ಮುಸ್ಲಿಮರ ವಿರುದ್ಧ ದ್ವೇಷ ಭಾಷಣ; ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್​ ಬಂಧನ

ತಿರುವನಂತಪುರಂ:: ಹಿರಿಯ ರಾಜಕೀಯ ನಾಯಕ, ಕೇರಳ ಜನಪಕ್ಷಂ (ಜಾತ್ಯತೀತ) ಮುಖಂಡ ಮತ್ತು ಕೇರಳದ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಎರಟ್ಟುಪೇಟೆಯಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಮುಂಜಾನೆ ಬಂಧಿಸಲಾಗಿದೆ. ಗುರುವಾರ ತಿರುವನಂತಪುರಂನಲ್ಲಿ ನಡೆದ ‘ಅನನಾಥಪುರಿ ​​ಹಿಂದೂ ಮಹಾಸಮ್ಮೇಳನ’ದಲ್ಲಿ ಅವರು ಮಾಡಿದ ದ್ವೇಷದ ಭಾಷಣದ ನಂತರ ಈ ಬಂಧನ ನಡೆದಿದೆ. ಅವರನ್ನು ಕಸ್ಟಡಿಗೆ … Continued

ಪಟಿಯಾಲ ಘರ್ಷಣೆ: ಪ್ರಮುಖ ‘ಮಾಸ್ಟರ್ ಮೈಂಡ್’ ಬರ್ಜಿಂದರ್ ಸಿಂಗ್ ಪರ್ವಾನಾ ಬಂಧನ, ವಿವಾದಗಳು ಈತನಿಗೆ ಹೊಸದಲ್ಲ

ಪಟಿಯಾಲಾ ಘರ್ಷಣೆಯ ಹಿಂದಿನ ಪ್ರಮುಖ ಮಾಸ್ಟರ್ ಮೈಂಡ್ ಮತ್ತು ಪ್ರಮುಖ ಶಂಕಿತ ಬರ್ಜಿಂದರ್ ಸಿಂಗ್ ಪರ್ವಾನಾ ಅವನನ್ನು ಮೊಹಾಲಿಯಲ್ಲಿ ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಅವರು ಮುಂಬೈನಿಂದ ವಿಸ್ತಾರಾ ವಿಮಾನದಲ್ಲಿ ಬೆಳಿಗ್ಗೆ 7:20 ಕ್ಕೆ ಮೊಹಾಲಿಗೆ ಬಂದ ನಂತರ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಪಟಿಯಾಲ ಇನ್ಸ್‌ಪೆಕ್ಟರ್ ಶರ್ಮಿಂದರ್ ಸಿಂಗ್ ನೇತೃತ್ವದ ತಂಡವು … Continued

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ 102 ರೂ.ಹೆಚ್ಚಳ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು (OMC) ತಕ್ಷಣವೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ನ ಬೆಲೆಯನ್ನು ಸುಮಾರು ₹102 ರಷ್ಟು ಹೆಚ್ಚಿಸಿವೆ. ದೆಹಲಿಯಲ್ಲಿ, 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ಈಗ 2355.50 ರೂ. ಆಗಿದೆ, ಹಿಂದಿನ ಮಟ್ಟಕ್ಕೆ ಪ್ರತಿ ಸಿಲಿಂಡರ್‌ಗೆ ₹2253. ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ … Continued

ಮೇ 2ರಿಂದ ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸ ; 25 ಕಾರ್ಯಕ್ರಮ, 8 ವಿಶ್ವ ನಾಯಕರ ಜೊತೆ ಮಾತುಕತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಈ ವರ್ಷದ ಮೊದಲ ವಿದೇಶಿ ಪ್ರವಾಸ ಸೋಮವಾರದಿಂದ (ಮೇ 2) ಆರಂಭಗೊಳ್ಳಲಿದ್ದು, 65 ತಾಸುಗಳ ಈ ಪ್ರವಾಸದಲ್ಲಿ ಮೂರು ದೇಶಗಳಿಗೆ ಭೇಟಿ ನೀಡಲಿದ್ದಾರೆ ಹಾಗೂ 25 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಿದೇಶಿ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಈ ಪ್ರವಾಸವನ್ನೂ ಯೋಜಿತ ರೀತಿಯಲ್ಲಿ ಪೂರ್ಣಗೊಳಿಸಲು … Continued

ಮೋದಿ ಕುರಿತ ಜನಾಭಿಪ್ರಾಯ ತಿರುಚುವ ಪ್ರಯತ್ನ ಬೇಡ: ಟೀಕಾತ್ಮಕ ಪತ್ರಕ್ಕೆ ಪ್ರತಿಯಾಗಿ ಬಹಿರಂಗ ಪತ್ರದಲ್ಲಿ ಪ್ರಧಾನಿ ಸಮರ್ಥಿಸಿಕೊಂಡ ಮಾಜಿ ನ್ಯಾಯಾಧೀಶರು-ಅಧಿಕಾರಿಗಳು

ನವದೆಹಲಿ: ದ್ವೇಷ ರಾಜಕಾರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿವೃತ್ತ ಅಧಿಕಾರಿಗಳ ಗುಂಪು ಬರೆದಿದ್ದ ಪತ್ರಕ್ಕೆ ನಿವೃತ್ತ ಅಧಿಕಾರಿಗಳ ಮತ್ತೊಂದು ತಂಡವೊಂದು ತಿರುಗೇಟು ನೀಡಿದ್ದು, ಜನಾಭಿಪ್ರಾಯವನ್ನು ತಿರುಚುವ ಪ್ರಯತ್ನವನ್ನುಕೆಲವರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದೆ. ಮೋದಿ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಅದರ ಬಗ್ಗೆ ಜನರ ನಡುವೆ ಗೌರವವಿದೆ. ಆ … Continued

ಏಕರೂಪ ನಾಗರಿಕ ಸಂಹಿತೆಗೆ ಸಮಿತಿ ರಚನೆ: ಉತ್ತರಾಖಂಡ ಸಿಎಂ ಧಾಮಿ

ನವದೆಹಲಿ: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಬಿಜೆಪಿಯ ಚುನಾವಣಾ ಭರವಸೆಯನ್ನು ಈಡೇರಿಸುವುದನ್ನು ಪುನರುಚ್ಚರಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜ್ಯ ಸರ್ಕಾರವು ಎಲ್ಲ ಪಾಲುದಾರರು ಮತ್ತು ತಜ್ಞರನ್ನು ಪರಿಗಣಿಸಿ ಸಮಿತಿ ರಚಿಸಲಿದೆ ಎಂದು ಶನಿವಾರ ಹೇಳಿದ್ದಾರೆ. ದೆಹಲಿ ಭೇಟಿಯ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಧಾಮಿ, “ನಾವು ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಕುರಿತು … Continued

ಭಾರತದ ಕೆಳ ನ್ಯಾಯಾಲಯಗಳಲ್ಲಿ 4 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ: ಸಿಜೆಐ ರಮಣ

ನವದೆಹಲಿ: ಭಾರತದ ಕೆಳ ನ್ಯಾಯಾಲಯಗಳಲ್ಲಿ 4 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಶನಿವಾರ ಹೇಳಿದ್ದಾರೆ ಹಾಗೂ ಕಾನೂನು ವ್ಯವಸ್ಥೆಯಲ್ಲಿ ಭಾರಿ ಹಿನ್ನಡೆಯನ್ನು ಎತ್ತಿ ತೋರಿಸಿದ್ದಾರೆ. ನ್ಯಾಯಾಲಯಗಳು ತಮ್ಮ ದಕ್ಷ ಕಾರ್ಯಕ್ಕೆ ನಿರ್ಣಾಯಕ ನ್ಯಾಯಾಧೀಶರ ಕೊರತೆಯನ್ನು ಎದುರಿಸುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಪ್ರಧಾನಿ ನರೇಂದ್ರ … Continued

ಗೋರಖನಾಥ ದೇಗುಲ ದಾಳಿ ಆರೋಪಿ ಮುರ್ತಾಜಾ ಅಬ್ಬಾಸಿ 2020ರಲ್ಲಿ ಐಸಿಸ್ ಪ್ರಮಾಣ ವಚನ ಸ್ವೀಕರಿಸಿದ್ದ : ಪೊಲೀಸರು

ಲಕ್ನೋ: ಉತ್ತರ ಪ್ರದೇಶದ ಗೋರಖನಾಥ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಂಧಿತ ಅಹ್ಮದ್ ಮುರ್ತಾಜಾ ಅಬ್ಬಾಸಿಯ ವಿಚಾರಣೆಯಲ್ಲಿ ಆರೋಪಿಗೆ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಜೊತೆಗಿನ ಸಂಪರ್ಕ ಬಹಿರಂಗವಾಗಿದೆ. ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಕಾರ, ಮುರ್ತಾಜಾ ಅಬ್ಬಾಸಿ ಐಸಿಸ್‌ಗಾಗಿ … Continued

ಐಪಿಎಲ್‌ 2022ರಲ್ಲಿ ಕಳಪೆ ಪ್ರದರ್ಶನ: ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ರವೀಂದ್ರ ಜಡೇಜಾ ದಿಢೀರ್‌ ರಾಜೀನಾಮೆ, ಎಂಎಸ್ ಧೋನಿ ಪುನಃ ನಾಯಕ

ಈ ಋತುವಿನ IPL 2022 ಕಳಪೆ ಆರಂಭದ ನಂತರ ನಾಯಕ ಸ್ಥಾನದಿಂದ ಆಲ್ ರೌಂಡರ್ ರವೀಂದ್ರ ಜಡೇಜಾ ಕೆಳಗಿಳಿದಿದ್ದಾರೆ. ಅವರ ಬದಲಿಗೆ ಎಂ.ಎಸ್‌. ಧೋನಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಘೋಷಿಸಿದೆ. ಎಂ.ಎಸ್‌. ಧೋನಿ ಋತುವಿನ ಆರಂಭದ ಮೊದಲು ನಾಯಕತ್ವದ ಜವಾಬ್ದಾರಿಯಿಂದ ಹೊರನಡೆದಿದ್ದರು ಆದರೆ ಜಡೇಜಾ ತಮ್ಮ ಆಟದ ಮೇಲೆ ಹೆಚ್ಚು ಗಮನಹರಿಸಲು … Continued

250 ವರ್ಷಗಳಷ್ಟು ಹಳೆಯ ದೇವಸ್ಥಾನ ಸ್ಥಳಾಂತರಿಸಲು ರೈಲ್ವೆ ನೋಟಿಸ್ ನೀಡಿದ ನಂತರ ಹಿಂದೂ ಕಾರ್ಯಕರ್ತರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

ಲಕ್ನೋ: ಆಗ್ರಾದ ರಾಜಾ ಕಿ ಮಂಡಿ ರೈಲು ನಿಲ್ದಾಣದ ಆವರಣದಿಂದ 250 ವರ್ಷಗಳಷ್ಟು ಹಳೆಯದಾದ ಚಾಮುಂಡಾ ದೇವಿ ದೇವಸ್ಥಾನವನ್ನು ಸ್ಥಳಾಂತರಿಸುವಂತೆ ರೈಲ್ವೆ ಇಲಾಖೆ ನೋಟಿಸ್ ನೀಡಿದ ನಂತರ ರೈಲ್ವೆ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಿಂದೂ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಆನಂದ್ ಸ್ವರೂಪ್ ಅವರು ಏಪ್ರಿಲ್ … Continued