ಕಾಶಿಯಲ್ಲಿ ‘ಗಂಗಾ ಆರತಿ’ಯಂತೆ ಹರಿಹರದಲ್ಲಿ ‘ತುಂಗಾ ಆರತಿ ಮಂಟಪ’ ನಿರ್ಮಾಣ: ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಶಿಯ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪಗಳನ್ನು ನಿರ್ಮಾಣದ 30 ಕೋಟಿ ರೂ. ವೆಚ್ಚದ ಯೋಜನೆಗೆ ಜನವರಿ 14, 15 ರ ಹರಜಾತ್ರೆ ವೇಳೆ ಚಾಲನೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹರಿಹರದ ಪಂಚಮಸಾಲಿ ಗುರುಪೀಠದ ಆಶ್ರಯದಲ್ಲಿ ನಡೆಯಲಿರುವ ಹರಜಾತ್ರೆಯ ಲಾಂಛನ, ಧ್ವನಿಸುರುಳಿ, ಟಿ ಶರ್ಟ್‌ಗಳನ್ನು ಗುರುವಾರ ಬಿಡುಗಡೆ … Continued

ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಬಿವಿಪಿ, ಕಾನೂನು ವಿವಿಗೆ ಮುತ್ತಿಗೆ

ಹುಬ್ಬಳ್ಳಿ: ಕಾನೂನು ಪದವಿ ಆಫ್ ಲೈನ್ ಪರೀಕ್ಷೆ ರದ್ದತಿ ಹಾಗೂ ಕೂಡಲೇ ತರಗತಿ ಆರಂಭಕ್ಕೆ ಒತ್ತಾಯಿಸಿ, ಕಾನೂನು ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ, ಎಬಿವಿಪಿಯಿಂದ ಸಾವಿರಾರು ವಿದ್ಯಾರ್ಥಿಗಳು ಗುರುವಾರ ಕಾನೂನು ವಿಶ್ವ ವಿದ್ಯಾಲಯದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ವಿದ್ಯಾರ್ಥಿಗಳು ರಾಯಾಪುರದ ಮಹಂತ್ ಕಾಲೇಜಿನಿಂದ ನವನಗರದ ಕಾನೂನು ವಿವಿ ವರೆಗೆ … Continued

ಮೂವರನ್ನ ಗುಂಡಿಕ್ಕಿ ಕೊಂದಿದ್ದ ಯೋಧನಿಗೆ 24 ವರ್ಷ ಶಿಕ್ಷೆ

ಹುಬ್ಬಳ್ಳಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ 11 ವರ್ಷಗಳ ಹಿಂದೆ ಕುಂದಗೋಳ ತಾಲೂಕು ಬೆಟದೂರು ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಸಿಆರ್ ಪಿಎಫ್ ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರಗೆ 24 ವರ್ಷ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಿ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ. … Continued

ನಾಳೆ ವಿಧಾನ ಪರಿಷತ್ತಿನ ೨೫ ಸ್ಥಾನಗಳಿಗೆ ಚುನಾವಣೆ: 90 ಅಭ್ಯರ್ಥಿಗಳ ಹಣೆಬರಹ ನಿರ್ಧಾರ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ೨೫ ಸ್ಥಾನಗಳಿಗೆ ನಾಳೆ, ಶುಕ್ರವಾರ ನಡೆಯುವ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೊನೆ ಕ್ಷಣದ ಕಸರತ್ತು ನಡೆಸಿವೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ೨೦ ಕ್ಷೇತ್ರಗಳ ೨೫ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಿರುವ ೯೦ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ … Continued

ಬಿಪಿನ್‌ ರಾವತ್‌ ನಿಧನದಿಂದ ದೇಶವು ಮಹಾನ್‌ ರಕ್ಷಣಾ ನೀತಿಜ್ಞ, ಅಪ್ರತಿಮ ದೇಶಭಕ್ತ- ಸಮರ್ಥ ನಾಯಕನನ್ನು ಕಳೆದುಕೊಂಡಿದೆ: ದತ್ತಾತ್ರೇಯ ಹೊಸಬಾಳೆ

ಬೆಂಗಳೂರು: ಹೆಲಿಕಾಪ್ಟರ್‌ ಅಪಘಾತದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಮೃತಪಟ್ಟಿದ್ದು ಅತ್ಯಂತ ದುಃಖಕರ ವಿಷಯ. ಅವರ ನಿಧನದಿಂದ ದೇಶವು ಮಹಾನ್‌ ರಣನೀತಿಜ್ಞ, ರಕ್ಷಣಾ ತಂತ್ರಜ್ಞ, ಅಪ್ರತಿಮ ದೇಶಭಕ್ತ ಹಾಗೂ ಸಮರ್ಥ ನಾಯಕರೊಬ್ಬರನ್ನು ಕಳೆದುಕೊಂಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕಂಬನಿ ಮಿಡಿದಿದ್ದಾರೆ. ಬಿಪಿನ್‌ ರಾವತ್‌ … Continued

ಸದ್ಯಕ್ಕೆ ನೈಟ್, ವೀಕೆಂಡ್ ಕರ್ಫ್ಯೂ ಸದ್ಯಕ್ಕಿಲ್ಲ : ಕ್ರಿಸ್‌ಮಸ್, ಹೊಸ ವರ್ಷಾಚರಣೆ ಬಗ್ಗೆ ವಾರದ ಬಳಿಕ ನಿರ್ಧಾರ- ಸಿಎಂ ಬೊಮ್ಮಾಯಿ

ಬೆಂಗಳೂರು: ಸರ್ಕಾರ ಯಾವುದೇ ರೀತಿಯ ಅವಸರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ತಜ್ಞರ ಜೊತೆಗೆ ಚರ್ಚೆ ನಡೆಸಿದ್ದೇವೆ. ಓಮಿಕ್ರಾನ್ ಬಗ್ಗೆ ವಿವರಣೆ ನೀಡಿದ್ದಾರೆ. ಈಗಿರುವ ಪ್ರಕರಣಗಳಿಂದ ಗಾಬರಿಯಾಗಬೇಕಿಲ್ಲ ಎಂದು ಹೇಳಿದ್ದಾರೆ. ಆದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಟ್ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ … Continued

ಮಗಳ ಸಾವಿನಿಂದ ಮನನೊಂದು ಅಳಿಯನ ಮನೆ ಮುಂದೆ ಎಡೆಯಿಟ್ಟು ಆತ್ಮಹತ್ಯೆ ಮಾಡಿಕೊಂಡ ತಂದೆ

ಹಾಸನ: ಮಗಳ ಸಾವಿನಿಂದ ತೀವ್ರವಾಗಿ ಮನನೊಂದು ಅಳಿಯನ ಮನೆ ಮುಂದೆಯೇ ತಂದೆ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತನನ್ನು ಎಸ್.ಸೋಮನಹಳ್ಳಿಯ ನಾಗರಾಜ್ (55) ಎಂದು ಗುರುತಿಸಲಾಗಿದೆ. ಮಗಳಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ಮಾಳೆಗೆರೆ ಗ್ರಾಮದ ಅಳಿಯನ ಮನೆ ಬಾಗಿಲಲ್ಲಿ ಎಡೆಯಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ … Continued

ಜನ್ಮದಿನದಂದೇ ಮಾಜಿ ಸಚಿವ ಎಸ್. ಆರ್‌. ಮೋರೆ‌ ನಿಧನ

ಧಾರವಾಡ: ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಎಸ್. ಆರ್‌.ಮೋರೆ‌ ( 82 ವರ್ಷ) ಇಂದು ಗುರುವಾರ ನಿಧನರಾಗಿದ್ದಾರೆ. ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡ ಎಸ್ ಡಿ‌ ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು, ಗುರುವಾರ ನಿಧನರಾಗಿದ್ದಾರೆ. ಅವರು ತಮ್ಮ ಜನ್ಮದಂದೇ ಇಹಲೋಕ ತ್ಯಜಿಸಿದ್ದಾರೆ. ನಾಲ್ಕು ಬಾರಿ ಧಾರವಾಡದಿಂದ ವಿಧಾನ ಸಭೆಗೆ … Continued

ಕಾರವಾರ: ಕಚೇರಿಯಲ್ಲೇ ನೇಣು ಬಿಗಿದುಕೊಂಡು ಪೊಲೀಸ್ ಕಾನ್‍ಸ್ಟೇಬಲ್ ಆತ್ಮಹತ್ಯೆ

ಕಾರವಾರ: ಪೊಲೀಸ್ ಕಾನ್ಸಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಮೃತರನ್ನು ಗುರುಪ್ರಸಾದ್ ನಾಯ್ಕ (35) ಎಂದು ಗುರುತಿಸಲಾಗಿದ್ದು, ಇವರು ಡಿ.ಆರ್.ಪೊಲೀಸ್ ಪೇದೆಯಾಗಿದ್ದಾರೆ. ಕಾರವಾರದ ಡಿ.ಎ.ಆರ್ ಕಚೇರಿಯಲ್ಲಿ ಇಂದು ಕರ್ತವ್ಯಕ್ಕೆ ಹಾಜರಾದ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಲ್ಕು ದಿನದ ಹಿಂದೆ ರಜೆಯ ಮೇಲೆ ಅವರು ತಮ್ಮ ಗ್ರಾಮವಾದ ಜಿಲ್ಲೆಯ ಹೊನ್ನಾವರ … Continued

ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌: ಡೆತ್‌ ನೋಟಲ್ಲಿ ಮತಾಂತರ ಯತ್ನದ ಆರೋಪ, ಓರ್ವ ಮಹಿಳೆ ವಶಕ್ಕೆ

ಮಂಗಳೂರು: ಡೆತ್‌ ನೋಟ್‌ ಸಿಕ್ಕಿದ ನಂತರ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮತಾಂತರಕ್ಕೆ ಒತ್ತಾಯ ಇಡೀ ಕುಟುಂಬ ಅಂತ್ಯವಾಗಲು ಕಾರಣವೇ ಎಂಬ ಪ್ರಶ್ನೆ ಮೂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಹಾಗೂ ಮತಾಂತರವೇ ಪ್ರಮುಖ ಕಾರಣ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಶೇರಿಗುಪ್ಪ ಡೆತ್ ನೋಟ್ ಬರೆದಿಟ್ಟಿದ್ದು , … Continued