ಸವಾಯಿ ಮಾಧೋಪುರ: ರಾಜಸ್ತಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸುಮಾರು 10 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಸೂರ್ವಾಲ್ ಅಣೆಕಟ್ಟಿನ ಬಲವಾದ ಪ್ರವಾಹದಲ್ಲಿ ಮುಳುಗಿ ದುರಂತ ಸಂಭವಿಸಿದೆ.
ಅಧಿಕಾರಿಗಳ ಪ್ರಕಾರ, ದೋಣಿ ಉಕ್ಕಿ ಹರಿಯುತ್ತಿದ್ದ ನೀರಿನ ಅಲೆಯಲ್ಲಿ ಸಿಲುಕಿಕೊಂಡು ಮಗುಚಿ ಬಿದ್ದಿದೆ. ಸ್ಥಳೀಯ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ಒಂಬತ್ತು ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಇನ್ನೋ ಒಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ದೋಣಿ ಇನ್ನೂ ಪತ್ತೆಯಾಗಿಲ್ಲ. ನೀರಿನ ಹರಿವಿನ ಪ್ರಮಾಣ ಹೆಚ್ಚಿರುವುದರಿಂದ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ.
ಜಿಲ್ಲಾಡಳಿತ, ಎನ್‌ಡಿಆರ್ ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ತಂಡಗಳೊಂದಿಗೆ, ದೊಡ್ಡ ಪ್ರಮಾಣದ ಶೋಧ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುರ್ವಾಲ್ ಅಣೆಕಟ್ಟು ಜಿಲ್ಲೆಯ ಅತಿ ದೊಡ್ಡ ಅಣ್ಣಕಟ್ಟಾಗಿದ್ದು, ನಾಲಾಗಳು ಮತ್ತು ನದಿಗಳಿಂದ ನೀರು ಹರಿದು ಬರುತ್ತವೆ. ಭಾರೀ ಮಳೆಯಿಂದಾಗಿ ಅಣೆಕಟ್ಟಿನೊಳಗೆ ಹಠಾತ್ತನೆ ನೀರು ಹರಿದು ಬಂದ್ದು, ಇದರಿಂದಾಗಿ ದೋಣಿ ಪಲ್ಟಿಯಾಗಿದೆ.
ತಡರಾತ್ರಿಯಿಂದ ಪ್ರಾರಂಭವಾದ ಭಾರೀ ಮಳೆಯು ಜಿಲ್ಲೆಯಾದ್ಯಂತ ಅನಾಹುತವನ್ನು ಸೃಷ್ಟಿಸಿದೆ. ಚಂಬಲ್, ಬನಾಸ್, ಗಾಲ್ವಾ, ಮೊರೆಲ್ ಮತ್ತು ಗಂಭೀರಾ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೆ, ಲತಿಯಾ ನಲಾ ಉಕ್ಕಿ ಹರಿಯುತ್ತಿದ್ದು, ರಾಜಬಾಗ್, ಮಿರ್ಜಾ ಮೊಹಲ್ಲಾ ಮತ್ತು ಖಾಟಿಕ್ ಮೊಹಲ್ಲಾದಂತಹ ವಸತಿ ವಸಾಹತುಗಳು ಜಲಾವೃತಗೊಂಡಿವೆ. ನೂರಾರು ಮನೆಗಳು ಮತ್ತು ಅಂಗಡಿಗಳು ಮುಳುಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ