರಿ ಬರಹ: ಪ್ರಕರಣ ದಾಖಲು

ಮಂಗಳೂರು: ಫೇಸ್ ಬುಕ್ ನಲ್ಲಿ ಹೆಲಿಕಾಪ್ಟಾರ್ ದುರಂತದಲ್ಲಿ ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಬಗ್ಗೆ ಅವಹೇಳನ, ಪ್ರಚೊದನಾಕಾರಿ ಬರಹ ಪ್ರಕಟಿಸಿದ ಇಬ್ಬರ ವಿರುದ್ಧ ಮಂಗಳೂರಿನಲ್ಲಿ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕೂನ್ನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್ ಬಿಪಿನ್ ರಾವತ್ ಅವರ ಸಾವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಾಮೆಂಟ್ ಹಾಕುವ ಮೂಲಕ … Continued

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ: ಪೊಲೀಸರ ತನಿಖೆಯಿಂದ ಬೆಳಕಿಗೆ

ಮಂಗಳೂರು: ಮಾರ್ಗನ್ಸ್ ಗೇಟ್‍ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದಕ್ಕೆ ಮತಾಂತರ ಯತ್ನವೇ ಕಾರಣ ಎಂದು ಮಂಗಳೂರು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನೂರ್ ಜಹಾನ್ ಎಂಬ ಮಹಿಳೆ ಮತಾಂತರ ಮಾಡಲು ಯತ್ನಿಸಿದ್ದು ದೃಢವಾಗಿದ್ದು ಆಕೆಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಶನಿವಾರ ತಿಳಿಸಿದ್ದಾರೆ. ನೂರ್‌‌ಜಹಾನ್‌ … Continued

ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ: ತಾತ್ಕಾಲಿಕ ಪೊಲೀಸ್ ಟೌನ್ ಶಿಪ್ ನಿರ್ಮಾಣ, ವಾಸ್ತವ್ಯಕ್ಕೆ ವ್ಯವಸ್ಥೆ

ಬೆಳಗಾವಿ :ಡಿಸೆಂಬರ್13 ರಿಂದ 24ರ ವರೆಗೆ ಬೆಳಗಾವಿಯಲ್ಲಿ ಚಳಗಾಲದ ವಿಧಾನ ಮಂಡಲದ ಅಧಿವೇಶನ ನಡೆಯಲಿದ್ದು , ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಘಟಕದ ವತಿಯಿಂದ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ. ಅಧಿವೇಶನದ ಕುರಿತು ಬೆಳಗಾವಿ ನಗರ ಪೊಲೀಸ್ ಹೊರತುಪಡಿಸಿ ಹೊರ ಜಿಲ್ಲೆಗಳಿಂದ ಸುಮಾರು 4000 ಪೊಲೀಸ್ ಸಿಬ್ಬಂದಿ, 300 ಪೊಲೀಸ್ ಅಧಿಕಾರಿಗಳು ಹಾಗೂ 50 ಪೊಲೀಸ್ … Continued

ಓಮಿಕ್ರಾನ್ ಆತಂಕ: ಕರ್ನಾಟಕ ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಹಾಗೂ ಓಮಿಕ್ರಾನ್ ಭೀತಿ ಹೆಚ್ಚುತ್ತಿರುವ ನಡುವೆಯೇ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಡಿಸ್ಚಾರ್ಜ್ ಗೆ ಅನುಸರಿಸಬೇಕಾದ ನಿಯಮಗಳ ಕುರಿತು ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಮೈಲ್ಡ್ ೋಮಿಕ್ರಾನ್ ರೋಗಿಗೆ ಡಿಸ್ಜಾರ್ಜ್ ಮಾಡಲು ಅನುಸರಿಬೇಕಾದ ನಿಯಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಕ್ಲಿನಿಕಲ್ ‌ಎಕ್ಸ್ ಪರ್ಟ್ ಕಮಿಟಿ … Continued

ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ ಅವರ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕೊಲೆ, ಅಪಹರಣ ಸೇರಿದಂತೆ 17 ಪ್ರಕರಣದಲ್ಲಿ ಬೇಕಾಗಿದ್ದ ಲೋಹಿತ್ ಬಂಧನಕ್ಕೆ ಹೋದಾಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಹೀಗಾಗಿ ಆತನ ಕಾಲಿಗೆ ಗುಂಡುಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದ ತಲೆ ಮರೆಸಿಕೊಂಡಿದ್ದ … Continued

ವಿಧಾನಪರಿಷತ್ ಚುನಾವಣೆಯಲ್ಲಿ ಮತ ಹಾಕಿ ಬಂದ ನಂತರ ಗ್ರಾ.ಪಂ ಸದಸ್ಯ ಸಾವು

ಹಳಿಯಾಳ : ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಿ ಮನೆಗೆ ಬಂದಿದ್ದ ಗ್ರಾಮ ಪಂಚಾಯತ ಸದಸ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದ ಬಗ್ಗೆ ವರದಿಯಾಗಿದೆ. ತಾಲೂಕಿನ ಮುರ್ಕವಾಡದಲ್ಲಿ ಈ ಘಟನೆ ನಡೆದಿದ್ದು, ಲಕ್ಷ್ಮಣ ಶಿವಾರಾಯ ಮಾನೆ ( 60 ) ಮೃತ ದುರ್ದೈವಿ ಎಂದು ವರದಿ ತಿಳಿಸಿದೆ. ಶುಕ್ರವಾರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಲಕ್ಷ್ಮಣ ಅವರು … Continued

ನಾನು ಸಿಎಂ ಆಗುವ ಕುರಿತು ಎಲ್ಲಯೂ ಮಾತನಾಡಿಲ್ಲ: ವದಂತಿಗಳಿಗೆ ತೆರೆ ಎಳೆದ ಸಚಿವ ನಿರಾಣಿ

ಬಾಗಲಕೋಟೆ: ಮುಖ್ಯಮಂತ್ರಿ ಆಗುತ್ತೇನೆ ಎಂದು ನಾನು ಎಲ್ಲಿಯೂ ‌ಹೇಳಿಲ್ಲ ಎಂದು ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಇಂದು (ಶುಕ್ರವಾರ) ಬಾಗಲಕೋಟೆಜಿಲ್ಲೆಯ ‌ಬೀಳಗಿ ಪಟ್ಟಣ ಪಂಚಾಯತದಲ್ಲಿ ವಿಧಾನಪರಿಷತ್‌ಗೆ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ. ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ … Continued