ಬಿಜೆಪಿ ನಾಯಕ ತಜಿಂದರ್ ಬಗ್ಗಾಗೆ ರಿಲೀಫ್‌ ನೀಡಿದ ಹೈಕೋರ್ಟ್ : ಜುಲೈ 5ರ ವರೆಗೆ ಬಂಧನಕ್ಕೆ ನಿರ್ಬಂಧ

ಚಂಡಿಗಡ: ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರಿಗೆ ಪ್ರಮುಖ ನಿರಾಳತೆಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ಪಂಜಾಬ್ ಸರ್ಕಾರವನ್ನು ಜುಲೈ 5 ರವರೆಗೆ ಬಿಜೆಪಿ ನಾಯಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ಬಂಧಿಸಿದೆ. ಕಳೆದ ವಾರ ಮೊಹಾಲಿ ನ್ಯಾಯಾಲಯವು ತನ್ನ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್‌ಗೆ ತಡೆಯಾಜ್ಞೆ ನೀಡುವಂತೆ ಕೋರಿ ಬಗ್ಗಾ ಸಲ್ಲಿಸಿದ್ದ ಅರ್ಜಿಯ … Continued

ಮೇರು ಸಂಗೀತಗಾರ, ಸಂತೂರ್‌ ಮಾಂತ್ರಿಕ ಪದ್ಮವಿಭೂಷಣ ಪಂಡಿತ್ ಶಿವಕುಮಾರ ಶರ್ಮಾ ವಿಧಿವಶ

ನವದೆಹಲಿ: ಹಿಂದೂಸ್ತಾನೀ ಸಂಗೀತದ ಸಂತೂರ್ ಮಾಂತ್ರಿಕ ಹಾಗೂ ಸಂಗೀತ ಸಂಯೋಜಕ ಪದ್ಮವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಆರು ತಿಂಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್‌ಗೆ ಒಳಗಾಗಿದ್ದರು. ಅವರು ಅವರು ಮೇ 15 ರಂದು ಭೋಪಾಲ್ ಲೈವ್ ಕನ್ಸರ್ಟ್‌ನಲ್ಲಿ ಕೊಳಲು ದಂತಕಥೆ … Continued

10 ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರೇ? ಮಂಗಳವಾರ ಸುಪ್ರೀಂಕೋರ್ಟ್‌ನಿಂದ ವಿಚಾರಣೆ

ನವದೆಹಲಿ: ಅಲ್ಪಸಂಖ್ಯಾತರ ಎಂದು ಅಧಿಸೂಚನೆ ಹೊರಡಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ ಮತ್ತು ಈ ಸಂಬಂಧ ಯಾವುದೇ ನಿರ್ಧಾರವನ್ನಾದರೂ ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ನಂತರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 10 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ವಾದಿಸಿ ರಾಜ್ಯ ಮಟ್ಟದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸಲು ಮಾರ್ಗಸೂಚಿಗಳನ್ನು ರೂಪಿಸಲು ನಿರ್ದೇಶನಗಳನ್ನು … Continued

ಪಂಜಾಬ್‌ನ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಸ್ಫೋಟ-ಭಯೋತ್ಪಾದನೆ ಕೋನ ತಳ್ಳಿಹಾಕಿದ ಪೊಲೀಸ್‌: ಮೂಲಗಳು

ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ನ ಗುಪ್ತಚರ ಕಚೇರಿಯ ಮೂರನೇ ಮಹಡಿಯಲ್ಲಿ ಸೋಮವಾರ ರಾತ್ರಿ ಸಣ್ಣ ಸ್ಫೋಟ ಸಂಭವಿಸಿದ್ದು, ಕಿಟಕಿಗಳು ಒಡೆದು ಆಸ್ತಿಗೆ ಹಾನಿಯಾಗಿದೆ. ರಾಕೆಟ್ ಲಾಂಚರ್ ಬಳಸಿ ಕಟ್ಟಡದ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ (ಆರ್‌ಪಿಜಿ) ಎಸೆಯಲಾಯಿತು ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ, ಪೊಲೀಸ್ ಮೂಲಗಳು ಸ್ಫೋಟವು ಭಯೋತ್ಪಾದಕ ದಾಳಿಯಲ್ಲ ಮತ್ತು ಕಚೇರಿಯಲ್ಲಿ ಇರಿಸಲಾಗಿದ್ದ ಸ್ಫೋಟಕಗಳಿಂದ ಸಂಭವಿಸಿದೆ … Continued

ದೇಶದ್ರೋಹ ಕಾನೂನಿನ ಮರುಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ದೇಶದ್ರೋಹದ ಕಾನೂನಿನ ಐಪಿಸಿ ಸೆಕ್ಷನ್ 124 ಎ ಅನ್ನು ಮರುಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ದೇಶವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸಿಕೊಳ್ಳುತ್ತಿರುವ ಸಮಯದಲ್ಲಿ ವಸಾಹತುಶಾಹಿ ಕಾನೂನುಗಳನ್ನು ತೊಡೆದುಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಸರ್ಕಾರ ವಿವಿಧ ವಸಾಹತುಶಾಹಿ ಕಾನೂನುಗಳನ್ನು ಮರುಪರಿಶೀಲಿಸಲು ನಿರ್ಧರಿಸಿದೆ … Continued

ವಿದ್ಯುತ್ ಕೈಕೊಟ್ಟು ಯಡವಟ್ಟು : ತನ್ನ ಸಹೋದರಿಯ ವರನಿಗೆ ಹಾರಹಾಕಿ ಮದುವೆಯಾದ ವಧು..!

ಉಜ್ಜಯಿನಿ (ಮಧ್ಯಪ್ರದೇಶ) : ಇಬ್ಬರು ಸಹೋದರಿಯರು ಇಬ್ಬರು ವರಗಳ ಜೊತೆ ಮದುವೆಯಾಗಬೇಕಿದ್ದ ಸಮಾರಂಭದಲ್ಲಿ ವಿದ್ಯುತ್ ಕೈಕೊಟ್ಟು ದೊಡ್ಡ ಯಡವಟ್ಟಾಗಿದೆ. ವಿದ್ಯುತ್‌ ಇಲ್ಲದೆ ಕತ್ತಲೆಯಲ್ಲಿಯೇ ಹಾರ ಬದಲಾಯಿಸುವಾಗ ವಧು-ವರರೇ ಅದಲುಬದಲಾಗಿದ್ದಾರೆ…! ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇಬ್ಬರು ಸಹೋದರಿಯರ ವಿವಾಹ ನಡೆಯುತ್ತಿದ್ದಾಗ ವಿದ್ಯುತ್ ವ್ಯತ್ಯಯದಿಂದ ಗೊಂದಲ ಉಂಟಾಗಿ ಕತ್ತಲೆಯಲ್ಲಿ, ವಧು-ವರರು ಅದಲು ಬದಲಾಗಿ ತಮಗೆ ನಿಗದಿಯಾದ ವರನಿಗೆ ಹಾರ ಹಾಕದೆ … Continued

ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಆಡಳಿತ ಪಕ್ಷ -ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಆಡಳಿತ ಪಕ್ಷದ ಸಂಸದ ಸಾವು: ವರದಿ

ಕೊಲಂಬೊ: ಶ್ರೀಲಂಕಾದ ನಿಟ್ಟಂಬುವಾ ಪಟ್ಟಣದಲ್ಲಿ ಸೋಮವಾರ ಶ್ರೀಲಂಕಾದ ಆಡಳಿತ ಪಕ್ಷ ಮತ್ತು ಸರ್ಕಾರದ ವಿರೋಧಿ ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದರಿಂದ ಹಿರಿಯ ಸಂಸದರೊಬ್ಬರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಶ್ರೀಲಂಕಾದ ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತುಕೋರಾಲಾ ಅವರು ಸೋಮವಾರ ರಾಜಧಾನಿ ಕೊಲಂಬೊದ ಹೊರಗೆ ಸರ್ಕಾರಿ ವಿರೋಧಿ ಪ್ರತಿಭಟನಾಕಾರರೊಂದಿಗಿನ ಘರ್ಷಣೆಯ ನಂತರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸುದ್ದಿ … Continued

ಅತ್ಯಾಚಾರ ಪ್ರಕರಣ: ಖ್ಯಾತ ಮಲಯಾಳಂ ನಟ ವಿಜಯಬಾಬು ವಿರುದ್ಧ ಬಂಧನದ ವಾರಂಟ್‌

ತಿರುವನಂತಪುರ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂನ ಖ್ಯಾತ ನಟ ವಿಜಯಬಾಬು ಅವರಿಗೆ ಕೇರಳದ ಪೊಲೀಸರು ಬಂಧನದ ವಾರೆಂಟ್ ಹೊರಡಿಸಿದ್ದಾರೆ. ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಲೈಂಗಿಕ ಬಳಸಿಕೊಂಡು ವಂಚಿಸಿದ್ದಾರೆಂದು ಮಹಿಳೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಿಳೆ ದೂರು ನೀಡಿದ್ದಾಗಿನಿಂದಲೂ ನಟ ವಿಜಯ್ ತಲೆ ಮರೆಸಿಕೊಂಡಿದ್ದಾರೆ. ನಟನನ್ನು ಬಂಧಿಸುವಂತೆ ಎನಾರ್ಕುಲಂನ ಕೋರ್ಟ್ ರೆಕಾರ್ಡ್ ಕಾರ್ನರ್ ನೋಟಿಸ್ ಅನ್ನು … Continued

ಮದುವೆ ಗಂಡು ಧೋತಿ-ಕುರ್ತಾ ಬದಲು ಶೇರ್ವಾನಿ ಧರಿಸಿದ್ದೇ ತಪ್ಪಾಯ್ತು.. ಮದುವೆ ಮನೆಯಲ್ಲೇ ಕಲ್ಲು ತೂರಾಟ ನಡೆದ್ಹೋಯ್ತು….!

ಭೋಪಾಲ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಬುಡಕಟ್ಟು ವರನೊಬ್ಬ ತನ್ನ ಮದುವೆಯಲ್ಲಿ ಧೋತಿ ಬದಲು ‘ಶೆರ್ವಾನಿ’ ಧರಿಸಿ ಬಂದಿದ್ದು ಆತನ ಕುಟುಂಬ ಮತ್ತು ವಧುವಿನ ಕುಟುಂಬದ ನಡುವೆ ವಿವಾದಕ್ಕೆ ಕಾರಣವಾಯಿತು, ನಂತರ ಎರಡು ಕಡೆಯವರೂ ಪರಸ್ಪರ ಕಲ್ಲು ತೂರಾಟ ನಡೆಸಿ ಹಿಂಸಾತ್ಮಕ ಘರ್ಷಣೆಯಲ್ಲಿ ತೊಡಗಿದರು ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ವರನು ತಮ್ಮ ಬುಡಕಟ್ಟು ಸಂಪ್ರದಾಯದಂತೆ ‘ಶೇರ್ವಾನಿ’ … Continued

ಆರ್ಥಿಕ ಬಿಕ್ಕಟ್ಟಿನಿಂದ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ

ಕೊಲಂಬೊ: ಸ್ವಾತಂತ್ರ್ಯದ ನಂತರ ದೇಶ ಕಂಡ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶ್ರೀಲಂಕಾದ ಆರೋಗ್ಯ ಸಚಿವ ಪ್ರೊ.ಚನ್ನ ಜಯಸುಮನ ಕೂಡ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸಿದ್ದಾರೆ. ಇಲ್ಲಿಯವರೆಗೆ, ರಾಜಪಕ್ಸೆ ಸಹೋದರರು – ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ … Continued