ಭಾರತದಲ್ಲಿ 40 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪತ್ತೆ; ಕರ್ನಾಟಕದಲ್ಲಿ 2 ಪ್ರಕರಣ ವರದಿ..!

ನವದೆಹಲಿ: ಕರ್ನಾಟಕದಲ್ಲಿ ಎರಡು ಪ್ರಕರಣಗಳು ಸೇರಿದಂತೆ ದೇಶಾದ್ಯಂತ ಮಾರಕ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿಯ 40 ಸೋಂಕು ವರದಿಯಾಗಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ದೇಶಾದ್ಯಂತ ಒಟ್ಟು 40 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕುಗಳು ವರದಿಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ21 ಪ್ರಕರಣಗಳು ವರದಿಯಾಗಿದ್ದು, ಮಧ್ಯ ಪ್ರದೇಶದಲ್ಲಿ 6, ಕೇರಳ ಮತ್ತು ತಮಿಳುನಾಡಿನಲ್ಲಿ ತಲಾ 3 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ.
ಕರ್ನಾಟಕದ ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಸೇರಿದಂತೆ ಕರ್ನಾಟಕದವಲ್ಲಿ ಎರಡು ಪ್ರಕರಣಗಳು ವರದಿಯಾಗಿದ್ದು, ಪಂಜಾಬ್, ಆಂಧ್ರಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಪ್ರಕರಣ ವರದಿಯಾಗಿವೆ.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ 2ನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿ ಸೋಂಕು ಪ್ರಭಾವ ಇದೀಗ ಕಡಿಮೆಯಾಗುತ್ತಿದ್ದು, ಆದರೆ ದಿನ ಈಗ ಡೆಲ್ಟಾ ರೂಪಾಂತರದ ರೂಪಾಂತರಿಯಅದ ಡೆಲ್ಟಾ ಪ್ಲಸ್ ವೈರಸ್‌ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವುದು ದೇಶದಲ್ಲಿ 3ನೇ ಅಲೆಯ ಭೀತಿ ಹೆಚ್ಚಿಸಿದೆ.
ಇನ್ನು ತಜ್ಞರು ಅಭಿಪ್ರಾಯಪಟ್ಟಿರುವಂತೆ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು, ಲಸಿಕೆ ಹಾಗೂ ಕೋವಿಡ್‌ನಿಂದಾಗಿ ಮನುಷ್ಯನು ಪಡೆದ ಪ್ರತಿಕಾಯದ ಶಕ್ತಿಯನ್ನೂ ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಡೆಲ್ಟಾ ಪ್ಲಸ್‌(ಎವೈ.1 ರೂಪಾಂತರಿ ಅಥವಾ ಬಿ.1.617.2.1) ಅನ್ನು ಕೊರೊನಾದ ಅತ್ಯಂತ ಅಪಾಯಕಾರಿ ಸ್ವರೂಪ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಡೆಲ್ಟಾ ಪ್ಲಸ್‌ ರೂಪಾಂತರಿಯು ಡೆಲ್ಟಾ ರೂಪಾಂತರಿಯ ಎಲ್ಲ ಗುಣವಿಶೇಷಗಳನ್ನೂ ಹೊಂದಿದೆ ಮಾತ್ರವಲ್ಲದೇ, ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಬೀಟಾ ರೂಪಾಂತರಿಯ ಲಕ್ಷಣಗಳನ್ನೂ ಹೊಂದಿದೆ.

ಪ್ರಮುಖ ಸುದ್ದಿ :-   ಹೈದರಾಬಾದ್ ಮಳೆ: ಗೋಡೆ ಕುಸಿದು 7 ಕಾರ್ಮಿಕರು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement