ಕೊರೊನಾ ಉಲ್ಬಣ: ಅಮೆರಿಕದ ಭಾರತ ಮೂಲದ ವೈದ್ಯರಿಂದ ಆಸ್ಪತ್ರೆಯಲ್ಲಿ ಬೆಡ್‌ ಲಭ್ಯತೆ ತೋರಿಸುವ ರಿಯಲ್ ಟೈಮ್ ಮ್ಯಾಪ್ ಅಭಿವೃದ್ಧಿ..!

ನ್ಯೂಯಾರ್ಕ್‌: ಅಮೆರಿಕದಲ್ಲಿರುವ ಭಾರತೀಯ ಮೂಲದ ವೃತ್ತಿಪರ ವೈದ್ಯರ ತಂಡವೊಂದು ಹಾಸಿಗೆ ಲಭ್ಯತೆ ತೋರಿಸುವ ನಕ್ಷೆಯನ್ನು ಅಭಿವೃದ್ಧಿ ಪಡಿಸಿದೆ.
ಭಾರತದಿಂದ ಅಮೆರಿಕಕ್ಕೆ ವಲಸೆ ಬಂದ ವೈದ್ಯರು ಹಾಗೂ ವೃತ್ತಿಪರರ ಗುಂಪು ಈ ಹಾಸಿಗೆ ಲಭ್ಯತೆ ತೋರಿಸುವ ನಕ್ಷೆಯನ್ನು ಅಭಿವೃದ್ಧಿ ಪಡಿಸಿದ್ದು, ಆಸ್ಪತ್ರೆಯ ಹಾಸಿಗೆಗಳನ್ನು ನೈಜ-ಸಮಯದ ನವೀಕರಣಗಳೊಂದಿಗೆ (ರಿಯಲ್ ಟೈಮ್ ಅಪ್ಡೇಷನ್) ತೋರಿಸುವ ಆನ್‌ಲೈನ್ ನಕ್ಷೆಯನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಕೊರೊನಾ ಸೋಂಕಿತರು ಮತ್ತು ಅವರ ಸಂಬಂಧಿಕರು ಹಾಸಿಗೆ ಲಭ್ಯತೆ ಕುರಿತು ಸ್ಪಷ್ಟ ಮಾಹಿತಿ ಪಡೆಯಬಹುದು. ಇದು ರೋಗಿಗಳಿಗೆ ನಿರ್ಣಾಯಕ ಸಂದರ್ಭದಲ್ಲಿ ನೆರವಿಗೆ ಬರುತ್ತದೆ ಎಂದು ಹೇಳಲಾಗಿದೆ.
‘ಪ್ರಾಜೆಕ್ಟ್ ಮದದ್‌’ ಕಾರ್ಯಕ್ರಮದಡಿ ‘madadmaps.com’ ಅಭಿವೃದ್ಧಿಪಡಿಸಲಾಗಿದ್ದು, ಈ ಮ್ಯಾಪ್‌ ಮೂಲಕ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ’ ಎಂದು ವಾಷಿಂಗ್ಟನ್‌ ಮೂಲದ ಮದದ್‌ ಮ್ಯಾಪ್ಸ್‌’ ಮುಖ್ಯ ವಿನ್ಯಾಸಕಾರ ಡಾ.ರಾಜೇಶ್‌ ಅನುಮೊಲು ತಿಳಿಸಿದ್ದಾರೆ. ಸೋಂಕಿತರಿಗೆ ನೆರವಾಗುವ ಉದ್ದೇಶದಿಂದಲೇ ಈ ಮ್ಯಾಪ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಾಜೆಕ್ಟ್ ಮದದ್ 15 ಭಾರತೀಯ ಮತ್ತು ಭಾರತೀಯ ವಲಸೆ ವೈದ್ಯರು / ಕೋವಿಡ್-19 ತಜ್ಞರು ಮತ್ತು 12 ವೃತ್ತಿಪರರ ಸ್ವಯಂಪ್ರೇರಿತ ತಂಡದಿಂದ ಸಿದ್ಧವಾಗಿದ್ದು, ಇದರೊಂದಿಗೆ ಸ್ಥಳೀಯ ಆರೋಗ್ಯ ಕಾರ್ಯಕರ್ತರು ಮತ್ತು ನೋಂದಾಯಿತ ವೈದ್ಯಕೀಯ ವೈದ್ಯರ (ಆರ್‌ಎಂಪಿ) “ಸರಿಯಾದ ಶಿಕ್ಷಣ ಮತ್ತು ತರಬೇತಿ” ಎಂಬ ಧ್ಯೇಯದೊಂದಿಗೆ ರಚಿಸಲಾಗಿದೆ.
ಭಾರತದಲ್ಲಿ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಅಗ್ತಯವುಳ್ಳ ಸಾರ್ವಜನಿಕರು ಪ್ರತಿಯೊಂದು ಆಸ್ಪತ್ರೆಗಳಿಗೆ ಕರೆ ಮಾಡಿ, ಹಾಸಿಗೆ ಲಭ್ಯತೆ ಬಗ್ಗೆ ವಿಚಾರಣೆ ಮಾಡಬೇಕಾಗಿದೆ. ಹಲವು ಬಾರಿ ರೋಗಿ, ಆಸ್ಪತ್ರೆಗೆ ತಲುಪುವ ಮುನ್ನವೇ ಹಾಸಿಗೆಗಳು ಭರ್ತಿಯಾಗಿರುತ್ತವೆ. ಹೀಗಾಗಿ ಕೋವಿಡ್‌ ಸಂಕ್ಷದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬೆಡ್‌ ಲಭ್ಯತೆ ಬಗ್ಗೆ ಖಚಿತ ಮಾಹಿತಿ ನೀಡುವ ನೀಡುವ ಭಾರತದ ಮೊದಲ ಮ್ಯಾಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಮದದ್‌ ಮ್ಯಾಪ್ಸ್‌ ಮುಂದಿನ ದಿನಗಳಲ್ಲೂ ಸಹಾಯಕ್ಕೆ ಬರಲಿದೆ ಎಂದು ಪ್ರಾಜೆಕ್ಟ್‌ ಮದದ್‌ನ ಮುಖ್ಯಸ್ಥ ರಾಜ ಕಾರ್ತಿಕೇಯ ಹೇಳಿದ್ದಾರೆ.
ಮ್ಯಾಪ್ ಸೇವೆಯಲ್ಲಿ ಏನೇನು ಲಭ್ಯ..?:
ಆಸ್ಪತ್ರೆಯ ಹೆಸರು, ವಿಳಾಸ, ಐಸಿಯು ಬೆಡ್‌, ವೆಂಟಿಲೇಟರ್‌ ಲಭ್ಯತೆ, ಆಮ್ಲಜನಕ ಪೂರೈಕೆ, ಆಸ್ಪತ್ರೆಯ ದೂರವಾಣಿ ಸಂಖ್ಯೆ, ಆಸ್ಪತ್ರೆಗೆ ಹೋಗುವ ಮಾರ್ಗಗಳನ್ನು ಈ ಈ ಮದದ್ ಮ್ಯಾಪ್ ತೋರಿಸುತ್ತದೆ ಎಂದು ತಂಡ ಹೇಳಿಕೊಂಡಿದೆ. ಭಾರತ ಸರ್ಕಾರ ಮತ್ತು ಇತರೆ ಹೂಡಿಕೆದಾರರೊಂದಿಗೆ ಈ ಮ್ಯಾಪ್‌ ಸ್ವಾಧೀನ ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಈ ಮ್ಯಾಪ್‌ ಅನ್ನು ಕೋವಿನ್‌ ಅಥವಾ ಆರೋಗ್ಯಸೇತು ಅಪ್ಲಿಕೇಶನ್‌ನಲ್ಲಿ ಸೇರ್ಪಡೆ ಮಾಡಿದರೆ, ದೇಶದ ಹಲವು ಜನರನ್ನು ತಲುಪಬಹುದು. ಇದರಿಂದಾಗಿ ಸೋಂಕಿತರ ಸಂಕಷ್ಟ ಕೊಂಚವಾದರೂ ತಪ್ಪುವ ಭರವಸೆ ತಮಗಿದೆ ಎಂದು ತಂಡ ಹೇಳಿದೆ.

ಪ್ರಮುಖ ಸುದ್ದಿ :-   10 ವರ್ಷಗಳಿಗೂ ಹೆಚ್ಚು ಕಾಲ ವೈದ್ಯರಿಗೇ ತಿಳಿಯದ ನಿಗೂಢ ಕಾಯಿಲೆಯ ಮೂಲ ಕಾರಣ ಪತ್ತೆಹಚ್ಚಿದ ಚಾಟ್‌ ಜಿಪಿಟಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement