ವೀಡಿಯೊ..| ಏನು ಧೈರ್ಯ-ಸಮಯಪ್ರಜ್ಞೆ ; ಹಾಲ್‌ ಒಳಗೆ ನುಗ್ಗಿದ ಚಿರತೆ ನೋಡಿ ಗಾಬರಿಯಾಗದೆ ಲಾಕ್ ಮಾಡಿ ಬಂಧಿಸಿದ ದಿಟ್ಟ ಬಾಲಕ…!

ಮಾಲೆಗಾಂವ್ : ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಅಪ್ರಾಪ್ತ ಬಾಲಕನೊಬ್ಬ ತಾನು ಕುಳಿತಿದ್ದ ಬ್ಯಾಂಕ್ವೆಟ್ ಹಾಲ್‌ಗೆ ಚಿರತೆ ನುಗ್ಗಿದ ನಂತರ ಪವಾಡ ಸದೃಶವೆಂಬಂತೆ ಪಾರಾದ ವೀಡಿಯೊ ವೈರಲ್ ಆಗಿದೆ.
12 ವರ್ಷದ ಬಾಲಕ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಮದುವೆ ಹಾಲ್‌ನ ಮುಖ್ಯ ಬಾಗಿಲು ತೆರೆದಿತ್ತು.ಚಿರತೆ ಕೋಣೆಗೆ ನುಗ್ಗಿದ್ದನ್ನು ಕಂಡ ತಕ್ಷಣ ಬಾಲಕ ಕೂಗಿಕೊಳ್ಳದೆ ಸಮಯಪ್ರಜ್ಞೆ ತೋರಿ ತಕ್ಷಣವೇ ಹೊರಗೆ ಧಾವಿಸಿ ಬಾಗಿಲು ಹಾಕಿಕೊಂಡಿದ್ದಾನೆ. ಮನೆಯೊಳಗೆ ಅಳವಡಿಸಲಾದ ಸಿ.ಸಿ. ಕ್ಯಾಮೆರಾದಲ್ಲಿ ವೀಡಿಯೊ ಸೆರೆಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ 24 ಸೆಕೆಂಡುಗಳ ವೀಡಿಯೊದಲ್ಲಿ, ಬಾಲಕ ಮೊಬೈಲ್ ಫೋನ್ ನಲ್ಲಿ ಗೇಮ್ಸ್‌ ಆಡುತ್ತಿದ್ದಾಗ ಚಿರತೆ ತುಂಬಾ ಶಾಂತವಾಗಿ ಮನೆಯೊಳಗೆ ಪ್ರವೇಶಿಸುವುದು ಕಂಡುಬರುತ್ತದೆ. ಇದನ್ನು ನೋಡಿ ಶಾಕ್ ಆದ ಬಾಲಕ ಕೂಗಿಕೊಳ್ಳದೇ ಸಮಯಪ್ರಜ್ಞೆ ತೋರಿ ಉಪಾಯದಿಂದ ಹೊರಗೆ ಹೋಗಿ ಬಾಗಿಲು ಹಾಕುವುದು ಕಂಡುಬರುತ್ತದೆ.
ಚಿರತೆ ಅನಿರೀಕ್ಷಿತವಾಗಿ ಕೋಣೆಗೆ ಪ್ರವೇಶಿಸಿದಾಗ ಬಾಲಕ ಮೋಹಿತ್ ಅಹಿರೆ ಮದುವೆ ಹಾಲ್‌ನ ಕಚೇರಿ ಕ್ಯಾಬಿನ್‌ನಲ್ಲಿ ಮೊಬೈಲ್ ಗೇಮ್‌ ಆಡುತ್ತಿದ್ದ. ಆರಂಭದಲ್ಲಿ ಶಾಕ್‌ ಆದರೂ ಶಾಂತವಾಗಿ ಉಳಿದು ಚಿರತೆಯ ಗಮನಕ್ಕೆ ಬಾರದೆ ಹೊರಹೋಗಲು ಯಶಸ್ವಿಯಾಗಿದ್ದಾನೆ. ನಂತರ ಹಾಲ್‌ನ ಹಿಂದಿನ ಬಾಗಿಲನ್ನು ಹಾಕಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲ್ಮೆಟ್ ಹಾಕಿಕೊಂಡು ಕೋಟಿ ಬೆಲೆ ಬಾಳುವ ʼಆಡಿʼ ಕಾರ್‌ ಓಡಿಸ್ತಾರೆ ಈ ವ್ಯಕ್ತಿ : ಕಾರಣ ಕೇಳಿದ್ರೆ....ಹೀಗೂ ಉಂಟೆ

ಆತ ನಂತರ ಮನೆಗೆ ಹೋಗಿ ತನ್ನ ತಂದೆಗೆ ತಿಳಿಸಿದ್ದಾನೆ. ನಂತರ ಸ್ಥಳೀಯರು ಆಗಮಿಸಿ ಹಾಲ್ ಬಂದ್‌ ಮಾಡಿದರು. ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆಯ ತಂಡ ಚಿರತೆಯನ್ನು ಹಿಡಿಯಿತು. ನಂತರ ಅದನ್ನು ಪಂಜರದಲ್ಲಿ ಇರಿಸಲಾಯಿತು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement