ಇಂದು ಉತ್ತರ ಪ್ರದೇಶದಲ್ಲಿ ರೈತರ ಮಹಾಪಂಚಾಯತ್: ನಮ್ಮನ್ನು ತಡೆಯಲು ಬಂದರೆ ಬಲವಂತವಾಗಿ ನುಗ್ಗುತ್ತೇವೆ ಎಂದ ರಾಕೇಶ್ ಟಿಕಾಯತ್‌

ಲಖನೌ: ಕೇಂದ್ರದ ನೂತನ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ಮಾಡುವ ಸಲುವಾಗಿ ಸೆಪ್ಟೆಂಬರ್ 5ರಂದು ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ರೈತರ ಮಹಾಪಂಚಾಯತ್ ಗೆ ಎಲ್ಲಾ ಸಿದ್ಧತೆಗಳು ಪೂರ್ಣವಾಗಿದೆ. ಏನೇ ಅಡೆತಡೆ ಬಂದರೂ ರೈತ ಮಹಾಪಂಚಾಯತ್‌ ನಿಲ್ಲಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್ ಹೇಳಿದ್ದಾರೆ.
ಮುಂಬರಲಿರುವ ಚುನಾವಣಾ ಸಮಯದಲ್ಲಿ ಕೇಂದ್ರ ವಿರುದ್ಧ ಜನರನ್ನು ಒಗ್ಗಟ್ಟಾಗಿಸಲು ರೈತರ ಮಹಾಪಂಚಾಯತ್ ಕಾರ್ಯಕ್ರಮವನ್ನು ಬಳಸಿಕೊಳ್ಳುವುದಾಗಿ ರಾಕೇಶ್ ಟಿಕಾಯಿತ್ ತಿಳಿಸಿದ್ದಾರೆ.
ಸೆಪ್ಟೆಂಬರ್ 5, ಭಾನುವಾರ ನಡೆಯಲಿರುವ ಮಹಾಪಂಚಾಯತ್ ನಲ್ಲಿ 22 ರಾಜ್ಯಗಳ 300ಕ್ಕೂ ಹೆಚ್ಚು ರೈತ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ರೈತರು ದೆಹಲಿ, ಪಂಜಾಬ್‌ನಿಂದ ಆಗಮಿಸುತ್ತಿದ್ದಾರೆ,
ಪಂಜಾಬ್‌ನಿಂದ ಸುಮಾರು 2,000 ರೈತರು ಮುಜಾಫರ್ ನಗರಕ್ಕೆ ಬರುವ ನಿರೀಕ್ಷೆಯಿದೆ. ಅವರು ಅಮೃತಸರದಿಂದ ಬೆಳಿಗ್ಗೆ 4 ಗಂಟೆಗೆ, ಜಲಂಧರ್‌ನಿಂದ 5 ಗಂಟೆಗೆ ಮತ್ತು ಲುಧಿಯಾನದಿಂದ ಬೆಳಿಗ್ಗೆ 6 ಗಂಟೆಗೆ ಎಕ್ಸ್‌ಪ್ರೆಸ್ ರೈಲುಗಳನ್ನು ಹಿಡಿಯುತ್ತಾರೆ.
ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳಗಳಿಂದ 400-500 ರೈತರು ಮಹಾಪಂಚಾಯತ್‌ಗೆ ತೆರಳುತ್ತಾರೆ. ರೈತರು ಟಿಕ್ರಿ ಮತ್ತು ಗಾಜಿಪುರ ಗಡಿಗಳಿಂದ ಬಸ್ಸುಗಳಲ್ಲಿ ಪಾಳಿಗಳಲ್ಲಿ ಹೊರಡುತ್ತಿದ್ದಾರೆ. ಪ್ರತಿಭಟನಾ ಸ್ಥಳಗಳಿಂದ ಎರಡು ಬಸ್ಸುಗಳು ಈಗಾಗಲೇ ಮುಜಫರ್ ನಗರಕ್ಕೆ ಶುಕ್ರವಾರ ರಾತ್ರಿ ಹೊರಟವು. ಶನಿವಾರ ಬೆಳಿಗ್ಗೆ ಇನ್ನೆರಡು ಹೊರಟಿತು ಮತ್ತು ಇನ್ನೂ ಎರಡು ಸಂಜೆ 4 ಗಂಟೆಗೆ ಹೊರಡುತ್ತವೆ.
ಆದಾಗ್ಯೂ, ಜನರು ಮುಖ್ಯವಾಗಿ ಗ್ರಾಮಗಳಿಂದ ಬರುತ್ತಿದ್ದಾರೆ ಎಂದು ರಾಕೇಶ್ ಟಿಕೈಟ್ ಹೇಳಿದರು. ಹರಿಯಾಣ, ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳ ರೈತರು ಸಹ ಸೇರುವ ನಿರೀಕ್ಷೆಯಿದೆ.ರೈತರನ್ನು ಮುಜಾಫರ್ ನಗರಕ್ಕೆ ಸಾಗಿಸಲು ಒಟ್ಟು 500 ಬಸ್ಸುಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ತಿಳಿಸಿದರು..

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಮಿಷನ್ ಉತ್ತರ್ ಪ್ರದೇಶ
ಎಸ್‌ಕೆಎಂ ಮುಜಾಫರ್ ನಗರ ಮಹಾಪಂಚಾಯತ್‌ನಲ್ಲಿ ‘ಮಿಷನ್ ಉತ್ತರ ಪ್ರದೇಶ’ ಘೋಷಿಸಲು ಯೋಜಿಸಿದೆ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಬೃಹತ್ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.
“ಈ ಮಹಾಪಂಚಾಯತ್ ಕೇವಲ ಚುನಾವಣೆಗೆ ಸಂಬಂಧಿಸಿಲ್ಲ.ಉತ್ತರ ಪ್ರದೇಶದಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ವಿದ್ಯುತ್ ದರಗಳು ಕೂಡ ಅತಿ ಹೆಚ್ಚು. ಕಳೆದ 2016 ರಿಂದ ಕಬ್ಬಿನ ದರ ಏರಿಕೆಯಾಗಿಲ್ಲ. ಕೇಂದ್ರವು ಇದನ್ನು ಪ್ರತಿ ಕಿಲೋಗ್ರಾಂಗೆ ಐದು ಪೈಸೆ ಹೆಚ್ಚಿಸಿದೆ. ನೀವು ರೈತರನ್ನು ಅವಮಾನಿಸುತ್ತಿದ್ದೀರಾ ಎಂದು ಟಿಕಾಯತ್‌ ಕೇಳಿದರು.
ರೈತರು ತಮ್ಮ ಅಭಿಯಾನದ ಮೊದಲ ಹಂತದಲ್ಲಿ 18 ಮಹಾಪಂಚಾಯತ್‌ಗಳನ್ನು ಉತ್ತರ ಪ್ರದೇಶದಲ್ಲಿ ನಡೆಸಲು ಯೋಜಿಸುತ್ತಿದ್ದಾರೆ.

ಮಹಾಪಂಚಯತ್‌ಗಾಗಿ ವ್ಯವಸ್ಥೆಗಳು
ರಾಕೇಶ್ ಟಿಕಾಯತ್‌ ಪ್ರಕಾರ, ಸುಮಾರು 5,000 ಸ್ವಯಂಸೇವಕರಿಗೆ ಕರ್ತವ್ಯಗಳನ್ನು ನೀಡಲಾಗಿದೆ ಮತ್ತು ಸುಗಮ ಚಲನೆಯನ್ನು ಖಚಿತಪಡಿಸಿಕೊಳ್ಳಲು ಗುರುತಿನ ಚೀಟಿಗಳನ್ನು ನೀಡಲಾಗಿದೆ. ಆದ್ದರಿಂದ ರೈತರು ಭಾನುವಾರ ಮಹಾಪಂಚಾಯತ್‌ಗಾಗಿ ಮೈದಾನಗಳನ್ನು ತಲುಪುತ್ತಾರೆ. ಸ್ವಯಂಸೇವಕರಿಗೆ ಮಾಹಿತಿ ನೀಡಲಾಗಿದೆ ಮತ್ತು ತುರ್ತು ಸಂಖ್ಯೆಯನ್ನು ಹಂಚಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಮುಖ್ಯ ಸ್ಥಳವನ್ನು ತಲುಪಲು ಯಾರು ಸಮರ್ಥರಾಗಿದ್ದಾರೆ ಎಂಬುದನ್ನು ನಾವು ನೋಡಬೇಕು. ಜನಸಂದಣಿಯಿಂದಾಗಿ ಅಲ್ಲಿಗೆ ತಲುಪಲು ಸಾಧ್ಯವಾಗದವರಿಗೆ ನಾವು 12-14 ಸ್ಕ್ರೀನ್‌ಗಳು ಮತ್ತು 4-5 ಕ್ಷೇತ್ರಗಳನ್ನು ವ್ಯವಸ್ಥೆ ಮಾಡಿದ್ದೇವೆ. ಎಂದು ರಾಕೇಶ್ ಟಿಕಾಯತ್‌ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

ಮಹಾಪಂಚಾಯತ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿವೆ. ರಾಪಿಡ್ ಆಕ್ಷನ್ ಫೋರ್ಸ್, 5 ಎಸ್‌ಎಸ್ಪಿ, 7 ಎಎಸ್ಪಿ 40 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಕಾರ್ಯಕ್ರಮವನ್ನು ವಿಡಿಯೋ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement