ಜ್ಞಾನವಾಪಿಯಲ್ಲಿ ಪೂಜೆ ಸಲ್ಲಿಸಿದ ಸಿಎಂ ಯೋಗಿ ಆದಿತ್ಯನಾಥ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ಜ್ಞಾನವಾಪಿ ಆವರಣಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ವಾರಾಣಸಿಯ ನ್ಯಾಯಾಲಯವು ಹಿಂದೂ ಭಕ್ತರಿಗೆ ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅನುಮತಿ ನೀಡಿದ ಕೆಲವು ದಿನಗಳ ನಂತರ ಆವರು ಆಗಮಿಸಿ ಅಲ್ಲಿ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜ್ಞಾನವಾಪಿ ಆವರಣಕ್ಕೆ ಭೇಟಿ ನೀಡಿ ‘ವ್ಯಾಸ್ ಕಾ ತೆಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಿದರು. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಿವಾದಿತ ಜ್ಞಾನವಾಪಿ ಆವರಣಕ್ಕೆ ಭೇಟಿ ನೀಡಿದರು.

ವಿವರಗಳ ಪ್ರಕಾರ, ಯೋಗಿ ಆದಿತ್ಯನಾಥ್ ಅವರು ‘ವ್ಯಾಸ ತೆಹಕಾನಾ’ದಲ್ಲಿ ಸ್ಥಾಪಿಸಲಾದ ಮೂರ್ತಿಗಳನ್ನು ವೀಕ್ಷಿಸಿದರು. ನಂತರ ಅಲ್ಲಿರುವ ನಂದಿಗೆ ಪೂಜೆ ಸಲ್ಲಿಸಿದರು.
ಜ್ಞಾನವಾಪಿ ಮಸೀದಿಯ ವ್ಯಾಸ ತೆಹಕಾನಾ ನೆಲಮಾಳಿಗೆಯಲ್ಲಿ ನ್ಯಾಯಾಲಯ ಅನುಮತಿ ನೀಡಿದ ನಂತರ ಮೊದಲ ಬಾರಿಗೆ ವಾರಾಣಸಿ ತಲುಪಿದ ಯೋಗಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ವ್ಯಾಸ ನೆಲಮಾಳಿಗೆಯ ಮಾರ್ಗವಾಗಿ ಹಾದುಹೋಗುವಾಗ, ಅವರು ವ್ಯಾಸ ನೆಲಮಾಳಿಗೆಯಲ್ಲಿ ಇರಿಸಲಾದ ವಿಗ್ರಹಗಳ ‘ದರ್ಶನ’ ಪಡೆದರು.

ಪ್ರಮುಖ ಸುದ್ದಿ :-   'ಪ್ರಿಯಾಂಕಾ ಗಾಂಧಿ ವಿರುದ್ಧ ಪಕ್ಷದಲ್ಲೇ ದೊಡ್ಡ ಪಿತೂರಿ...ಜೂನ್ 4ರ ನಂತರ ಕಾಂಗ್ರೆಸ್ ಅಣ್ಣ-ತಂಗಿ ಬಣಗಳಾಗಿ ವಿಭಜನೆ' : ಕಾಂಗ್ರೆಸ್‌ ಮಾಜಿ ನಾಯಕನ ಸ್ಫೋಟಕ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡುವ ಮುನ್ನವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಾರಣಾಸಿಗೆ ಭೇಟಿ ನೀಡಿ 30 ಎಕರೆ ಜಾಗದಲ್ಲಿ ಸ್ಥಾಪಿಸಲಾಗಿರುವ 475 ಕೋಟಿ ರೂಪಾಯಿ ವೆಚ್ಚದ ಅಮುಲ್ ಸ್ಥಾವರವನ್ನು ಪರಿಶೀಲಿಸಿದರು ಮತ್ತು ಸರ್ಕ್ಯೂಟ್ ಹೌಸ್‌ನಲ್ಲಿ ಬಿಜೆಪಿಯ ಪ್ರತಿನಿಧಿಗಳು ಮತ್ತು ಶಾಸಕರನ್ನು ಭೇಟಿ ಮಾಡಿದರು. ಪ್ರಧಾನಿ ಅವರ ಭೇಟಿಗೆ ಸಕಾಲದಲ್ಲಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಾರಾಣಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿ ವಿಗ್ರಹಗಳ ಮುಂದೆ ಪೂಜೆ ಸಲ್ಲಿಸಲು ಅನುಮತಿ ನೀಡಿದ ನಂತರ, ಫೆಬ್ರವರಿ 1 ರ ಮಧ್ಯರಾತ್ರಿ ಜ್ಞಾನವಾಪಿ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಂತರ ಜ್ಞಾನವಾಪಿ ಸಮುಚ್ಚಯದ ದಕ್ಷಿಣದ ನೆಲಮಾಳಿಗೆಯನ್ನು ಭಕ್ತರಿಗಾಗಿ ತೆರೆಯಲಾಯಿತು.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement