ನಾವೆಲ್ಲರೂ ಒಂದ ದಿನ ಹೋಗಲೇಬೇಕು, ನಾಳೆ ನಾನು ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ’: ನಿಧನಕ್ಕೆ 4 ದಿನ ಮುನ್ನ ನಾನಾ ಪಾಟೇಕರ್ ಮಾತು

ಪಣಜಿ (ಗೋವಾ): ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ನಾಲ್ಕು ದಿನಗಳ ಮುನ್ನವೇ ಅವರು ಜೀವನದ ಅನಿಶ್ಚಿತತೆ ಮತ್ತು ಮರಣದ ಅನಿವಾರ್ಯತೆಯ ಬಗ್ಗೆ ಮಾತನಾಡಿದ್ದ ಮಾತುಗಳು ಇದೀಗ ವ್ಯಾಪಕ ಗಮನ ಸೆಳೆದಿವೆ.
ವರದಿ ಪ್ರಕಾರ, ಗೋವಾದಲ್ಲಿ ನಡೆದ ‘ಸಾಮ್ರಾಟ್ ಕ್ಲಬ್ ಇಂಟರ್‌ನ್ಯಾಷನಲ್’ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಪಾಟೇಕರ್, ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರನ್ನು ಸ್ಮರಿಸಿ ಅವರ ರಾಜಕೀಯ ಕಾರ್ಯಶೈಲಿಯನ್ನು ಶ್ಲಾಘಿಸಿದ್ದರು.
ಬಿಳಿ ಕುರ್ಥಾ ಮತ್ತು ಬಿಳಿ ಶಾಲು ಧರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಾಟೇಕರ್, ಪರ್ರಿಕರ್ ಅವರ ಬಗ್ಗೆ ನೆನಪುಗಳನ್ನು ಹಂಚಿಕೊಳ್ಳುವ ವೇಳೆ ಜೀವನದ ಸೀಮಿತ ಅವಧಿಯ ಕುರಿತು ಚಿಂತನೆ ವ್ಯಕ್ತಪಡಿಸಿದ್ದರು.
“ನಾವೆಲ್ಲರೂ ಒಂದಲ್ಲೊಂದು ದಿನ ಈ ಲೋಕವನ್ನು ತೊರೆಯಲೇಬೇಕು. ನಾನು ನಾಳೆ ಇರುತ್ತೇನೆಯೋ ಇಲ್ಲವೋ ಎಂಬುದೂ ನನಗೆ ಗೊತ್ತಿಲ್ಲ. ಆ ಕ್ಷಣ ಪ್ರತಿಯೊಬ್ಬರ ಜೀವನದಲ್ಲೂ ಬರುತ್ತದೆ. ಆದರೆ ಆ ಸಮಯ ಬರುವುದಕ್ಕೂ ಮುನ್ನ, ನಾನು ಮಾಡಲು ಬಯಸಿದ್ದುದನ್ನು ಮಾಡುತ್ತಿದ್ದೇನೆಯೇ? ಅದಕ್ಕಾಗಿ ಅಗತ್ಯವಾದ ಪ್ರಯತ್ನವನ್ನು ಮಾಡಿದ್ದೇನೆಯೇ? ಎಂಬ ಬಗ್ಗೆ ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು” ಎಂದು ನಾನಾ ಪಾಟೇಕರ್ ಹೇಳಿದ್ದರು.

ಪ್ರಮುಖ ಸುದ್ದಿ :-   "ನನ್ನನ್ನು ಬದುಕಿಸಿ...ಇಲ್ಲಿ ಸಾಯಲು ಬಯಸಲ್ಲ” : ಸ್ಮಿತ್ ಮಚ್ಚಾರ್‌ ಉಳಿಸಲು ವಿಮಾನದಲ್ಲಿನ 45 ನಿಮಿಷದ ಹೋರಾಟ ಬಿಚ್ಚಿಟ್ಟ ದಂತವೈದ್ಯ

ಮನೋಹರ್ ಪರ್ರಿಕರ್ ಅವರು ಗೋವಾದ ಮುಖ್ಯಮಂತ್ರಿಯಾಗಿಯೂ ನಂತರ ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದನ್ನು ಉಲ್ಲೇಖಿಸಿದ ಪಾಟೇಕರ್, ಬಿಜೆಪಿ ನಾಯಕನಾಗಿ ಅವರ ಕಾರ್ಯವೈಖರಿ ಮತ್ತು ರಾಜಕೀಯ ಸೇವೆಯನ್ನು ಪ್ರಶಂಸಿಸಿದ್ದರು.
ಈ ಮಾತುಗಳನ್ನಾಡಿದ ಕೇವಲ ನಾಲ್ಕು ದಿನಗಳ ಬಳಿಕ ಗುರುವಾರ ಬೆಳಿಗ್ಗೆ ನಾನಾ ಪಾಟೇಕರ್ ನಿಧನರಾಗಿದ್ದಾರೆ. 75 ವರ್ಷದ ಪಾಟೇಕರ್ ಅವರು ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾದ ನಂತರ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ವೈದ್ಯರು ಸುಮಾರು 45 ನಿಮಿಷಗಳ ಕಾಲ ಅವರನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ ಸಾಲ್ಕರ್ ಅವರ ಪ್ರಕಾರ, ಪುನರುಜ್ಜೀವನ ಚಿಕಿತ್ಸೆಯ ಅವಧಿಯಲ್ಲೂ ಪಾಟೇಕರ್ ಅವರ ಹೃದಯ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡ (ಅಸಿಸ್ಟೋಲ್) ಸ್ಥಿತಿಯಲ್ಲೇ ಇತ್ತು.
ಈ ಸಂಬಂಧ ವೈದ್ಯಕೀಯ-ಕಾನೂನು (ಮೆಡಿಕೋ-ಲೀಗಲ್) ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಪಾಟೇಕರ್ ಅವರ ಪಾರ್ಥಿವ ಶರೀರವನ್ನು ಮುಂಬೈಗೆ ಕಳುಹಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರೆಪೋ ದರ ಹೆಚ್ಚಿಸಿದ ಆರ್‌ಬಿಐ : ಹೆಚ್ಚಳಕ್ಕೆ ಕಾರಣವೇನು? ಇದರಿಂದ ಸಾಲದ ಮೇಲಿನ ಇಎಂಐ ಹೆಚ್ಚಳವಾಗುವುದೇ...?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement