ಒಲಿಂಪಿಕ್ಸ್‌ ಮಹಿಳಾ ಕುಸ್ತಿ ಫೈನಲ್‌ : ತೂಕದ ಕಾರಣಕ್ಕೆ ಅನರ್ಹಗೊಂಡ ಬಳಿಕ ವಿನೇಶ್‌ ಫೋಗಟ್‌ ಮೊದಲ ಪ್ರತಿಕ್ರಿಯೆ…

ಪ್ಯಾರಿಸ್: ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶಾ ಫೋಗಟ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
‘ಪದಕ ಗೆಲ್ಲಲು ಸಾಧ್ಯವಾಗದಿರುವುದು ದುರದೃಷ್ಟಕರ. ಆದರೆ ಇವೆಲ್ಲವೂ ಕ್ರೀಡೆಯ ಭಾಗ’ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
100 ಗ್ರಾಂ ತೂಕ ಹೆಚ್ಚಿದ್ದ ಕಾರಣ ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್‌ನಲ್ಲಿ ಆಡುವ ಅವಕಾಶದಿಂದ ವಿನೇಶ್‌ ಫೋಗಟ್‌ ವಂಚಿತರಾಗಿದ್ದರು. ಈ ಸುದ್ದಿ ಕೇಳಿದ ಬಳಿಕ ಭಾರತೀಯ ತರಬೇತುದಾರರಾದ ವಿರೇಂದರ್ ದಹಿಯಾ ಮತ್ತು ಮಂಜೀತ್ ರಾಣಿ ಅವರು ವಿನೇಶಾ ಅವರನ್ನು ಭೇಟಿಯಾಗಿದ್ದರು.
‘ವಿನೇಶಾ ಅನರ್ಹಗೊಂಡಿರುವ ಸುದ್ದಿ ನಮ್ಮೆಲ್ಲರನ್ನು ಆಘಾತಗೊಳಿಸಿತ್ತು. ನಾವು ವಿನೇಶಾ ಅವರನ್ನು ಭೇಟಿಯಾಗಿ ಸಂತೈಸಲು ಪ್ರಯತ್ನಿಸಿದೆವು. ಆದರೆ ಆಕೆ ಧೈರ್ಯಶಾಲಿ. ಪದಕ ಕಳೆದುಕೊಂಡಿರುವುದು ದುರದೃಷ್ಟಕರ. ಇವೆಲ್ಲವೂ ಆಟದ ಭಾಗ’ ಎಂದು ತಮ್ಮನ್ನು ಸಮಾಧಾನಪಡಿಸಿದ್ದಾರೆ ಎಂದು ವಿರೇಂದರ್ ದಹಿಯಾ ತಿಳಿಸಿದ್ದಾರೆ.

‘ವಿನೇಶ್ ಅವರ ಗೆಲುವನ್ನು ಸಂಭ್ರಮಿಸಲು ಇಡೀ ದೇಶವೇ ಕಾಯುತ್ತಿತ್ತು. ಕನಿಷ್ಠ ಬೆಳ್ಳಿ ಪದಕವನ್ನು ಗೆಲ್ಲುವ ಭರವಸೆ ನೀಡಿದ್ದರು’ ಎಂದು ಅವರು ಹೇಳಿದ್ದಾರೆ. “ಅವಳು ಬುಧವಾರ ಬೆಳಿಗ್ಗೆ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರು. ನಿಯಮಗಳು ಇದನ್ನು ಅನುಮತಿಸುವುದಿಲ್ಲ ಮತ್ತು ಆಕೆಯನ್ನು ಅನರ್ಹಗೊಳಿಸಲಾಗಿದೆ” ಎಂದು ಭಾರತೀಯ ಕೋಚ್ ಹೇಳಿದ್ದಾರೆ.ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಸೇರಿದಂತೆ ಹಲವು ಅಧಿಕಾರಿಗಳು ವಿನೇಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ವಿನೇಶ್ ಮಂಗಳವಾರ ರಾತ್ರಿ ತನ್ನ ವಿಭಾಗದಲ್ಲಿ ಫೈನಲ್‌ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ಬರೆದಿದ್ದರು. ಇಂದು ಬೆಳಗಿನ ಮುಂಚೆ, ಕನಿಷ್ಠ ಬೆಳ್ಳಿ ಪದಕದ ಭರವಸೆ ಇತ್ತು. ಆದರೆ ಈಗ ಅನರ್ಹತೆಯಿಂದಾಗಿ ಬರಿಗೈಯಲ್ಲಿ ಮರಳಲಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ಎಫ್ -16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ

4.6 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement