ರಾಜ್ಯಸಭಾ ಕಲಾಪಕ್ಕೆ ಅಡ್ಡಿ; 6 ಟಿಎಂಸಿ ಸದಸ್ಯರ ಅಮಾನತು

ನವದೆಹಲಿ: ಸಂಸತ್ ಕಲಾಪ ಆರಂಭವಾದಾಗಿನಿಂದಲೂ ಪೆಗಾಸಸ್ ಹಗರಣ, ಕೃಷಿ ಕಾಯ್ದೆಗೆ ವಿರೋಧ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದು, ಇಂದೂ ಕೂಡ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ ಕೋಲಾಹಲವೆಬ್ಬಿಸಿದ ಕಾರಣಕ್ಕೆ 6 ಟಿಎಂಸಿ ಸದಸ್ಯರನ್ನು ಅಮಾನತುಗೊಳಿಸಿ ಸಭಾಪತಿ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದಾರೆ. ಟಿಎಂಸಿ ಸದಸ್ಯರಾದ ಡೋಲಾ ಸೇನ್, ಅರ್ಪಿತಾ ಘೋಷ್, ನದೀಮ್ ಹಕ್, … Continued

ಭಾರತಕ್ಕೆ ಮತ್ತೊಂದು ಪದಕ: ಬಾಕ್ಸಿಂಗ್​ನಲ್ಲಿ ಲವ್ಲೀನಾಗೆ ಕಂಚು

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ನಲ್ಲಿ ಇಂದು (ಬುಧವಾರ) ನಡೆದ ಮಹಿಳೆಯರ ಬಾಕ್ಸಿಂಗ್​ ವೆಲ್ಟರ್​​ವೇಯ್ಟ್ ಕ್ಯಾಟಗರಿ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತದ ಲವ್ಲೀನಾ ಬೊರ್ಗೊಹೈನ್ ಪರಾಜಯ ಅನುಭವಿಸಿದರೂ, ಭಾರತಕ್ಕೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಬಾಕ್ಸಿಂಗ್ ಕ್ಷೇತ್ರದಲ್ಲಿ ಭಾರತಕ್ಕೆ ಲಭಿಸಿರುವ ಈವರೆಗಿನ ಮೂರನೇ ಪದಕವಾಗಿದ್ದು, ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಒಟ್ಟಾರೆಯಾಗಿ ಲಭಿಸಿರುವ ಮೂರನೇ ಪದಕ ಕೂಡ ಆಗಿದೆ. … Continued

ಟೋಕಿಯೊ ಒಲಿಂಪಿಕ್ಸ್: ಕುಸ್ತಿಯಲ್ಲಿ ರವಿಕುಮಾರ್, ದೀಪಕ್ ಪುನಿಯಾ ಸೆಮಿಫೈನಲ್ ಪ್ರವೇಶ, ಭಾರತದ ಪದಕದ ಭರವಸೆ ಜೀವಂತ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟುಗಳು ಟೋಕಿಯೊದ ಮಕುಹರಿ ಮೆಸ್ಸೆ ಹಾಲ್‌ನಲ್ಲಿ ಬುಧವಾರ ಭಾರತದ ಎರಡು ಪದಕದ ಭರವಸೆ ಅಸೆ ಜೀವಂತವಾಗಿಟ್ಟಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತ ಭಾರತದ ರವಿ ಕುಮರ್ ದಹಿಯಾ ಪುರುಷರ ಫ್ರೀಸ್ಟೈಲ್ 57 ಕೆಜಿ ಸೆಮಿಫೈನಲ್ ತಲುಪಿದ್ದಾರೆ. 4 ನೇ ಶ್ರೇಯಾಂಕಿತ ಕುಸ್ತಿಪಟು ತಾಂತ್ರಿಕ ಶ್ರೇಷ್ಠತೆಯ ಮೂಲಕ 16 ನೇ … Continued

ಭಾರತ-ಚೀನಾ ಜಂಟಿ ಹೇಳಿಕೆ ಬೆನ್ನಲ್ಲೇ ಗಾಲ್ವಾನ್ ಘರ್ಷಣೆಯ ವಿಡಿಯೊ ಬಿಡುಗಡೆ ಮಾಡಿದ ಚೀನಾ

ನವದೆಹಲಿ: ಚೀನಾದ ಆನ್‌ಲೈನ್ ಹ್ಯಾಂಡಲ್‌ಗಳು ಕಳೆದ ವರ್ಷ ಜೂನ್ ನಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿವೆ. ಪೂರ್ವ ಲಡಾಖ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿವಾರಿಸಲು ಕಮಾಂಡರ್ ಮಟ್ಟದ ಮಿಲಿಟರಿ ಮಾತುಕತೆಗಳನ್ನು ಮುಂದುವರಿಸುವುದಾಗಿ ಭಾರತ ಮತ್ತು ಚೀನಾ ನಿನ್ನೆ ಜಂಟಿ ಹೇಳಿಕೆಯನ್ನು ನೀಡಿದ ಕೆಲವು ಗಂಟೆಗಳ … Continued

ಕೇರಳದಲ್ಲಿ ಮತ್ತೆ 23,676 ಹೊಸ ಕೊರೊನಾ ಸೋಂಕು ದಾಖಲು, 7 ದಿನಗಳಲ್ಲಿ ಭಾರತದ ಕೋವಿಡ್ ಪ್ರಕರದಲ್ಲಿ 49.85% ವರದಿ

ತಿರುವನಂತಪುರಂ: ಕೇರಳವು ಮಂಗಳವಾರ ಮತ್ತೊಮ್ಮೆ ಕಳೆದ 24 ಗಂಟೆಗಳಲ್ಲಿ 20,000 ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕುಗಳನ್ನು ದಾಖಲಿಸಿದೆ, ಇದು ಸಾಂಕ್ರಾಮಿಕ ರೋಗದ ಮೂರನೇ ಅಲೆಯ ದೇಶದ ಆತಂಕದ ಮೀಟರ್ ಅನ್ನು ಹೆಚ್ಚಿಸಿದೆ. ಕಳೆದ ಒಂದು ದಿನದಲ್ಲಿ ಕೇರಳದಲ್ಲಿ 23,676 ಜನರು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ, ಇದು ರಾಜ್ಯದ ಸೋಂಕಿನ ಸಂಖ್ಯೆಯನ್ನು … Continued

3 ವರ್ಷಗಳಲ್ಲಿ 93 ಸಾವಿರ ಸೈಬರ್ ಅಪರಾಧ ಪ್ರಕರಣ; ಲೋಕಸಭೆಗೆ ಮಾಹಿತಿ ನೀಡಿದ ಸರ್ಕಾರ

ನವದೆಹಲಿ: 2017 ರಿಂದ 2019 ರ ನಡುವೆ ದೇಶದಲ್ಲಿ ಸುಮಾರು 93,000 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ ಎಂದು ಲೋಕಸಭೆಗೆ ಮಂಗಳವಾರ ತಿಳಿಸಲಾಯಿತು. ಇದೇ ಅವಧಿಯಲ್ಲಿ ದೇಶದಲ್ಲಿ 46 ಸೈಬರ್ ಭಯೋತ್ಪಾದನೆ ಪ್ರಕರಣಗಳು ವರದಿಯಾಗಿವೆ ಮತ್ತು ಸೈಬರ್ ಭಯೋತ್ಪಾದನೆಗೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 66 ಎಫ್ ಅಡಿಯಲ್ಲಿ ಎಫ್ಐಆರ್​ಗಳನ್ನು ದಾಖಲಿಸಲಾಗಿದೆ … Continued

ಕೇರಳಕ್ಕೆ ಕೊರೊನಾ 3ನೇ ಅಲೆ ಎಚ್ಚರಿಕೆ ಕೊಟ್ಟ ಆರೋಗ್ಯ ತಜ್ಞರು

ತಿರುವನಂತಪುರಂ: ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 3ನೇ ಅಲೆ ಆರಂಭವಾಗುವ ಎಚ್ಚರಿಕೆಯನ್ನು ಆರೋಗ್ಯ ತಜ್ಞರು ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರವು ಇದನ್ನು ಮೂರನೇ ಅಲೆ ಎಂದು ಅಧಿಕೃತವಾಗಿ ಕರೆದಿಲ್ಲ, ಆದರೆ ಜುಲೈ 4 ರಿಂದ ಪ್ರತಿ ದಿನವೂ 12 ರಿಂದ 14 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಜುಲೈನಿಂದ ದಿನನಿತ್ಯ 20 ರಿಂದ … Continued

2 ವರ್ಷದ 45 ಕೆಜಿ ತೂಕವಿದ್ದ ಹೆಣ್ಣು ಮಗುವಿಗೆ ದೆಹಲಿ ಆಸ್ಪತ್ರೆಯಲ್ಲಿ ಬ್ಯಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆ..!

ನವದೆಹಲಿ: ಎರಡು ವರ್ಷಕ್ಕೇ ಸುಮಾರು 45 ಕೆಜಿ ತೂಕವಿದ್ದ ಹೆಣ್ಣುಮಗುವಿಗೆ ದೆಹಲಿ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಬ್ಯಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆ (Bariatric Surgery) ಮಾಡಲಾಗಿದೆ. ಇದು ತೀರ ಅಪರೂಪದ ಹಾಗೂ ಅಸಹಜ ಪ್ರಕರಣವಾಗಿದೆ. ಬಾಲಕಿಗೆ ಅತಿಯಾಗಿ ತೂಕವಿದ್ದ ಕಾರಣದಿಂದ ಅವಳಿಗೆ ವೀಲ್​ಚೇರ್​​ ಬಿಟ್ಟು ಕೆಳಗೆ ಇಳಿಯಲು ಸಾಧ್ಯವಿರಲಿಲ್ಲ. ಹೀಗಾಗಿ ಬಾಲಕಿಗೆ ದೆಹಲಿಯ ಮ್ಯಾಕ್ಸ್ ಸೂಪರ್​ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಬ್ಯಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆ … Continued

ದೇಶದ 24 ವಿಶ್ವವಿದ್ಯಾನಿಲಯಗಳು ನಕಲಿ ಎಂದು ಘೋಷಿಸಿದ ಯುಜಿ: ಧರ್ಮೇಂದ್ರ ಪ್ರಧಾನ್, ಮಾಹಿತಿ ಇಲ್ಲಿದೆ

ನವದೆಹಲಿ: ಕರ್ನಾಟಕದ ಒಂದು ವಿಶ್ವ ವಿದ್ಯಾಲಯ ಸೇರಿದಂತೆ ದೇಶದಲ್ಲಿ 24 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಲಾಗಿದೆ ಎಂದು ಖುದ್ದು ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ ) ಮಾಹಿತಿ ನೀಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಲೋಕಸಣೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಉತ್ತರಿಸಿ, ದೇಶದಲ್ಲಿ ನಿಯಮ ಉಲ್ಲಂಘನೆ ಮಾಡಿದ ಕುರಿತು ಎರಡು ವಿವಿಗಳನ್ನು ಗುರುತಿಸಲಾಗಿದ್ದು, ದೇಶದಲ್ಲಿರುವ ಒಟ್ಟು … Continued

ಬೇರೆ ಬುಡಕಟ್ಟು ಹುಡುಗಿ ಮದುವೆಯಾಗಿದ್ದಕ್ಕೆ ಗ್ರಾಮದ ಕಾಂಗರೂ ಕೋರ್ಟಿನಿಂದ ಯುವಕನಿಗೆ 25 ಲಕ್ಷ ರೂ. ದಂಡ..!

ಕೆಯೊಂಜರ್: ಕಿಯೋಂಜರಿನ ಬುಡಕಟ್ಟು ಯುವಕನಿಗೆ ಬೇರೆ ಹಳ್ಳಿಯ ಹುಡುಗಿಯನ್ನು ಮದುವೆಯಾಗಿ ಮನೆಗೆ ಕರೆತಂದ ನಂತರ ಹಳ್ಳಿಯ ಕಾಂಗರೂ ನ್ಯಾಯಾಲಯವು ಆತನಿಗೆ 25 ಲಕ್ಷ ರೂ.ಗಳ ದಂಡ ವಿಧಿಸಿದೆ. ಹೀಗಾಗಿ ಅವರು ಬೇರೆ ಸ್ಥಳದಲ್ಲಿ ತಮ್ಮ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದಾರೆ. ಈ ಘಟನೆಯು ಘಾಸಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಮಲಿಸಾ ಪಂಚಾಯತ್‌ನ ನಿಯಾಲಿಜರನ್ ಗ್ರಾಮದಿಂದ ವರದಿಯಾಗಿದೆ ಎಂದು ನ್ಯೂ … Continued